ಪರಿಸರಕ್ಕೆ ತಕ್ಕ ಗಾಡಿ - ಇದುವೇ 'ಫಿಯೆಟ್ ಐ'

By Nagaraja

ಸಾಕಪ್ಪಾ ಸಾಕು ಈ ಟ್ರಾಫಿಕ್ ಕಿರಿಕಿರಿ ಸಾಕಾಗಿ ಹೋಗಿದೆ. ದೈನಂದಿನ ಬದುಕಿನಲ್ಲಿ ನೀವು ಕೂಡಾ ಅತಿಯಾದ ವಾಹನ ದಟ್ಟಣೆಯಿಂದ ಬೇಸತ್ತು ಹೋಗಿರಬಹುದು. ಇದರ ಮೇಲೆ ವಾಯು ಮಾಲಿನ್ಯ ಬೇರೆ. ಇವೆಲ್ಲದರಿಂದ ಜೀವನವೇ ಸಾಕಾಗಿ ಹೋದಂತಾಗಿದೆ.

ಇವನ್ನೂ ಓದಿ: ಎರಡು ಕಾರುಗಳ ಮಿಲನ

ಇದೇ ಕಾರಣಕ್ಕಾಗಿ ವಿಶ್ವದ ಮುಂಚೂಣಿಯ ಸಂಸ್ಥೆಗಳು ಭವಿಷ್ಯತ್ತಿನ ವಾಹನಗಳ ಪರಿಕಲ್ಪನೆ ರಚಿಸುವುದರಲ್ಲಿ ತಲ್ಲೀನವಾಗಿದೆ. ಈ ಕನಸು ಯಾವಾಗ ನಿಜವಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಮುಂದೊಂದು ದಿನ ನಿಜವಾದ್ದಲ್ಲಿ ಫಿಯೆಟ್‌ನ ಈ ಗಾಡಿಯಲ್ಲೂ ಸಂಚರಿಸುವ ಕಾಲ ಇನ್ನು ಬಲು ದೂರವಿಲ್ಲ. ಅದುವೇ ಫಿಯೆಟ್ ಐ (Fiat Eye)

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ವ್ಯಕ್ತಿಗತ ಚಾಲನೆಯನ್ನು ಗುರಿಯಾಗಿರಿಸಿಕೊಂಡಿರುವ ಡಿನಾರ್ಡ್ ಡಾ ಮಾಟಾ (Dinard Da Mata) ಎಂಬ ಬ್ರೆಜಿಲ್ ವಿನ್ಯಾಸಗಾರ ಹೊಸತಾದ ಪರಿಸರ ಸ್ನೇಹಿ ಫಿಯೆಟ್ ಐ ವಿದ್ಯುತ್ ಚಾಲಿತ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಫಿಯೆಟ್‌ನ ಸೆಗ್ವೇ ( Segway) ತಂತ್ರಜ್ಞಾನದ ಬೆಂಬಲದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಓರ್ವ ಪ್ರಯಾಣಿಕರಿಗೆ ಮಾತ್ರ ಸಂಚರಿಸಬಹುದಾಗಿದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಫಿಯೆಟ್ ಐ ವೈತಿಗತ ವಾಹನವು ಅಂಡಾಕಾರ ಶೈಲಿಯ ಚಕ್ರಗಳನ್ನು ಹೊಂದಿದೆ. ಅಲ್ಲದೆ ಸ್ವಯಂಚಾಲಿತವಾಗಿ ನಿಯಂತ್ರಣ ಸಾಧಿಸಬಹುದಾದ ವಿನ್ಯಾಸವನ್ನು ಪಡೆದುಕೊಂಡಿದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಇದರ ಚಕ್ರಗಳು ಸಿಂಕ್ರೊನೈಸ್ ಟ್ರೆಡ್ ಮಿಲ್ ರೋಟೇಷನ್ ಸಿದ್ಧಾಂತದಲ್ಲಿ ಮುಂದಕ್ಕೆ ಚಲಿಸಲಿದೆ. ಇದು ಅನಿಯಮಿತ ಚಾಲನೆಯಲ್ಲೂ ನಿಯಂತ್ರಣ ಸಾಧಿಸಲು ನೆರವಾಗಲಿದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಈ ಸಮತೋಲಿತ ಗಾಡಿ ಸುತ್ತುವರಿದ ಪ್ರದೇಶಗಳ ಚಲನಾವಲನಗಳನ್ನು ಮಾನಿಟರ್ ಮಾಡುವ ವ್ಯವಸ್ಥೆಯನ್ನು ಹೊಂದಿದ್ದು, ತದಾ ಬಳಿಕ ನಿಯಂತ್ರಣ ಪಡೆದುಕೊಳ್ಳಲಿದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಅಂತೆಯೇ ನೇವಿಗೇಷನ್ ಸಿಸ್ಟಂಗಳಂತಹ ಆಧುನಿಕ ತಂತ್ರಗಾರಿಕೆಯನ್ನು ಇದು ಪಡೆದುಕೊಳ್ಳಲಿದೆ. ಹಾಗೆಯೇ ವಾಯ್ಸ್ ಕಂಟ್ರೋಲ್ ಇದರಲ್ಲಿರಲಿದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಇನ್ನು ಪ್ರಯಾಣಿಕರು ಇದರೊಳಗಿನಿಂದ ಹೊರಗಿಳಿಯಲು ಡೋರ್ ಮೇಲಕ್ಕೆತ್ತಬೇಕಾಗುತ್ತದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಸಂಪೂರ್ಣ ಪರಿಸರ ಸ್ನೇಹಿ ಎಂಬುದು ಇದರ ಮಗದೊಂದು ಮುಖ್ಯ ಅಂಶವಾಗಿದ್ದು, ವಾಯು ಮಾಲಿನ್ಯ ಭೀತಿಯನ್ನು ತೊಲಗಿಸುತ್ತದೆ.

'ಫಿಯೆಟ್ ಐ' ಕಾನ್ಸೆಪ್ಟ್ ವಾಹನ

ಒಟ್ಟಿನಲ್ಲಿ ನಗರ ಪ್ರದೇಶಕ್ಕೆ ಹೇಳಿ ಮಾಡಿಸಿದಂತಹ ವಾಹನ ಇದಾಗಿದೆ. ಅಲ್ಲದೆ ದೈನಂದಿನ ಕಚೇರಿ ಕಲಾಪಗಳಿಗೆ ತೆರುಳುವವರ ಸಮಸ್ಯೆಗಳನ್ನು ಪರಿಹರಿಸಲಿದೆ.

Most Read Articles

Kannada
English summary
The concept Fiat Eye personal vehicle was designed by Dinard Da Mata, a Brazilian designer. Da Mata built this compact personal vehicle for Fiat using Segway technology.
Story first published: Wednesday, December 3, 2014, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X