ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

By Nagaraja

ವಾಹನ ಜಗತ್ತಿನಲ್ಲಿ ಸದಾ ನೂತನ ತಂತ್ರಜ್ಞಾನಗಳ ಅವಿಷ್ಕಾರವಾಗುತ್ತಿದೆ. ಎಂಜಿನಿಯರ್‌ಗಳು ಪರಿಸರ ಸ್ನೇಹಿ ವಾಹನಗಳನ್ನು ಕಂಡುಹುಡುಕುವುದರಲ್ಲಿ ಕಾರ್ಯ ನಿರತರಾಗಿದ್ದಾರೆ. ಇದರ ಫಲವೆಂಬಂತೆ ಎಲಿಯೊ ತ್ರಿಚಕ್ರ ವಾಹನ ಪ್ರದರ್ಶನವಾಗಿದೆ.

ಕಾರು ಪ್ರೇಮಿ ಪಾಲ್ ಎಲಿಯೊ ಎಂಬವರೇ ಈ ಚೊಕ್ಕದಾದ ಸುಂದರ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಭವಿಷ್ಯದ ಎಲ್ಲ ಸಂಚಾರಿ ಅಗತ್ಯಗಳನ್ನು ಇದು ನಿಭಾಯಿಸುವ ಭರವೆಯನ್ನು ಎಲಿಯೊ ಮೋಟಾರ್ಸ್ ಹೊಂದಿದೆ. 2008ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಅಮೆರಿಕ ಮೊದಲ ಎಲಿಯೊ ಮೋಟಾರ್ಸ್, ತನ್ನ ಚೊಚ್ಚಲ ಮಾದರಿಯನ್ನು ಪರಿಚಯಿಸಿದೆ. ಇದು ಗ್ರಾಹಕರ ಬೇಡಿಕೆಯ ಅನುಸಾರವಾಗಿ ತಯಾರಿಯಾಗಲಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಸಂಸ್ಥೆಯು ಹೇಳುವ ಪ್ರಕಾರ, ಗ್ಯಾಸ್ ಬಂಕ್‌ಗಳಲ್ಲಿ ಮಿಥ್ಯಾ ಹಣ ಪೋಲು ಮಾಡುವುದನ್ನು ನಿಲ್ಲಿಸಿ. ಸ್ಥಳಾವಕಾಶದ ಕೊರತೆಯಿಂದಾಗಿ ಜಗತ್ತು ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ಪಾರ್ಕಿಂಗ್ ಪ್ರದೇಶವನ್ನಂತೂ ಹುಡುಕುವುದೇ ಕಷ್ಟ. ಹಾಗಿರುವಾಗ ಎಲಿಯೊ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಮನೆ ಕಟ್ಟುವ ಸರಾಸರಿ ವೆಚ್ಚಕ್ಕಿಂತಲೂ ಹೆಚ್ಚು ದುಡ್ಡನ್ನು ಕಾರು ಖರೀದಿಗಾಗಿ ವ್ಯಯಿಸಬೇಕಾಗಿದೆ. ಈ ಎಲ್ಲ ಪರಿಸ್ಥಿತಿಯನ್ನು ಗಮನಿಸಿದಾಗ ಬದಲಾವಣೆ ಜತೆ ಕೈಜೋಡಿಸುವುದು ಅತಿ ಅಗತ್ಯವಾಗಿರುತ್ತದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಅಮೆರಿಕದ ಲೂಸಿಯಾನಾದಲ್ಲಿ 1500ರಷ್ಟು ಉದ್ಯೋಗ ಸೃಷ್ಟಿ ಮಾಡಿರುವ ಎಲಿಯೊ, ಪರಿಸರ ಸ್ನೇಹಿ ಕಾರನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ದೇಶದ್ಯಾಂತ 60ಕ್ಕೂ ಹೆಚ್ಚು ರಿಟೈಲ್ ಸೆಂಟರುಗಳನ್ನು ಸ್ಥಾಪಿಸಿರುವ ಎಲಿಯೊ ತನ್ನ ವ್ಯಾಪಾರವನ್ನು ಇನ್ನಷ್ಟು ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

84 ಮೈಲ್ ಪರ್ ಗ್ಯಾಲನ್

8 ಗ್ಯಾಲನ್ ಟ್ಯಾಂಕ್

ಪರಿಸರ ಸ್ನೇಹಿ

ಫೈವ್ ಸ್ಟಾರ್ ಕ್ರಾಶ್ ಟೆಸ್ಟ್ ರೇಟಿಂಗ್

ಮೇಡ್ ಇನ್ ಅಮೆರಿಕ

ಅಮೆರಿಕದಲ್ಲಿ 1500 ಉದ್ಯೋಗ ಸೃಷ್ಟಿ

ಬೆಲೆ 6800 ಅಮೆರಿಕನ್ ಡಾಲರ್

ವೈಶಿಷ್ಟ್ಯ

ವೈಶಿಷ್ಟ್ಯ

ಯೂನಿಕ್ ವಿನ್ಯಾಸ

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ

ಪವರ್ ವಿಂಡೋಸ್

ಮೂರು ಏರ್ ಬ್ಯಾಗ್

ಸೀಟು ಬೆಲ್ಟ್

ವಿಂಡ್ ಶೀಲ್ಡ್ ಗ್ಲಾಸ್

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಇದರಲ್ಲಿ ಇನ್‌ಲೈನ್, 3 ಸಿಲಿಂಡರ್, 9 ಲೀಟರ್, 55 ಅಶ್ವಶಕ್ತಿ ಉತ್ಪಾದಿಸಬಲ್ಲ ಫ್ಯೂಯಲ್ ಇಂಜೆಕ್ಟಡ್, ಎಸ್‌ಒಎಚ್‌ಸಿ ಗ್ಯಾಸ್ ಪವರ್, ಲಿಕ್ವಿಡ್ ಕೂಲ್ಡ್, ಆಟೋಮೋಟಿವ್ ಎಂಜಿನ್ ಬಳಕೆ ಮಾಡಲಾಗಿದೆ.

ವೇಗತೆ

ವೇಗತೆ

ಇದು 9.6 ಸೆಕೆಂಡುಗಳಲ್ಲಿ 0-60 ಮೈಲ್ ಹಾಗೆನೇ ಗಂಟೆಗೆ ಗರಿಷ್ಠ 100 ಮೈಲ್ ವೇಗದಲ್ಲಿ ಸಂಚರಿಸಲಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಇನ್ನು ಗ್ರಾಹಕರ ಅಗತ್ಯಗಳಿನುಸಾರವಾಗಿ ವೈಯಕ್ತೀಕರಿಸುವ ಅವಕಾಶವು ಎಳಿಯೊದಲ್ಲಿ ದೊರಕಲಿದೆ. ಸನ್‌ರೂಫ್ ಮುಂತಾದ ಸೌಲಭ್ಯಗಳನ್ನು ಬಯಸುವವರು ಇದಕ್ಕೆ ಪೂರಕವಾದ ವಿನ್ಯಾಸ ಪಡೆದುಕೊಳ್ಳಬಹುದಾಗಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಸದ್ಯ ಅಮೆರಿಕದಲ್ಲಿರುವ ಎಲಿಯೊ ಮೋಟಾರ್ಸ್, ತನ್ನ ವ್ಯಾಪಾರವನ್ನು ಜಾಗತಿಕವಾಗಿಯೂ ವಿಸ್ತರಿಸುವ ಯೋಜನೆ ಹೊಂದಿದ್ದು, ನಿಕಟ ಭವಿಷ್ಯದಲ್ಲೇ ಕೆನಡಾ ಪ್ರವೇಶಿಸುವ ಬಗ್ಗೆ ಮಾಹಿತಿ ಲಭಿಸಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಇದು ಎಲ್ಲ ರೀತಿಯ ಹವಾಮಾನಗಳಲ್ಲೂ ಅತ್ಯುತ್ತಮ ಚಾಲನಾ ಅನುಭವ ನೀಡಲಿದ್ದು, ಜತೆಗೆ ಬೇಕಾದಷ್ಟು ಹೆಡ್ ಹಾಗೂ ಲೆಗ್ ರೂಂ ಪಡೆದುಕೊಂಡಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ತಲಾ ಎರಡು ಸೀಟು ಹಾಗೂ ಡೋರ್‌ಗಳನ್ನು ಹೊಂದಿರುವ ಎಲಿಯೊ ತ್ರಿಚಕ್ರ ಕಾರು, 8 ಗ್ಯಾಲನ್ ಟ್ಯಾಂಕ್ ಹೊಂದಿದೆ. ಅಂದರೆ ತುಂಬಿದ ಟ್ಯಾಂಕ್‌ನಲ್ಲಿ 672 ಮೈಲ್ (1081 ಕೀ.ಮೀ) ದೂರವನ್ನು ಪಯಣಿಬಹುದಾಗಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಮೂರು ಏರ್ ಬ್ಯಾಗ್, ಡಿಸ್ಕ್ ಬ್ರೇಕ್ ಜತೆಗೆ ಎಬಿಎಸ್ ಸಹ ಪಡೆದುಕೊಂಡಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಲಗ್ಗೇಜ್ ಸ್ಪೇಸ್‌ನತ್ತವೂ ಗಮನ ಹರಿಸಲಾಗಿದ್ದು, ಹಿಂದುಗಡೆಯಿಂದ ತೆರೆಯಬಹುದಾದಂತಹ ಡೋರ್ ವಿನ್ಯಾಸ ಪಡೆದುಕೊಂಡಿದೆ. ಇನ್ನು ಕಾರಿನ ಒಳಗಡೆಯಿಂದಲೂ ಸೀಟು ಬಾಗಿಸಿ ಲಗ್ಗೇಜ್ ಇಡಬಹುದಾಗಿದೆ.

ಸ್ಟಾಂಡರ್ಡ್ ಫೀಚರ್

ಸ್ಟಾಂಡರ್ಡ್ ಫೀಚರ್

ಎಎಂ ಎಫ್‌ಎಂ ಸ್ಟೀರಿಯೋ ರೆಡಿಯೋ

ಎಸಿ, ಹೀಟಿಂಗ್ ಸಿಸ್ಟಂ

ಪವರ್ ವಿಂಡೋಸ್ ಡೋರ್ ಲಾಕ್

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಅಷ್ಟಕ್ಕೂ ದರಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಆಧುನಿಕತೆಯ ಸಂಕೇತವಾಗಿರುವ ಎಲಿಯೊ ಮೋಟಾರ್ಸ್, 6800 ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಿರಲಿದೆ. ಅಂದರೆ ಭಾರತೀಯ ರುಪಾಯಿ ಪ್ರಕಾರ ಸರಿ ಸುಮಾರು ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಬಣ್ಣ

ಬಣ್ಣ

ರಾಕೆಟ್ ಸಿಲ್ವರ್

ಸೋರ್ ಆಪಲ್

ಕ್ರೀಮ್ಸಿಕಲ್

ರೆಡ್ ಹಾಟ್

ಟ್ರೂ ಬ್ಲೂ

ಲಿಕೊರೈಸ್

ಮಾರ್ಶ್‌ಮ್ಯಾಲೊ

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಮೈಲೇಜ್ ಬಗ್ಗೆ ಮಾತನಾಡವುದಾದ್ದಲ್ಲಿ ಪ್ರತಿ ಗ್ಯಾಲನ್‌ಗೆ 84 ಮೈಲ್ ಮೈಲೇಜ್ ನೀಡಲಿದೆ. ಇದನ್ನು ಲೀಟರ್/ಕೀ.ಮೀ. ಪರಿವರ್ತಿಸಿದಾಗ ಅಂದಾಜು 36 ಕೀ.ಮೀ. ಮೈಲೇಜ್ ನೀಡಲಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಮಗದೊಂದು ಗಮನಾರ್ಹ ಅಂಶವೆಂದರೆ ಅಮೆರಿಕಾ ನಿರ್ಮಿತ ಎಲಿಯೊ ಮೋಟಾರ್ಸ್, ಪ್ರೊಜೆಕ್ಟಡ್ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬದಲಾವಣೆ ಜತೆ ಕೈಜೋಡಿಸಿ; ಎಲಿಯೊ ತ್ರಿಚಕ್ರ ವಾಹನ

ಅಲ್ಲದೆ ಆಸಕ್ತ ಗ್ರಾಹಕರು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ ಮೂರು ವರ್ಷ, 36000 ಮೈಲ್ ಗಾರಂಟಿಯೂ ಸಿಗಲಿದೆ. ಸಂಸ್ಥೆಯ ಪ್ರಕಾರ ಎಲಿಯೊ ಈಗಾಗಲೇ 13 ಸಾವಿರಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಲಿಯೊ ತ್ರಿಚಕ್ರ ವಾಹನ ಆಕರ್ಷಕ ವೀಡಿಯೋ ವೀಕ್ಷಿಸಿ

Most Read Articles

Kannada
Story first published: Monday, April 7, 2014, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X