ಜಗತ್ತನ್ನೇ ಆಳಿದ ನಿರಂಕುಶ ಪ್ರಭುಗಳ ನಿರ್ಭೀತಿಯ ಕಾರುಗಳು

ಹೆಸರಲ್ಲೇ ಸೂಚಿಸಿರುವಂತೆಯೇ ಅಧಿಕಾರ, ಸಂಪತ್ತು ಹಾಗೂ ಐಷಾರಾಮಿ ಕಾರುಗಳ ಸಂಗ್ರಹವು ನಿರಂಕುಶ ಪ್ರಭುಗಳ ಹವ್ಯಾಸವಾಗಿರುತ್ತದೆ. ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಇಂತಹ ನಿರಂಕುಶ ಪ್ರಭುಗಳ ಸರ್ವಾಧಿಕಾರಿ ಧೋರಣೆಗಳನ್ನು ನೆನಪಿಸಿಕೊಳ್ಳುವಾಗ ನಮ್ಮ ಮನಸ್ಸಿಗೆ ಮೊದಲಿಗೆ ನಾಜಿ ಪಕ್ಷದ ಸ್ಥಾಪಕ ಅಡಾಲ್ಫ್ ಹಿಟ್ಲರ್ ನೆನಪಿಗೆ ಬರುತ್ತಾರೆ.

ಇತಿಹಾಸ ಪುಟವನ್ನು ತೆರೆದು ನೋಡಿದಾಗ ಇಂತಹ ಸರ್ವಾಧಿಕಾರಿಗಳು ಕಾರುಗಳ ಬಗ್ಗೆಯೂ ಅತೀವ ಕ್ರೇಜ್ ಹೊಂದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಾಗೆಯೇ ವಿರಳದಲ್ಲಿ ಅತಿ ವಿರಳ ಎನ್ನಬಹುದಾದ ಲೇಖನದೊಂದಿಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ನಿಮ್ಮ ಮುಂದೆ ಬರುತ್ತಿದ್ದು, ಇದಕ್ಕಾಗಿ ಫೋಟೊ ಫೀಚರ್ ತಿರುವಿರಿ...

ಜಗತ್ತನ್ನೇ ಆಳಿದ ನಿರಂಕುಶ ಪ್ರಭುಗಳ ನಿರ್ಭೀತಿಯ ಕಾರುಗಳು

ಜಗತ್ತನ್ನು ಆಳಿದ ಸರ್ವಾಧಿಕಾರಿಗಳ ಕಾರು ಮಾಹಿತಿಗಾಗಿ ಮುಂದಿನ ಪುಟ ಕ್ಲಿಕ್ಕಿಸಿರಿ...

ಅಡಾಲ್ಫ್ ಹಿಟ್ಲರ್

ಅಡಾಲ್ಫ್ ಹಿಟ್ಲರ್

ನಮ್ಮ ಈ ಲೇಖನವನ್ನು ಜಮರ್ನಿಯ ಪವರ್‌ಫುಲ್ ನಿರಂಕುಶ ಪ್ರಭು ಅಡಾಲ್ಫ್ ಹಿಟ್ಲರ್ ಅವರಿಂದ ಆರಂಭಿಸುತ್ತಿದ್ದೇವೆ. ಜನವರಿ 30, 1933ರಿಂದ 1945 ಎಪ್ರಿಲ್ 30ರ ವರೆಗೆ ಜರ್ಮನಿಯನ್ನು ಆಳಿದ ಈ ಮಹಾನ್ ಪ್ರಭು ಬಳಿ ಒಟ್ಟು ಒಂಬತ್ತು ಮರ್ಸಿಡಿಸ್ ಬೆಂಝ್ ಕಾರುಗಳಿದ್ದವು. ಎರಡನೇ ಲೋಕ ಮಹಾಯುದ್ಧ ಸಂದರ್ಭದಲ್ಲಿ ಇದೇ ಕಾರನ್ನು ಬಳಕೆ ಮಾಡುತ್ತಿದ್ದರು ಎಂಬ ಬಗ್ಗೆಯೂ ಮಾಹಿತಿಯಿದೆ.

ಅಡಾಲ್ಫ್ ಹಿಟ್ಲರ್

ಅಡಾಲ್ಫ್ ಹಿಟ್ಲರ್

ಇನ್ನು ಪರೇಡ್ ಇತ್ಯಾದಿ ಸಮಾರಂಭದ ವೇಳೆ ಹಿಟ್ಲರ್ 1939ರ ಗ್ರೋಸೆರ್ ಮರ್ಸಿಡಿಸ್ 770ಕೆ (Grosser mercedes 770k) ಕಾರನ್ನು ಬಳಸುತ್ತಿದ್ದರು. ಹಾಗೆಯೇ ಫೋಕ್ಸ್‌ವ್ಯಾಗನ್ ಹಾಗೂ ಬೀಟ್ಲ್ ಸಂಸ್ಥೆಗಳ ಆರಂಭಿಕ ಯಶಸ್ಸಿಗೆ ಹಿಟ್ಲರ್ ಅವರೇ ಕಾರಣರಾಗಿದ್ದರು ಎಂಬುದು ಅಷ್ಟೇ ಸತ್ಯ.

ಬೆನಿಟೊ ಮುಸೊಲಿನಿ

ಬೆನಿಟೊ ಮುಸೊಲಿನಿ

ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯ ನೇತಾರನಾಗಿದ್ದ ಇಟಲಿಯನ್ ರಾಜಕಾರಣಿ ಹಾಗೂ 'ಫ್ಯಾಸಿಸಿಮ್' ಅನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆನಿಟೊ ಮುಸೊಲಿನಿ, ಫೇವರಿಟ್ ಅಲ್ಫಾ ರೊಮಿಯೊ ವಾಹನ ಹೊಂದಿದ್ದರು. ಆ ಬಳಿಕವಿದು ಇ ಬೇ ಹರಾಜಿನಲ್ಲಿ 12 ಲಕ್ಷ ಅಮೆರಿಕನ್ ಡಾಲರ್‌ಗೆ ಸೇಲಾಗಿತ್ತು.

1939ರ ಲಾನ್ಸಿಯಾ ಆಸ್ಟ್ರಾ ಪರೇಡ್ ಕಾರು

1939ರ ಲಾನ್ಸಿಯಾ ಆಸ್ಟ್ರಾ ಪರೇಡ್ ಕಾರು

ಹಿಟ್ಲರ್ ತರಹನೇ ಇಟಲಿಯ ಪ್ರಭಾವಿ ನಿರಂಕುಶ ಪ್ರಭುಗಳಲ್ಲಿ ಒರ್ವರಾಗಿದ್ದ ಮುಸೊಲಿನಿ, 'ಹಿಸ್ ಎಕ್ಸಲೆನ್ಸಿ ಬೆನಿಟೊ ಮುಸೊಲಿನಿ' ಬಿರುದನ್ನು ಪಡೆದಿದ್ದರು.

ವ್ಲಾಡಿಮಿರ್ ಇಲ್ಯಿಚ್ ಲೆನಿನ್

ವ್ಲಾಡಿಮಿರ್ ಇಲ್ಯಿಚ್ ಲೆನಿನ್

ಸೋವಿಯೆಟ್ ಒಕ್ಕೂಟದ ಪ್ರಥಮ ಅಧ್ಯಕ್ಷ ಹಾಗೂ ಅಕ್ಟೋಬರ್ ಕ್ರಾಂತಿಯ ಮುಖ್ಯ ನಾಯಕರೂ ಆಗಿರುವ ರಷ್ಯಾ ದೇಶದ ಕಮ್ಯೂನಿಸ್ಟ್ ಸಿದ್ಧಾಂತದ ಕ್ರಾಂತಿಕಾರಿ ರಾಜಕಾರಣಿ ವ್ಲಾಡಿಮಿರ್ ಇಲ್ಯಿಚ್ ಲೆನಿನ್, ತಮ್ಮ ಜೀವನ ಪರ್ಯಂತದಲ್ಲಿ 12 ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದರು. ಈ ಪೈಕಿ ರೋಲ್ಸ್ ರಾಯ್ಸ್ ಸಿಲ್ವರ್ ಗೋಸ್ಟ್ ಹೆಚ್ಚು ಜನಪ್ರಿಯವಾಗಿದೆ. ಹಿಮಪಾತದಿಂದ ರಕ್ಷಣೆ ಪಡೆಯಲು ಟಯರ್‌ಗಳನ್ನು ವಿಶೇಷವಾಗಿ ತಯಾರಿಸಲಾಗಿತ್ತು.

ಜೋಸೆಫ್ ಸ್ಟಾಲಿನ್

ಜೋಸೆಫ್ ಸ್ಟಾಲಿನ್

1924ರಲ್ಲಿ ವ್ಲಾಡಿಮಿರ್ ಲೆನಿನ್ ನಿಧನದ ನಂತರ ಸೋವಿಯತ್ ಒಕ್ಕೂಟದ ನಾಯಕರಾಗಿ ಹೊರಹೊಮ್ಮಿದ ಜೋಸೆಫ್ ಸ್ಟಾಲಿನ್, ತಮ್ಮ ಪೂರ್ವಧಿಕಾರಿಯನ್ನು ಹೋಲಿಸಿದಾಗ ಅಮೆರಿಕದ ಪ್ಯಾಕರ್ಡ್ ಹಾಗೂ ಕ್ಯಾಡಿಲಿಕ್ ಬ್ರಾಂಡ್‌ಗಳನ್ನು ಹೊಂದಿದ್ದರು. ಅಷ್ಟೇ ಯಾಕೆ ಅಂದಿನ ಅಮೆರಿಕ ಅಧ್ಯಕ್ಷ ಫ್ರಾಕ್ಲಿಂನ್ ಡಿ ರೂಸ್‌ವೆಲ್ಟ್ ಅವರಿಂದ 1937 ಪ್ಯಾಕರ್ಡ್ ವಿ12 ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ಚಿತ್ರದಲ್ಲಿ ತೋರಿಸಿರುವಂತೆಯೇ ಸೊವಿಯೆಟ್‌ನಿಂದ ನಿರ್ಮಾಣವಾದ ZIS 110 ಕಾರು ಕೂಡಾ ಅವರ ಬಳಿಯಿತ್ತು.

ಇದಿ ಅಮೀನ್ ದಾದಾ

ಇದಿ ಅಮೀನ್ ದಾದಾ

1971 ರಿಂದ 1979ರ ವರಗೆ ಉಗಾಂಡಾ ಅಧ್ಯಕ್ಷ ಹಾಗೂ ಸೈನ್ಯದ ನಾಯಕರಾಗಿದ್ದ ಇದಿ ಅಮೀನ್ ದಾದಾ ಸಾವಿರ ವಾಹನಗಳ ಒಡೆಯರಾಗಿದ್ದಾರೆ. ಉಗಾಂಡಾ ಮೂರನೇ ಅಧ್ಯಕ್ಷರಾಗಿದ್ದ ಇದಿ ದಾದಾ ಅವರ ಜನಾಂಗೀಯ ಹಿಂಸಾಚರಣೆಯಿಂದಾಗಿ ಜೀವ ರಕ್ಷಣೆಗಾಗಿ ಇಂಡಿಯನ್ ವಂಶಜರು ಪಲಾಯನಗೈದಿದ್ದರು. ಅಂತೆಯೇ ಬಹುತೇಕ ಕಾರುಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು.

ಈ ಪೈಕಿ ಮರ್ಸಿಡಿಸ್ ಬೆಂಝ್ ಅವರ ಫೇವರಿಟ್ ಕಾರಾಗಿದೆ. ಚಿತ್ರದಲ್ಲಿರುವುದು ಮರ್ಸಿಡಿಸ್ ಬೆಂಝ್ ಪುಲ್‌ಮ್ಯಾನ್.

ಇದಿ ಅಮೀನ್ ದಾದಾ

ಇದಿ ಅಮೀನ್ ದಾದಾ

1972ನೇ ಕಾಲಘಟ್ಟದಲ್ಲಿ ಇದಿ ಅಮೀನ್ ದಾದಾ ನೇತೃತ್ವದ ಉಗಾಂಡಾ ಸೈನ್ಯದಲ್ಲಿ ಜೀಪ್ ಬಳಕೆಯೂ ಸಾಮಾನ್ಯವಾಗಿತ್ತು. ಅಮೀನ್ ಅರ ಆಡಳಿತ ಮಾನವ ಹಕ್ಕುಗಳ ದುರುಪಯೋಗ ರಾಜಕೀಯ ನಿಗ್ರಹ ಜನಾಂಗೀಯ ಹಿಂಸಾಚರಣೆ, ಕಾನೂನು ಬಾಹಿರ ಕೊಲೆಗಳು ಕುಲ ಪಕ್ಷಪಾತ, ಭ್ರಷ್ಟಾಚಾರ ಮತ್ತು ಆರ್ಥಿಕತೆಯ ಅಸಮರ್ಪಕ ನಿರ್ವಹಣೆಗಳನ್ನು ಒಳಗೊಂಡಿದೆ.

ಸದ್ದಾಂ ಹುಸೇನ್

ಸದ್ದಾಂ ಹುಸೇನ್

ಇತರೆಲ್ಲ ಸರ್ವಾಧಿಕಾರಿಗಳನ್ನು ಹೋಲಿಸಿದರೆ ತುಂಬಾ ಬಲಿಷ್ಠವಾಗಿದ್ದ ಇರಾಕ್ ನಾಯಕ ಸದ್ದಾಂ ಹುಸೇನ್, ಐಷಾರಾಮಿ ಕಾರು ಪ್ರೇಮಿಯಾಗಿದ್ದರು. ಸದ್ದಾಂ ಪೈಕಿ 60ಕ್ಕಿಂತಲೂ ಹೆಚ್ಚು ಕಾರುಗಳಿದ್ದವು. ಆದರೆ ಯುದ್ಧ ವೇಳೆಯಲ್ಲಿ ಎಲ್ಲವೂ ನಷ್ಟವಾಗಿತ್ತು.

ಸದ್ದಾಂ ಹುಸೇನ್

ಸದ್ದಾಂ ಹುಸೇನ್

ವಿಂಟೇಜ್ ಕಾರು, ಸ್ಪೋರ್ಟ್ಸ್ ಕಾರು, ಲಗ್ಷುರಿ ಸೆಡಾನ್, ಲಗ್ಷುರಿ ಎಸ್‌ಯುವಿನಿಂದ ಹಿಡಿದು ಎಲ್ಲ ತರಹದ ಕಾರುಗಳು ಸದ್ಧಾಂ ಬಳಿಯಿದ್ದವು. ಅಷ್ಟೇ ಯಾಕೆ ಲಂಡನ್‌ನ ಅಧಿಕೃತ ಟ್ಯಾಕ್ಸಿ ಕಾರು ಹೊಂದಿದ್ದರೆಂಬ ಮಾಹಿತಿಯಿದೆ.

ಮುಅಮ್ಮರ್ ಮುಹಮ್ಮದ್ ಅಲ್ ಗಡಾಫಿ

ಮುಅಮ್ಮರ್ ಮುಹಮ್ಮದ್ ಅಲ್ ಗಡಾಫಿ

1969ರ ಸೆಪ್ಟೆಂಬರ್ 1ರ ಸೈನ್ಯಕ್ರಾಂತಿಯ ಬಳಿಕ ಲಿಬಿಯಾ ನಾಯಕರಾಗಿದ್ದ ಮುಅಮ್ಮರ್ ಮಹಮ್ಮದ್ ಅಲ್ ಗಡಾಫಿ, ಕಾರಿನ ವಿಷಯಕ್ಕೆ ಬಂದಾಗ ವಿಭಿನ್ನ ಟೇಸ್ಟ್ ಹೊಂದಿದ್ದರು. ಅವರ ಐಷಾರಾಮಿ ಕಾರುಗಳೆಲ್ಲ ಕಳಪೆ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂಬ ವಿಮರ್ಶೆಯಿದೆ. ಹಾಗಿದ್ದರೂ ಕರ್ನಾಲ್ ಗಡಾಫಿ ಅವರ 'ಲಿಬಿಯನ್ ರಾಕೆಟ್' ಸೆಡಾನ್ ಕಾರು ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ರಾಕೆಟ್ ತರಹನೇ ವಿನ್ಯಾಸ ಹೊಂದಿರುವ ಈ ಕಾರನ್ನು ಲಿಬಿಯನ್ ಅರಬ್ ಡೊಮೆಸ್ಟಿಕ್ ಇನ್ವೆಸ್ಟ್‌ಮೆಂಟ್ ನಿರ್ಮಿಸಿತ್ತು. ಇಲ್ಲೂ ತಮಾಷೆಯ ವಿಷಯವೆಂದರೆ ಕಾರು ತಯಾರಕರ ಪ್ರಕಾರ 'ಪ್ರಪಂಚದಾದ್ಯಂತ ಮಾನವನ ಜೀವನ ರಕ್ಷಿಸಲು' ಈ ಕಾರು ತಯಾರಿಸಲಾಗಿದೆ ಎಂಬುದಾಗಿತ್ತು. ಕ್ರೂರ ನೀತಿ ಹೊಂದಿದ್ದ ಗಡಾಫಿ ಅಂತವರ ನಿರಂಕುಶ ಪ್ರಭುಗಳಿಗೆ ಈ ಮಾತು ಸಮಂಜಸವೇ ಎಂಬುದು ಪ್ರಶ್ನೆಯ ವಿಷಯ

ಜಗತ್ತನ್ನೇ ಆಳಿದ ನಿರಂಕುಶ ಪ್ರಭುಗಳ ನಿರ್ಭೀತಿಯ ಕಾರುಗಳು

ಇಲ್ಲಿ ಇತರ ಯಾವುದೇ ಸರ್ವಾಧಿಕಾರಿಗಳನ್ನು ಹೆಸರಿಸಲು ಅಥವಾ ನಿಮಗೆ ಈ ಬಗ್ಗೆ ಹೆಚ್ಚು ತಿಳಿದಿದ್ದರೆ ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಮೆನ್ಷನ್ ಮಾಡಬುಹುದು.

Most Read Articles

Kannada
English summary
Power, wealth, and expensive luxury cars is a combination that is common among all dictators. Be it Adolf Hitler, who ruled a country that is home to some of the world's leading car manufacturers or Muammar Gaddafi, who famously had his own cars built. Some dictators were passionate about their machines and even sported huge fleets of vehicles. Others lacked taste, though they did not lack enthusiasm. Following is a list of some prominent dictators and their rides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X