ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

By Nagaraja

ಇಡೀ ವಾಹನ ಜಗತ್ತೇ ಮಾಲಿನ್ಯ ರಹಿತ ವಾಹನಗಳನ್ನು ನಿರ್ಮಿಸುವುದರತ್ತ ಪಣತೊಟ್ಟಿದೆ. ಸುಸ್ಥಿರ ಪರಿಸರ ಬೆಳವಣಿಗೆಯ ನಿಟ್ಟಿನಲ್ಲಿ ಇದು ಅಗತ್ಯವೂ ಆಗಿದೆ. ಈಗ ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನದ ಪರಿಕಲ್ಪನೆಯೊಂದು ಅನಾವರಣಗೊಂಡಿದೆ.

ಹೊಸ ಹೊಸ ಕಾನ್ಸೆಪ್ಟ್ ಗಳನ್ನು ರಚಿಸುವುದರಲ್ಲಿ ಉತ್ಸಾಹಿತರಾಗಿರುವ ಬಾರ್ಸಿಲೋನಾ ತಳಹದಿಯ ವಿನ್ಯಾಸಗಾರ ಆಸ್ಕರ್ ವಿನಾಲ್ಸ್ (Oscar Vinals) ಎಂಬವರು ಇದನ್ನು ರಚಿಸಿರುತ್ತಾರೆ. ಇತರ ಸಾಮಾನ್ಯ ವಿಮಾನಗಿಂತಲೂ ಇದು ಹೇಗೆ ಭಿನ್ನವಾಗಿದೆ? ಬನ್ನಿ ನೋಡೋಣವೇ...

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಕೇವಲ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮಾತ್ರವಲ್ಲದೆ ವಾಯುವಿನಲ್ಲಿ ವಿಹರಿಸುವ ವಿಮಾನಗಳಿಗೂ ಹಸಿರು ಕ್ರಾಂತಿಯನ್ನು ಪಸರಿಸುವುದು ಯೋಜನೆಯ ಉದ್ದೇಶವಾಗಿತ್ತು.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಶೂನ್ಯ ಕಾರ್ಬನ್ ಡೈ ಓಕ್ಸೈಡ್ ಮಾಲಿನ್ಯವನ್ನು ಹೊರ ಸೂಸುವ ಈ ಅವ್ವ ಕ್ಯೂಜಿ ಪ್ರೋಗ್ರೆಸ್ ಈಗಲ್ ( AWWA-QG Progress Eagle) ವಿಮಾನ 800 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಇಲ್ಲಿ ಸಾಂಪ್ರಾದಾಯಿಕ ಪಳೆಯುಳಿಕೆ ಇಂಧನಗಳ ಬದಲು ವಿಮಾನವನ್ನು ಮೇಲೆತ್ತಲು ಆರು ಬಲಿಷ್ಠ ಹೈಡ್ರೋಜನ್ ಎಂಜಿನ್ ಗಳನ್ನು ಆಳವಡಿಸಲಾಗಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಇನ್ನು ವಿಮಾನದ ಮೇಲ್ಗಡೆಯಾಗಿ ರೆಕ್ಕೆಯ ಮೇಲೆ ಸೌರಶಕ್ತಿ ಪ್ಯಾನೆಲ್ ಲಗತ್ತಿಸಲಾಗಿದೆ. ಇದು ವಿದ್ಯುತ್ ಪ್ಯತ್ಯುತ್ಪಾದನೆಗೆ ಸಹಕಾರಿಯಾಗಲಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಹಾರಲು ತನಗೆ ಬೇಕಾದ ಶಕ್ತಿಯನ್ನು ತಾನೇ ಉತ್ಪಾದಿಸುತ್ತಿರುವುದು ಪ್ರೋಗ್ರೆಸ್ ಈಗಲ್ ನ ಧನಾತ್ಮಕ ಅಂಶವಾಗಿದೆ ಎಂದು ಆಸ್ಕರ್ ಅಭಿಪ್ರಾಯಪಡುತ್ತಿದ್ದು, ಶಬ್ದ ರಹಿತ ಕೂಡಾ ಆಗಿರುತ್ತದೆ ಎಂದಿದ್ದಾರೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಪೈಲಟ್ ಗ್ಲಾಸ್ ನಲ್ಲಿ ಪ್ಯಾನರೋಮಿಕ್ ವೀಕ್ಷಣೆಯ ಸೇವೆಯೂ ಇರಲಿದೆ. ಇದು ನಿಮ್ಮ ಪಯಣಯನ್ನು ಮತ್ತಷ್ಟು ಆನಂದದಾಯಕವಾಗಿಸಲಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಇನ್ನು ಖಾಸಗಿ ಕೋಣೆ, ಬೆಡ್ ರೂಂ, ಕಚೇರಿ, ಶಾಂಪಿಂಗ್ ಹಾಗೂ ರೆಸ್ಟೋರೆಂಟ್ ಸೇವೆಯೂ ಇದರಲ್ಲಿರಲಿದೆ. ಅಂದರೆ ಒಂದು ಅಂತರಾಷ್ಟ್ರೀಯ ದರ್ಜೆಯ ಫೈವ್ ಸ್ಟಾರ್ ಹೋಟೆಲ್ ನಲ್ಲಿರುವ ಎಲ್ಲ ಸೌಲಭ್ಯಗಳು ಲಭ್ಯವಾಗಲಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಪ್ರಸ್ತುತ ಕಾನ್ಸೆಪ್ಟ್ ಹಂತದಲ್ಲಿರುವ ಪ್ರೋಗ್ರೆಸ್ ಈಗಲ್ ವಿಮಾನ 2030ರ ವೇಳೆಗೆ ನನಸಾಗುವ ಸಾಧ್ಯತೆಯಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

314 ಅಡಿ ಉದ್ದದ ರೆಕ್ಕೆಯನ್ನು ಪ್ರೋಗ್ರೆಸ್ ಈಗಲ್ ವಿಮಾನ ಹೊಂದಿರುತ್ತದೆ. ಪ್ರಸ್ತುತ ಅತಿ ದೊಡ್ಡ ರೆಕ್ಕೆಯನ್ನು ಹೊಂದಿರುವ ಏರ್ ಬಸ್ ಎ380 263 ಅಡಿ ಉದ್ದವನ್ನಷ್ಟೇ ಹೊಂದಿದೆ.

ಮಾಲಿನ್ಯ ರಹಿತ ಭವಿಷ್ಯದ ಸೂಪರ್ ಜಂಬೋ ವಿಮಾನ

ಈ ಅತ್ಯಾಧುನಿಕ ವಿಮಾನದಲ್ಲಿ ರಿಯರ್ ಎಂಜಿನ್ ಜೋಡಣೆ ಮಾಡಲಾಗಿದ್ದು, ದ್ವಿಗುಣ ವಿದ್ಯುತ್ ಉತ್ಪಾದಿಸಲು ನೆರವಾಗಲಿದೆ.

Most Read Articles

Kannada
Read more on ವಿಮಾನ plane
English summary
Future of flight: AWWA-QG Progress Eagle
Story first published: Wednesday, April 29, 2015, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X