ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

By Nagaraja

ರೇಸ್ ಟ್ರ್ಯಾಕ್ ನಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸುವ ಫಾರ್ಮುಲಾ ಒನ್ ಕಾರುಗಳನ್ನು ಅತಿ ವೇಗದ ವಾಹನಗಳು ಎಂದು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಎಫ್1 ಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸಬಲ್ಲ ಎಲೆಕ್ಟ್ರಿಕ್ ಕಾರೊಂದನ್ನು ಜರ್ಮನಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಇದರ ವೇಗವನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಹೌದು, ಕೇವಲ 1.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮತ್ತಷ್ಟು ಕುತೂಹಲದಾಯಕ ಮಾಹಿತಿಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ವಿಶ್ವದ ಅತ್ಯಂತ ವೇಗದ ವೇಗವರ್ಧಿಸುವ ಕಾರೆಂಬ ಬಿರುದಿಗೆ ಗ್ರೀಮ್ ಟೀಮ್ ಫಾರ್ಮುಲಾ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಇ0711-5 ಎಲೆಕ್ಟ್ರಿಕ್ ಕಾರು ಪಾತ್ರವಾಗಿದೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಜರ್ಮನಿಯ ಸ್ಟುಟ್ ಗಾರ್ಟ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇದನ್ನು ವಿನ್ಯಾಸಗೊಳಸಿದ್ದು, ರಸ್ತೆಯಲ್ಲಿ ಸಂಚರಿಸುವ ಜಗತ್ತಿನ ವೇಗದ ಬುಗಾಟಿ ಕಾರನ್ನೇ ಹಿಂದಿಕ್ಕಿದೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಈ 100ಕೆಡಬ್ಲ್ಯು ಎಲೆಕ್ಟ್ರಿಕ್ ಕಾರು, ನಾಲ್ಕು ಮೋಟಾರು ಹಾಗೂ 6.62ಕೆಡಬ್ಲ್ಯುಎಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಸತತ ಪ್ರಯತ್ನದ ಬಳಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ಚಾಲಕ ಪ್ರಿಸ್ಕಾ ಸ್ಕಿಮಿಡ್ ( Priska Schmid) ಈ ದಾಖಲೆಯನ್ನು ಬರೆದಿದ್ದಾರೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಹಾಗಿದ್ದರೂ ಗಿನ್ನೆಸ್ ಬುಕ್ ಆಪ್ ರೆಕಾರ್ಡ್ಸ್ ನಿಂದ ಇನ್ನಷ್ಟೇ ದಾಖಲೆ ಅಧಿಕೃತವಾಗಿ ದಾಖಲಾಗಬೇಕಾಗಿದೆ. ಆದರೆ ಇದಕ್ಕಿರುವ ಎಲ್ಲ ಬಾಗಿಲುಗಳು ತೆರೆದುಕೊಂಡಿರುವುದಾಗಿ ವಿಶ್ವವಿದ್ಯಾಲಯ ತಿಳಿಸಿದೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಈ ಬಗ್ಗೆ ಪ್ರತಿಕ್ರಿಯಿಸಿರುವ 22ರ ಹರೆಯದ ಚಾಲಕ ಪ್ರಿಸ್ಕಾ, "ಶರವೇಗದಲ್ಲಿ ಕಾರು ಓಡಿಸುವಾಗ ರೋಲರ್ ಕೋಸ್ಟರ್ ನಲ್ಲಿರುವಂತೆ ಭಾಸವಾಗುತ್ತಿತ್ತು" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಸ್ಟುಟ್ ಗಾರ್ಟ್ ವಿಶ್ವವಿದ್ಯಾಲಯದ 40ರಷ್ಟು ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಇದರ ಶ್ರೇಯಸ್ಸು ಎಲ್ಲರಿಗೂ ಸೇರುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಪ್ರಮುಖವಾಗಿಯೂ ಜರ್ಮನಿಯಲ್ಲಿ ನಡೆಯಲಿರುವ ಫಾರ್ಮುಲಾ ಸ್ಟುಡೆಂಟ್ ಎಲೆಕ್ಟ್ರಿಕ್ ಕಾಂಪಿಟೀಷನ್ ನಲ್ಲಿ ಭಾಗವಹಿಸುವುದಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಈಗ ಎಲ್ಲ ತೊಡಕುಗಳನ್ನು ನಿವಾರಿಸುವುದರೊಂದಿಗೆ ಅತಿ ವೇಗದ ಸಿಂಗಲ್ ಸೀಟಿನ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುವಲ್ಲಿ ತಂಡ ಯಶ ಕಂಡಿದೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ಈ ಬ್ಯಾಟರಿ ನಿಯಂತ್ರಿತ ಕಾರಿನಲ್ಲಿ ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದ್ದು, 168 ಕೆ.ಜಿ ತೂಕವನ್ನಷ್ಟೇ ಹೊಂದಿದೆ.

ಎಫ್1 ಗಿಂತಲೂ ವೇಗದಲ್ಲಿ ಸಾಗುವ ಎಲೆಕ್ಟ್ರಿಕ್ ಕಾರು

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಿ.

Most Read Articles

Kannada
English summary
Electric car goes FASTER than F1
Story first published: Monday, July 27, 2015, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X