ವ್ಯೋಮಯಾನ ಉದ್ಯಮಕ್ಕೆ 'ಹೋಂಡಾಜೆಟ್' ಚೊಚ್ಚಲ ಎಂಟ್ರಿ

By Nagaraja

ವಾಹನೋದ್ಯಮದಲ್ಲಿ ಈಗಾಗಲೇ ಪಾರುಪತ್ಯ ಮೆರೆದಿರುವ ಜಪಾನ್ ಮೂಲದ ದೈತ್ಯ ಸಂಸ್ಥೆಯಾಗಿರುವ ಹೋಂಡಾ ಈಗ ತನ್ನ ಚೊಚ್ಚಲ ಜೆಟ್ ಮೂಲಕ ವ್ಯೋಮಯಾನ ಉದ್ಯಮಕ್ಕೂ ಕಾಲಿರಿಸಿದೆ. ನಾವು ಈ ಮೊದಲೇ ತಿಳಿಸಿರುವಂತೆಯೇ ಹೋಂಡಾಜೆಟ್ ತನ್ನ ಚೊಚ್ಚಲ ಪಯಣವನ್ನು ಸೆಂಡಾಯ್ ನಿಂದ ಟೊಕಿಯೋಗೆ ಯಶಸ್ವಿಯಾಗಿ ನಡೆಸಿದೆ. ಈಗ ಅಮೆರಿಕ ಫೆಡಲ್ ಎವಿಯೇಷನ್ ವಿಭಾಗದಿಂದ ಅಧಿಕೃತ ಅನುಮೋದನೆಗೆ ಕಾಯುತ್ತಿರುವ ಹೋಂಡಾಜೆಟ್ ತದಾ ಬಳಿಕ ಗ್ರಾಹಕರಿಗೆ ಹಸ್ತಾಂತರವಾಗಲಿದೆ.

30 ವರ್ಷಗಳ ನಿರಂತರ ಅಧ್ಯಯನಗಳ ಬಳಿಕ ಹೋಂಡಾಜೆಟ್ ಅಭಿವೃದ್ಧಿಪಡಿಸಲಾಗಿದ್ದು, ಖಾಸಗಿ ವಿಮಾನ ಯಾನದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಮಾಡುವ ಎಲ್ಲ ಸಾಧ್ಯತೆಗಳಿವೆ. ಇದೀಗ ಈ ಲೇಖನದಲ್ಲಿ ಹೋಂಡಾ ಜೆಟ್ ವಿಮಾನದ ಕುರಿತಾಗಿ ಅತ್ಯಂತ ಸರಳ ರೀತಿಯಲ್ಲಿ ವಿವರಿಸುವ ಪ್ರಯತ್ನ ಮಾಡಲಿದ್ದೇವೆ.

10. ನಾವೀನ್ಯತೆ

10. ನಾವೀನ್ಯತೆ

30 ವರ್ಷಗಳ ನಿರಂತರ ಅಧ್ಯಯನ ಹಾಗೂ ಅಭಿವೃದ್ಧಿ ಬಳಿಕ ಹೋಂಡಾ ಜೆಟ್ ವಿಮಾನದ ರೆಕ್ಕೆಗಳಲ್ಲಿ ಎಂಜಿನ್ ಜೋಡಣೆ ಮಾಡಲಾಗಿದೆ. ಇದು ವ್ಯೋಮಯಾನ ಸಾಂಪ್ರಾದಾಯವನ್ನು ಭೇದಿಸುವುದಲ್ಲದೆ ಹೆಚ್ಚು ಆರಾಮದಾಯಕ ಕ್ಯಾಬಿನ್, ಶಬ್ದ ಕಡಿಮೆ ಜೊತೆ ಜೊತೆಗೆ ಹೆಚ್ಚಿನ ಇಂಧನ ಕ್ಷಮತೆಯನ್ನು ನೀಡುತ್ತದೆ.

09. ಎನ್ ಎಲ್ ಎಫ್ ತಂತ್ರಜ್ಞಾನ

09. ಎನ್ ಎಲ್ ಎಫ್ ತಂತ್ರಜ್ಞಾನ

ಇಂಧನ ದಕ್ಷತೆ, ವೇಗ, ನಿರ್ವಹಣೆ ಹಾಗೂ ಏರೋಡೈನಾಮಿಕ್ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನ್ಯಾಚುರಲ್ ಲ್ಯಾಮಿನರ್ ಫ್ಲೋ (ಎನ್ ಎಲ್ ಎಫ್ ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

08. ವಿನ್ಯಾಸ

08. ವಿನ್ಯಾಸ

ಸಾಮಾನ್ಯ ಅಲ್ಯೂಮಿನಿಯಂ ಜೆಟ್ ವಿಮಾನಗಿಂತಲೂ ವಿಭಿನ್ನವಾಗಿ ಹೋಂಡಾಜೆಟ್ ನಲ್ಲಿ ಹಗುರ ಭಾರದ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದ್ದು, ಹೆಚ್ಚಿನ ನಿರ್ವಹಣೆ ಜೊತೆಗೆ ಇಂಧನ ಉಳಿತಾಯವಾಗಲಿದೆ. ಇದರೊಂದಿಗೆ ಹೆಚ್ಚಿನ ಕ್ಯಾಬಿನ್ ಜಾಗ ಕೂಡಾ ಸೃಷ್ಟಿಯಾಗಲಿದೆ.

07. ನಾವೀನ್ಯ ಕಾಕ್ ಪಿಟ್

07. ನಾವೀನ್ಯ ಕಾಕ್ ಪಿಟ್

ಏತನ್ಮಧ್ಯೆ ಕಾಕ್‌ಪಿಟ್ (ವಿಮಾನದಲ್ಲಿ ಚಾಲಕನು ಕೂರುವ ಕೋಣೆ) ಮುಂದಿನ ತಲೆಮಾರಿನ ಗಾರ್ಮಿನ್ ಜಿ300 ಆಲ್ ಗ್ಲಾಸ್ ಆವಿಯೋನಿಕ್ಸ್ ಸಿಸ್ಟಂ ಜತೆ ಡ್ಯುಯಲ್ ಟಚ್ ಸ್ಕ್ರೀನ್ ಕಂಟ್ರೋಲರ್ ಹಾಗೂ 14 ಇಂಚಿನ ಲ್ಯಾಂಡ್‌ಸ್ಕೇಪ್ ಹೈ ರಿಸೊಲ್ಯೂಷನ್ ಡಿಸ್‌ಪ್ಲೇ ಪಡೆದುಕೊಳ್ಳಲಿದೆ. ಇಂತಹ ಬಳಕೆದಾರ ಸ್ನೇಹಿ ಕಾಕ್‌ಪಿಟ್ ಅನ್ನು ಓರ್ವ ಅಥವಾ ಇಬ್ಬರು ಪೈಲಟ್‌ಗಳು ನಿಯಂತ್ರಿಸಬಹುದಾಗಿದೆ.

06. ಅನುಕೂಲ

06. ಅನುಕೂಲ

ನಿಮ್ಮ ಮನೆಯಿಂದ ಸಾವಿರಾರು ಕೀ.ಮೀ. ದೂರದಲ್ಲಿದ್ದರೂ ನಿಮಗೆ ಮನೆಯಲ್ಲಿರುವಂತೆಯೇ ಭಾಸವಾಗಲಿದೆ. ಇನ್ನು ಉದ್ಯಮಿಗಳಿಗೆ ತಮ್ಮ ಕಚೇರಿ ಕೆಲಸಗಳನ್ನು ಮಾಡಬಹುದಾಗಿದೆ. ಇದರಲ್ಲಿ ನಾಲ್ಕು ಜನರಿಗೆ ಮುಖಾಮುಖಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದ್ದು, ಸಂಪೂರ್ಣ ಖಾಸಗಿತನವನ್ನು ಕಾಪಾಡುತ್ತದೆ.

05. ಶೌಚಾಲಯ

05. ಶೌಚಾಲಯ

ಇನ್ನು ಅತ್ಯಾಧುನಿಕ ಸೌಲಭ್ಯಗಳುಳ್ಳ ಶೌಚಾಲಯದ ವ್ಯವಸ್ಥೆಯನ್ನು ಇದರಲ್ಲಿ ಕೊಡಲಾಗಿದೆ.

04. ಎಂಜಿನ್

04. ಎಂಜಿನ್

ಇದಕ್ಕೆ ಜನರಲ್ ಎಲೆಕ್ಟ್ರಿಕ್ ಸಹಯೋಗದಿಂದ ಸಣ್ಣದಾದ ಜಿಇ ಹೋಂಡಾ ಎಚ್‌ಎಫ್120 ಟರ್ಬೊಫ್ಯಾನ್ ಜೆಟ್ ಎಂಜಿನ್ (2050 lb-ft) ಅಭಿವೃದ್ಧಿಪಡಿಸಲಾಗಿದೆ.

03. ಗರಿಷ್ಠ ವೇಗ

03. ಗರಿಷ್ಠ ವೇಗ

ಇದು ಹೋಂಡಾಜೆಟ್ ವಿಮಾನವನ್ನು ಗಂಟೆಗೆ ಗರಿಷ್ಠ 780 ಕೀ.ಮೀ. ವೇಗತೆಯಲ್ಲಿ ಸಂಚರಿಸಲು ಸಹಕಾರಿಯಾಗಲಿದೆ

02. ಟೇಕ್ ಆಫ್-ಲ್ಯಾಂಡಿಗ್

02. ಟೇಕ್ ಆಫ್-ಲ್ಯಾಂಡಿಗ್

ಹಾಗೆಯೇ ಟೇಕ್ ಆಫ್‌ ಮಾಡಲು 4000 ಅಡಿ ಹಾಗೂ ಲ್ಯಾಡಿಂಗ್ ಮಾಡಲು 3,000 ಅಡಿ ರನ್ವೇ ಸಾಕಾಗಲಿದೆ.

01. ಮುಂದಿನ ಜನಾಂಗದ ವ್ಯೋಮಯಾನ

01. ಮುಂದಿನ ಜನಾಂಗದ ವ್ಯೋಮಯಾನ

ಇನ್ನು ಹೋಂಡಾಜೆಟ್ ಮೊಬೈಲ್ ಡಿಸೈನ್ ನಿಯಂತ್ರಿತ ಕ್ಯಾಬಿನ್ ಪಡೆದುಕೊಂಡಿದೆ. ಅಂದರೆ ಪ್ರಯಾಣಿಕರು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಳಕೆ ಮಾಡುವ ಮುಖಾಂತರ ಕ್ಯಾಬಿನ್ ಒಳಗಡೆಯ ಆಡಿಯೋ, ಲೈಟಿಂಗ್, ತಾಪಮಾನ, ಎಲೆಕ್ಟ್ರೋಕ್ರೋಮಿಕ್ ವಿಂಡೋ ಸಿಸ್ಟಂಗಳನ್ನು ನಿಯಂತ್ರಿಸಬಹುದಾಗಿದೆ.

Most Read Articles

Kannada
English summary
Honda Jet made its first maiden flight from Sendai to Tokyo. The company is now in talks to obtain final approval from the US Federal Aviation Administration to start deliveries for customers in the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X