ನೋಡಿದ್ರಾ ವಿಶ್ವದ ಪ್ರಪ್ರಥಮ ರೊಬೊ ಟ್ರಾಫಿಕ್ ಪೊಲೀಸ್

By Nagaraja

ತಂತ್ರಜ್ಞಾನದ ಬೆಳವಣಿಗೆಯು ಆ ನಿರ್ದಿಷ್ಟ ದೇಶದ ಅಭಿವೃದ್ಧಿಗೆ ಕೈಗನ್ನಡಿಯಾಗಿದೆ. ಆಧುನತೆಯ ಭಾಗವಾಗಿ ವಾಹನೋದ್ಯಮವು ನೂತನ ತಂತ್ರಾಂಶಗಳನ್ನು ಹುಡುಕುವುದರಲ್ಲಿ ಮಗ್ನವಾಗಿದೆ. ಇಂದಿನ ಈ ಬಿಡುವಿಲ್ಲದ ಜೀವನದಲ್ಲಿ ವಿಪರೀತ ವಾಹನ ದಟ್ಟಣೆಯಿಂದಾಗಿ ಬೇಸತ್ತು ಹೋಗಿರುತ್ತೇವೆ. ಹಾಗಿರುವಾಗ ಟ್ರಾಫಿಕ್ ಪೊಲೀಸರ ಉಪಟಲ ಬೇರೆ!

ಇನ್ನು ಮುಂದೆ ಅಂತಹ ಚಿಂತೆ ಇಲ್ಲ ಬಿಡಿ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (ಡಿಆರ್‌ಶಿ) ನೂತನ ಯಾಂತ್ರಿಕ ಮಾನವ ನಿಯಂತ್ರಣದ ರೊಬೊಟ್ ಟ್ರಾಫಿಕ್ ಸಿಗ್ನಲನ್ನು ಅವಿಷ್ಕರಿಸಿದೆ. ಇದು ನಗರದಲ್ಲಿನ ಟ್ರಾಫಿಕ್ ತೊಂದರೆಗಳನ್ನು ನಿವಾರಿಸುವ ಭರವಸೆಯನ್ನು ಹೊಂದಿದೆ.

ಕಾಂಗೋ ರಾಜಧಾನಿ ಕಿನ್‌ಷಾಸ (Kinshasa) ನಗರದಲ್ಲಿ ಈ ತಂತ್ರಜ್ಞಾನವನ್ನು ಬಳಕೆಗೆ ತರಲಾಗಿದೆ. ಅವರ ಪ್ರಕಾರ ಟ್ರಯಂಪಾಲ್ ಮತ್ತು ಲುಮುಂಬಾದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಿದೆ. ಇದನ್ನು ನಿಭಾಯಿಸಲು ಟ್ರಾಫಿಕ್ ಪೇದೆಗಳಿಗೆ ಕಷ್ಟಕರವಾಗುತ್ತದೆ. ಬಿಸಿಲಿನ ದಗೆ ಹಾಗೂ ಮಾಲಿನ್ಯದಿಂದಾಗಿ ಇಲ್ಲಿನ ಪೊಲೀಸರ ಕಂಗಾಲಾಗಿದ್ದಾರೆ. ಹಾಗಾಗಿ ವಿಶ್ವದ ಚೊಚ್ಚಲ ರೊಬೊ ಟ್ರಾಫಿಕ್ ಪೊಲೀಸ್ ಆಳವಡಿಸಲಾಗಿದೆ.

ನೋಡಿದ್ರಾ ವಿಶ್ವದ ಪ್ರಪ್ರಥಮ ರೊಬೊ ಟ್ರಾಫಿಕ್ ಪೊಲೀಸ್

ಈ ರೊಬೊಟ್ ಟ್ರಾಫಿಕ್ ಪೇದೆ ಎಂಟು ಅಡಿ ಎತ್ತರವಿದ್ದು ಇಸಯಿ ಥೆರೇಸೆ (Isaie Therese ) ಎಂಬಾಕೆ ಸ್ಥಳೀಯ ಎಂಜಿನಿಯರುಗಳು ನೆರವಿನಿಂದ ವಿನ್ಯಾಸಗೊಳಿಸಿದ್ದಾರೆ.

ನೋಡಿದ್ರಾ ವಿಶ್ವದ ಪ್ರಪ್ರಥಮ ರೊಬೊ ಟ್ರಾಫಿಕ್ ಪೊಲೀಸ್

ಸೋಲರ್ ಪ್ಯಾನೆಲ್‌ಗಳಿಂದ ಶಕ್ತಿ ತುಂಬುವ ಈ ರೊಬೊಟ್ ಪೇದೆ ಸಾಮಾನ್ಯ ಟ್ರಾಫಿಕ್ ಪೊಲೀಸರಂತೆ ನಾಲ್ಕು ದಿಕ್ಕುಗಳತ್ತ ತಿರುಗುತ್ತಾ ಟ್ರಾಫಿಕ್ ಸಿಗ್ನಲ್ ನೀಡುವ ಸಾಮರ್ಥ್ಯ ಹೊಂದಿದೆ.

ನೋಡಿದ್ರಾ ವಿಶ್ವದ ಪ್ರಪ್ರಥಮ ರೊಬೊ ಟ್ರಾಫಿಕ್ ಪೊಲೀಸ್

ಅಷ್ಟೇ ಯಾಕೆ ಈ ರೊಬೊಟ್ ಟ್ರಾಫಿಕ್ ಪೊಲೀಸ್, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಬಾಯಿ ಮಾತಿನ ಮೂಲಕವೂ ಯಾವಾಗ ವಾಹನ ನಿಲ್ಲಿಸಬೇಕು, ರಸ್ತೆ ದಾಟಬೇಕು ಎಂಬುದರ ಬಗ್ಗೆಯೂ ಉಚ್ಚರಿಸಲಿದೆ.

ನೋಡಿದ್ರಾ ವಿಶ್ವದ ಪ್ರಪ್ರಥಮ ರೊಬೊ ಟ್ರಾಫಿಕ್ ಪೊಲೀಸ್

ಹಾಗೊಂದು ವೇಳೆ ಸಿಗ್ನಲ್ ಜಂಪ್ ಮಾಡುವ ಪ್ರಯತ್ನ ಮಾಡಿದರೆ ಇದರಲ್ಲಿ ಲಗತ್ತಿಸಲಾಗಿರುವ ಕ್ಯಾಮೆರಾ ಕಣ್ಣುಗಳು ನಿಮ್ಮನ್ನು ಸೆರೆ ಹಿಡಿಯಲಿದ್ದು, ಬಳಿಕ ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ನಿಮ್ಮ ಮೇಲೆ ದೂರು ಕೂಡಾ ದಾಖಲಿಸಿಕೊಳ್ಳಲಿದೆ.

ನೋಡಿದ್ರಾ ವಿಶ್ವದ ಪ್ರಪ್ರಥಮ ರೊಬೊ ಟ್ರಾಫಿಕ್ ಪೊಲೀಸ್

ಒಟ್ಟಿನಲ್ಲಿ ಕಾಂಗೋ ರಾಷ್ಟ್ರದಲ್ಲಿನ ನೂತನ ತಂತ್ರಗಾರಿಕೆ ವಿಶ್ವದೆಲ್ಲೆಡೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೆಚ್ಚಿನ ಮಾಹಿತಿಯನ್ನು ಈ ಆಕರ್ಷಕ ವೀಡಿಯೋ ಮೂಲಕ ಪಡೆಯಿರಿ...

Most Read Articles

Kannada
English summary
Kinshasa, the capital of the Democratic Republic of Congo (DRC), like every other major city around the world has traffic problems. But the city has come out with a solution to manage the traffic in the most unique way.
Story first published: Saturday, March 1, 2014, 10:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X