ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

By Nagaraja

ಹೌದು, ಸದ್ಯದಲ್ಲೇ ವಿಶ್ವದ ಬೃಹತ್ ವಿಮಾನ ನಿಲ್ದಾಣವೆಂಬ ಪಟ್ಟವನ್ನು ದುಬೈ ಗಿಟ್ಟಿಸಿಕೊಳ್ಳಲಿದೆ. ಈ ಸಂಬಂಧ ವಿಮಾನ ನಿಲ್ದಾಣ ಅಭಿವೃದ್ಧಿಗೆ ದುಬೈ ದೊರೆ ಬಹುಕೋಟಿಯ ಯೋಜನೆಗೆ ಚಾಲನೆ ನೀಡಿದ್ದಾರೆ.

ದುಬೈನಲ್ಲಿರುವ ಎರಡನೇ ವಿಮಾನ ನಿಲ್ದಾಣ ಅಭಿವೃದ್ಧಿಗೆ ರಾಜ ಶೇಖ್ ಮೊಹಮ್ಮದ್ ಬಿನ್ ರಾಶೀದ್ ಅಲ್ ಮಕ್ತೂಮ್ ಅವರು 32 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಬೃಹತ್ ಯೋಜನೆಗೆ ಅನುಮೋದನೆ ನೀಡಿದ್ದಾರೆ.

ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

ಅಂದರೆ ಎಲ್ಲವೂ ಅಂದುಕೊಂಡಂತೆ ಆದ್ದಲ್ಲಿ ವಿಶ್ವದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ ಹೊಂದಿರುವ ಕೀರ್ತಿಯನ್ನು ದುಬೈ ವರ್ಲ್ಡ್ ಸೆಂಟ್ರಲ್‌ನಲ್ಲಿರುವ (ಡಿಡಬ್ಲ್ಯುಸಿ) ಅಲ್ ಮಕ್ತೂಮ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಸಲ್ಲಲಿದೆ.

ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

ಕಳೆದ ವರ್ಷ ಪ್ರಯಾಣಿಕರಿಗಾಗಿ ತೆರೆದುಕೊಂಡಿದ್ದ ಈ ವಿಮಾನ ನಿಲ್ದಾಣದಲ್ಲಿ ವರ್ಷಂಪ್ರತಿ 200 ಮಿಲಿಯನ್‌ಗಿಂತಲೂ ಹೆಚ್ಚು ಯಾತ್ರಿಕರಿಗೆ ಅವಕಾಶ ಕಲ್ಪಿಸಿಕೊಡುವ ಯೋಜನೆಯಿದ್ದು, ಇದರ ಪ್ರಾಥಮಿಕ ಹಂತವಾಗಿ 2020ರ ವೇಳೆಯಾಗುವಾಗ 100 ಮಿಲಿಯನ್ ಯಾತ್ರಿಕರಿಗೆ ಸೌಲಭ್ಯ ಒದಗಿಸಲಿದೆ.

ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

ಅದೇ ಹೊತ್ತಿಗೆ 12 ಮಿಲಿಯನ್ ಟನ್ ಸರಕು ಸಾಗಣೆಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದು, ಯಾವುದೇ ಹೊತ್ತಿನಲ್ಲಾದರೂ 100 ಏರ್ ಬಸ್ ಎ380 (ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ) ಹಾರಾಟಕ್ಕೆ ಅನುವು ಮಾಡಿಕೊಡುವ ಸಾಮರ್ಥ್ಯವನ್ನು ಈ ವಿಮಾನ ನಿಲ್ದಾಣ ಹೊಂದಿರಲಿದೆ.

ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

ನಿಮ್ಮ ಮಾಹಿತಿಗಾಗಿ ಜಗತ್ತಿನ ಅತ್ಯಂತ ನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಹಾರ್ಟ್ಸ್‌ಫೀಲ್ಡ್ ಜಾಕ್ಸನ್ ಅಟ್ಲಂಟಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಕಳೆದ ವರ್ಷ 94.4 ಮಿಲಿಯನ್ ಯಾತ್ರಿಕರಿಗೆ ಅನುವು ಕಲ್ಪಿಸಿತ್ತು.

ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

ದುಬೈ ವಿಮಾನ ನಿಲ್ದಾಣದ ವಿಸ್ತರಣೆಯ ಮೊದಲ ಹಂತವು ಆರರಿಂದ ಎಂಟು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೊಸ ರನ್ವೇಗಳ ಜೊತೆಗೆ ಮೂಲಸೌಕರ್ಯ ವೃದ್ಧಿಗೆ ಆದ್ಯತೆ ಕೊಡಲಾಗುತ್ತಿದೆ. ಹಾಗೆಯೇ 56 ಸ್ಕ್ವೇರ್ ಕೀ.ಮೀ. ವಿಸ್ತರಣೆಯೊಂದಿಗೆ ವೇಗವಾದ ಹಾಗೂ ಸಮರ್ಥ ಸಂಪರ್ಕಕ್ಕೆ ಆದ್ಯತೆ ನೀಡಲಾಗಿದೆ.

ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ

ಕಳೆದ ವರ್ಷ ವಿಶ್ವದ ಏಳನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಕಾಣಿಸಿಕೊಂಡಿದ್ದ ದುಬೈ ಇಂಟರ್‌ನ್ಯಾಷನಲ್ 66.4 ಮಿಲಿಯನ್ ಯಾತ್ರಿಕರಿಗೆ ಅನುವು ಮಾಡಿಕೊಟ್ಟಿತ್ತು. ಇದೀಗ 2009ರ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಕೆ ಹಂತದಲ್ಲಿರುವ ದುಬೈ ವಿಮಾನ ನಿಲ್ದಾಣವು ಇಡೀ ಜಗತ್ತಿನಲ್ಲೇ ಅತ್ಯಂತ ಶಿಪ್ರಗತಿಯಲ್ಲಿ ಬೆಳೆದು ಬರುತ್ತಿರುವ ವಿಮಾನ ನಿಲ್ಧಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.



Most Read Articles

Kannada
English summary
Dubai's ruler has endorsed a $US32 billion ($A35 billion) expansion plan for the city's second airport that aims to make it the world's biggest airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X