ರಾಹುಲ್ ಗಾಂಧಿ ನೆಚ್ಚಿನ ಕಾರು ಬ್ರಾಂಡ್ 'ಎಸ್‌ಯುವಿ'

By Nagaraja

ಕಾಂಗ್ರೆಸ್ ಪಕ್ಷದ ನೆಚ್ಚಿನ ನಾಯಕ ಹಾಗೂ ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿರುವ ರಾಹುಲ್ ಗಾಂಧಿ, ಉತ್ತಮ ಕಾರು ಪ್ರೇಮಿಯೂ ಹೌದು.

ಹಲವಾರು ಸಂದರ್ಭಗಳಲ್ಲಿ ವಿಭಿನ್ನ ಕಾರುಗಳಲ್ಲಿ ಪ್ರತ್ಯಕ್ಷಗೊಂಡಿರುವ ರಾಹುಲ್ ಗಾಂಧಿ, ನಿತ್ಯ ಓಡಾಡುವ ಕಾರು ಯಾವುದು ಎಂಬುದನ್ನು ತಿಳಿಯುವ ಕುತೂಹಲ ಹಲವರಲ್ಲಿದೆ. ಇಂದಿನ ಈ ಲೇಖನದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಕಾರು ಪ್ರಣಯ ಪ್ರಸಂಗವನ್ನು ವಿವರಿಸಲಿದ್ದೇವೆ.

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ರಾಹುಲ್ ಗಾಂಧಿ ಎಸ್‌ಯುವಿ ಕಾರುಗಳನ್ನು ಇಷ್ಟಪಡುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಇತರ ರಾಜಕಾರಣಿಗಿಳಿಗಿಂತ ಭಿನ್ನವಾಗಿ ತನ್ನದೇ ಆದ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡಿರುವ ಈ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ರಾಹುಲ್ ಗಾಂಧಿ, ಟೊಯೊಟಾ ಇನ್ನೋವಾ ಕಾರಿನಲ್ಲಿ ಸಂಚರಿಸಲು ಇಷ್ಟಪಡುತ್ತಾರೆ.

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

9ರಿಂದ 15 ಲಕ್ಷ ಅಸುಪಾಸಿನಲ್ಲಿ ಲಭ್ಯವಿರುವ ಟೊಯೊಟಾ ಇನ್ನೋವಾ ಮಲ್ಟಿ ಪರ್ಪಸ್ ವೆಹಿಕಲ್, ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ 1998 ಸಿಸಿ ಪೆಟ್ರೋಲ್ ಹಾಗೂ 1498 ಸಿಸಿ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳನ್ನು ಅನುಕ್ರಮವಾಗಿ 8.3 ಕೀ.ಮೀ. ಹಾಗೂ 12.5 ಕೀ.ಮೀ. ಮೈಲೇಜ್ ನೀಡಲಿದೆ.

ಮಿಟ್ಸುಬಿಸಿ ಪಜೆರೊ

ಮಿಟ್ಸುಬಿಸಿ ಪಜೆರೊ

ರಾಹುಲ್ ಬಳಿಯಿರುವ ಎರಡನೇ ಕಾರು ಮಿಟ್ಸುಬಿಸಿ ಪಜೆರೊ. ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಮಿಟ್ಸುಬಿಸಿ ಪ್ರೀಮಿಯಂ ಎಸ್‌ಯುವಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.

ಮಿಟ್ಸುಬಿಸಿ ಪಜೆರೊ

ಮಿಟ್ಸುಬಿಸಿ ಪಜೆರೊ

ಪ್ರಮುಖವಾಗಿ ಟೊಯೊಟಾ ಫಾರ್ಚ್ಯುನರ್‌ಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಪಜೆರೊ ಅಂದಾಜು ದರ 25 ಲಕ್ಷ ರು.ಗಳಾಗಿವೆ. ಪ್ರಸ್ತುತ ಮಾಡೆಲ್ ಹಿಂದೂಸ್ತಾನ್ ಮೋಟಾರ್ಸ್ ಪಾಲುದಾರಿಕೆಯೊಂದಿಗೆ ದೇಶದಲ್ಲಿ ಮಾರಾಟವಾಗುತ್ತಿದೆ.

ಟಾಟಾ ಸಫಾರಿ

ಟಾಟಾ ಸಫಾರಿ

ಇನ್ನು ಸಂಪೂರ್ಣವಾಗಿ ದೇಶಿಯ ಉತ್ಪನ್ನವನ್ನು ಪ್ರೀತಿಸಲು ರಾಹುಲ್ ಮರೆತಿಲ್ಲ. ರಾಹುಲ್ ಬಳಿಯಿರುವ ಇನ್ನೊಂದು ಎಸ್‌ಯುವಿ ಟಾಟಾ ಸಫಾರಿನಲ್ಲೂ ಹಲವು ಬಾರಿ ಪಯಣಿಸಿದ್ದಾರೆ. ಓರ್ವ ಜವಾಬ್ದಾರಯುತ ಜನಪ್ರತಿನಿಧಿಯಾಗಿ ಸಾರ್ವಜನಿಕ ಸಮಾರಂಭಗಳಿಗೆ ತೆರಳುವಾಗ ರಾಹುಲ್ ಟಾಟಾ ಸಫಾರಿ ಕಾರುಗಳನ್ನು ಬಳಕೆ ಮಾಡುತ್ತಾರೆಂಬ ಮಾಹಿತಿಯಿದೆ.

ಟಾಟಾ ಸಫಾರಿ

ಟಾಟಾ ಸಫಾರಿ

8ರಿಂದ 14 ಲಕ್ಷ ರು.ಗಳ ಅಸುಪಾಸಿನಲ್ಲಿ ಲಭ್ಯವಿರುವ ಟಾಟಾ ಸಫಾರಿಯಲ್ಲಿ 2.2 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಟಾಟಾ ಪಾಲಿಗೆ ಭಾರಿ ನಿರೀಕ್ಷೆ ಮೂಡಿಸಿದ್ದ ಸಫಾರಿ ಆಫ್ ರೋಡಿಂಗ್ ರೈಡಿಂಗ್‌ಗೂ ಸೂಕ್ತವೆನಿಸಿದೆ. ಹಾಗೆಯೇ ಪ್ರತಿ ಲೀಟರ್‌ಗೆ 10.45 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
The so called 'future prime minister of India', Mr. Rahul Gandhi has got three cars in his garage.
Story first published: Friday, September 6, 2013, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X