ಹಾಲಿವುಡ್ ಕಾಮ ಕನ್ಯೆಯರ ಕಾರು ಪ್ರೇಮ ಪುರಾಣ

Posted by:

ಹಾಲಿವುಡ್ ಜಗತ್ತಿನ ನಟಿಯರು ಪ್ರತಿ ಸಲವೂ ತಮ್ಮ ಲಗ್ಷುರಿ ಜೀವನಶೈಲಿಯಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಸಿನೆಮಾಗಳಲ್ಲಿ ಗ್ಲಾಮರಸ್ ಲುಕ್‍‌ನಲ್ಲಿ ಕಾಣಿಸಿಕೊಳ್ಳುವ ಇಂತಹ ನಟಿಯರು ನಿಜ ಜೀವನದಲ್ಲೂ ಕೆಲವೊಂದು ಕುತೂಹಲಕಾರಿ ಹವ್ಯಾಸಗಳನ್ನು ಹೊಂದಿರುತ್ತಾರೆ.

ಇದರಲ್ಲಿ ಪ್ರಮುಖವಾಗಿರುವುದು ಕಾರು ಪ್ರೇಮ. ಬಾಲಿವುಡ್‌ನಂತೆ ಹಾಲಿವುಡ್‌ ನಟಿಯರು ಕೂಡಾ ಜಾಲಿ ರೈಡ್‌ಗಳನ್ನು ಇಷ್ಟಪಡುತ್ತಾರೆ. ಹಾಗೆಯೇ ಐಷಾರಾಮಿ ಕಾರುಗಳಲ್ಲಿ ಸಂಚರಿಸುವುದನ್ನು ಇಷ್ಟಪಡುತ್ತಾರೆ.

ಇಂದಿನ ಈ ಲೇಖನದಲ್ಲಿ ಜನಪ್ರಿಯ ಹಾಲಿವುಡ್ ನಟಿಯರು ಹಾಗೂ ಅವರ ಕಾರು ಪುರಾಣಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದನ್ನು ಚಿತ್ರದ ಮೂಲಕ ಕೆಳಗಡೆ ಕೊಡಲಾಗಿದೆ.

ಹಾಲಿವುಡ್ ನಟಿಯರ ಕಾರು ಪ್ರೇಮದ ಕುರಿತು ತಿಳಿದುಕೊಳ್ಳಲು ಇಲ್ಲಿ ಕೊಟ್ಟಿರುವ ಫೋಟೊ ಫೀಚರ್ ಕ್ಲಿಕ್ಕಿಸುತ್ತಾ ಸಾಗಿರಿ...

angelina- phaeton

ಹಾಲಿವುಡ್‌ನ ಜನಪ್ರಿಯ ನಟಿ ಏಂಜಲೀನಾ ಬಳಿ ಜರ್ಮನಿಯ ಪ್ರಮುಖ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್‌ನ ಅತ್ಯಾಕರ್ಷಕ ಫಾಂಟಮ್ ಸಿಡಾನ್ ಕಾರಿದೆ. ಫೋಕ್ಸ್‌ವ್ಯಾಗನ್ ಫಾಂಟಮ್ ಕಾರನ್ನು 2002ರ ಜಿನೆವಾ ಆಟೋ ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಈ ಕಾರು ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಯಲ್ಲೂ ಲಭ್ಯವಿದೆ. ಇದರ ಪೆಟ್ರೋಲ್ ಆವೃತ್ತಿಯಲ್ಲಿ 3.2 ವಿಆರ್ ಹಾಗೂ ಡೀಸೆಲ್ ವೆರಿಯಂಟ್‌ನಲ್ಲಿ 4.2 ವಿ8 ಎಂಜಿನ್ ಪ್ರಯೋಗಿಸಲಾಗಿದೆ.

ಕ್ಯಾಮರೂನ್ ಡಯಾಜ್

ಕ್ಯಾಮರೂನ್ ಡಯಾಜ್ ಬಳಿ 50 ಲಕ್ಷ ಅಮೆರಿಕನ್ ಡಾಲರ್ ಬೆಳೆಬಾಳುವ ಫೆರಾರಿಯ ಅತಿ ದುಬಾರಿ 250 ಜಿಟಿ ಕಾರಿದೆ.

selena- ford

ಅಮೆರಿಕದ ಜನಪ್ರಿಯ ಪಾಪ್ ಸಿಂಗರ್ ಆಗಿರುವ ಸೆಲೆನಾ ಬಳಿ ಫೋರ್ಡ್ ಕಂಪನಿಯ ದುಬಾರಿ ಎಸ್‌ಯುವಿ ಕಾರಿದೆ. ಈ ಎಸ್‌‍ಯುವಿ ಕಾರಿನಲ್ಲಿ 2.5 ಲೀಟರ್ ಎಂಜಿನ್ ಪ್ರಯೋಗಿಸಲಾಗಿದೆ.

kim kardashian

ಭಾರತದಲ್ಲೂ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಅಮೆರಿಕದ ನಟಿ, ರೂಪದರ್ಶಿ, ಟಿವಿ ನಿರೂಪಕಿ ಹಾಗೂ ರಿಯಾಲಿಟಿ ಶೋ ನಟಿ ಕಿಮ್ ಕರ್ದಶಿಯಾ ಬಳಿ ರೇಂಜ್ ರೋವರ್ ಕಾರಿದೆ. ಕಂಪನಿಯು ಈ ಕಾರಿನಲ್ಲಿ 4.4 ಲೀಟರ್ ಟಿಡಿವಿ8 ಡೀಸೆಲ್ ಎಂಜಿನ್ ಆಳವಡಿಸಿದೆ. ಇದರಿಂದ ಎಂಜಿನ್ ಹೆಚ್ಚು ಪವರ್‌ಫುಲ್ ಎನಿಸಿಕೊಂಡಿದೆ. ಇದು ಏಳು ಸೆಕೆಂಡುಗಳಲ್ಲಿ 100 ಕೀ.ಮೀ ತನಕ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಬ್ರಿಟನಿಯ ಮೆಕ್‌ಲ್ಯಾರೆನ್

ವಿಶ್ವದೆಲ್ಲೆಡೆ ಒಂದರ ಬಳಿಕ ಒಂದರಂತೆ ಐಷಾರಾಮಿ ಕಾರುಗಳನ್ನು ಪರಿಚರಿಯಿಸುತ್ತಿರುವ ಜರ್ಮನಿಯ ಮುಂಚೂಣಿಯ ಕಾರು ತಯಾರಕ ಕಂಪನಿಯಾದ ಮರ್ಸಿಡಿ‌ಸ್ ಬೆಂಝ್‌ನ ಸ್ಫೋರ್ಟ್ಸ್ ಕಾರಾದ ಎಸ್‌ಎಲ್‌ಆರ್ ಮೆಕ್‌ಲ್ಯಾರೆನ್ ಕಾರನ್ನು ಬ್ರಿಟನಿ ತಮ್ಮದಾಗಿಸಿಕೊಂಡಿದ್ದಾರೆ. ಈ ಕಾರಿನ ದರ ಸುಮಾರು 40,00,00 ಅಮೆರಿಕನ್ ಡಾಲರ್ ಆಗಿದೆ.

ಶಕಿರಾಳ ಹಾಟ್ ಬಿಎಂಡಬ್ಲ್ಯು

ಕಳೆದ ವಿಶ್ವಕಪ್ ಸಂದರ್ಭದಲ್ಲಿ ತಮ್ಮ ಹಾಡಿನ ಮೂಲಕ ಹುಚ್ಚೆದ್ದು ಕುಣಿಸಿದ್ದ ಪಾಪ್ ಗಾಯಕಿ ಶಕಿರಾ ಬಿಎಂಡಬ್ಲ್ಯುನ ಎಸ್‌ಯುವಿ ಕಾರಲ್ಲಿ ಪಯಣಿಸುವುದನ್ನು ಇಷ್ಟಪಡುತ್ತಾರೆ. ಈ ಕಾರು ಪ್ರತಿ ಗಂಟೆಗೆ 240 ಕೀ.ಮೀ ವೇಗತೆಯಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ 6.7 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಲಂಬೊರ್ಗಿನಿ ಅವೆಂಟಡೊರ್

ಮಾಡೆಲ್ ಹಾಗೂ ನಟಿ ಕಿಮ್ ಕರ್ದಶಿಯಾ ಇತ್ತೀಚೆಗಷ್ಟೇ ತಮ್ಮ ಬಾಯ್ ಫ್ರಂಡ್‌ಗೆ ಲಂಬೊರ್ಗಿನಿ ಅವೆಂಟಡೊರ್ ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದರು.

Megan Fox- mb g class

ಮತ್ತೊಬ್ಬೆ ಹಾಲಿವುಡ್ ಸೆಕ್ಸಿ ನಟಿ ಮೆಗನಾ ಫಾಕ್ಸ್ ಬಳಿ ಮರ್ಸಿಡಿಸ್ ಬೆಂಝ್‌ನ ಜಿ ಕ್ಲಾಸ್ ಕಾರಿದೆ.

shenae grimes

ಹಾಗೆಯೇ ಹಾಟ್ shenae grimes ಟೊಯೊಟಾದ ಜನಪ್ರಿಯ ಪ್ರಿಯಸ್ ಕಾರನ್ನು ಇಷ್ಟಪಡುತ್ತಾರೆ.

Diane Kruger

ಹಾಲಿವುಡ್‌ನ ನಟಿ Diane Kruger ಬಳಿ ಮರ್ಸಿಡಿಸ್ ಬೆಂಝ್‌ನ ಬಿ ಕ್ಲಾಸ್ ಕಾರಿದೆ.

zoe saldana- audi a8

ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುವಂತೆಯೇ ಹಾಲಿವುಡ್‌ನ ಬಿಸಿ ಬಿಸಿ ತಾರೆ zoe saldana ಅವರು ಜರ್ಮನಿಯ ಪ್ರಮುಖ ಕಾರು ತಯಾರಕ ಕಂಪನಿಯಾದ ಆಡಿ ಎ8 ಕಾರಲ್ಲಿ ಜಾಲಿ ರೈಡ್ ಹೊಡೆಯುವುದನ್ನು ಇಷ್ಟಪಡುತ್ತಾರೆ.

Story first published: Monday, January 21, 2013, 10:31 [IST]
English summary
Hollywood is home to some of the most beautiful women in the world and these beauties own some of the hottest and most adorable cars. Here are Hollywood's hot babes and their hot rides.
Please Wait while comments are loading...

Latest Photos