ಈ ಮಾನ್ಸೂನ್‌ನಲ್ಲಿ ಕೈಗೊಳ್ಳಬೇಕಾದ 8 ಕರಾವಳಿ ಪಯಣಗಳು

By Nagaraja

ಮುಂಗಾರು ಮಳೆ ಆರಂಭವಾಗಿದೆ. ಒಂದೆಡೆ ತಂಪಾಗಿ ಬೀಸುವ ಗಾಳಿ ಇನ್ನೊಂದೆಡೆ ಕಡಲಿನ ಅಬ್ಬರವು ಮೈ ಮತ್ತು ಮನಸ್ಸು ಎರಡಕ್ಕೂ ಹಿತವಾದ ಅನುಭವ ನೀಡುತ್ತದೆ. ಮಳೆ ಜೋರಾದಂತೆ ಸಮುದ್ರ ಅಲೆಗಳ ನರ್ತನವು ಜೋರಾಗುತ್ತದೆ.

Also Read : ಸಾವಿನ ರಸ್ತೆಯಲ್ಲೊಂದು ಧಕ್ ಧಕ್ ಪಯಣ

ಪದೇ ಪದೇ ಸುರಿಯುವ ತುಂತುರು ಹನಿಗಳು ನಿಮ್ಮ ಪ್ರಯಾಣವನ್ನು ಇಂಪಾದ ಹಾಡಿನಷ್ಟು ಮಧುರವಾಗಿಸಲಿದೆ. ಇಂದಿನ ಲೇಖನದಲ್ಲಿ ಭಾರತದಲ್ಲಿ ಈ ಮಾನ್ಸುನ್ ವೇಳೆಯಲ್ಲಿ ದೇಶದಲ್ಲಿ ನೀವು ಕೈಗೊಳ್ಳಬೇಕಾಗಿರುವ ಎಂಟು ರಸ್ತೆ ಪಯಣಗಳ ಬಗ್ಗೆ ತಿಳಿಸಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

 08. ಡಿಘಾದಿಂದ ಚಂಡೀಪುರ

08. ಡಿಘಾದಿಂದ ಚಂಡೀಪುರ

ಡಿಘಾ - ಪಶ್ಚಿಮ ಬಂಗಾಳ

ಚಂಡೀಪುರ - ಒಡಿಸ್ಸಾ

ದಕ್ಷಿಣ ಪೂರ್ವಭಾಗ ಒಡಿಸ್ಸಾದ ಚಂಡೀಪುರದಿಂದ ಆರಂಭವಾಗುವ ಈ 105 ಕೀ.ಮೀ. ಪಯಣವು ನಿಮ್ಮನ್ನು ಪಶ್ಚಿಮ ಬಂಗಾಳದ ಡಿಘಾ ಕಡಲ ಕಿನಾರೆಯನ್ನು ತಲುಪಿಸಲಿದೆ. ರಜಾ ದಿನಗಳಲ್ಲಿ ಜಾಲಿ ರೈಡ್ ಹೋಗುವವರಿಗೆ ಇದೊಂದು ಪರಿಪೂರ್ಣ ಆಯ್ಕೆಯಾಗಿರಲಿದೆ. ಈ ನಡುವೆ ನಿಮಗೆ ತಲ್ಸಾರಿ, ಕಾಷಾಫಲ್ ಗಳಂತಹ ಮನೋಹರ ತೀರ ಪ್ರದೇಶಗಳನ್ನು ತಲುಪಿಸಲಿದೆ.

07. ಮುಙಪ್ಪಿಲಾಂಘಾಡ್ ಡ್ರೈವ್ ಇನ್ ಬೀಚ್

07. ಮುಙಪ್ಪಿಲಾಂಘಾಡ್ ಡ್ರೈವ್ ಇನ್ ಬೀಚ್

ರಾಜ್ಯ: ಕೇರಳ

ಕೇರಳದಲ್ಲಿ ಅದೆಷ್ಟೋ ವರ್ಣಮಯ ತೀರ ಪ್ರದೇಶಗಳಿದ್ದರೂ ಏಷ್ಯಾದಲ್ಲೇ ಏಕೈಕ ಚಾಲನಾ ಯೋಗ್ಯವಾದ ಬೀಚ್ ಎಂಬ ಕೀರ್ತಿಯನ್ನು ಮುಙಪ್ಪಿಲಾಂಘಾಡ್ (Muzhappilangad) ಡ್ರೈವ್ ಇನ್ ಬೀಚ್ ಕಟ್ಟಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 17ಕ್ಕೆ ಸಮಾನಂತರವಾಗಿ ಹಾದು ಹೋಗುವ ಪ್ರಸ್ತುತ ಕಡಲ ಕಿನಾರೆಯಲ್ಲಿ ಕಾರು, ಬೈಕ್ ಪ್ರಿಯರು ಅಬ್ಬರಿಸುವ ಕಡಲಲ್ಲಿ ತಮ್ಮ ಸಾಹಸ ಪಯಣ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿಗೆ ಭೇಟಿ ಕೊಡಬಹುದಾದ ಸೂಕ್ತ ಕಾಲ ಎಪ್ರಿಲ್ ತಿಂಗಳಾಗಿದ್ದು, ವಾರ್ಷಿಕ ಬೀಚ್ ಹಬ್ಬವು ಆಯೋಜನೆಯಾಗುತತ್ದೆ.

06. ವಿಶಾಖಪಟ್ಟಣದಿಂದ ರಾಜಮುಂಡ್ರಿ

06. ವಿಶಾಖಪಟ್ಟಣದಿಂದ ರಾಜಮುಂಡ್ರಿ

ರಾಜ್ಯ: ಆಂಧ್ರಪ್ರದೇಶ

ವಿಶಾಖಪಟ್ಟಣದಿಂದ ರಾಜಮುಂಡ್ರಿ ವರೆಗಿನ ರಾಷ್ಟ್ರೀಯ ಹೆದ್ದಾರಿ 5ರ ಪಯಣವು ಚಾಲಕರಿಗೆ ಹೆಚ್ಚಿನ ಆನಂದವನ್ನು ನೀಡಲಿದೆ. ನಿಮಗೂ ಬಂಗಾಳ ಕೊಲ್ಲಿಯ ತೀರ ಪ್ರದೇಶವನ್ನು ಆನಂದಿಸುವ ಮೋಹವಿದ್ದಲ್ಲಿ ಇದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.

05. ಧನುಷ್ಕೋಡಿಯಿಂದ ಕನ್ಯಾಕುಮಾರಿ

05. ಧನುಷ್ಕೋಡಿಯಿಂದ ಕನ್ಯಾಕುಮಾರಿ

ರಾಜ್ಯ: ತಮಿಳುನಾಡು

ಭಾರತದ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿ ವರ್ಷದಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳವಾಗಿದೆ. ಇಲ್ಲಿನ ಸೂರ್ಯೋದಯ, ಸೂರ್ಯಾಸ್ಥ, ಕಡಲ ರಮಣೀಯ ದೃಶ್ಯಗಳು ನಿಮ್ಮಲ್ಲಿ ಮಗದೊಂದು ಮಾಯಾನಗರಿಗೆ ಕರೆದೊಯ್ದಂತೆ ಭಾಸವನ್ನುಂಟು ಮಾಡಲಿದೆ. ಪ್ರವಾಸಿಗರ ಪ್ರಕಾರ, ಜೀವನದಲ್ಲಿ ಎಂದಾದರೂ ಒಂದು ದಿನವಾದರೂ ಕನ್ಯಾಕುಮಾರಿಯಿಂದ ಧನುಷ್ಕೋಡಿಗೆ ಪ್ರಯಾಣವನ್ನು ಹಮ್ಮಿಕೊಳ್ಳಬೇಕು. ಅಲ್ಲಿನ ಸೌಂದರ್ಯವೇ ಇದಕ್ಕೆ ಸಾಕ್ಷಿ.

04. ಮುಂಬೈನಿಂದ ರತ್ನಗಿರಿ

04. ಮುಂಬೈನಿಂದ ರತ್ನಗಿರಿ

ರಾಜ್ಯ: ಮಹಾರಾಷ್ಟ್ರ

ಪಶ್ಚಿಮ ಘಟ್ಟದ ಘಾಟಿ ಪ್ರದೇಶದ ಮೂಲದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಪಯಣವು ನಿಮ್ಮನ್ನು ಪಶ್ಚಿಮದಲ್ಲಿ ಸ್ಥಿತಗೊಂಡಿರುವ ಸಮುದ್ರಗಳ ರಾಣಿ ಅರಬೀ ಕಡಲನ್ನು ತಲುಪಿಸಲಿದೆ. ಕಾರು ಪಯಣ ಇಲ್ಲಿ ಅತ್ಯುತ್ತಮ ಆಯ್ಕೆಯಾಗಿರಲಿದ್ದು, ವನ್ಯ ಜೀವಿಗಳ ದರ್ಶನವು ನಿಮಗಾಗಲಿದೆ.

03. ಚೆನ್ನೈನಿಂದ ಟ್ರಾಂಕ್ವಿಬಾರ್

03. ಚೆನ್ನೈನಿಂದ ಟ್ರಾಂಕ್ವಿಬಾರ್

ರಾಜ್ಯ: ತಮಿಳುನಾಡು

ದೇಶದ ಅತ್ಯಂತ ಚಿತ್ತಾಕರ್ಷಕ ಡ್ರೈವಿಂಗ್ ಅನುಭವವನ್ನು ಚೆನ್ನೈನ ಪೂರ್ವ ಕರಾವಳಿ ಪ್ರದೇಶದಲ್ಲಿ ಪಡೆಯಬಹುದಾಗಿದೆ. ಹೆಸರಾಂತ ಪ್ರವಾಸಿ ತಾಣ ಪಾಂಡಿಚೇರಿ ಹಾದು ಹೋಗುವ ಈ ಪಯಣದಲ್ಲಿ ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸುವ ಬೆಸ್ತರು ನಿಮ್ಮಲ್ಲಿ ವಿಶಿಷ್ಟ ಅನುಭವಕ್ಕೆ ಕಾರಣವಾಗಲಿದೆ.

02. ಕಾಸರಗೋಡಿನಿಂದ ಕೊಚ್ಚಿ

02. ಕಾಸರಗೋಡಿನಿಂದ ಕೊಚ್ಚಿ

ರಾಜ್ಯ: ಕೇರಳ

ಅಚ್ಚ ಕನ್ನಡಿಗರ ಬೀಡು ಕಾಸರಗೋಡು ಸಪ್ತ ಭಾಷಾ ಸಂಗಮ ಭೂಮಿ. ಪ್ರಸ್ತುತ ಕೇರಳದ ಭಾಗವಾಗಿರುವ ತುಳುನಾಡು, ಕರ್ನಾಟಕದ ಜೊತೆ ಗಡಿ ನಾಡನ್ನು ಹಂಚಿಕೊಂಡಿದೆ. ಇತಿಹಾಸ ಪ್ರಸಿದ್ಧ ಬೇಕಲ ಕೋಟೆ, ಚಂದ್ರಗಿರಿ, ಕಣ್ಣೂರು ಜಿಲ್ಲೆಯ ತಲಶ್ಶೇರಿ ಮತ್ತು ಶತಮಾನದ ಹಿಂದೆ ಪೋರ್ಚ್ ಗೀಸ್ ಯಾತ್ರಿಕ ವಾಸ್ಕೋಡಿಗಾಮಾ ಕಲ್ಲಿಕೋಟೆಯ ಕಪ್ಪಾಡ್ ಗೆ ಆಗಮಿಸಿ ಸ್ಥಳವು ನಿಮನ್ನು ಇತಿಹಾಸದತ್ತ ಕೊಂಡೊಯ್ಯಲಿದೆ.

01. ಕಾರವಾರದಿಂದ ಮಂಗಳೂರು

01. ಕಾರವಾರದಿಂದ ಮಂಗಳೂರು

ರಾಜ್ಯ: ಕರ್ನಾಟಕ

ನಮ್ಮ ಕರ್ನಾಟಕದಲ್ಲಿ ಮಂಗಳೂರಿನಿಂದ ಕಾರವಾರದ ವರೆಗೆ ಹಾದು ಹೋಗುವ ಕರಾವಳಿ ತೀರ ಪ್ರದೇಶವು ಹೆಚ್ಚು ರಮಣೀಯವಾಗಿದ್ದು, ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯಬಹುದಾಗಿದೆ. ಒಂದು ಬದಿಯಲ್ಲಿ ಶಾಂತಚಿತ್ತವಾದ ಅರಬೀ ಸಮುದ್ರ ಇನ್ನೊಂದೆಡೆ ಮಲೆನಾಡಿನ ಸೌಂದರ್ಯ ಇಲ್ಲಿನ ನಿತ್ಯ ದರ್ಶನವಾಗಲಿದೆ. ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹಾದು ಹೋಗುವ ಈ 270 ಕೀ.ಮೀ. ದೂರದ ಪಯಣವನ್ನು ನಿಮ್ಮಲ್ಲಿ ಸ್ಮರಣೀಯ ಅನುಭವವಾಗಿಸಲಿದೆ.

ಇವನ್ನೂ ಓದಿ

ದೇಶದ 15 ನಯನ ಮನೋಹರ ಕಡಲ ತೀರಕ್ಕೆ ಜಾಲಿ ರೈಡ್


Most Read Articles

Kannada
English summary
8 Beautiful Coastal Drives in India
Story first published: Monday, July 13, 2015, 10:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X