ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

By Nagaraja

ಐಷಾರಾಮಿ ಕಾರುಗಳು ಕೈಕೊಟ್ಟಾಗ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಮಾಲಿಕರು ಇಂತಹ ವಿಚಿತ್ರ ನೀತಿ ಅನುಸರಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಕಾರು ಸಂಸ್ಥೆಗೆ ಅವಮಾನವಾಗುವುದಲ್ಲದೆ ಮಾಲಿಕರು ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಾರೆ.

ಇಂತಹದೊಂದು ಘಟನೆ ಗುಜರಾತ್ ನ ಸೂರತ್ ನಿಂದ ವರದಿಯಾಗಿದೆ. ಒಂದು ಕೋಟಿ ಬೆಲೆ ಬಾಳುವ ಐಷಾರಾಮಿ ಕಾರು ಖರೀದಿಸಿದ್ದ ಸೂರತ್ ಉದ್ಯಮಿ ಕಳಪೆ ಸರ್ವಿಸ್ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶವನ್ನು ಕತ್ತೆ ಸೇವೆ ಮೂಲಕ ತೋರ್ಪಡಿಸಿದ್ದಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ನಿಮ್ಮ ಮಾಹಿತಿಗಾಗಿ ದೇಶದಲ್ಲಿ ಬೆರಳಣಿಕೆ ಮಾತ್ರದಲ್ಲಿ ಕೇವಲ 20ರಷ್ಟು ಶ್ರೀಮಂತ ವ್ಯಕ್ತಿಗಳು ಮಾತ್ರ ಲ್ಯಾಂಡ್ ಕ್ರೂಸರ್ ಹೊಂದಿದ್ದಾರೆ. ಇವರಲ್ಲಿ ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದ್ದಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಜಪಾನ್ ಮೂಲದ ಜನಪ್ರಿಯ ಸಂಸ್ಥೆಯಾಗಿರುವ ಟೊಯೊಟಾ ಐದು ವರ್ಷಗಳ ಹಿಂದೆ ಲ್ಯಾಂಡ್ ಕ್ರೂಸರ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದರಂತೆ ಸೂರತ್ ನ ಶ್ರೀಮಂತ ಬಿಲ್ಡರ್ ತುಷಾರ್ ಗಿಲಾನ್ ತಮ್ಮದಾಗಿಸಿಕೊಂಡಿದ್ದರು.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಆದರೆ ಕಾರು ಖರೀದಿಸಿದ ಬಳಿಕ ಪರಿಸ್ಥಿತಿ ಬದಲಾಯಿತು. ಕಾರಿನಲ್ಲಿ ಪದೇ ಪದೇ ಸಮಸ್ಯೆ ಕಾಣಿಸಿಕೊಂಡರೂ ಈ ಬಗ್ಗೆ ದೂರು ನೀಡಿದರೂ ಡೀಲರ್ ಗಳು ಅತ್ತ ತಿರುಗಿಯೂ ನೋಡುತ್ತಿರಲಿಲ್ಲ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಕಾರು ಖರೀದಿಸಿದ ಐದನೇ ದಿನದಲ್ಲೇ ಕೀ ಲಾಕ್ ಗೆ ಕೇಡು ಸಂಭವಿಸಿತ್ತು. ಮಾರುಕಟ್ಟೆಯಲ್ಲಿ 50 ರು.ಗಳಿಗೆ ಲಭ್ಯವಿರುವ ಈ ಕೀ ಲಾಕ್ ಗೆ 1500 ರುಪಾಯಿ ಚಾರ್ಚ್ ಮಾಡಿಸಿದ್ದರಲ್ಲದೆ ಇದನ್ನು ಸರಿಪಡಿಸಿ ಕೊಡಲು ಐದು ದಿನಗಳೇ ಬೇಕಾಯಿತು ಎಂದು ತುಷಾರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಇಲ್ಲಿಗೆ ಸಮಸ್ಯೆ ಕೊನೆಗೊಳ್ಳುವುದಿಲ್ಲ. ಪ್ರತಿ 5,000 ಕೀ.ಮೀ.ಗಳಿಗೊಮ್ಮೆ ಲೈನರ್ ಬದಲಾಯಿಸಬೇಕಾಗುತ್ತದೆ. ಈ ಬಗ್ಗೆ ಡೀಲರ್ ಗಳನ್ನು ಸಂಪರ್ಕಿಸಿದರೆ ಅವರಿಂದ ಸ್ಪಷ್ಟ ಉತ್ತರವೇ ದೊರಕುತ್ತಿರಲಿಲ್ಲ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಇವೆಲ್ಲದರಿಂದ ಬೆಸತ್ತಿರುವ ಲ್ಯಾಂಡ್ ಕ್ರೂಸರ್ ಮಾಲಿಕ ತುಷಾರ್ ತಮ್ಮ ಕಾರಿಗೆ ಕತ್ತೆ ಸೇವೆ ಮಾಡಿಸಿರುತ್ತಾರೆ. ಈ ಮೂಲಕ ಸಂಸ್ಥೆ ಹಾಗೂ ಡೀಲರ್ ಗಳ ಕಳಪೆ ಸೇವೆಗೆ ತಕ್ಕ ಉತ್ತರ ನೀಡಿದ್ದಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ತುಷಾರ್ ಪ್ರಕಾರ, ವರ್ಷಂಪ್ರತಿ ವಿಮೆಗಾಗಿ ಎಂಟು ಲಕ್ಷ ರು.ಗಳನ್ನು ಪಾವತಿಸುತ್ತಿದ್ದಾರೆ. ಆದರೆ ಡೀಲರ್ ಗಳ ನಿರ್ಲಕ್ಷದಿಂದಾಗಿ ತನ್ನ ಗಾಡಿ ಕತ್ತೆ ಗಾಡಿಗಿಂತಲೂ ಕಡೆಯಾಗಿದೆ. ನನಗೀಗ ಈ ಕಾರು ಖರೀದಿಸಿ ಬೇಸರವಾಗುತ್ತಿದೆ ಎಂದು ಮನನೊಂದಿದ್ದಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಇದರ ಬದಲು ನಾನೊಂದು ನ್ಯಾನೋ ಖರೀದಿಸಿದ್ದರೆ ಉತ್ತಮವಾಗಿರುತ್ತಿತ್ತು. ಕಡಿಮೆ ಪಕ್ಷ ಬಿಡಿಭಾಗಗಳು ಬಹಳ ಸುಲಭವಾಗಿ ದೊರಕುತ್ತಿದ್ದವು ಎಂದಿದ್ದಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಪ್ರಸ್ತುತ ಡೀಲರುಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಿದ್ಧರಾಗುತ್ತಿಲ್ಲ. ಅವರು ಮಾತನಾಡುವುದನ್ನು ಕಂಪನಿ ನಿರ್ಬಂಧಿಸಿದೆ ಎಂದು ತುಷಾರ್ ಆರೋಪ ಮಾಡುತ್ತಿದ್ದಾರೆ.

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಇನ್ನೊಂದೆಡೆ ಹೇಳಿಕೆ ಕೊಟ್ಟಿರುವ ಸಂಸ್ಥೆಯು, ಇತ್ತೀಚೆಗಿನ ಸಮಯಗಳಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ಅಥವಾ ಡೀಲರ್ ಗೆ ಆಗಿರಲಿ ಅಂತಹ ಯಾವುದೇ ದೂರುಗಳು ದಾಖಲಾಗಿಲ್ಲ. ಹಾಗಿದ್ದರೂ ಗ್ರಾಹಕರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ಅರಿತುಕೊಂಡು ತನಿಖೆ ನಡೆಸಲಿದ್ದೇವೆ ಎಂದಿದೆ.

Most Read Articles

Kannada
English summary
Donkeys pull Rs 1-crore Toyota Land Cruiser in Surat
Story first published: Wednesday, July 8, 2015, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X