ಮಣಪ್ಪುರಂನಲ್ಲಿ ಭೀಕರ ಅಪಘಾತ- ಒಂದೇ ಹೊಡೆತಕ್ಕೆ ತಿಪ್ಪರಲಾಗ ಹಾಕ್ತು ಹೋಂಡಾ ಸಿಟಿ ಕಾರ್..!!

Written By:

ಕೇರಳದ ಮಣಪ್ಪುರಂನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಸುಜುಕಿ ಸ್ವಿಫ್ಟ್ ಕಾರು ಗುದ್ದಿದ ರಭಸಕ್ಕೆ ಹೋಂಡಾ ಸಿಟಿ ಕಾರು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಕಾರು ಚಾಲಕರಿಬ್ಬರು ವಿರುದ್ಧ ದಿಕ್ಕಿನಲ್ಲಿ ಬಂದಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ರಸ್ತೆ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ರೆ ಆಗಬಾರದು ಆಗುತ್ತೆ ಅನ್ನೋದಕ್ಕೆ ಮಣಪ್ಪುರಂನಲ್ಲಿ ನಡೆದಿರುವ ಘಟನೆಯೇ ಸಾಕ್ಷಿ. ಅಪಘಾತದಲ್ಲಿ ಸುಜುಕಿ ಸ್ವಿಫ್ಟ್ ಕಾರು ಗುದ್ದಿದ ರಭಸಕ್ಕೆ ಹೋಂಡಾ ಸಿಟಿ ಕಾರು ತಲೆಕೆಳಗಾಗಿ ಬಿದ್ದಿದ್ದು, ಅದೃಷ್ಟವಶಾತ್ ಹೋಂಡಾ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಮಲಪ್ಪುರಂನ ಕಾಲಿಕಟ್‌ನ ಏರ್‌ಪೋರ್ಟ್ ಬಳಿಯೇ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಸ್ವಿಫ್ಟ್ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಆದ್ರೆ ಹೋಂಡಾ ಸಿಟಿ ಕಾರಿನಲ್ಲಿದ್ದ ಚಾಲಕನಿಗೆ ಅಲ್ಪಸ್ವಲ್ಪ ಪ್ರಮಾಣದ ಗಾಯಗಳಾಗಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.

ಅಪಘಾತ ನಡೆದ ಸಂದರ್ಭದಲ್ಲಿ ಬೇರೆ ವಾಹನಗಳು ಇಲ್ಲದೇ ಇರೋ ಕಾರಣಕ್ಕೆ ಬೇರೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಒಂದು ವೇಳೆ ವಾಹನಗಳು ಇದ್ದಿದ್ದರೇ ಪ್ರಾಣಹಾನಿಯಾಗುವ ಸಾಧ್ಯತೆಗಳಿತ್ತು. ಆದ್ರೆ ಹೋಂಡಾ ಕಾರು ಚಾಲಕ ಮುಂಜಾಗ್ರತೆಯಿಂದ ಬೇರೆಡೆ ಕಾರು ತಿರುಗಿಸಿದ್ದಕ್ಕೆ ಭಾರೀ ಅನಾಹುತ ತಪ್ಪಿದೆ.

ಭೀಕರ ಕಾರು ಅಪಘಾತದ ದೃಶ್ಯಗಳನ್ನು ಕಂಡ ಸ್ಥಳೀಯರಿಗೆ ಕ್ಷಣ ಕಾಲ ಭೀತಿ ಸೃಷ್ಟಿಸಿದ್ದು ಸುಳ್ಳಲ್ಲ.

ಇನ್ನೊಂದು ವಿಚಾರವೇನೆಂದರೇ ಅಪಘಾತದಲ್ಲಿ ಜಖಂಗೊಂಡ ಹೋಂಡಾ ಸಿಟಿ ಕಾರನ್ನು 2 ದಿನಗಳ ಹಿಂದಷ್ಟೇ ಖರೀದಿ ಮಾಡಲಾಗಿತ್ತು ಎನ್ನಲಾಗಿದೆ. ಆದ್ರೆ ಮುಂಜಾಗ್ರತ ಕ್ರಮ ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ತೊಂದರೆಯಾಗಿಲ್ಲ.

ಸದ್ಯ ಸ್ವಿಫ್ಟ್ ಕಾರನ್ನು ಅಪಘಾತ ಸ್ಥಳದಿಂದ ತೆರವುಗೊಳಿಸಲಾಗಿದ್ದು, ಕಾರು ಚಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದ್ರೆ ಹೋಂಡಾ ಸಿಟಿ ಕಾರು ಚಾಲಕ ಮುಂಜಾಗ್ರತ ವಹಿಸದಿದ್ದರೆ ಸ್ವಿಫ್ಟ್ ಕಾರು ಚಾಲಕ ಪ್ರಾಣ ಕಳೆದುಕೊಳ್ಳಬೇಕಿತ್ತು.

ಕೇವಲ ಇದೊಂದೆ ಅಲ್ಲಾ. ದೇಶದಲ್ಲಿ ದಿನಂಪ್ರತಿ ಹತ್ತಾರು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಮುಖ್ಯ ಕಾರಣ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿ ಚಾಲನೆ ಮಾಡುವುದು. ಹೀಗಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದು ಒಳಿತು.

ಬಿಡುಗಡೆಗೆ ಕಾಯ್ದಿರುವ ಹೊಚ್ಚ ಹೊಸ 2017ರ ಮಾರುತಿ ಸುಜುಕಿ ಹ್ಯಾಚ್‍‌ಬ್ಯಾಕ್ ಮಾದರಿಯ ಕಾರುಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Thursday, March 16, 2017, 12:23 [IST]
English summary
Both the Maruti Swift and Honda City were coming in the opposite directions and crashed into each other while attempting to avoid traffic.
Please Wait while comments are loading...

Latest Photos