ಈತನನ್ನು 'ಅದೃಷ್ಟವಂತ' ಎನ್ನ‌‌‌‌‌ಬೇಕಾ ? ಇಲ್ಲ 'ಅಹಂಕಾರಿ' ಎನ್ನ‌‌‌‌‌ಬೇಕಾ ? ವಿಡಿಯೋ ನೋಡಿ ಹೇಳಿ

ದೇಶದಲ್ಲಿ ರಸ್ತೆ ನಿಯಮ ಪಾಲಿಸದ ಹಿನ್ನೆಲೆ ದಿನಂಪ್ರತಿ ಹತ್ತಾರು ಭೀಕರ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತವೆ, ಆದರೆ ಈ ರೀತಿಯ ಸಾವಿನ ಕಾದ ತಟ್ಟಿ ಹೊರಬಂದ ಜನರು ಕಡಿಮೆ ಸಂಖ್ಯೆಯಲ್ಲಿ ನಮಗೆ ಸಿಗುತ್ತಾರೆ.

Written By:

ಅತಿಯಾದ ವೇಗದಲ್ಲಿ ಎರಡು ಟ್ರಕ್‌ಗಳ ನಡುವೆ ಓವರ್ ಟೇಕ್ ಮಾಡಲು ಯತ್ನಿಸಿದ ವ್ಯಕ್ತಿ ಪವಾಡ ಸದೃಶದಲ್ಲಿ ಪಾರಾದ ಘಟನೆ ಯುಟ್ಯೂಬ್‌ನಲ್ಲಿ ವೈರಲ್ ಆಗಿದೆ.

ಈ ವಾಹನ ಸವಾರನ ಅದೃಷ್ಟವೋ ಏನೋ ಅತಿಯಾದ ವೇಗದಲ್ಲಿ ಎರಡು ಟ್ರಕ್‌ಗಳ ಮಧ್ಯೆ ಓವರ್ ಟೇಕ್ ಮಾಡಲು ಹೋಗಿ ಬಲಬದಿಯ ಟ್ರಕ್ ಚಕ್ರಕ್ಕೆ ಸಿಲುಕಿಕೊಂಡರೂ ಸಹ ಪವಾಡ ಸದೃಶದಲ್ಲಿ ಪಾರಾದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಬೈಕ್ ಸವಾರನ ಪಕ್ಕ ಚಲಿಸುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಈ ವಿಡಿಯೋ ಚಿತ್ರೀಕರಿಸಿದ್ದು, ವಿಡಿಯೋ ನೋಡುವ ಜನ ಎರಡು ಗುಂಡಿಗೆ ಹೊಂದಿರಬೇಕು ಎಂಬುದು ಸತ್ಯ ಸಂಗತಿ.

ದೇಶದಲ್ಲಿ ರಸ್ತೆ ನಿಯಮ ಪಾಲಿಸದ ಹಿನ್ನೆಲೆ ದಿನಂಪ್ರತಿ ಹತ್ತಾರು ಭೀಕರ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತವೆ, ಆದರೆ ಈ ರೀತಿಯ ಸಾವಿನ ಕಾದ ತಟ್ಟಿ ಹೊರಬಂದ ಜನರು ಕಡಿಮೆ ಸಂಖ್ಯೆಯಲ್ಲಿ ನಮಗೆ ಸಿಗುತ್ತಾರೆ.

ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿ ಬೀದಿ ಹೆಣವಾಗುವ ಎಷ್ಟೋ ಮಂದಿಯಲ್ಲಿ ಈತನೂ ಒಬ್ಬನಾಗುವ ದುರದೃಷ್ಟ ಕೈತಪ್ಪಿದಕ್ಕೆ ಈತ ದೇವರಿಗೆ ಎಷ್ಟು ಕೈಮುಗಿದರು ಸಾಲದೇನೋ !!?

ಅಪಘಾತದ ನಂತರ ತನಗೇನೂ ಆಗಿಲ್ಲವೇನೋ ಎನ್ನುವ ರೀತಿಯಲ್ಲಿ ಹೋಗುತ್ತಿರುವುದನ್ನು ನೋಡಿದರೆ ಎಂತವರಿಗೂ ನಗು ಬಾರದೆ ಇರದು.ಹೆಲ್ಮೆಟ್ ಧಾರಣೆ ಎಷ್ಟರ ಮಟ್ಟಿಗೆ ಮುಖ್ಯ ಎಂಬುದು ಈ ವಿಡಿಯೋ ಕಲಿಸಿಕೊಡುವುದಂತೂ ಸತ್ಯ.

ಸಾವಿನ ರಹದಾರಿ ಇಂದ ಮರಳಿ ಬಂದಿರುವ ಈ ವ್ಯಕ್ತಿ ಹೆಚ್ಚು ಆಯಸ್ಸು ಪಡೆದು ಹೆಚ್ಚು ಜಾಗ್ರತೆಯಿಂದ ಮುನ್ನೆಡೆಯಲಿ ಎಂಬುದೇ ಡ್ರೈವ್ ಸ್ಪಾರ್ಕ್ ಕನ್ನಡ ತಂಡದ ಆಶಯ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಅಪಘಾತ accident
Story first published: Wednesday, March 22, 2017, 16:14 [IST]
English summary
[read in kannada]
Please Wait while comments are loading...

Latest Photos