ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

By Nagaraja

ಕಳೆದ ದಿನ ರಾತ್ರಿ (ಜುಲೈ 02, ಗುರುವಾರ) ಸಂಭವಿಸಿದ ಕಾರು ಅಪಘಾತದಲ್ಲಿ ಬಿಜೆಪಿ ಸಂಸದೆ ಹಾಗೂ ಬಾಲಿವುಡ್‌ನ ಹಿರಿಯ ನಟಿ ಹೇಮಾಮಾಲಿನಿ ಗಂಭೀರ ಗಾಯಗೊಂಡಿದ್ದರು. ಪ್ರಕರಣದಲ್ಲಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದರೆ ನಾಲ್ವರಿಗೆ ತೀವ್ರತರಹದ ಗಾಯಗಾಳಾಗಿದ್ದವು.

ಸೀಟು ಬೆಲ್ಟ್ ಧರಿಸುತ್ತಿದ್ದರೆ ಮುಂಡೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು

ಹೇಮಾಮಾಲಿನಿ ಸಂಚರಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಮುಂಭಾಗದಿಂದ ಬರುತ್ತಿದ್ದ ಆಲ್ಟೊ ಕಾರಿಗೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಇದರಂತೆ ಸ್ಥಳೀಯ ಪೊಲೀಸರು ತನಿಖೆ ಕೈಗೆತ್ತಿಗೊಂಡಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ಬಿಡುಗಡೆ ಮಾಡಿದ್ದಾರೆ.

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ಹೇಮಾಮಾಲಿನಿ ಅವರ ಕಾರು ಅಮಿತ ವೇಗದಲ್ಲಿ ಸಂಚರಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ಸಂಬಂಧ ಪೊಲೀಸರು ಹೇಮಾಮಾಲಿನಿ ಕಾರಿನ ಚಾಲಕರನ್ನು ಬಂಧಿಸಿದ್ದಾರೆ.

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ತುರ್ತು ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಂಡಿರುವುದೇ ಹೇಮಾಮಾಲಿನಿ ಪ್ರಾಣಪಾಯಾದಿಂದ ಪಾರಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.[ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?]

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ರಾಜಸ್ಥಾನದ ದೌಸಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಹೈವೇಗೆ ಪ್ರವೇಶಿಸುವ ವೇಳೆ ಆಲ್ಟೊ ಚಾಲಕ ಸಹ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಬಗ್ಗೆಯೂ ಉಲ್ಲೇಖವಿದೆ.

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ಘಟನೆಯಲ್ಲಿ ಆಲ್ಟೊ ಕಾರಿನಲ್ಲಿ ಸಂಚರಿಸುತ್ತಿದ್ದ ನಾಲ್ಕು ವರ್ಷದ ಬಾಲಕಿ ಸೋನಮ್ ಸಾವನ್ನಪ್ಪಿದ್ದರೆ ಇತರ ನಾಲ್ವರಾದ ಸೀಮಾ (40), ಹನುಮಾನ್ (38), ಶಿಖಾ ದೇವಿ (35) ಮತ್ತು ಸುಮಿಲ್ (5) ಗಾಯಗೊಂಡಿದ್ದರು. ಬಾಲಕಿ ಸೋನಮ್ ಅವರು ಹನುಮಾನ್ ಮತ್ತು ಶಿಖಾ ದಂಪತಿಯ ಮಗಳಾಗಿದ್ದಾರೆ.

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ಎಂಟ್ರಿ ಲೆವೆಲ್ ಕಾರಾಗಿರುವ ಆಲ್ಟೊದಲ್ಲಿ ಯಾವುದೇ ರೀತಿಯ ಸುರಕ್ಷತೆಯ ವ್ಯವಸ್ಥೆಯಿರುವುದಿಲ್ಲ. ಇನ್ನೊಂದೆಡೆ ಬೆಂಝ್ ಕಾರಿನಲ್ಲಿ ಮುಂದುಗಡೆ ಹಾಗೂ ಹಿಂಭಾಗದ ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಗಾಳಿಚೀಲದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ಭಾರತದಲ್ಲಿ ಏರ್ ಬ್ಯಾಗ್ ಸೇವೆಯ ಪ್ರಾಮುಖ್ಯತೆ ಬಗ್ಗೆ ಪ್ರಯಾಣಿಕರು ನಿರ್ಲಕ್ಷ್ಯ ವಹಿಸುತ್ತಾರೆ ಅಥವಾ ಅವರಿಗೆ ಇದರ ಮಹತ್ವದ ಬಗ್ಗೆ ಅರಿವಿರುವುದಿಲ್ಲ.

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ಇನ್ನು ಚಾಲನೆ ವೇಳೆ ಮುಂಭಾಗ ಹಾಗೂ ಹಿಂಭಾಗದ ಪ್ರಯಾಣಿಕರು ಕಡ್ಡಾಯವಾಗಿ ಸೀಟು ಬೆಲ್ಟ್ ಧರಿಸಬೇಕಾಗಿದೆ. ಇವೆಲ್ಲವೂ ಚಾಲನೆ ವೇಳೆ ಮೈಗೂಡಿಸಿಕೊಳ್ಳಬೇಕಾದ ಪ್ರಾಥಮಿಕ ಕರ್ತ್ಯವ್ಯವೂ ಹೌದು [ನೀವು ಜೀವ ರಕ್ಷಕ ಸೀಟ್ ಬೆಲ್ಟ್ ಏಕೆ ಧರಿಸಬೇಕು?].

ಹೇಮಾಮಾಲಿನಿ ಕಾರು ಅಪಘಾತಕ್ಕೆ ಅಮಿತ ವೇಗವೇ ಕಾರಣ?

ಇವೆಲ್ಲದಕ್ಕೂ ಮಿಗಿಲಾಗಿ ನಿಧಾನವಾಗಿ ಚಾಲನೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕು. ಯಾಕೆಂದರೆ 'ಅವಸರವೇ ಅಪಘಾತಕ್ಕೆ ಕಾರಣ'ವಾಗಿದ್ದು, ರಸ್ತೆ ಎಂಬುದು ರೇಸ್ ಟ್ರ್ಯಾಕ್ ಅಲ್ಲ ಎಂಬುದನ್ನು ಯಾವತ್ತೂ ಮರೆಯಬಾರದು.

ಕಾರು ಅಪಘಾತಕ್ಕೆ ಹಾಸ್ಯ ಚಕ್ರವರ್ತಿ ಬಸ್ಪಾಲ್ ಭಟ್ಟಿ ಬಲಿ

ಸೀಟ್ ಬೆಲ್ಟ್ ತೊಡದಿರುವುದೇ ಜಸ್ಪಾಲ್ ಸಾವಿಗೆ ಕಾರಣ

Most Read Articles

Kannada
Read more on ಅಪಘಾತ accident
English summary
Hema Malini's Driver Arrested for over speeding?
Story first published: Friday, July 3, 2015, 9:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X