ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

By Nagaraja

ಅತಿ ಸಾಹಸ ಮೋಟಾರು ಸ್ಪೋರ್ಟ್ಸ್ ಕ್ರೀಡೆಯಲ್ಲಿ ಈಗಾಗಲೇ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ಬೆಂಗಳೂರು ಮೂಲದ ರೇಸರ್ ಚುನ್‌ಚುನ್‌ಗುಪ್ಪೆ ಶಿವಶಂಕರ್ ಸಂತೋಷ್, ವಿಶ್ವ ವಿಖ್ಯಾತ ಅತಿ ಅಪಾಯಕಾರಿ ಡಕಾರ್ ರಾಲಿಯಲ್ಲಿ (Dakar Rally) ಭಾಗವಹಿಸುತ್ತಿರುವ ಮೊಟ್ಟ ಮೊದಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟಾಪ್ 10ರಲ್ಲಿ ಪಾದಾರ್ಪಣೆ ಮಾಡಿರುವ ಸಂತೋಷ್ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಡಕಾರ್ ರಾಲಿಯಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಲಾಗಿದೆ. ಪ್ರತಿಯೊಬ್ಬ ರೇಸರ್ ಪಾಲಿಗೆ ಸಾವು ಗೆಲುವಿನ ನಡುವಣ ವಿರೋಚಿತ ರೇಸಿಂಗ್ ಅನುಭವ ನೀಡುವ ಡಕಾರ್ ರಾಲಿಯಲ್ಲಿ ಭಾಗವಹಿಸುವುದೇ ಕನಸಿನ ಮಾತಾಗಿರುತ್ತದೆ. ಈ ನಡುವೆ ಇವೆಲ್ಲವನ್ನು ನನಸಾಗಿಸಲಿರುವ ಸಂತೋಷ್ ಪ್ರತಿಷ್ಠಿತ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರವಾಗಲಿದ್ದಾರೆ.

ಡಕಾರ್ ರಾಲಿ

ಡಕಾರ್ ರಾಲಿ

ಪ್ಯಾರಿಸ್ ಡಕಾರ್ ರಾಲಿ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಡಕಾರ್ ರಾಲಿ ವರ್ಷಂಪ್ರತಿ ಅಮುರಿ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದೆ. 1978ರಿಂದ ಆರಂಭವಾಗಿರುವ ಈ ರೇಸ್ ಪ್ಯಾರಿಸ್, ಫ್ರಾನ್ಸ್, ಡಕಾರ್ ಹಾಗೂ ಸೆನೆಗಲ್‌ನಲ್ಲಿ ಆಯೋಜನೆಯಾಗುತ್ತಲೇ ಬಂದಿದೆ. ಆದರೆ ಮಾರಿಟಾನಿಯದಲ್ಲಿ ಭದ್ರತಾ ಕಳವಳ ಎದುರಾಗಿರುವ ಹಿನ್ನೆಲೆಯಲ್ಲಿ 2008ರಲ್ಲಿ ರಾಲಿ ರದ್ದು ಮಾಡಲಾಗಿತ್ತು. ತದಾ ಬಳಿಕ 2009ನೇ ಸಾಲಿನಿಂದ ಡಕಾರ್ ರಾಲಿ ವರ್ಷಂಪ್ರತಿ ದಕ್ಷಿಣ ಅಮೆರಿಕದಲ್ಲಿ (ಅರ್ಜೈಂಟೀನಾ ಹಾಗೂ ಚಿಲಿ) ಆಯೋಜನೆಯಾಗುತ್ತಿದೆ.

ಡಕಾರ್ ರಾಲಿ

ಡಕಾರ್ ರಾಲಿ

ಡಕಾರ್ ರಾಲಿ ಕೇವಲ ಒಂದು ಸಾಮಾನ್ಯ ಆಫ್ ರೋಡ್ ರಾಲಿ ಅಲ್ಲ. ಇಲ್ಲಿ ಚಾಲಕರಿಗೆ ಪರಿಪೂರ್ಣ ಸಾಹಸಿ ಚಾಲನೆಯ ಅನುಭವ ನೀಡುತ್ತದೆ. ಇದು ಅಡ್ಡ ದಿಡ್ಡಿಯಾದ ಒರಟು ರಸ್ತೆಯಿಂದ ಹಿಡಿದು, ಮರಳು, ಬಂಡೆಗಳು ಇನ್ನಿತ್ತರ ಅತಿ ಸಾಹಸ ಚಾಲನೆಯನ್ನು ಹೊಂದಿರಲಿದೆ.

ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

ಇದೀಗ 2015 ಜನವರಿ 4ರಿಂದ 17ರ ವರೆಗೆ ಸಾಗಲಿರುವ 9000 ಕೀ.ಮೀ. ವರೆಗಿನ ಸುದೀರ್ಘ ವಿಶ್ವದ ಅತ್ಯಂತ ಅಪಾಯಕಾರಿ ರೇಸ್‌ ಆಗಿರುವ ಡಕಾರ್ ರಾಲಿಯಲ್ಲಿ ಭಾಗವಹಿಸಲಿರುವ ಸಂತೋಷ್ ಇತಿಹಾಸ ಬರೆಯಲಿದ್ದಾರೆ. ಅಲ್ಲದೆ ಡಕಾರ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯನೆಂಬ ಪಟ್ಟ ಕಟ್ಟಿಕೊಳ್ಳಲಿದ್ದಾರೆ. ಇಲ್ಲಿ ಬೈಕ್ ಮಾತ್ರವಲ್ಲದೆ ಕ್ವಾಡ್, ಕಾರು ಹಾಗೂ ಟ್ರಕ್ ರೇಸ್ ಕೂಡಾ ನಡೆಯುತ್ತದೆ.

ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

ಡಕಾರ್2015 ಸ್ಪರ್ಧೆಯು ಅರ್ಜೆಂಟೀನಾ, ಚಿಲಿ ಹಾಗೂ ಬೊಲಿವಿಯಾದಲ್ಲಿ ಆಯೋಜನೆಯಾಗಲಿದ್ದು, ಬ್ಯುನಸ್ ಐರಿಸ್‌ನಲ್ಲಿ ಆರಂಭ ಹಾಗೂ ಫಿನಿಶಿಂಗ್ ಪಾಯಿಂಟ್ ಇರಲಿದೆ. ಇದೀಗ ನಮ್ಮ ಬೆಂಗಳೂರಿನ ಹುಡುಗ 31ರ ಹರೆಯದ ಸಂತೋಷ್ ಕೆಟಿಎಂ 450 ಬೈಕ್‌ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಇವರಿಗೆ ಪುಣೆ ತಳಹದಿಯ ಎಸ್ ಬಾಲನ್ ಗ್ರೂಪ್‌‌ನ ಪಿಬಿ ರೇಸಿಂಗ್ ಪ್ರಾಯೋಜಕತ್ವ ವಹಿಸಲಿದೆ.

ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

2012ನೇ ಸಾಲಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ರೇಡ್ ಡಿ ಹಿಮಾಲಯ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡಿರುವ ಸಂತೋಷ್, ಕಳೆದೊಂದು ವರ್ಷದಲ್ಲಿ ರೆಡ್ ಬುಲ್ ತಾಂತ್ರಿಕ ಬಲದೊಂದಿಗೆ (ಮೂಲ ಸೌಲಭ್ಯ) ಅವಿರತ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಮ್ಮ ಜೊತೆಗಿನ ವಿಶೇಷ ಫೋನ್ ಇನ್ ಸಂಭಾಷಣೆಯಲ್ಲಿ ಸಂತೋಷ್ ತಿಳಿಸಿದ್ದಾರೆ.

ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

ವರ್ಷಂಪ್ರತಿ ನಡೆಯುವ ಆರು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಮೂರರಲ್ಲಿ ಭಾಗವಹಿಸಿರುವ ಸಂತೋಷ್ ಅನುಕ್ರಮವಾಗಿ ಅಬುದಾಬಿಯಲ್ಲಿ 10, ಖತಾರ್‌ನಲ್ಲಿ 8 ಹಾಗೂ ಮೊರಕ್ಕೊದಲ್ಲಿ 22ನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಒಟ್ಟಾರೆ 10ನೇ ಸ್ಥಾನ ಗಿಟ್ಟಿಸಿಕೊಂಡಿರುವ ಸಂತೋಷ್ ಅವರಿಗೆ ಡಕರ್‌ನಿಂದ ನೇರ ಆಹ್ವಾನ ಬಂದಿತ್ತು.

ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

ಡಕಾರ್ ರಾಲಿಯಲ್ಲಿ ಸಂತೋಷ್ ಸೇರಿದಂತೆ ಒಟ್ಟು 168 ಮಂದಿ ರೇಸರುಗಳು ಭಾಗವಹಿಸಲಿದ್ದಾರೆ. ಡಕಾರ್ ಇತಿಹಾಸವನ್ನು ಗಮನಿಸಿದಾಗ ಸ್ಪೇನ್‌ನ ಮಾರ್ಕ್ ಕೋಮಾ ನಾಲ್ಕು ಬಾರಿ ವಿಶ್ವ ಕಿರೀಟ (2006, 2009, 2011, 2014) ಮುಡಿಗೇರಿಸಿಕೊಂಡಿದ್ದಾರೆ.

ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ

ಕಳೆದ ಮಾರ್ಚ್‌ನಲ್ಲಿ ಮಾರುತಿ ಸುಜುಕಿ ಡೆಸರ್ಟ್ ಸ್ಟ್ರೋಮ್‌ನಲ್ಲೂ ವಿಜಯ ಪತಾಕೆ ಹಾರಿಸಿರುವ ಸಂತೋಷ್ ಈಗ ಡಕಾರ್ ರಾಲಿಯಲ್ಲಿ ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದು, ಇದಕ್ಕಾಗಿ ಸಕಲ ರೀತಿಯ ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ.

ಪ್ರಾಣಾಪಾಯದಿಂದ ಪಾರು

ಪ್ರಾಣಾಪಾಯದಿಂದ ಪಾರು

ಈ ನಡುವೆ 2013ರಲ್ಲಿ ವರ್ಲ್ಡ್ ಕ್ರಾಸ್ ಕಂಟ್ರಿ Rally ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ದೇಶದ ಮೊದಲ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂತೋಷ್, ಅಬುದಾಬಿಯಲ್ಲಿ ಸಾಗಿದ ಡೆಸಾರ್ಟ್ ರೇಸಿಂಗ್ ವೇಳೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ತದಾ ಬಳಿಕ ಅವರು ಪುನಾರಾಗಮನದ ಬಗ್ಗೆ ಶಂಕೆ ಮೂಡಿತ್ತು. ಸುಜುಕಿ 450ಎಫ್ ಸೂಪರ್ ಬೈಕ್‌ನಲ್ಲಿ ರೇಸಿಂಗ್ ಮುಂದುವರಿಸಿದ್ದ ಸಂತೋಷ್ 10ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಒಟ್ಟು 266 ಕೀ.ಮೀ ದೂರದ ಪೈಕಿ ಇನ್ನೇನು 40 ಕೀ.ಮೀ ಮಾತ್ರ ಬಾಕಿ ಉಳಿದಿರುವುದಾಗ ಅಗ್ನಿ ಆಕಸ್ಮಿಕ ಸಂಭವಿಸಿತ್ತು.

ಸಿಎಸ್ ಸಂತೋಷ್ ಕಿರು ಪರಿಚಯ

ಸಿಎಸ್ ಸಂತೋಷ್ ಕಿರು ಪರಿಚಯ

  • ಜನನ: 01/12/1983
  • ವಯಸ್ಸು: 31
  • ರಾಷ್ಟ್ರೀಯತೆ: ಭಾರತ
  • ಧರ್ಮ: ಹಿಂದೂ
  • ತಂದೆಯ ಹೆಸರು: ಸಿಆರ್ ಶಿವಶಂಕರ್
  • ಎತ್ತರ: 6 ಅಡಿ
  • ರಕ್ತದ ಗುಂಪು: ಎಬಿ+
  • ದಿನಚರಿ: ಬೈಕ್ ರೈಡಿಂಗ್, ಫುಟ್ಬಾಲ್ ಹಾಗೂ ಸಂಗೀತ
  • 2002ನೇ ಇಸವಿಯಲ್ಲಿ ಮೊಟೊಸ್ಪೋರ್ಟ್ಸ್ ರೈಡಿಂಗ್ ಆರಂಭ.

    2002ನೇ ಇಸವಿಯಲ್ಲಿ ಮೊಟೊಸ್ಪೋರ್ಟ್ಸ್ ರೈಡಿಂಗ್ ಆರಂಭ.

    • 2002ನೇ ಇಸವಿಯಲ್ಲಿ ಮೊಟೊಸ್ಪೋರ್ಟ್ಸ್ ರೈಡಿಂಗ್ ಆರಂಭ.
    • ಆ ಬಳಿಕ ಹಲವಾರು ಡರ್ಟ್ ಟ್ರ್ಯಾಕ್ ರೇಸ್‌ಗಳಲ್ಲಿ ಭಾಗಿ.
    • 2003 ಜುಲೈನಲ್ಲಿ ಟಿವಿಎಸ್ ರೇಸಿಂಗ್ ತಂಡಕ್ಕೆ ಸೇರ್ಪಡೆ.
    • 2004ರಲ್ಲಿ ಪುಣೆಯಲ್ಲಿ ಜರಗಿದ ಎಂಆರ್‌ಎಫ್ ಎಂಎಕ್ಸ್‌ ಗ್ರೂಪ್ ಬಿ ವಿಭಾಗದಲ್ಲಿ ಪ್ರಥಮ ಹಾಗೂ ಒಟ್ಟಾರೆಯಾಗಿ ಗ್ರೂಪ್ ಎ ಕ್ಲಾಸ್‌ನಲ್ಲಿ ದ್ವಿತೀಯ ಸ್ಥಾನ.
    • 2005ರಲ್ಲಿ ಜರಗಿದ ಎಂಆರ್ಎಫ್ ಸೂಪರ್‌ಕ್ರಾಸ್ ಸ್ಪರ್ಧೆಯಲ್ಲಿ 'ಬೆಸ್ಟ್ ರೈಡರ್ ಆಫ್ ದಿ ಡೇ' ಗೌರವ.
    • ಗಲ್ಫ್ ನ್ಯಾಷನಲ್ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಶಿಪ್
    • ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ
      • 2006ರಲ್ಲಿ ಆಸ್ಟ್ರೇಲಿಯಾದಲ್ಲಿ ಹೆಚ್ಚುವರಿ ಮೊಟೊಕ್ರಾಸ್ ತರಬೇತಿ.
      • ದುಬೈ ಆಲ್ ಇನ್ ಮೊಟೊಕ್ರಾಸ್
      • ಸಂತೋಷ್ ರೇಸಿಂಗ್‌ನಿಂದ ಜಗತ್ತಿನಲ್ಲಿ ಭಾರತದ ಸಾನಿಧ್ಯ
      • 2007 - ನ್ಯಾಷನಲ್ ಚಾಂಪಿಯನ್‌ಶಿಪ್ ಸೂಪರ್ ಕ್ರಾಸ್ ಇಂಡಿಯನ್ ಎಕ್ಸ್‌ಪರ್ಟ್ಸ್
      • 2008 - ಎಂಆರ್‌ಎಫ್ ಸೂಪರ್ ಕ್ರಾಸ್ ಚಾಲೆಂಜ್,
      • ಗಲ್ಫ್ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಶಿಪ್,
      • 2009 - ಶ್ರೀಲಂಕಾ ಮಹರಗಮ ಮೊಟೊಕ್ರಾಸ್,
      • ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ
        • 2010 - ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್,
        • ರೊಲನ್ ನ್ಯಾಷನಲ್ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಶಿಪ್
        • ಅಂತರಾಷ್ಟ್ರೀಯ - ನುರ್ ಎಲಿಯ ಮೊಟೊಕ್ರಾಸ್ (ಶ್ರೀಲಂಕಾ),
        • ಫಾಕ್ಸ್‌ಹಿಲ್ ಸೂಪರ್ ಕ್ರಾಸ್ (ಶ್ರೀಲಂಕಾ),
        • ವಿಜಯಬಹು ಮೊಟೊಕ್ರಾಸ್ ಚಾಂಪಿಯನ್ (ಶ್ರೀಲಂಕಾ),
        • ಗಜಬ ಸೂಪರ್ ಕ್ರಾಸ್ (ಶ್ರೀಲಂಕಾ)
        • ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ
          • 2011 - ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್ ಚಂಡೀಗಡ,
          • ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್ ಪುಣೆ,
          • ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್ ಕೊಲ್ಹಪುರ್
          • ಅಂತರಾಷ್ಟ್ರೀಯ
          • ಗಜಬ ಸೂಪರ್ ಕ್ರಾಸ್ (ಶ್ರೀಲಂಕಾ),
          • ಗುನ್ನೆರ್ ಸೂಪರ್ ಕ್ರಾಸ್ (ಶ್ರೀಲಂಕಾ),
          • ಸಿಗಿರಿ ರಾಲಿ ಸೂಪರ್ ಕ್ರಾಸ್ (ಶ್ರೀಲಂಕಾ),
          • ಫಾಕ್ಸ್ ಹಿಲ್ ಸೂಪರ್ ಕ್ರಾಸ್ (ಶ್ರೀಲಂಕಾ, ದ್ವಿತೀಯ ಸ್ಥಾನ)
          • ಡಕಾರ್‌ ರಾಲಿಗೆ ನಮ್ಮೂರ ಹುಡುಗ; ಮೊಟ್ಟ ಮೊದಲ ಭಾರತೀಯ
            • 2012-
            • ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್ ಚಂಡೀಗಡ,
            • ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್ ಜೈಪುರ (ದ್ವಿತೀಯ ಸ್ಥಾನ),
            • ಎಂಆರ್‌ಎಫ್ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪಿಯನ್‌ಶಿಪ್ ಕೊಚ್ಚಿ (ದ್ವಿತೀಯ ಸ್ಥಾನ)
            • ಅಂತರಾಷ್ಟ್ರೀಯ
            • 14ನೇ ರೇಡ್ ಡಿ ಹಿಮಾಲಯ
            • ಗುನ್ನೆರ್ ಸೂಪರ್ ಕ್ರಾಸ್ (ಶ್ರೀಲಂಕಾ),
            • ಕೆವರ್ಲಿ ಸೂಪರ್ ಕ್ರಾಸ್ (ಶ್ರೀಲಂಕಾ, ದ್ವಿತೀಯ ಸ್ಥಾನ)

Most Read Articles

Kannada
English summary
CS Santosh will be the first Indian to participate in the prestigious Dakar Rally, sponsored by PB Racing, owned by the S Balan Group. He will also recieve support from KINI Red Bull. Santosh will be riding a KTM 450 rally motorcycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X