ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

By Nagaraja

ವಿಶ್ವದ ಅಶ್ವ ಶಕ್ತಿಯಾಗಿ ಬೆಳೆದು ನಿಂತಿರುವ ಚೀನಾ ನಕಲು ಮಾಡುವದರಲ್ಲಿ ಅಷ್ಟೇ ಚತುರ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಈಗ ಬಂದಿರುವ ಬಿಸಿ ಬಿಸಿ ಸುದ್ದಿಯ ಪ್ರಕಾರ ಚೀನಾದ ಸಂಸ್ಥೆಯೊಂದು ಅಮೆರಿಕದ ಪ್ರಖ್ಯಾತ ಎಲೆಕ್ಟ್ರಿಕ್ ಕಾರಿನ ವಿನ್ಯಾಸವನ್ನು ನಕಲು ಮಾಡಿದೆ.

ಬಲ್ಲ ಮೂಲಗಳ ಪ್ರಕಾರ ಎಲೆಕ್ಟ್ರಿಕ್ ಕಾರು ನಿರ್ಮಾಣದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಟೆಸ್ಲಾ ಮೋಟಾರ್ಸ್ ವಿನ್ಯಾಸವನ್ನು ಚೀನಾದ ಯೌಕ್ಸಿಯಾ (Youxia) ನಕಲು ಮಾಡಿದೆ. ಇದು ಚೀನಾದಲ್ಲಿ ಮಾರಾಟ ವಿಸ್ತರಿಸುವ ಟೆಸ್ಲಾ ಯೋಜನೆಗಳಿಗೆ ಪ್ರಬಲವಾದ ಪೆಟ್ಟು ನೀಡುವ ಆತಂಕ ಕಾಡುತ್ತಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಚೀನಾದಲ್ಲಿ ಗರಿಷ್ಠ ಆಮದು ಶುಲ್ಕ ವಿಧಿಸುತ್ತಿರುವುದು ಹಾಗೂ ಚಾರ್ಜಿಂಗ್ ಸ್ಟೇಷನ್ ಗಳ ಅಭಾವದಿಂದಾಗಿ ವಿಸ್ತಾರವಾದ ಮಾರಾಟ ಸ್ಥಾಪಿಸುವ ಟೆಸ್ಲಾ ಯೋಜನೆಗಳಿಗೆ ಹಿನ್ನೆಡೆಯಾಗುತ್ತಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಇನ್ನೊಂದೆಡೆ ಯೌಕ್ಸಿಯಾ ಎಕ್ಸ್ ಟೆಸ್ಲಾಗೆ ಸಮಾನವಾದ ಎಲೆಕ್ಟ್ರಿಕ್ ಕಾರೊಂದನ್ನು ನಿರ್ಮಿಸಿದೆ. ವಿಶೇಷವೆಂದರೆ ಇದರ ಹೆಡ್ ಲೈಟ್ ಗಳನ್ನು ಮಸೆರಟಿಯನ್ನು ಹೋಲುತ್ತಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಒಟ್ಟಿನಲ್ಲಿ ಸಂಪೂರ್ಣವಾಗಿ ಒಂದು ಕಾಪಿ ಪೇಸ್ಟ್ ಕಾರು ಎಂದು ಇದನ್ನು ವಿಶ್ಲೇಷಿಸಬಹುದು. ಬಹುತೇಕ ವಿನ್ಯಾಸವನ್ನು ಟೆಸ್ಲಾ ಮಾಡೆಲ್ ಎಸ್ ಮಾದರಿಯಿಂದ ನಕಲು ಮಾಡಲಾಗಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಇಲ್ಲಿ ಗಮನಾರ್ಹವೆಂದರೆ ಕಾರಿನೊಳಗೂ ಕಿಂಚಿತ್ತು ವ್ಯತ್ಯಾಸವಿಲ್ಲದೆ ಟೆಸ್ಲಾ ಮಾಡೆಲ್ ಎಸ್ ಕಾರಿಗೆ ಹೋಲುವ ವಿನ್ಯಾಸವನ್ನು ರಚಿಸಲಾಗಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ನಿಮಗೆ ಬೇಕಿದ್ದರೆ ವಿನ್ಯಾಸವನ್ನು ನಕಲು ಮಾಡಬಹುದು. ಆದರೆ ನಿರ್ವಹಣೆಯನ್ನು ಕಾಪಿ ಮಾಡಲು ಸಾಧ್ಯವೇ? ಇದೇ ಎಡವಟ್ಟು ಯೌಕ್ಸಿಯಾ ಎಕ್ಸ್ ಮಾದರಿಗೂ ಸಂಭವಿಸಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಪ್ರಸ್ತುತ ಯೌಕ್ಸಿಯಾ ಎಕ್ಸ್ ಕಾರು 360 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5.6 ಸೆಕೆಂಡುಗಳಲ್ಲಿ ಗಂಟೆಗೆ 0-60 ಮೈಲು ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನೊಂದೆಡೆ ಟೆಸ್ಲಾದ ಬೇಸಿಕ್ ವೇರಿಯಂಟ್ 315 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು 5.5 ಸೆಕಂಡುಗಳಲ್ಲೇ ಗಂಟೆಗೆ 0-60 ಮೈಲು ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಯೌಕ್ಸಿಯಾ ಎಕ್ಸ್ 40, 65 ಹಾಗೂ 85 ಕಿಲೋವ್ಯಾಟ್ ಹವರ್ ಬ್ಯಾಟರಿ ಪ್ಯಾಕ್ ಗಳಲ್ಲಿ ಲಭ್ಯವಿದ್ದರೆ ಟೆಸ್ಲಾ ಮಾಡೆಲ್ ಎಸ್, 70,85 ಹಾಗೂ 90 ಕೆಡಬ್ಲ್ಯುಎಚ್ ಪ್ಯಾಕೇಜ್ ಗಳಲ್ಲಿ ಲಭ್ಯವಾಗುತ್ತಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಹಾಗೆಯೇ ಚೀನಾದ ಯೌಕ್ಸಿಯಾ ಎಲೆಕ್ಟ್ರಿಕ್ ಕಾರು 285 ವ್ಯಾಪಿಯ ವರೆಗೆ ಚಲಿಸುವುದಾದ್ದಲ್ಲಿ ಟೆಸ್ಲಾ ಕಾರು ಒಂದು ಚಾರ್ಜ್ ನಲ್ಲಿ 270 ಮೈಲು ದೂರದ ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.

ಅಮೆರಿಕ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕದ್ದ ಚೀನಾ ಸಂಸ್ಥೆ

ಇನ್ನು ಬೆಲೆಯ ವಿಚಾರದಲ್ಲೂ ಮಾಡೆಲ್ ಎಸ್ ಗೆ ಹೋಲಿಕೆ ಮಾಡಿದರೆ ಚೀನಾದ ಎಲೆಕ್ಟ್ರಿಕ್ ಕಾರು ತುಂಬಾನೇ ಅಗ್ಗವೆನಿಸಿದೆ. ಆದರೆ ಸದ್ಯಕ್ಕಂತೂ ಈ ನಕಲು ಮಾದರಿ ಅಮೆರಿಕದಲ್ಲಿ ಲಭ್ಯವಾಗುವುದು ಕಷ್ಟದ ಮಾತು.

Most Read Articles

Kannada
English summary
Chinese carmaker copied Tesla Model S design
Story first published: Wednesday, July 29, 2015, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X