ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

By Nagaraja

ನೀವು ವಿವಿಧ ರೀತಿಯಲ್ಲಿ ವರ್ಣಾಂಲಕಾರಗೊಂಡ ಚಿತ್ತಾಕರ್ಷಕ ರೆಸ್ಟೋರೆಂಟ್ ಗಳನ್ನು ನೋಡಿರಬಹುದು ಅಥವಾ ನಿಮ್ಮ ಆಪ್ತರ ಜೊತೆಗೆ ಭೋಜನ ರುಚಿಯನ್ನು ಸವಿದಿರಬಹುದು. ಜಗತ್ತಿನ ರೆಸ್ಟೋರೆಂಟ್ ಕ್ರಾಂತಿಗೆ ಹೊಸ ಆಯಾಮವನ್ನು ತುಂಬಿರುವ ಚೀನಾದಲ್ಲೀಗ ವಿಶ್ವ ವಿಖ್ಯಾತ ಬೋಯಿಂಗ್ ವಿಮಾನವನ್ನೇ ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ.

ಕೇಂದ್ರ ಚೀನಾದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿರುವ ಬೋಯಿಂಗ್ 737 ವಿಮಾನವನ್ನು ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡಿ ರೆಸ್ಟೋರೆಂಟಾಗಿ ಪರಿವರ್ತಿಸಲಾಗಿದೆ. ಇದು ಇಲ್ಲಿಗೆ ಭೇಟಿ ಕೊಡುವ ಗ್ರಾಹಕರಿಗೆ ಆಕಾಶದಲ್ಲಿ ಹಾರಾಡದೆಯೇ ವಿಮಾನ ಅನುಭವ ಸಂಪಾದಿಸಬಹುದಾಗಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಕೇಂದ್ರ ಚೀನಾದ ಹುಬೆ ಪ್ರಾಂತ್ಯದ ವುಹಾನ್ ಜರ್ಮನ್ ಶೈಲಿಯ ಸ್ಟ್ರೀಟ್ ನಲ್ಲಿ ಸ್ಥಿತಗೊಂಡಿರುವ ಬಹುಕೋಟಿ ವಿಮಾನ ರೆಸ್ಟೋರೆಂಟ್ ನಲ್ಲಿ ಏಕಕಾಲಕ್ಕೆ 70ರಷ್ಟು ಮಂದಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಇಲ್ಲಿನ ರೆಸ್ಟೋರೆಂಟ್ ನಲ್ಲಿ ಸರಾಸರಿ ಒಂದು ಭೋಜನಕ್ಕೆ 2000 ರುಪಾಯಿಗಳಷ್ಟು ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ ಈಗಾಗಲೇ ಕಾರ್ಯಾಚರಣೆಯನ್ನು ಆರಂಭಿಸಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಲಿ ಯಾಂಗ್ ಎಂಬವರು ವಿಮಾನ ರೆಸ್ಟೊರೆಂಟ್ ನ ಮಾಲಿಕರಾಲಿದ್ದು, ಇಂಡೋನೇಷ್ಯಾದಿಂದ ಕರ್ತವ್ಯದಿಂದ ನಿವೃತ್ತಿ ಹೊಂದಿರುವ ಬೋಯಿಂಗ್ ವಿಮಾನವನ್ನು ಖರೀದಿಸಿದ್ದರು.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಇನ್ನು ವಿಶೇಷವೆಂದರೆ ಗ್ರಾಹಕರ ಸೇವೆಗೆ ನಿಯುಕ್ತಿಗೊಂಡಿರುವ ಸಿಬ್ಬಂದಿಗಳು ವಿಮಾನ ಪರಿಚಾಲಕರಂತೆ ವೇಷಭೂಷಣವನ್ನು ಧರಿಸಲಿದ್ದಾರೆ. ಅಂತೆಯೇ ಕಾಕ್ ಪೀಟ್ ವಿಮಾನ ಚಾಲಕನ ಕೊಠಡಿಯಂತೆ ಉಳಿಸಿಕೊಳ್ಳಲಾಗಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಸ್ವೀಡನ್ ನಲ್ಲಿ ವಿಮಾನ ಹೋಟೆಲ್ ನೋಡಿದ ಬಳಿಕ ಮಾಲಿಕ ಲಿಂ ಯಾಂಗ್ ಮನದಲ್ಲಿ ಇಂತಹದೊಂದು ಯೋಚನೆ ಹೊಳೆದಿತ್ತು. ಪ್ರಸ್ತುತ ವಿಮಾನ ರೆಸ್ಟೋರೆಂಟ್ ಗೆ 'ಲಿಲಿ ಏರ್ ವೇಯ್ಸ್' ಎಂಬ ಹೆಸರನ್ನಿಡಲಾಗಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಅಂದ ಹಾಗೆ ಬೋಯಿಂಗ್ 737 ವಿಮಾನವು 128 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಇದರಲ್ಲಿ ಡೈನಿಂಗ್ ಟೇಬಲ್ ಜೋಡಿಸುವುದರಿಂದ ಏಕಕಾಲಕ್ಕೆ 70 ಮಂದಿಗಷ್ಟೇ ಆಹಾರ ಸ್ವೀಕರಿಸಬಹುದಾಗಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ವಿಮಾನವನ್ನು ಹಲವಾರು ಭಾಗಗಳಾಗಿ ವಿಂಗಡಿಸುವ ಮೂಲಕ ಇಂಡೋನೇಷ್ಯಾದಿಂದ ತರಲಾಗಿತ್ತು. ಸ್ವಾದಿಷ್ಟ ಭೋಜನವನ್ನು ಗ್ರಾಹಕರಿಗೆ ಒದಗಿಸುವುದು ನಮ್ಮ ಧ್ಯೇಯವಾಗಿದೆ ಎಂದು ಮಾಲಿಕರು ವಿವರಿಸುತ್ತಾರೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

2013ರಲ್ಲಿ ಆರ್ಥಿಕ ಹಿಂಜರಿತಕ್ಕೊಳಗಾಗಿದ್ದ ಇಂಡೋನೇಷ್ಯಾ ಮೂಲದ ಸಂಸ್ಥೆ ಬಾಟವಿಯಾ ಏರ್ ನ ಸೇವೆಯಿಂದ ನಿವೃತ್ತಿಗೊಂಡ ವಿಮಾನವನ್ನು ಖರೀದಿಸಲಾಗಿದೆ. ಇದು ಕಳೆದ 28 ವರ್ಷಗಳಿಂದ ಸೇವೆಯಲ್ಲಿತ್ತು.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಅಷ್ಟಕ್ಕೂ ಭಾರತದಲ್ಲೂ ವಿಮಾನ ರೆಸ್ಟೋರೆಂಟ್ ಇರುವ ವಿಷಯ ನಿಮಗೆ ಗೊತ್ತೇ ? ನೈಜ ವಿಮಾನ ಅಲ್ಲದಿದ್ದರೂ ಅದೇ ಥೀಮ್ ಪಡೆದಿರುವ ವಿಮಾನ ರೆಸ್ಟೋರೆಂಟ್ ಚೆನ್ನೈನಲ್ಲಿ ಸ್ಥಿತಗೊಂಡಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಚೆನ್ನೈನ ಒಎಂಆರ್ ಪ್ರದೇಶದ ಥೊರೈಪಕ್ಕಂ ಎಂಬಲ್ಲಿ 747 ವಿಮಾನ ಥೀಮ್ ರೆಸ್ಟೋರೆಂಟ್ ಸ್ಥಿತಗೊಂಡಿದೆ. ಇದು ಗ್ರಾಹಕರಿಗೆ ಮೋಡಗಳ ನಡುವೆ ಸಂಚರಿಸುವ ವಿಮಾನದಂತೆ ಅನುಭವ ನೀಡಲಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಹವಾ ನಿಯಂತ್ರಿತ ಕೊಠಡಿಯಿಂದ ಕೂಡಿರುವ ಇಲ್ಲಿನ ರೆಸ್ಟೋರೆಂಟ್ ನೊಳಗೆ ಪ್ರವೇಶಿಸುವಾಗ ವಿಮಾನದೊಳಗೆ ಚೆಕ್-ಇನ್ ಆದಂತೆ ಭಾಸವಾಗಲಿದೆ.

ಚೀನಾದಲ್ಲಿ ನೈಜ ವಿಮಾನ ರೆಸ್ಟೋರೆಂಟ್; ಭಾರತದಲ್ಲೂ ಎಲ್ಲಿದೆ ಗೊತ್ತಾ?

ಚೆನ್ನೈ ಹೋಟೆಲ್ ನಲ್ಲೂ ಸಿಬ್ಬಂದಿಗಳು ವಿಮಾನ ಪರಿಚಾರಕರಂತೆ ಡ್ರೆಸ್ಸಿಂಗ್ ಧರಿಸಲಿದ್ದು, ಸದಾ ನಿಮ್ಮ ಸೇವೆಗೆ ಲಭ್ಯವಾಗಲಿದ್ದಾರೆ.

Most Read Articles

Kannada
Read more on ವಿಮಾನ plane
English summary
China Unveils Its First Restaurant Inside An Airplane
Story first published: Monday, September 12, 2016, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X