ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಮುಂಬರುವ ಜೂನ್ ಅಂತ್ಯದ ವೇಳೆಗೆ ದುಬೈ ಸರ್ಕಾರ ಚಾಲಕರಹಿತ ಹಾರುವ ಟ್ಯಾಕ್ಸಿಗಳನ್ನು (ಕ್ವಾಡ್-ಕಾಪ್ಟರ್) ಬಿಡುಗಡೆಗೊಳಿಸಲು ಮುಂದಾಗಿದ್ದು, ಹೊಸ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಶ್ರೀಮಂತಿಕೆಯ ತವರು ದುಬೈನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಹೆಚ್ಚುತ್ತಿದ್ದು, ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ ಸ್ವಯಂ ಚಾಲಿತ 'ಕ್ವಾಡ್-ಕಾಪ್ಟರ್'‌ಗಳು ಅಧಿಕೃತ ಸೇವೆ ನೀಡಲು ಸಿದ್ಧಗೊಳ್ಳುತ್ತಿವೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಚೈನಾ ನಿರ್ಮಾಣದ ಸ್ವಯಂ ಚಾಲಿತ "ಹ್ಯಾಂಗ್ 184" ಹೆಸರಿನ ಈ ವಾಹನವು ಪ್ರತಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಜೊತೆಗೆ ಭೂಮಿಯಿಂದ ಸುಮಾರು 300 ಮೀಟರ್ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಎಲೆಕ್ಟ್ರಿಕ್ ಎಂಜಿನ್ ಹೊಂದಿರುವ ಕ್ವಾಡ್ ಕಾಪ್ಟರ್ ವಾಹನಗಳಿಗೆ 2 ಗಂಟೆಗಳ ಕಾಲ ವಿದ್ಯುತ್ ಪೂರೈಸಿದರೆ 30 ನಿಮಿಷಗಳಷ್ಟು ಕಾಲ ಹಾರಬಲ್ಲದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕ ತಾನು ತಲುಪಬೇಕಾಗಿರುವ ನಿರ್ದಿಷ್ಟ ಸ್ಥಳವನ್ನು ಭೂಪಟದಲ್ಲಿ ಗುರುತಿಸಬೇಕು ಅಷ್ಟೇ, ಉಳಿದ ಎಲ್ಲಾ ಕೆಲಸಗಳನ್ನೂ ತಾನೇ ನೋಡಿಕೊಳ್ಳಲಿದೆ ಈ ಚಮತ್ಕಾರಿ ಟ್ಯಾಕ್ಸಿ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

"ವರ್ಲ್ಡ್ ಗವರ್ನಮೆಂಟ್ ಸಮಿತ್‌ನಲ್ಲಿ ಪ್ರದರ್ಶಿಸಲಾಗಿದ್ದ ಈ ವಾಹನವು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ, ಕಾರ್ಯರೂಪಕ್ಕೂ ತರುತ್ತಿರುವುದು ದುಬೈ ಸರ್ಕಾರದ ಹೆಗ್ಗಳಿಕೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಇದೇ ಜೂನ್ ಅಂತ್ಯದಲ್ಲಿ ಈ ಚಾಲಕ ರಹಿತ ಟ್ಯಾಕ್ಸಿಗಳು ಅಧಿಕೃತ ಸೇವೆ ಆರಂಭಿಸಲಿದ್ದು, ದುಬೈನ ಸಾರಿಗೆ ಇಲಾಖೆಯ ಮುಖ್ಯಸ್ಥ ಮಟ್ಟರ್ ಅಲ್-ಟಯೆರ್ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಎಂಟು ಬಲಿಷ್ಠ ರೆಕ್ಕೆಗಳು ಹೊಂದಿರುವ ಈ ಕ್ವಾಡ್-ಕಾಪ್ಟರ್ ಟ್ಯಾಕ್ಸಿಯು ಎಂತಹ ವಾತಾವರಣದಲ್ಲಿಯೂ ಸಹ ಸಮತೋಲನ ಕಾಯ್ದುಕೊಳ್ಳುವ ವ್ಯವಸ್ಥೆ ಹೊಂದಿದೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಕ್ವಾಡ್-ಕಾಪ್ಟರ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹತ್ತಾರು ಸುರಕ್ಷಾ ಕ್ರಮಗಳನ್ನು ಇರಿಸಲಾಗಿದೆ.

ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'‌ಗಳದ್ದೇ ಸದ್ದು..!!

ಟ್ರಾಫಿಕ್ ಸಮಸ್ಯೆಯಿಂದ ಬಳಲುವ ಬೃಹತ್ ನಗರಗಳಲ್ಲಿ ಕ್ವಾಡ್-ಕಾಪ್ಟರ್‌ಗಳು ವರದಾನವಾಗಲಿದೆ. ಜೊತೆಗೆ ದುಬೈನಲ್ಲಿ ಇವುಗಳ ಸೇವೆ ಜನಪ್ರಿಯಗೊಂಡಿದ್ದೇ ಆದಲ್ಲಿ, ಮುಂಬರುವ ದಿನಗಳಲ್ಲಿ ವಿಶ್ವದ ಬೃಹತ್ ನಗರಗಳಿಗೆ ಇವುಗಳು ಲಗ್ಗೆಯಿಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ದುಬೈ dubai
English summary
Dubai is set to launch the autonomous flying taxis, the EHang 184 by July 2017.
Story first published: Monday, April 17, 2017, 15:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X