ಬಾನೆತ್ತರದಲ್ಲಿ ತ್ರಿವರ್ಣ ಪತಾಕೆ; ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

By Nagaraja

ಇಡೀ ದೇಶವೇ ಹೆಮ್ಮೆಪಡುವಂತಹ ಸಂದರ್ಭ ಒದಗಿ ಬಂದಿದ್ದು, ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಗುರ ಭಾರದ ಯುದ್ಧ ಹೆಲಿಕಾಪ್ಟರ್ ಗಳನ್ನು (Light Combat Helicopter) ಹೊಂದಿರುವ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ.

Also Read: ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯು ಈ ಮಹತ್ತರ ಕನಸನ್ನು ನನಸಾಗಿಸಿದ್ದು, ವಾಯು ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನೇ ತಂದಿದೆ. ವಾಯುಸೇನೆಯ ಇತಿಹಾಸದಲ್ಲೇ ಇಂದೊಂದು ಮೈಲುಗಲ್ಲಾಗಿದ್ದು, ಸಮುದ್ರ ಮಟ್ಟದಿಂದ 16,000 ಅಡಿ ಎತ್ತರದಲ್ಲಿ ಹಾರುವ ಶಕ್ತಿಯನ್ನು ಹೊಂದಿದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ನಿಮ್ಮ ಮಾಹಿತಿಗಾಗಿ, ಹಗುರ ಭಾರದ ಯುದ್ಧ ವಿಮಾನಗಳನ್ನು ( Light Combat Helicopter) ಭಾರತೀಯ ಸೇನೆ ಮತ್ತು ವಾಯುಸೇನೆಗಾಗಿ ಸರ್ಕಾರಿ ಸೌಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಥವಾ ಎಚ್ ಎಎಲ್ ನಿರ್ಮಿಸುತ್ತಿದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ವಿಶ್ವದ ಯಾವುದೇ ಹಗುರ ಭಾರದ ಹೆಲಿಕಾಪ್ಟರ್ ಗಳಿಂದ ಇಂತಹ ಸಾಧನೆ ದಾಖಲಾಗಿಲ್ಲ. ಈ ನಡುವೆ ಭಾರತೀಯ ಹಗುರ ಭಾರದ ಯುದ್ಧ ಹೆಲಿಕಾಪ್ಟರ್ ಗಳು ಅಗತ್ಯ ಬಂದಲ್ಲಿ 19,700ರಿಂದ 21,300 ಅಡಿಗಳ ವರೆಗೂ ಹಾರಾಡುವ ಸಾಮರ್ಥ್ಯವು ಹೊಂದಿರುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಹಗುರ ಭಾರದ ಯುದ್ಧ ವಿಮಾನಗಳ ಅಭಾವ ಕಾಡಿತ್ತಲ್ಲದೆ ಸೈನಿಕರು ಅಪಾಯಕ್ಕೀಡಾಗಿದ್ದರು. ಈ ಹಿನ್ನೆಯಲ್ಲಿ ಲೈಟ್ ಕೊಂಬಾಟ್ ಹೆಲಿಕಾಪ್ಟರ್ ಗಳ (ಎಲ್‌ಸಿಎಚ್) ನಿರ್ಮಾಣವನ್ನು ಆರಂಭಿಸಿತ್ತಲ್ಲದೆ 2010ರಲ್ಲಿ ಮೊದಲ ಹಾರಾಟ ಯಶಸ್ವಿಯಾಗಿ ಹಮ್ಮಿಕೊಂಡಿತ್ತು.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಭಾರತ ಸೇನೆಯ ಪ್ರಬಲ ಶಕ್ತಿಯಾಗಿರುವ ಎಚ್‌ಎಎಲ್ ಧ್ರುವ್ ಯುದ್ಧ ವಿಮಾನದ ತಳಹದಿಯಲ್ಲಿ ಲೈಟ್ ಕೊಂಬಾಟ್ ಹೆಲಿಕಾಪ್ಟರ್ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಅಂದ ಹಾಗೆ ಎಲ್‌ಸಿಎಚ್ ಯುದ್ಧ ಹೆಲಿಕಾಪ್ಟರ್ ಗಳ ಅಭಿವೃದ್ಧಿಗಾಗಿ 376 ಕೋಟಿ ರು.ಗಳ ವೆಚ್ಚ ಅಂದಾಜಿಸಲಾಗಿದೆ. ಅಲ್ಲದೆ ಭಾರತೀಯ ಸೇನೆಗೆ 114 ಮತ್ತು ವಾಯುಸೇನೆಗೆ 65ರಷ್ಟು ಎಲ್‌ಸಿಎಚ್ ಹೆಲಿಕಾಪ್ಟರ್ ಗಳನ್ನು ಹಂಚಲಾಗಿದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಈ ಹಗುರ ಭಾರದ ಯುದ್ಧ ಹೆಲಿಕಾಪ್ಟರ್ ಗಳು ಆಫ್ರಿಕಾ ದಟ್ಟಾರಣ್ಯದಲ್ಲಿ ಕಂಡುಬರುವ ಬುಶ್ ಆನೆಗೆ ಸಮಾನವಾಗಿ 5.5 ಟನ್ ತೂಕವನ್ನು ಹೊಂದಿರುತ್ತದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಇಂದೊಂದು ಬಹು ಪಾತ್ರಧಾರಿ ಹೆಲಿಕಾಪ್ಟರ್ ಆಗಿದೆ. ಇದನ್ನು ಪ್ರತಿದಾಳಿ, ಶತ್ರು ಪಾಳೇಯದ ವಾಯು ನೆಲೆಯನ್ನು ಹೊಡೆದುರುಳಿಸಲು, ವಿಶೇಷ ಬೆಂಗಾಗಲು ಪಡೆಯಾಗಿ, ಬಂಡಾಯ ನಿಗ್ರಹ, ಯುದ್ಧ ವಿಮಾನಗಳಿಗೆ ಸಹಾಯಿಯಾಗಿ, ಪರಿಹಾರ ಮತ್ತು ಶೋಧ ಇತ್ಯಾದಿ ಕಾರ್ಯಾಚರಣೆಗಳಿಗಾಗಿ ಬಳಕೆ ಮಾಡಬಹುದಾಗಿದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಚಾಲಕನು ಕೂರುವ ಕ್ಯಾಬಿನ್ ನಲ್ಲಿ (cockpit) ಬಹು ಕ್ರಿಯಾತ್ಮಕ ಪರದೆ, ಲೇಸರ್ ರೇಂಜ್ ಶೋಧಕ, ಲೇಸರ್ ನಿಯೋಜಕ, ಲೇಸರ್ ವಾರ್ನಿಂಗ್ ರಿಸೀವರ್, ರಾಡಾರ್ ವಾರ್ನಿಂಗ್ ರಿಸೀವರ್, ಮತ್ತು ಶತ್ರುಗಳಿಗೆ ಗುರಿಯಿಡುವ ವ್ಯವಸ್ಥೆಯಿರುತ್ತದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಹಗುರ ಭಾರದ ಹೆಲಿಕಾಪ್ಟರ್ ಗಳು ಗಂಟೆಗೆ 280 ಕೀ.ಮೀ. ವೇಗದಲ್ಲಿ 700 ಕೀ.ಮೀ. ವ್ಯಾಪ್ತಿಯ ವರೆಗೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಕೇಂದ್ರ ರಕ್ಷಣಾ ಇಲಾಖೆಯ ಆಡಳಿತ ಪರಿಧಿಯಲ್ಲಿರುವ ಎಚ್‌ಎಎಲ್ 1940ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಭಾರತದಲ್ಲಿದೆ ವಿಶ್ವದ ಶ್ರೇಷ್ಠ ಹಗುರ ಯುದ್ಧ ಹೆಲಿಕಾಪ್ಟರ್

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ ಧ್ರುವ ತಾರೆ

Most Read Articles

Kannada
English summary
Did You Know That India Has One Of The Best Combat Helicopters? Here's More
Story first published: Wednesday, March 16, 2016, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X