ನೀವು ಹೊಸ ಕಾರು ಖರೀದಿಸುವ ಮುನ್ನ ಈ ಹತ್ತು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು..!!

Written By:

ಕಾರು ಖರೀದಿ ಮಾಡುವುದು ಇಂದಿನ ಮಟ್ಟಿಗೆ ದೊಡ್ಡ ವಿಚಾರ ಅಲ್ಲವೇ ಅಲ್ಲ. ಆದ್ರೆ ಸೂಕ್ತ ಮಾಹಿತಿ ಇಲ್ಲದೇ ಖರೀದಿ ಮಾಡುವ ಕಾರುಗಳಿಂದ ನಿಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹೀಗಾಗಿ ಕೆಲ ಪ್ರಮಖ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಬಜೆಟ್‌ಗೆ ತಕ್ಕಂತೆ ಕಾರು ಖರೀದಿ ಮಾಡಿ. ಅದು ನಿಮಗೂ ಒಳಿತು, ನಿಮ್ಮ ಕುಟುಂಬಕ್ಕೂ ಒಳಿತು.

ಕಾರಿನ ಮಾದರಿ ಯಾವುದು?

ಕಾರು ಖರೀದಿ ಮುನ್ನ ಈ ವಿಚಾರ ಬಹುಮುಖ್ಯವಾಗಿ ತಿಳಿದುಕೊಳ್ಳಲೇಬೇಕು. ವಿವಿಧ ಮಾದರಿಗಳು ವಿವಿಧ ರೀತಿಯ ಬೆಲೆಗಳನ್ನು ಹೊಂದಿದ್ದು, ಡಿಸೇಲ್ ಮಾದರಿಯದ್ದೋ ಅಥವಾ ಪೆಟ್ರೋಲ್ ಮಾದರಿಯದೋ ಎಂಬುದನ್ನು ತಿಳಿದುಕೊಳ್ಳಿ. ಯಾಕೇಂದ್ರೆ ಡಿಸೇಲ್ ಮಾದರಿಯ ಕಾರು ಪೆಟ್ರೋಲ್ ಮಾದರಿಗಿಂತ ಹೆಚ್ಚಿನ ಮೈಲೇಜ್ ಕೊಟ್ಟರು, ಖರ್ಚಿನ ವಿಚಾರದಲ್ಲಿ ನಿಮ್ಮ ಜೇಬು ಗಟ್ಟಿಯಾಗಿದ್ದರೆ ಮಾತ್ರ ಡಿಸೇಲ್ ಮಾದರಿಯನ್ನು ಖರೀದಿ ಮಾಡಿ.

ಸರಳ ಚಾಲನೆ ಸಾಧ್ಯವೇ?

ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ಎಲೆಕ್ಟ್ರಿಕ್ ಕಾರುಗಳ ಹಾವಳಿ ಹೆಚ್ಚಾಗುತ್ತಿದೆ. ಇವುಗಳ ಬೆಲೆಗಳು ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಗಳಿಂತೂ ಕಡಿಮೆ ಇದ್ದರೂ ಪೂರ್ವಾಪರ ವಿಚಾರಿಸಿ ಕಾರು ಖರೀದಿ ಮಾಡಿ. ಕೇವಲ ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸಲು ಹೋಗಿ ಅನಾಹುತಕ್ಕೆ ದಾರಿ ಮಾಡಿಕೋಡಬೇಡಿ ಯಾಕೇಂದ್ರೆ ಎಲೆಕ್ಟ್ರಿಕ್ ಕಾರಿನ ಚಾಲನೆ ನಿಮಗೆ ಹೊಂದಾಣಿಕೆ ಆಗದೇ ಇರಬಹುದು.

ಕಾರಿನಲ್ಲಿರುವ ಸುರಕ್ಷತೆ

ನೀವು ಎಷ್ಟೇ ದುಡ್ಡು ಕೊಟ್ಟು ಕಾರು ಖರೀದಿ ಮಾಡಿದರು ಅದರಲ್ಲಿ ಗುಣಮಟ್ಟದ ಸುರಕ್ಷಾ ವಿಧಾನಗಳು ಇಲ್ಲದೇ ಇದ್ದಲ್ಲಿ ಅದು ವ್ಯರ್ಥವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಾರು ಖರೀದಿಸುವ ಮುನ್ನ ಸುರಕ್ಷಾ ವಿಧಾನಗಳ ಪರೀಕ್ಷೆ ಮಾಡಿಕೊಳ್ಳಿ. ಕಾರಿನಲ್ಲಿ ಎಷ್ಟು ಏರ್‌ಬ್ಯಾಗ್‌ಗಳಿವೆ ಮತ್ತು ತುರ್ತು ಸಂದರ್ಭದಲ್ಲಿ ಎನೇಲ್ಲಾ ಸೌಕರ್ಯಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಕಾರಿನ ಬೆಲೆ ಎಷ್ಟು?

ಇದು ತುಂಬಾ ಮುಖ್ಯ ವಿಚಾರ. ಯಾಕೇಂದ್ರೆ ಕೆಲವೊಮ್ಮೆ ಜಾಹೀರಾತುಗಳಲ್ಲಿ ನೀಡುವ ಬೆಲೆಗಳ ಮಾಹಿತಿಗೂ ಖರೀದಿ ಮಾಡುವಾಗಿನ ಬೆಲೆಗೂ ಹೆಚ್ಚು ಕಡಿಮೆ ಆಗುವ ಸಂದರ್ಭಗಳಿರುತ್ತವೆ. ಎಕ್ಸ್‌ಶೋರಂ ಬೆಲೆಗಳಿಗೂ ಮತ್ತು ಆನ್ ರೋಡ್ ಬೆಲೆಗಳ ಬಗ್ಗೆ ಪೂರ್ವಾವರ ಯೋಚಿಸಿ ಖರೀದಿ ಮಾಡಿ.

ದುಬಾರಿ ಕಾರು ಖರೀದಿ ಹೇಗೆ?

ನೀವು ನಿಮ್ಮ ಬಜೆಟ್ ತಕ್ಕಂತೆ ಕಾರು ಖರೀದಿ ಮಾಡುವುದು ಒಳಿತು. ಇಲ್ಲವಾದಲ್ಲಿ ಜಾಹೀರಾತಿಗೆ ಮರುಳುಗಾಗಿ ಕಡಿಮೆ ಪ್ರಮಾಣದ ತಿಂಗಳು ಕಂತಿನ ಆಮಿಷಕ್ಕೆ ಒಳಗಾದ್ರೆ ಆ ಮೇಲೆ ದುಡ್ಡು ಪಾವತಿ ಮಾಡುವುದು ಕಷ್ಟವಾಗಬಹುದು.

ಕಾರು ಖರೀದಿ ಹೇಗಿರಬೇಕು?

ನೀವು ಕಾರು ಖರೀದಿಗೂ ಮುನ್ನ ಈ ವಿಚಾರವನ್ನು ಸರಿಯಾಗಿ ಯೋಚಿಸಿ ಕಾರು ಖರೀದಿ ಮಾಡಿ. ಒಂದು ವೇಳೆ ನೀವು ನಿಮ್ಮ ಕುಟುಂಬಕ್ಕಾಗಿ ಕಾರು ಖರೀದಿ ಮಾಡುವುದಾದ್ರೆ ದೊಡ್ಡ ಪ್ರಮಾಣದ ಕಾರು ಬೇಕಾಗಬಹುದು. ಇಲ್ಲವಾದಲ್ಲಿ ದೊಡ್ಡ ಕಾರು ನಿಮ್ಮ ಬಜೆಟ್ ಹೊರೆಯಾಗುವಂತಿದ್ದರೆ ಸಣ್ಣ ಕಾರು ಖರೀದಿಯೇ ಉತ್ತಮ.

ಸ್ಪೋರ್ಟ್ಸ್ ಆವೃತ್ತಿ ಹೇಗೇ?

ಕಳೆದ 5 ವರ್ಷಗಳ ಅವಧಿಯಲ್ಲಿ ಸ್ಟೋರ್ಟ್ಸ್ ಆವೃತ್ತಿಗಳ ಕಾರು ಖರೀದಿ ಜೋರಾಗಿದೆ. ಆದ್ರೆ ಸ್ಪೋರ್ಟ್ಸ್ ಆವೃತ್ತಿಗಳು ಮಧ್ಯಮ ವರ್ಗಗಳಿಗೆ ಹೊರೆಯಾಬಹುದು, ಇವುಗಳಿಂದ ಯಾವುದೇ ರೀತಿಯ ಮೈಲೇಜ್ ನೀರಿಕ್ಷೆ ಮಾಡದೇ ಇದ್ದದಲ್ಲಿ ಮಾತ್ರ ಖರೀದಿಗೆ ಉತ್ತಮ.

ಕಾರಿನ ವಿನ್ಯಾಸ ನಮಗೆ ಹೊಂದಾಣಿಕೆ ಆಗುತ್ತಾ?

ಕಾರು ಖರೀದಿಗೂ ಮುನ್ನ ಅದರ ವಿನ್ಯಾಸದ ಬಗ್ಗೆ ತಿಳಿದುಕೊಳ್ಳಿ. ಪಾರ್ಕಿಂಗ್ ಸ್ಥಳಾವಕಾಶದ ಕುರಿತು ಯೋಚಿಸಿ ಸಣ್ಣ ಪ್ರಮಾಣದ ಕಾರು ಬೇಕೋ ಅಥವಾ ದೊಡ್ಡದಾದರೂ ಪರವಾಗಿಲ್ಲವೆಂಬ ಬಗ್ಗೆ ಖಚಿತ ಪಡಿಸಿಕೊಳ್ಳಿ. ಒಂದು ವೇಳೆ ದೊಡ್ಡ ವಿನ್ಯಾಸದ ಕಾರು ಖರೀದಿಸಿದ್ರೆ ಪಾರ್ಕಿಂಗ್ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬೇಕಾಗಬಹುದು.

ಕಾರು ಖರೀದಿಯ ಬಜೆಟ್

ಯಾವುದೇ ಕಾರಣಕ್ಕೂ ನಿಮ್ಮ ಬಜೆಟ್‌ಗೂ ಮೀರಿ ಕಾರು ಖರೀದಿ ಮಾಡಬೇಡಿ. ಯಾಕೇಂದ್ರೆ ಅದು ನಿಮಗೆ ಭವಿಷ್ಯದಲ್ಲಿ ಕಷ್ಟವಾಗಬಹುದು. ಯಾಕಾದ್ರೂ ಕಾರು ಖರೀದಿ ಮಾಡಿದೆ ಎಂಬ ಭಾವನೆ ನಿಮ್ಮನ್ನು ಒತ್ತಡಕ್ಕೆ ಸಿಲುಕಿಸಬಹುದು.

ಕಾರಿನ ವಿಮೆ ತಪ್ಪದೇ ಮಾಡಿಸಿ

ಯಾವುದೇ ಕಾರಣಕ್ಕೂ ನಿಮ್ಮ ಕಾರಿನ ಮೇಲೆ ಸುರಕ್ಷಾ ವಿಮೆ ಮಾಡಸದೇ ಇರಬೇಡಿ. ಅದಕ್ಕಾಗಿ ಇಂತಿಷ್ಟು ಪ್ರಮಾಣದ ಬಜೆಟ್ ಮೀಸಲಿರಿಸಿ. ಅನಾಹುತವಾದಾಗ ಅದು ನಿಮ್ಮ ಸಹಾಯಕ್ಕಾಗಿ ಬರುತ್ತದೆ. ಇಲ್ಲವಾದಲ್ಲಿ ಅದು ನಿಮ್ಮ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು.

ಯಾವುದೇ ನಮೂನೆಯ ಕಾರು ಖರೀದಿ ಮಾಡಿ. ಆದ್ರೆ ಪೂರ್ವಾವರ ಆಯೋಚನೆ ಮಾಡಿ ಕಾರು ಖರೀದಿ ಮಾಡಿ. ಜೊತೆಗೆ ನಿಮಗೆ ಯಾವುದು ಸೂಕ್ತ ಎಂಬುದನ್ನು ಮೊದಲು ಮನದಟ್ಟುಮಾಡಿಕೊಂಡು ಮುಂದಿನ ವ್ಯವಹಾರ ಮಾಡುವುದು ಒಳಿತು.

Story first published: Wednesday, March 8, 2017, 17:49 [IST]
English summary
Choosing your first car? Keep these ten things in your mind always.
Please Wait while comments are loading...

Latest Photos