2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

By Nagaraja

ಈ ಮೊದಲು ವಿಶ್ವದ ಅತ್ಯಂತ ಅಪಾಯಕಾರಿ 2015 ಡಕಾರ್ ರಾಲಿಯಲ್ಲಿ ಸ್ಪರ್ಧಿಸುತ್ತಿರುವ ಮೊಟ್ಟ ಮೊದಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಿರುವ ಬೆಂಗಳೂರು ಮೂಲದ ಚುಂಚನಗುಪ್ಪೆ ಶಿವಶಂಕರ್ ಸಂತೋಷ್, ಈಗ ಇತಿಹಾಸ ಬರೆದಿದ್ದು, ವಿಶ್ವದ ಅತ್ಯಂತ ಕಠಿಣ ಕ್ರಾಸ್ ಕಂಟ್ರಿ ರಾಲಿಯನ್ನು ಪೂರ್ಣಗೊಳಿಸಿರುವ ಪ್ರಪ್ರಥಮ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

2015 ಜನವರಿ 5ರಿಂದ 17ರ ವರೆಗೆ ಉತ್ತರ ಅಮೆರಿಕ ರಾಷ್ಟ್ರಗಳಾದ ಅರ್ಜೇಂಟೀನಾ, ಚಿಲಿ ಹಾಗೂ ಬೊಲಿವಿಯಾದ ಅತ್ಯಂತ ಕಠಿಣ ಪ್ರದೇಶಗಳಲ್ಲಿ ಆಯೋಜನೆಯಾಗಿದ್ದ ಡಕಾರ್ ರಾಲಿಯಲ್ಲಿ ತಮ್ಮ ಕೆಟಿಎಂ 450 ಬೈಕ್‌ನಲ್ಲಿ ಚಾಣಕ್ಷತೆ ಮೆರೆದಿರುವ ಸಂತೋಷ್, ಈಗ ಇಡೀ ದೇಶಕ್ಕೆ ಅಭಿಮಾನವಾಗಿ ಹೊರಹೊಮ್ಮಿದ್ದಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಡಕಾರ್ ರಾಲಿಯಲ್ಲಿ ಭಾಗವಹಿಸಲು ವಿಶೇಷ ಆಹ್ವಾನಿತ ಸಂತೋಷ್, ರೇಸ್ ಪ್ರಾರಂಭಕ್ಕೂ ಮುನ್ನವೇ 125 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರದಲ್ಲಿ "ಕ್ರಿಕೆಟ್ ಮಾತ್ರ ಎಲ್ಲವೂ ಅಲ್ಲ" ಎಂಬ ಪ್ರಭಾವತ್ಮಾಕ ಮಾತುಗಳನ್ನು ಆಡಿದ್ದರು. ಈಗ ಡಕಾರ್ ರಾಲಿಯಲ್ಲಿ 36ನೇಯವರಾಗಿ ಫಿನಿಶಿಂಗ್ ಗೆರೆ ದಾಟಿರುವ ಸಂತೋಷ್ ತಾವಾಡಿರುವ ಮಾತುಗಳನ್ನು ಸಾಬೀತುಪಡಿಸಿ ತೋರಿಸಿದ್ದಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಕೆಟಿಎಂ 450 ರಾಲಿ ಬೈಕ್‌ನಲ್ಲಿ 169ರಷ್ಟು ಸ್ಪರ್ಧಿಗಳ ವಿರುದ್ಧ ಅತ್ಯಂತ ಕಠಿಣ ರೇಸ್ ಆರಂಭಿಸಿದ್ದ ಸಂತೋಷ್ ಮೊದಲ ಸುತ್ತಿನ ಅಂತ್ಯಕ್ಕೆ 85ನೇ ಸ್ಥಾನ ಪಡೆದುಕೊಂಡಿದ್ದರು. ತದಾ ಬಳಿಕ ಸ್ಥಿರತೆಯ ಪ್ರದರ್ಶನ ಕಾಯ್ದುಕೊಂಡಿರುವ ಸಂತೋಷ್ ಅಂತಿಮವಾಗಿ 13ನೇ ಸುತ್ತಿನ ವೇಳೆ 36ನೇಯವರಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಡಕಾರ್‌ನಂತಹ ರಾಲಿಯಲ್ಲಿ ಪ್ರಾಣ ಭಯ ಇಲ್ಲದೆ ಭಾಗವಹಿಸಬೇಕಾಗುತ್ತದೆ. ಏಕೆಂದರೆ ಆಗಲೇ 168 ಸ್ಪರ್ಧಿಗಳಲ್ಲಿ 90ರಷ್ಟು ಸ್ಪರ್ಧಿಗಳು ಅರ್ಧದಲ್ಲೇ ತಮ್ಮ ಪಯಣ ಮೊಟಕುಗೊಳಿಸಿದ್ದರು. ಆದರೆ ಅಮೋಘ ದೈಹಿಕ ಜೊತೆಗೆ ಮಾನಸಿಕ ಬಲ ತೋರ್ಪಡಿಸಿರುವ ಸಂತೋಷ್ ಅಂತಿಮವಾಗಿ ರೇಸ್ ಪೂರ್ಣಗೊಳಿಸಿರುವ 79 ಸ್ಪರ್ಧಿಗಳಲ್ಲಿ ಓರ್ವರೆನಿಸಿಕೊಂಡಿದ್ದಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಅಷ್ಟಕ್ಕೂ ಅರ್ಜೆಂಟೀನಾ, ಚಿಲಿ ಹಾಗೂ ಬೊಲಿವಿಯಾದಲ್ಲಿ ಸುಮಾರು 13ದಿನಗಳಷ್ಟು ಆಯೋಜನೆಯಾದ ಡಕಾರ್ ರಾಲಿಯಲ್ಲಿ ಒಟ್ಟು ಎಷ್ಟು ಕೀ.ಮೀ. ದೂರ ಕ್ರಮಿಸಲಾಗಿದೆ ಎಂಬುದನ್ನು ನಿಮ್ಮಿಂದ ಅಂದಾಜಿಸಲು ಸಾಧ್ಯವೇ? ಹೌದು, ಬರೋಬ್ಬರಿ 9,295 ಕೀ.ಮೀ. ಹಾದಿಯನ್ನು ಕ್ರಮಿಸಲಾಗಿತ್ತು. ಅಲ್ಲದೆ 30ರ ಹರೆಯದ ಸಂತೋಷ್ 60 ತಾಸು, 39 ನಿಮಿಷ ಹಾಗೂ 20 ಸೆಕೆಂಡುಗಳಲ್ಲಿ ಈ ಸವಾಲನ್ನು ಮೆಟ್ಟಿ ನಿಂತಿದ್ದರು.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಅದೇ ಹೊತ್ತಿಗೆ ಡಕಾರ್ ರಾಲಿ ಮೋಟಾರುಸೈಕಲ್ ವಿಭಾಗದ ವಿಜೇತ ಸ್ಪೇನ್‌ನ ಮಾರ್ಕ್ ಕೋಮಾ ಇದೇ ದೂರವನ್ನು 46 ತಾಸು 3 ನಿಮಿಷ ಹಾಗೂ 49 ಸೆಕೆಂಡುಗಳಲ್ಲಿ ತಲುಪಿದ್ದರು. ಬೈಕ್ ಜೊತೆಗೆ ಕ್ವಾಡ್, ಕಾರು ಹಾಗೂ ಟ್ರಕ್ ರೇಸ್ ಸಹ ಆಯೋಜನೆಯಾಗಿತ್ತು.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಪ್ರಸ್ತುತ ರೇಸ್ ಸಂತೋಷ್ ಪಾಲಿಗೆ ಎಷ್ಟು ಕಠಿಣವಾಗಿತ್ತೆಂದರೆ ಪ್ರತಿ ಹಂತದಲ್ಲೂ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆದರೆ ಸತತ ಸಾಧನೆ, ಛಲ ಹಾಗೂ ಏಕಾಗ್ರತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿರುತ್ತಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್, "ಹಿಂದೆ ಡಕಾರ್ ರಾಲಿಯನ್ನು ಟಿವಿಯಲ್ಲಿ ನೋಡುತ್ತಿದ್ದೆ. ಇಲ್ಲಿ ಸ್ಪರ್ಧಿಗಳು ಫಿನಿಶಿಂಗ್ ಗೆರೆ ದಾಟುವುದನ್ನು ನೋಡಿ ಆಕರ್ಷಿತನಾಗಿದ್ದೆ. ಇಂತಹೊಂದು ಕಠಿಣ ರೇಸ್ ಆರಂಭಿಸುವಾಗ ನಿಮ್ಮಿಂದ ಎಷ್ಟು ದೂರದ ವರೆಗೆ ತಲುಪಲು ಸಾಧ್ಯ ಎಂಬುದೇ ಗೊತ್ತಿರುವುದಿಲ್ಲ" ಎಂದು ರೇಸ್ ಭಯಾನಕತೆ ಬಗ್ಗೆ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಮಾತು ಮುಂದುವರಿಸಿರುವ ಅವರು, "ಚಿಲಿಯಲ್ಲಿ ಎರಡನೇ ಹಂತದಲ್ಲಿ ನಡೆದ ಮರಳಿನ ರೇಸ್ ತುಂಬಾನೇ ಕಠಿಣವಾಗಿತ್ತು. ಆದರೆ ಅರ್ಜೇಂಟೀನಾದಲ್ಲಿ ನಡೆದ ಕೊನೆಯ ಮೂರು ಲ್ಯಾಂಡ್ ಸ್ಕೇಪ್ ಹಾಗೂ ಜಾ-ಡ್ರಾಪಿಂಗ್ ಸವಾಲನ್ನು ಆನಂದಿಸಿದ್ದೇನೆ" ಎಂದಿದ್ದಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

"ನಾನೀಗ ಬಾಗಿಲನ್ನು ತೆರೆದಿದ್ದೇನೆ. ಇದು ಸಾಧ್ಯ. ಭಾರತೀಯನೊಬ್ಬನು ಇದನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಭವಿಷ್ಯದಲ್ಲಿ ಮತ್ತಷ್ಟು ಭಾರತೀಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂಬ ನಂಬಿಕೆ ನನ್ನದ್ದು" ಎಂದು ಈಗಾಗಲೇ ಅನೇಕ ಸೂಪರ್ ಕ್ರಾಸ್ ಹಾಗೂ ಕ್ರಾಸ್ ಕಂಟ್ರಿ ಪದಕಗಳನ್ನು ಬಾಚುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂತೋಷ್ ತಿಳಿಸಿದ್ದಾರೆ.

2015 ಡಕಾರ್ ರಾಲಿ: ಇತಿಹಾಸ ಬರೆದ ಸಂತೋಷ್

ಒಟ್ಟಾರೆಯಾಗಿ ಡಕಾರ್‌ನಲ್ಲಿ ಮೋಟಾರುಸೈಕಲ್ ವಿಭಾಗದಲ್ಲಿ 167 ಬೈಕ್, ಕ್ವಾಡ್ ವಿಭಾಗದಲ್ಲಿ 45 ಕ್ವಾಡ್, ಕಾರು ವಿಭಾಗದಲ್ಲಿ 137 ಕಾರು ಹಾಗೂ ಟ್ರಕ್ ವಿಭಾಗದಲ್ಲಿ 63 ಟ್ರಕ್‌ಗಳು ರೇಸ್ ಆರಂಭಿಸಿದ್ದರೆ ಅಂತಿಮವಾಗಿ 79 ಬೈಕ್, 18 ಕ್ವಾಡ್, 47 ಕಾರು ಹಾಗೂ 43 ಟ್ರಕ್‌ಗಳು ಮಾತ್ರ ಫಿನಿಶಿಂಗ್ ಗೆರೆ ದಾಟುವಲ್ಲಿ ಯಶಸ್ವಿಯಾಗಿತ್ತು.

2015 ಡಕಾರ್ ರಾಲಿಯಲ್ಲಿ ಸಂತೋಷ್ ಸಾಧನೆ:

2015 ಡಕಾರ್ ರಾಲಿಯಲ್ಲಿ ಸಂತೋಷ್ ಸಾಧನೆ:

1ನೇ ಹಂತ: 85

ಒಟ್ಟಾರೆ ರಾಂಕಿಂಗ್: 85

2ನೇ ಹಂತ: 49

ಒಟ್ಟಾರೆ ರಾಂಕಿಂಗ್: 49

3ನೇ ಹಂತ: 68

ಒಟ್ಟಾರೆ ರಾಂಕಿಂಗ್: 53

4ನೇ ಹಂತ: 58

ಒಟ್ಟಾರೆ ರಾಂಕಿಂಗ್: 50

5ನೇ ಹಂತ: 55

ಒಟ್ಟಾರೆ ರಾಂಕಿಂಗ್: 51

6ನೇ ಹಂತ: 64

ಒಟ್ಟಾರೆ ರಾಂಕಿಂಗ್: 52

7ನೇ ಹಂತ: 65

ಒಟ್ಟಾರೆ ರಾಂಕಿಂಗ್: 49

8ನೇ ಹಂತ: 32

ಒಟ್ಟಾರೆ ರಾಂಕಿಂಗ್: 42

9ನೇ ಹಂತ: 55

ಒಟ್ಟಾರೆ ರಾಂಕಿಂಗ್: 42

10ನೇ ಹಂತ: 36

ಒಟ್ಟಾರೆ ರಾಂಕಿಂಗ್: 38

11ನೇ ಹಂತ: 32

ಒಟ್ಟಾರೆ ರಾಂಕಿಂಗ್: 36

12ನೇ ಹಂತ: 30

ಒಟ್ಟಾರೆ ರಾಂಕಿಂಗ್: 36

13ನೇ ಹಂತ: 51

ಒಟ್ಟಾರೆ ರಾಂಕಿಂಗ್: 36


Most Read Articles

Kannada
English summary
2015 Dakar Rally: CS Santosh Creates History with first Indian to finish the world's most tuffest rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X