ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

By Nagaraja

ನೈಸರ್ಗಿಕ ವಿಪತ್ತು ಎದುರಾಗುವುದು ಸಹಜ. ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಕಷ್ಟ ಸಾಧ್ಯ. ಹಾಗಾಗಿ ಇಂತಹ ದಯನೀಯ ಸಂದರ್ಭಗಳು ಉಂಟಾದಾಗ ಭಯ ಭೀತಿಗೊಳಗಾಗದೇ ಸಮರ್ಥವಾಗಿಯೇ ಎದುರಿಸುವುದೇ ಜಾಣತಣ.

Also Read: ನೆಲದ ಮೇಲೂ ನೀರಲ್ಲೂ ಸಂಚರಿಸುವ ಉಭಯಚರ ಗಾಡಿ

ಇತ್ತೀಚೆಗಿನ ದಿನಗಳಲ್ಲಿ ಸುರಿದಿರುವ ಭಾರಿ ಮಳೆಯಿಂದಾಗಿ ನೆರೆಯ ಚೆನ್ನೈ ಹಾಗೂ ಆಂಧ್ರ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿರುವುದನ್ನು ನಾವು ಕೇಳಿರುತ್ತೇವೆ. ಇದರಿಂದಾಗಿ ಭಾರಿ ಸಂಖ್ಯೆಯ ಜನರು ಸಂತ್ರಸ್ತಕ್ಕೊಳಗಾಗಿದ್ದಾರೆ. ಹಾಗಿದ್ದರೆ ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಬೇರೆ ಮಾರ್ಗವಿಲ್ಲವೇ ? ಬನ್ನಿ ನಾವಿಂದು ಪರಿಚಯಿಸಲಿರುವ ರಕ್ಷಣಾ ಯಂತ್ರವು ಎಂತಹುದೇ ಪ್ರವಾಹದ ಸ್ಥಿತಿಯಲ್ಲಿ ಜನರನ್ನು ರಕ್ಷಿಸಲು ಉಪಯೋಗಿಸಬಹುದಾಗಿದೆ.

ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

ಸ್ಲೋವನಿಯಾ ತಳಹದಿಯ ಹೋವರ್ ಕ್ರಾಫ್ಟ್ ಎಂಬ ಸಂಸ್ಥೆಯು ಈ ತೆರೆದುಕೊಳ್ಳಬಹುದಾದ ಫೆರ್ರಿಬೋಟ್ ಅನ್ನು ತಯಾರಿಸಿದೆ.

ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

ಕೇವಲ ಐದು ನಿಮಷಗಳಲ್ಲೇ ತೆರೆದುಕೊಳ್ಳಬಹುದಾದ ಫೆರ್ರಿ ಬೋಟ್ ಬಳಕೆಯು ತುಂಬಾನೇ ಸುಲಭವಾಗಿದ್ದು, 50 ಮಂದಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ.

ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

ಹಲವು ಆಕಾರ ಹಾಗೂ ವಿಧಗಳಲ್ಲಿ ಫೆರ್ರಿ ಬೋಟ್ ರಕ್ಷಣಾ ಕವಚವು ಲಭ್ಯವಿರುತ್ತದೆ ಎಂಬುದನ್ನು ಸಂಸ್ಥೆಯು ಸ್ಪಷ್ಟಪಡಿಸುತ್ತದೆ. ಇನ್ನು ವಿನೋದ ಕ್ರೀಡೆಗಾಗಿಯೂ ಬಳಕೆ ಮಾಡಬಹುದಾಗಿದೆ.

ಉದ್ದಗಲ

ಉದ್ದಗಲ

ಉದ್ದ: 800 ಸೆಂಟಿಮೀಟರ್

ಅಗಲ: 320 ಸೆಂಟಿಮೀಟರ್

ಎತ್ತರ: 150 ಸೆಂಟಿಮೀರ್

ಭಾರ: 300 ಕೆ.ಜಿ

ಸಾಮರ್ಥ್ಯ: 50 ಜನರಿಗೆ

ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಹನಗಳು ಸಿಕ್ಕಿ ಬೀಳುವುದು ಸಾಮಾನ್ಯ ದೃಶ್ಯಗಳಾಗಿವೆ. ಇಂತಹ ಸಂದರ್ಭಗಳಲ್ಲೂ ವಾಹನವನ್ನು ಸುರಕ್ಷಿತ ಪ್ರದೇಶಗಳಿಗೆ ಕೊಂಡೊಯ್ಯಲು ಇದನ್ನು ಬಳಕೆ ಮಾಡಬಹುದಾಗಿದೆ.

ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

ಇಲ್ಲಿ ಕೊಟ್ಟಿರುವ ವಿಡಿಯೋ ವೀಕ್ಷಿಸಿದಾಗ ಈ ಬಗ್ಗೆ ಸ್ಪಷ್ಟ ಚಿತ್ರಣ ನಿಮಗೆ ದೊರಕಲಿದೆ. ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್ ಕಾರನ್ನು ಇಲ್ಲಿ ಸುರಕ್ಷಿತವಾಗಿ ರವಾನಿಸಲಾಗುತ್ತಿದೆ.

ಪ್ರವಾಹ ಭೀತಿಯಿಂದ ಪಾರಾಗಲು ಹೊಸ ಉಪಾಯ

ಇದು ಬರಿ ಸಾಮಾನ್ಯವಲ್ಲ ಅಸಾಮಾನ್ಯ ಗಾಡಿ

Most Read Articles

Kannada
English summary
Ferryboat is inflatable boat for rescue and fun. Can be made in any size.
Story first published: Tuesday, November 24, 2015, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X