ರಾಷ್ಟ್ರಪತಿ ಪ್ರಣಬ್ ಹಾಗೂ ವಿಶ್ವ ಪ್ರಥಮ ಪ್ರಜೆಗಳ ಕಾರು

ಕೆಲವು ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷರು ಭಾರತ ಭೇಟಿ ಕೊಟ್ಟಿದ್ದಾಗ ಎಲ್ಲರ ಗಮನ ಅತ್ತ ಕಡೆ ಸರಿದಿತ್ತು. ಅಮೆರಿಕ ಅಧ್ಯಕ್ಷರ ಐಷಾರಾಮಿ ಕಾರು ಹಾಗೂ ಅದನ್ನು ಸುತ್ತುವರಿದ ಭದ್ರತಾ ಪಡೆಯನ್ನು ನೋಡಿ ಎಲ್ಲರೂ ಬೆಚ್ಚಿ ಬೀಳುವಂತಾಗಿತ್ತು.

ಬಹುತೇಕ ಎಲ್ಲ ದೇಶಗಳಲ್ಲಿಯೂ ಪ್ರಥಮ ಪ್ರಜೆಗಳಿಗೆ ಭಾರಿ ಭದ್ರತೆ ಒದಗಿಸಲಾಗುತ್ತದೆ. ಇದರಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಕಾರುಗಳು ಪ್ರಮುಖವಾಗಿದೆ. ಇಂದಿನ ಈ ಲೇಖನದಲ್ಲಿ ವಿಶ್ವದ ಪ್ರಥಮ ಪ್ರಜೆಗಳು ಬಳಸುವ ಕಾರುಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಐಷಾರಾಮಿ ಜೀವನ ಶೈಲಿಗೆ ಹೊಂದಿಕೆಯಾಗುವ ರೀತಿಯಲ್ಲೇ ಈ ಕಾರುಗಳನ್ನು ಕಸ್ಟಮೈಸ್ಡ್ ಮಾಡಲಾಗಿದೆ. ಇಂತಹ ಬುಲೆಟ್ ಪ್ರೂಪ್ ಕಾರುಗಳು ಸುರಕ್ಷಿತ ಪಯಣಕ್ಕೆ ನೆರವು ಮಾಡುತ್ತದೆ. ಅಂದ ಹಾಗೆ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮರ್ಸಿಡಿಸ್ ಬೆಂಝ್ ಎಸ್600 ಪುಲ್‌ಮ್ಯಾನ್ ಕಾರನ್ನು ಬಳಕೆ ಮಾಡುತ್ತಾರೆ.

Powerful Men And Their Powerful Cars

Powerful Men And Their Powerful Cars

ವಿಶ್ವದ ಕೆಲವು ಪ್ರಮುಖ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಹಾಗೂ ರಾಜರು ಬಳಕೆ ಮಾಡುವ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ...

Indian President's Mercedes S600 Pullman

Indian President's Mercedes S600 Pullman

ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮರ್ಸಿಡಿಸ್ ಬೆಂಝ್ ಎಸ್600 ಪುಲ್‌ಮ್ಯಾನ್ ಕಾರನ್ನು ಬಳಕೆ ಮಾಡುತ್ತಾರೆ. ಇದೇ ಕಾರು ವಿಶ್ವದ ಹಲವಾರು ದೇಶದ ಅಧ್ಯಕ್ಷರ ಬಳಿಯಿದೆ. ಅಂದ ಹಾಗೆ 90 ರಾಷ್ಟ್ರಗಳಲ್ಲಿ ಪ್ರಸ್ತುತ ಕಾರಿದೆ.

United States - Cadillac One

United States - Cadillac One

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ Cadillac One ಕಾರಲ್ಲಿ ತಿರುಗಾಡುತ್ತಾರೆ. ಈ ಬುಲೆಟ್ ಪ್ರೂಪ್ ಕಾರು ರಸಾಯನಿಕ ಸೇರಿದಂತೆ ಸಣ್ಣ ಪುಟ್ಟ ದಾಳಿಗಳಿಂದ ಪಾರಾಗುವ ಶಕ್ತಿ ಹೊಂದಿದೆ.

Emperor Of Japan's Unique Toyota

Emperor Of Japan's Unique Toyota

ವಿಶೇಷವಾಗಿ ತಯಾರಿಸಿದ ಸೆಂಚುರಿ ರಾಯಲ್ ಕಾರನ್ನು ಜಪಾನ್ ಚಕ್ರವರ್ತಿ ಬಳಸುತ್ತಾರೆ.

German President Loves Mercedes

German President Loves Mercedes

ಜರ್ಮನಿಯ ಅಧ್ಯಕ್ಷರಿಗೆ ಅಲ್ಲಿನ ಮುಂಚೂಣಿಯ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಬೆಂಝ್‌ಗಳಂತಹ ಅನೇಕ ಆಯ್ಕೆಗಳಿವೆ. ಹಾಗಿದ್ದರೂ ಅಧಿಕೃತವಾಗಿ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಉಪಯೋಗಿಸುತ್ತಾರೆ.

New Zealand Governor General – Jaguar XJ8

New Zealand Governor General – Jaguar XJ8

ಬ್ರಿಟನ್‌ನ ಪ್ರಖ್ಯಾತ ಜಾಗ್ವಾರ್ ಕಂಪನಿಯ ಎಕ್ಸ್‌ಜೆ8 ಪ್ರೀಮಿಯಂ ಸೆಡಾನ್ ಕಾರನ್ನು ನ್ಯೂಜಿಲೆಂಡ್ ಗವರ್ನರ್ ಜನರಲ್ ಬಳಕೆ ಮಾಡುತ್ತಾರೆ.

Hong Kong Administrator's Lexus

Hong Kong Administrator's Lexus

ಚೀನಾ ಸರಕಾರ ನೇಮಕಗೊಳಿಸಿದ ವಿಶೇಷ ಆಡಳಿತಾಧಿಕಾರಿಗಳಿಂದ ಹಾಂಕಾಂಗ್ ಸರಕಾರವು ಕಾರ್ಯವೆಸಗುತ್ತದೆ. ಅಂತೆಯೇ ಅಲ್ಲಿನ ಆಡಳಿತಾಧಿಕಾರಿ ಲೆಕ್ಸಾಸ್ ಪ್ರೀಮಿಯಂ ಸೆಡಾನ್ ಕಾರನ್ನು ಉಪಯೋಗಿಸುತ್ತಾರೆ.

England Prime Minister's Jaguar

England Prime Minister's Jaguar

ಇನ್ನು ಜಗತ್ತಿನಲ್ಲಿ ಅತಿ ಹೆಚ್ಚು ಪ್ರಭಾವಿ ರಾಷ್ಟ್ರಗಳಲ್ಲಿ ಒಂದೆನಿಸಿರುವ ಇಂಗ್ಲೆಂಡ್‌ನ ಪ್ರಧಾನಿ ಜೇಮ್ಸ್ ಕ್ಯಾಮರೂನ್ ಜಾಗ್ವಾರ್ ಎಕ್ಸ್‌ಜೆ ಸೆಂಟಿನೆಲ್ ಕಾರನ್ನು ಅಧಿಕೃತವಾಗಿ ಬಳಸುತ್ತಾರೆ. ಇದು ಉದ್ದವಾದ ವೀಲ್ ಬೇಸ್ ಹೊಂದಿದೆ.

King of Malaysia – Maybach

King of Malaysia – Maybach

ಮಲೇಷ್ಯಾ ರಾಜಕುಮಾರ ಮೇಬ್ಯಾಕ್ ಎಸ್62 ಕಾರಲ್ಲಿ ಪಯಣಿಸುತ್ತದೆ. ಇದು ಅತ್ಯಾರ್ಷಕ ಲಗ್ಷುರಿ ಫೀಚರ್ಸ್ ಹೊಂದಿದೆ.

King of Sweden's Classic Daimler

King of Sweden's Classic Daimler

ಸ್ವೀಡನ್ ರಾಜ Classic Daimler DS 420 ಕಾರಲ್ಲಿ ಓಡಾಡುತ್ತಾರೆ.

President of Italy's Custom Built Car

President of Italy's Custom Built Car

ಇಟಲಿ ಅಧ್ಯಕ್ಷ ವಿಶೇಷವಾಗಿ ತಯಾರಿಸಿದ ಕಸ್ಟಮೈಸ್ಡ್ ಲಾನ್ಸಿಯಾ ಪ್ಲಾಮಿನಿಯಾ ಲಿಮೊಸಿನ್ ಕಾರನ್ನು ಬಳಕೆ ಮಾಡುತ್ತಾರೆ.

President of Romania

President of Romania

ಇತರ ದೇಶಗಳ ಅಧ್ಯಕ್ಷರ ಹಾಗೆ ರೊಮನಿಯಾ ಅಧ್ಯಕ್ಷರೂ ಕೂಡಾ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಬಳಕೆ ಮಾಡುತ್ತಾರೆ.

President of Singapore

President of Singapore

ಹಾಗೆಯೇ ಸಿಂಗಾಪುರ ಅಧ್ಯಕ್ಷರು ಮರ್ಸಿಡಿಸ್ ಬೆಂಝ್ ಎಸ್350ಎಲ್ ಪ್ರೀಮಿಯಂ ಸಲೂನ್ ಕಾರಲ್ಲಿ ಓಡಾಡುತ್ತಾರೆ.

President of Kenya

President of Kenya

ಇನ್ನು ಆಫ್ರಿಕಾ ಖಂಡದಲ್ಲಿರುವ ರಿಪಬ್ಲಿಕ್ ಆಫ್ ಕೀನ್ಯಾದ ಅಧ್ಯಕ್ಷರು ಕೂಡಾ ಮರ್ಸಿಡಿಸ್ ಬೆಂಝ್ ಪುಲ್‌ಮ್ಯಾನ್ ಎಸ್600 ಕಾರು ಇಷ್ಟಪಡುತ್ತಾರೆ.

Chile's Presidential Car

Chile's Presidential Car

ಇನ್ನು ಅಚ್ಚರಿಯೆಂಬಂತೆ ಚಿಲಿ ಅಧ್ಯಕ್ಷರು ಕಪ್ಪು ಬಣ್ಣದ ಫೋರ್ಡ್ ಗಾಲಕ್ಸಿ ಎಕ್ಸ್‌ಎಲ್ ಕಾರು ಬಳಸುತ್ತಾರೆ. ಭದ್ರತಾ ಸಿಬ್ಬಂದಿಗಳು ಕೂಡಾ ಹೆಚ್ಚು ಜಾಗ್ರತರಾಗಿರುತ್ತಾರೆ.

President of Croatia

President of Croatia

ಅದೇ ರೀತಿ ಕ್ರೊವೆಶಿಯಾ ಅಧ್ಯಕ್ಷರ ಫೇವರಿಟ್ ಕಾರು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಆಗಿದೆ.

Head Of State And Their Cars

ಇದೀಗ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿರಿ...

Most Read Articles

Kannada
English summary
Indian president Pranab Mukherjee uses a Mercedes-Benz S600 Pullman. Have a look at some of the special cars that are used by heads of states across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X