ಇನ್ಮುಂದೆ ಮೆಟ್ರೋಗಳಲ್ಲಿ ಚಾಲಕರು ಇರೋದಿಲ್ಲವಂತೆ..!!

ಟ್ರಾಫಿಕ್ ದಟ್ಟಣೆಯ ಮಹಾನಗರಗಳಲ್ಲಿ ವರದಾನವಾಗಿ ಪರಿಣಮಿಸಿರುವ ಮೆಟ್ರೋ ಸಂಚಾರ ವ್ಯವಸ್ಥೆ ಇದೀಗ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದು, ಹೊಸ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Written By:

ಮೆಟ್ರೋ ಸಂಚಾರದಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯ ಮಾಡಲು ಮುಂದಾಗಿರುವ ಮೆಟ್ರೋ ಅಧಿಕಾರಿಗಳು, ಸದ್ಯದಲ್ಲೇ ಚಾಲಕ ರಹಿತ ಮೆಟ್ರೋ ಸಂಚಾರವನ್ನು ಆರಂಭಿಸಲು ಮುಂದಾಗಿದ್ದಾರೆ.

ಮೊದಲನೇ ಹಂತದಲ್ಲಿ ರಾಜಧಾನಿ ದೆಹಲಿಯಲ್ಲಿ ಈ ಹೊಸ ಯೋಜನೆ ಅನುಷ್ಠಾನಗೊಳ್ಳಲಿದ್ದು, ತದನಂತರ ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈ ನಗರಗಳಿಗೆ ಪರಿಚಯಿಸಲಿದ್ದಾರೆ.

ಜೂನ್ ಆರಂಭದಲ್ಲಿ ಚಾಲಕ ರಹಿತ ಮೆಟ್ರೋ ಸಂಚಾರ ಆರಂಭಗೊಳ್ಳಲಿದ್ದು, ಮೊದಲ ಹಂತದಲ್ಲಿ ನೋಯ್ಡಾ ಮತ್ತು ಕಲಕಾಜಿ ನಿಲ್ದಾಣಗಳ ಮಧ್ಯೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಸುಮಾರು 96ಕಿಲೋ ಮೀಟರ್‌ನಷ್ಟು ಚಾಲಕ ರಹಿತ ಮೆಟ್ರೋ ಚಾಲನೆ ಆರಂಭಗೊಳ್ಳುಲಿದ್ದು, ಸದ್ಯ ಕಾರ್ಯನಿರ್ವಹಿಸುತ್ತಿರುವ ಚಾಲಕರನ್ನು ಬೇರೆ ಬೇರೆ ಕಾರ್ಯಗಳಿಗೆ ನಿಯೋಜಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಪರೀಕ್ಷಾರ್ಥ ಕಾರ್ಯಗಳನ್ನು ಮುಕ್ತಾಯಗೊಳಿಸಿರುವ ಮೆಟ್ರೋ ಅಧಿಕಾರಿಗಳು, ಸುಮಗ ಸಂಚಾರಕ್ಕೆ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಚಾಲಕ ರಹಿತ ಮೆಟ್ರೋ ಮಾದರಿಗಳನ್ನು ಈಗಾಗಲೇ ಅಭಿವೃದ್ಧಿಗೊಳಿಸಲಾಗಿದ್ದು, ಒಟ್ಟು 86 ಮೆಟ್ರೋಗಳು ಸ್ವಯಂಚಾಲಿತವಾಗಿ ಪ್ರಯಾಣಿಕರಿಗೆ ಅರಾಮದಾಯಕ ಪ್ರಯಾಣವನ್ನು ಒದಗಿಸಲು ಸಜ್ಜುಗೊಂಡಿವೆ.

ನೂತನ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದೆಹಲಿ ಮೆಟ್ರೋ ಅಧಿಕಾರಿಗಳು "ಚಾಲಕ ರಹಿತ ಮೆಟ್ರೋ ಸೇವೆಗಳು ಜೂನ್ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಹೊಸ ಯೋಜನೆ ಮುಂಬರುವ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ" ಎಂದಿದ್ದಾರೆ.

ಒಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯ ಮಾಡುವ ಮೂಲಕ ಪ್ರಯಾಣಿಕರಿಗೆ ಅರಾಮದಾಯಕ ಪ್ರಯಾಣ ಒದಗಿಸಲು ಮುಂದಾಗಿರುವ ಮೆಟ್ರೋ ಅಧಿಕಾರಗಳು, ಸದ್ಯದಲ್ಲೇ ಇತರೆ ನಗರಗಳಿಗೂ ಈ ಹೊಸ ಯೋಜನೆಯನ್ನು ಪರಿಚಯಿಸಲು ಬೃಹತ್ ಯೋಜನೆ ರೂಪಿಸಿದ್ದಾರೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಮೆಟ್ರೋ metro
English summary
The Delhi Metro will introduce driverless metro trains from June 2017.
Please Wait while comments are loading...

Latest Photos