IPL ಕೂಲ್ ಕ್ಯಾಪ್ಟನ್‌ಗಳ ದುಬಾರಿ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

Written By:

ಟೀಂ ಇಂಡಿಯಾದ ಕೆಲ ಆಟಗಾರರಿಗೆ ಸೂಪರ್ ಕಾರುಗಳ ಬಗ್ಗೆ ಎಲ್ಲಿಲ್ಲದ ಕ್ರೇಜ್‌ ಇದೆ. ಕ್ರಿಕೆಟ್ ಜೊತೆ ಜೊತೆಗೆ ಆಪ್‌ ರೋಡಿಂಗ್ ಬಗ್ಗೆಯೂ ಸಾಕಷ್ಟು ಆಸಕ್ತಿ ಹೊಂದಿದ್ದು, ಪ್ರಮುಖ ಆಟಗಾರರ ಕೆಲವು ಕಾರು ಮಾದರಿಗಳ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಎಂ.ಎಸ್.ಧೋನಿ
ಸದ್ಯ ರೈಸಿಂಗ್ ಪುಣೆ ಸೂಪರ್‌ಜೈಂಟ್‌ ತಂಡದ ನಾಯಕರಾಗಿರುವ ಎಂ.ಎಸ್.ಧೋನಿ ಹತ್ತು ಹಲವು ದುಬಾರಿ ಕಾರುಗಳ ಒಡೆಯ ಅಂದ್ರೆ ತಪ್ಪಾಗಲಾರದು. ಮೊನ್ನೆಯಷ್ಟೇ ಧೋನಿ ಕಾರ್ ಕಲೆಕ್ಷನ್‌ಗೆ ಮತ್ತೊಂದು ವಿಶೇಷ ಕಾರು ಸೇರ್ಪೆಡೆಗೊಂಡಿದೆ.

60 ಲಕ್ಷಕ್ಕೂ ಅಧಿಕ ಮೌಲ್ಯದ ಜಿಎಂಸಿ ಷಿರಾ ಟ್ರಕ್ ಕಾರು ಖರೀದಿಸಿ ಸುದ್ದಿಯಾಗಿರುವ ಧೋನಿ, ಹತ್ತಾರು ದುಬಾರಿ ಬೈಕ್‌ಗಳನ್ನು ಹೊಂದಿದ್ದಾರೆ.

ಜಿಎಂಸಿ ಷಿರಾ ಟ್ರಕ್ ಕಾರಿನ ವಿಶೇಷ
ಆಪ್ ರೋಡಿಂಗ್ ಪ್ರಿಯರು ಹೆಚ್ಚು ಇಷ್ಟು ಪಡುವ ಕಾರುಗಳಲ್ಲಿ ಜಿಎಂಸಿ ಕೂಡಾ ಒಂದು. ಸುಮಾರು 60 ಲಕ್ಷ ರೂ ಮೌಲ್ಯ ಹೊಂದಿರುವ ಈ ಕಾರು, ಡೆಸಾರ್ಟ್ ರೇಸಿಂಗ್‌ಗಳಲ್ಲಿ ಹೆಚ್ಚು ಬಳಕೆಯಾಗುವ ವಾಹನವಾಗಿದೆ.

ಸಚಿನ್ ತೆಂಡೂಲ್ಕರ್
ಹತ್ತಾರು ದುಬಾರಿ ಕಾರುಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಮೊನ್ನೆಯಷ್ಟೇ ಮತ್ತೊಂದು ದುಬಾರಿ ಕಾರು ಖರೀದಿ ಮಾಡಿದ್ದಾರೆ. ಸುಮಾರು 2 ಕೋಟಿ ಅಧಿಕ ಮೌಲ್ಯದ ನಿಸ್ಸಾನ್ ಜಿಆರ್‌ಟಿ ಖರೀದಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ಹೊಸ ಕಾರಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಮಹಾರಾಷ್ಟ್ರ ಪಾಸಿಂಗ್ ಹೊಂದಿದೆ.

ನಿಸ್ಸಾನ್ ಜಿಟಿಆರ್ ವಿಶೇಷ
2ಕೋಟಿ ಅಧಿಕ ಮೌಲ್ಯ ಹೊಂದಿರುವ ನಿಸ್ಸಾನ್ ಜಿಟಿಆರ್ ಕಾರು 3798ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದ್ದು, ಸೂಪರ್ ಕಾರುಗಳ ವಿಭಾಗದಲ್ಲಿ ಹೆಚ್ಚು ಮಾರಾಟಗೊಳ್ಳುವ ವಾಹನವಾಗಿದೆ.

ವಿರಾಟ್ ಕೊಹ್ಲಿ
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿಗೆ ಸೂಪರ್ ಕಾರುಗಳ ಬಗ್ಗೆ ಎಲ್ಲಿಲ್ಲದ ವ್ಯಾಮೋಹ. ಈಗಾಗಲೇ ಹತ್ತಾರು ಕಾರುಗಳ ಮಾಲೀಕರು ಆಗಿರುವ ವಿರಾಟ್, ಮೊನ್ನೆಯಷ್ಚೇ 2.6 ಕೋಟಿ ಮೌಲ್ಯದ ಆಡಿ ಆರ್8 ವಿ10 ಪ್ಲಸ್ ಖರೀದಿ ಮಾಡಿದ್ದಾರೆ.

ಆಪ್ ರೋಡಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ವಿರಾಟ್ ಕೊಹ್ಲಿ, ದುಬಾರಿ ಬೆಲೆಯ ಆಡಿ ಆರ್8 ವಿ10 ಪ್ಲಸ್ ಕಾರು ಖರೀದಿ ಹಿಂದೆ ಹತ್ತಾರು ಕಾರಣಗಳಿವೆ.

ಆಡಿ ಆರ್8 ವಿ10 ಪ್ಲಸ್ ವಿಶೇಷ
5204 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಆಡಿ ಆರ್8 ವಿ10 ಪ್ಲಸ್ ಬೆಲೆಯೂ 2.6 ಕೋಟಿಗೂ ಅಧಿಕ. ಜೊತೆಗೆ ಭಾರತದ ಕೆಲವೇ ಶ್ರೀಮಂತರ ಬಳಿ ಈ ಕಾರು ಮಾದರಿ ಇದ್ದು, ಇದೀಗ ಕೊಹ್ಲಿ ಕಾರ್ ಕಲೆಕ್ಷನ್‌ನಲ್ಲೂ ಸ್ಥಾನ ಪಡೆದಿದೆ.

ವೀರೇಂದ್ರ ಸೆಹ್ವಾಗ್
ಟೀಂ ಇಂಡಿಯಾದಲ್ಲಿ ಹತ್ತಾರು ಸಾಧನೆ ಮಾಡಿ ಸದ್ಯ ಪಂಜಾಬ್ ತಂಡದ ಮೆಂಟರ್ ಆಗಿರುವ ವೀರೇಂದ್ರ ಸೆಹ್ವಾಗ್ ಕೂಡಾ ಹಲವು ದುಬಾರಿ ಕಾರುಗಳ ಒಡೆಯ. ಕೆಲ ದಿನಗಳ ಹಿಂದಷ್ಟೇ 3.10 ಕೋಟಿ ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್ ಪ್ಲೈಯಿಂಗ್ ಸ್ಪೌರ್ ಕಾರು ಖರೀದಿ ಮಾಡಿದ್ದಾರೆ.

ವಿಶ್ವದ ನೂರಾರು ಅಗ್ರಗಣ್ಯರ ಬಳಿ ಇರುವ ಬೆಂಟ್ಲಿ ಕಾರನ್ನು ಖರೀದಿ ಮಾಡಿದ ಭಾರತೀಯರಲ್ಲಿ ಸೆಹ್ವಾಗ್ ಕೂಡಾ ಒಬ್ಬರು.

ಬೆಂಟ್ಲಿ ಕಾರು ವಿಶೇಷ
3993ಸಿಸಿ ಸಾಮರ್ಥ್ಯದ ವಿ8 ಎಂಜಿನ್ ಹೊಂದಿರುವ ಬೆಂಟ್ಲಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಕೆಲದಿನಗಳ ಹಿಂದಷ್ಟೇ ಬಿಡುಗೆಡೆಯಾಗಿದ್ದು, ಭಾರತದಲ್ಲಿ ಕೇವಲ ಬೆರಳಣಿಕೆಯಷ್ಟು ಉದ್ಯಮಿಗಳು ಮಾತ್ರ ಈ ಕಾರು ಆವೃತ್ತಿಯನ್ನು ಖರೀದಿ ಮಾಡಿದ್ದಾರೆ.

ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ, ಆಟದ ಜೊತೆ ಜೊತೆಗೆ ಆಪ್ ರೋಡಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಮೊನೆಯಷ್ಚೇ ದುಬಾರಿ ಬೆಲೆಯ ಬಿಎಂಡಬ್ಲ್ಯು ಎಂ5 ಕಾರು ಖರೀದಿಸಿದ್ದಾರೆ.

ಎಂ5 ವಿಶೇಷ
ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಸಂಸ್ಥೆಯ ಎಂ5 ಆವೃತ್ತಿಯು 2979ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ 1.80 ಕೋಟಿ ಮೌಲ್ಯ ಹೊಂದಿದೆ.

ಕೆಲ ದಿನಗಳಿಂದಷ್ಟೇ ತಮ್ಮ ಬಹುದಿನಗಳ ಗೆಳತಿ ರಿತಿಕಾ ಜೊತೆ ವಿವಾಹವಾಗಿರುವ ರೋಹಿತ್ ಶರ್ಮಾ, ಸದ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Story first published: Saturday, April 15, 2017, 18:19 [IST]
English summary
Read in Kannda about Cool IPL Captains And Cars Collection.
Please Wait while comments are loading...

Latest Photos