ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

By Nagaraja

2011ರಲ್ಲಿ ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿರುವ ಪರಮಾಣು ದುರಂತವು (2011 Fukushima nuclear disaster) ಮಹಾ ವಿಪತ್ತನ್ನೇ ತಂದೊಡ್ಡಿದೆ. 1986ರಲ್ಲಿ ಚೆರ್ನೋಬಿಲ್ (Chernobyl) ಅಣು ಸ್ಥಾವರ ಅವಘಡದ ಬಳಿಕ ಸಂಭವಿಸಿದ ಅತಿ ದೊಡ್ಡ ಪರಮಾಣು ದುರಂತ ಎಂದೇ ಇದನ್ನು ವಿಶ್ಲೇಷಿಸಲಾಗುತ್ತದೆ.

Also Read: ಅಚ್ಚರಿ! ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯ ಕಾರು ಸ್ಮಶಾನ ಮುಂದಕ್ಕೆ ಓದಿ

ಪರಿಣಾಮ ಭಾರಿ ಪ್ರಮಾಣದ ವಿಕಿರಣಗಳು ಇಡೀ ಫುಕುಶಿಮಾ ಪ್ರದೇಶವನ್ನು ಜ್ವಾಲೆಯಂತೆ ಆವರಿಸಿತ್ತು. ಇದರಿಂದಾಗಿ ಬರೋಬ್ಬರಿ 1,60,000 ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.

ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಪ್ರಸ್ತುತ ಪಾಳು ಬಿದ್ದಿರುವ ಈ ಪ್ರದೇಶಕ್ಕೆ ಭೇಟಿ ಕೊಟ್ಟಿರುವ ಛಾಯಾಗ್ರಾಹಕರೊಬ್ಬರು ಬೆಚ್ಚಿ ಬೀಳಿಸುವ ನೈಜ ಚಿತ್ರಗಳನ್ನು ಜಗತ್ತಿನ ಮುಂದಿಟ್ಟಿದ್ದಾರೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಅಂದು ತೆರೆಗೊಳಿಸಲಾಗಿರುವ 20 ಕೀ.ಮೀ. ಜಾಗವನ್ನು ಪ್ರಕೃತಿ ಮಾತೆಯು ತನ್ನ ತೋಳಲ್ಲಿ ಸೇರಿಸಿಕೂಂಡಿದೆ. ಇಲ್ಲಿ ಆವರಿಸಿರುವ ದಟ್ಟಾರಣ್ಯದ ನಡುವೆ ಅಸಂಖ್ಯಾತ ವಾಹನಗಳು ನೆನೆಗುದಿಗೆ ಬಿದ್ದಿವೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ನಾಲ್ಕು ವರ್ಷಗಳ ಬಳಿಕದ ಅಂದರೆ ಇತ್ತೀಚೆಗಷ್ಟೇ ಸೆರೆ ಹಿಡಿದ ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು, ವಾಹನಗಳ ಜೊತೆಗೆ ನೂರಾರು ಸಂಖ್ಯೆಯ ಮನೆಗಳು, ಶಾಲೆಗಳು, ಕಟ್ಟಡಗಳು, ಸೂಪರ್ ಮಾರ್ಕೆಟ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ತನ್ನ ಅಸ್ತಿತ್ವಕ್ಕಾಗಿ ತಿಣುಕಾಡುವ ದೃಶ್ಯಗಳು ಬಯಲಾಗಿದೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಫುಕುಶಿಮಾ ಅಣುಸ್ಥಾವರ ದುರಂತದ ಬೆನ್ನಲ್ಲೇ ಭಾರಿ ಪ್ರಮಾಣದ ವಿಕಿರಣ ಹೊರ ಹೊಮ್ಮಿತ್ತು. ಇದರಿಂದ ಭಯಭೀತರಾಗಿದ್ದ ಜನರನ್ನು ತಕ್ಷಣ ಸ್ಥಳಾಂತರಿಸಲಾಗಿತ್ತು.

ಫೋಟೊ ಕೃಪೆ: © Arkadiusz Podniesinski/REX/SIPA

ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

2011 ಮಾರ್ಚ್ 11ರಂದು ಸಂಭವಿಸಿದ ಪ್ರಬಲ ಭೂಕಂಪದ ಬೆನ್ನಲ್ಲೇ ಉಂಟಾದ 50 ಅಡಿ ಎತ್ತರದ ದೈತ್ಯ ಸುನಾಮಿ ಅಪ್ಪಳಿಸಿದ ಪರಿಣಾಮ ಫುಕುಶಿಮಾ ಅಣುಸ್ಥಾವರದಲ್ಲಿ ಭಾರಿ ಪ್ರಮಾಣದ ಅಣು ಸೋರಿಕೆಯಾಗಿತ್ತು.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ತದಾ ಬಳಿಕ ನಾಲ್ಕು ವರ್ಷಗಳ ಕಾಲ ಯಾರೂ ಕೂಡಾ ಅತ್ತ ಮುಖ ತಿರುಗಿಸಿಯೂ ನೋಡಲು ಭಯಪಡುತ್ತಿದ್ದರು. ಈಗ ಎಕರೆ ಗಟ್ಟಲೆ ಜಾಗದಲ್ಲಿ ಕಾಡು ಗಿಡ ಮರಗಳು ಬೆಳೆದು ನಿಂತಿದೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಅಂಕಿಅಂಶಗಳ ಪ್ರಕಾರ ಅಂದು 1,60,000 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಈ ಪೈಕಿ 1,20,000 ಮಂದಿ ಇನ್ನು ಹಿಂತಿರುಗಿಲ್ಲ. ಅಲ್ಲದೆ ಕೆಲವು ಪ್ರದೇಶವನ್ನು ಈಗಲೂ ಅಪಾಯಕಾರಿಯೇ ಮುಂದುವರಿದಿದೆ ಎಂದಿದೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಇಲ್ಲಿಗೆ ಭೇಟಿ ಕೊಟ್ಟಿರುವ ಪೊಲೆಂಡ್‌ನ Arkadiusz Podniesinski ಎಂಬ ವೃತ್ತಿಪರ ಛಾಯಾಚಿತ್ರಗಾರ ಈ ಬೆಚ್ಚಿ ಬೀಳಿಸುವ ಚಿತ್ರಗಳನ್ನು ಜಗತ್ತಿನ ಮುಂದಿಟ್ಟಿದ್ದಾರೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

43ರ ಹರೆಯದ ಈ ಛಾಯಾಚಿತ್ರಗಾರನ ಹೇಳುವ ಪ್ರಕಾರ, "ಅಣುಸ್ಥಾವರ ದುರಂತಕ್ಕೀಡಾದ ಪ್ರದೇಶದ ನೈಜ ಚಿತ್ರಣವನ್ನು ಜಗತ್ತಿನ ಮುಂದಿಡುವುದೇ ನನ್ನ ಗುರಿಯಾಗಿತ್ತು" ಎಂದಿದ್ದಾರೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಹಾಗಿದ್ದರೂ ಜಪಾನ್ ಅಧಿಕಾರಿಗಳು ಈ ಜಾಗವನ್ನು ಹಾಗೇ ಸುಮ್ಮನೆ ಬಿಟ್ಟಿಲ್ಲ. ಈ ಪ್ರದೇಶದ ನವೀಕರಣ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ 20,000ದಷ್ಟು ಕಾರ್ಯಕರ್ತರು ಶುಚಿತ್ವದ ಕಾರ್ಯದಲ್ಲಿ ಮಗ್ನವಾಗಿದ್ದಾರೆ.

ಫೋಟೊ ಕೃಪೆ: © Arkadiusz Podniesinski/REX/SIPA
ಜಪಾನ್ ಅಣು ದುರಂತ ಪ್ರದೇಶದ ಬೆಚ್ಚಿ ಬೀಳಿಸುವ ಸತ್ಯಗಳು!

ಸಾಗರದೊಳಗೆ ಮುಳುಗಿರುವ 18 ಅವಿಶ್ವಸನೀಯ ಹಡಗುಗಳು

ಮೂಲ: Linternaute

Most Read Articles

Kannada
English summary
Drone images reveals Fukushima Nuclear Disaster exclusion zone
Story first published: Tuesday, October 27, 2015, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X