2016ರಲ್ಲಿ ಭಾರತಕ್ಕೆ ರಿ ಎಂಟ್ರಿ ಕೊಡಲಿರುವ ಎಫ್1 ರೇಸ್

By Nagaraja

ದೇಶದ ಫಾರ್ಮುಲಾ ಒನ್ ಕ್ರೀಡಾಭಿಮಾನಿಗಳಿಗೆ ಖುಷಿ ಸುದ್ದಿ ಬಂದಿದ್ದು, 2016ನೇ ಸಾಲಿನಿಂದ ಎಫ್1 ರೇಸ್ ಭಾರತಕ್ಕೆ ಪುನರಾಗಮನವಾಗಲಿದೆ.

ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆ ಕಂಡುಬಂದಿದೆ. ಎಫ್1 ಆಯೋಜಕರು ಹೊಸ ನೀತಿ ಅನುಸರಿಸುತ್ತಿದ್ದು, ಇದರಂತೆ ಐಕಾನಿಕ್ ರೇಸ್ ಟ್ರ್ಯಾಕ್‌ಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲಾಗುವುದು.

Formula One

ಹಾಗೆಯೇ ಹೊಸತಾಗಿ ಸೇರ್ಪಡೆಗೊಂಡ ರೇಸ್ ಟ್ರ್ಯಾಕ್‌ಗಳಲ್ಲಿ ಆವರ್ತನ ಪದ್ಧತಿ ಅನುಸರಿಸಲಾಗುವುದು. ಇದರಿಂದಾಗಿ ಜಗತ್ತಿನಲ್ಲಿರುವ ಎಲ್ಲ ಪ್ರಮುಖ ಸರ್ಕ್ಯೂಟ್‌ನಲ್ಲೂ ರೇಸ್ ಆಯೋಜನೆ ಮಾಡಲು ಸಹಕಾರಿಯಾಗಲಿದೆ.

ಇತ್ತೀಚೆಗಷ್ಟೇ ಯಾವುದೇ ನಿಖರ ಕಾರಣಗಳಿಲ್ಲದೆ ಭಾರತದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ ರೇಸನ್ನು ಹಿಂಪಡೆಯಲಾಗಿತ್ತು. ಇದೀಗ ಇಂಡಿಯನ್ ಜಿಪಿ ಆಯೋಜಕರನ್ನು ಭೇಟಿಯಾಗಿರುವ ಬೆರ್ನಿ ಎಕ್ಲೇಸ್ಟೋನ್ ಭಾರತಕ್ಕೆ ಎಫ್1 ಹಿಂತಿರುವ ಭರವಸೆ ನೀಡಿದರು.

ಹಾಗಿದ್ದರೂ ಭಾರತೀಯರು 2016ನೇ ವರೆಗೆ ಕಾಯಬೇಕಾಗಿದೆ. ಅಂದ ಹಾಗೆ 2015 ಎಫ್1 ಕ್ಯಾಲೆಂಡರ್ ವೇಳಾಪಟ್ಟಿ ಈಗಾಗಲೇ ಸಿದ್ಧಗೊಂಡಿದೆ.

ಒಟ್ಟಾರೆಯಾಗಿ ಭಾರತದ ಮೋಟಾರು ಕ್ರೀಡೆ ಅಭಿವೃದ್ಧಿಯಲ್ಲಿ ಎಫ್1 ಪ್ರಮುಖ ಪಾತ್ರ ವಹಿಸಲಿದೆ.

ಫ್ರೈಡೇ ಸೇಲ್: ಕಾರು ಆಕ್ಸೆಸರಿ ಹೊಸ ಆಗಮನ - ಶೇ. 20ರಷ್ಟು ರಿಯಾಯಿತಿ ತ್ವರೆ ಮಾಡಿ!

Most Read Articles

Kannada
English summary
Formula One has a new policy adopted where they will rotate venues. Authorities plan to keep the main and iconic races permanent, while the new circuits will be rotated. This move was opted so that there is no pressure on new circuits and their management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X