ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಜಗತ್ತಿನ ವಿಶ್ವಾಸಾರ್ಹ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ ಕೇವಲ ಕಾರು ನಿರ್ಮಾಣದಲ್ಲಿ ಮಾತ್ರ ಗಮನ ಕೇಂದ್ರಿತವಾಗಿಲ್ಲ. ಬದಲಾಗಿ ಹೋಂಡಾ ಬೈಕ್, ಎಟಿವಿ, ಹುಲ್ಲುಗತ್ತರಿ, ಎಂಜಿನ್, ಮಾನವ ನಿರ್ಮಿತ ರೋಬೋಟ್ ಎಂಬಿತ್ಯಾದಿ ತಯಾರಿಯಲ್ಲೂ ತನ್ನ ಕೊಡುಗೆಯನ್ನು ಜಗತ್ತಿಗೆ ಸಲ್ಲಿಸುತ್ತಿದೆ.

ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ಈ ಪಟ್ಟಿಗೊಂದು ಸದ್ಯದಲ್ಲೇ ಹೊಸತೊಂದು ಸೇರ್ಪಡೆಯಾಗಲಿದ್ದು, ಜೆಟ್ ವಿಮಾನಗಳನ್ನು ಜಪಾನ್‌ನ ಈ ದೈತ್ಯ ಸಂಸ್ಥೆ ನಿರ್ಮಿಸಲಿದೆ. ಈ ಸಂಬಂಧ ತನ್ನ ಮೊದಲ ನಿರ್ಮಾಣ ಸಿದ್ಧ ಜೆಟ್ ವಿಮಾನ 'ಹೋಂಡಾಜೆಟ್' ಬಿಡುಗಡೆ ಮಾಡುವುದರತ್ತ ಹೋಂಡಾ ಕಾರ್ಯಮಗ್ನವಾಗಿದೆ. ಈ ಬಗ್ಗೆ ಮಹತ್ವದ ಮಾಹಿತಿಗಳನ್ನು ವಾಹನ ಪ್ರಿಯರ ಜೊತೆ ಹಂಚಿಕೊಳ್ಳಲು ನಾವು ಬಯಸುತ್ತಿದ್ದೇವೆ.

ಹೋಂಡಾಜೆಟ್ ಹಗುರ ಭಾರದ ಖಾಸಗಿ ಜೆಟ್ ವಿಮಾನವಾಗಿರಲಿದೆ. ಅಲ್ಲದೆ ಈಗಾಗಲೇ ವಿಶ್ವದಲ್ಲಿ ಅತ್ಯಂತ ಸುಂದರ ಹಾಗೂ ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ನಿಮ್ಮ ಮಾಹಿತಿಗಾಗಿ, 1980ನೇ ದಶಕದಿಂದಲೇ ಹೋಂಡಾ ಸಣ್ಣ ವಿಮಾನಗಳ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಇದರ ಪರಿಣಾಮವೆಂಬಂತೆ 2003ನೇ ಇಸವಿಯಲ್ಲಿ ಹೋಂಡಾಜೆಟ್ ಅಭಿವೃದ್ಧಿ ಕಾರ್ಯ ಆರಂಭಗೊಂಡಿತ್ತು.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಪ್ರಸ್ತುತ ಹೋಂಡಾಜೆಟ್ ವಿಮಾನಗಳ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿರುವುದು ಖುಷಿಯ ಸಂದೇಶವಾಗಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಇದಕ್ಕೆ ಜನರಲ್ ಎಲೆಕ್ಟ್ರಿಕ್ ಸಹಯೋಗದಿಂದ ಸಣ್ಣದಾದ ಜಿಇ ಹೋಂಡಾ ಎಚ್‌ಎಫ್120 ಟರ್ಬೊಫ್ಯಾನ್ ಜೆಟ್ ಎಂಜಿನ್ (2050 lb-ft) ಅಭಿವೃದ್ಧಿಪಡಿಸಲಾಗಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಈ ಎರಡು ಎಂಜಿನ್‌ಗಳು ಹೋಂಡಾಜೆಟ್ ವಿಮಾನವನ್ನು ಗಂಟೆಗೆ ಗರಿಷ್ಠ 780 ಕೀ.ಮೀ. ವೇಗತೆಯಲ್ಲಿ ಸಂಚರಿಸಲು ಸಹಕಾರಿಯಾಗಲಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಹಾಗೆಯೇ ಟೇಕ್ ಆಫ್‌ ಮಾಡಲು 4000 ಅಡಿ ಹಾಗೂ ಲ್ಯಾಡಿಂಗ್ ಮಾಡಲು 3,000 ಅಡಿ ರನ್ವೇ ಸಾಕಾಗಲಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಜೆಟ್ ವಿಮಾನಗಳ ಪೈಕಿ ತನ್ನದೇ ಆದ ಯೂನಿಕ್ ವಿನ್ಯಾಸ ಪಡೆದುಕೊಂಡಿರುವ ಹೋಂಡಾಜೆಟ್‌ನಲ್ಲಿ ಹಿಂದುಗಡೆಯ ಬದಲು ಎರಡು ರೆಕ್ಕೆಗಳ ಮೇಲ್ಗಡೆಯಾಗಿ ಎಂಜಿನ್ ಲಗತ್ತಿಸಲಾಗಿರುತ್ತದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಈ ವಿಶಿಷ್ಟ ವಿನ್ಯಾಸ ತಂತ್ರಗಾರಿಕೆಯನ್ನು ಹೋಂಡಾ 'ಓವರ್ ದಿ ವಿಂಗ್ ಎಂಜಿನ್ ಮೌಂಟ್' (OTWEM) ಎಂದು ವಿಶ್ಲೇಷಿಸಿದೆ. ಇದರ ಪ್ರಮುಖ ಪ್ಲಸ್ ಪಾಯಿಂಟ್ ಏನೆಂದರೆ ಹೆಚ್ಚು ಕ್ಯಾಬಿನ್ ಸ್ಥಳಾವಕಾಶ, ಶಬ್ದ ಕಡಿಮೆ ಹಾಗೂ ಗರಿಷ್ಠ ಇಂಧನ ದಕ್ಷತೆ ನೀಡಲು ನೆರವಾಗುತ್ತದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಇದೇ ತಂತ್ರಜ್ಞಾನದ ಮೂಲಕ 66 ಘನ ಅಡಿ (cubic feet) ಲಗ್ಗೇಜ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೋಂಡಾಜೆಟ್ ಹೊಂದಿರುತ್ತದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಇನ್ನುಳಿದಂತೆ ಕಡಿಮೆ ಪ್ರಮಾಣದ ನೈಟ್ರೋಜನ್ ಡೈಓಕ್ಸೈಡ್ ಹೊರಸೂಸುವ ಹೋಂಡಾಜೆಟ್ ಹೆಚ್ಚು ಇಂಧನ ಕ್ಷಮತೆಯನ್ನು ನೀಡಲಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಇನ್ನು ಕೆಲವೇ ಕೆಲವು ವಿಮಾನ ತಯಾರಕ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಹೋಂಡಾಜೆಟ್, ನಿರ್ಮಾಣದಲ್ಲಿ ಅಲ್ಯೂಮಿನಿಯಂ ಬದಲು ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಅಂತೆಯೇ ಹೋಂಡಾಜೆಟ್, ನ್ಯಾಚುರಲ್ ಲ್ಯಾಮಿನರ್ ಫ್ಲೋ (ಎನ್‌ಎಲ್‌ಎಫ್) ತಂತ್ರಜ್ಞಾನವನ್ನು ಅನುಸರಿಸಿದೆ. ಇದು ಏರೋಡೈನಾಮಿಕ್ ಸುಧಾರಿಸಲು ನೆರವಾಗಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಮೇಲೆ ತಿಳಿಸಿದ ಎಲ್ಲ ಅಂಶಗಳ ನೆರವಿನಿಂದ ಆಧುನಿಕ ಜೆಟ್ ವಿಮಾನಗಳಲ್ಲಿ ಗುರುತಿಸಿಕೊಂಡಿರುವ ಹೋಂಡಾ ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಅಂದ ಹಾಗೆ ಹೋಂಡಾಜೆಟ್ ಹಗುರ ಭಾರದ ಖಾಸಗಿ ಜೆಟ್ ವಿಮಾನಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಇದು ಗರಿಷ್ಠ ಏಳು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಇನ್ನು ಹೋಂಡಾಜೆಟ್ ಮೊಬೈಲ್ ಡಿಸೈನ್ ನಿಯಂತ್ರಿತ ಕ್ಯಾಬಿನ್ ಪಡೆದುಕೊಂಡಿದೆ. ಅಂದರೆ ಪ್ರಯಾಣಿಕರು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಳಕೆ ಮಾಡುವ ಮುಖಾಂತರ ಕ್ಯಾಬಿನ್ ಒಳಗಡೆಯ ಆಡಿಯೋ, ಲೈಟಿಂಗ್, ತಾಪಮಾನ, ಎಲೆಕ್ಟ್ರೋಕ್ರೋಮಿಕ್ ವಿಂಡೋ ಸಿಸ್ಟಂಗಳನ್ನು ನಿಯಂತ್ರಿಸಬಹುದಾಗಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಏತನ್ಮಧ್ಯೆ ಕಾಕ್‌ಪಿಟ್ (ವಿಮಾನದಲ್ಲಿ ಚಾಲಕನು ಕೂರುವ ಕೋಣೆ) ಮುಂದಿನ ತಲೆಮಾರಿನ ಗಾರ್ಮಿನ್ ಜಿ300 ಆಲ್ ಗ್ಲಾಸ್ ಆವಿಯೋನಿಕ್ಸ್ ಸಿಸ್ಟಂ ಜತೆ ಡ್ಯುಯಲ್ ಟಚ್ ಸ್ಕ್ರೀನ್ ಕಂಟ್ರೋಲರ್ ಹಾಗೂ 14 ಇಂಚಿನ ಲ್ಯಾಂಡ್‌ಸ್ಕೇಪ್ ಹೈ ರಿಸೊಲ್ಯೂಷನ್ ಡಿಸ್‌ಪ್ಲೇ ಪಡೆದುಕೊಳ್ಳಲಿದೆ. ಇಂತಹ ಬಳಕೆದಾರ ಸ್ನೇಹಿ ಕಾಕ್‌ಪಿಟ್ ಅನ್ನು ಓರ್ವ ಅಥವಾ ಇಬ್ಬರು ಪೈಲಟ್‌ಗಳು ನಿಯಂತ್ರಿಸಬಹುದಾಗಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಅಂದ ಹಾಗೆ ಮೊತ್ತ ಮೊದಲ ಹೋಂಡಾಜೆಟ್ ವಿಮಾನಕ್ಕೆ, ಹಸಿರು ಮುತ್ತಿನ ಜತೆಗೆ ಚಿನ್ನ ಪಟ್ಟಿಯಂತಹ ಬಣ್ಣಗಳನ್ನು ಬಳಿಯಲಾಗಿದೆ. ಇನ್ನುಳಿದಂತೆ ಬೆಳ್ಳಿ, ಕೆಂಪು, ಹಳದಿ ಹಾಗೂ ನೀಲಿ ಬಣ್ಣಗಳಲ್ಲಿಯೂ ಲಭ್ಯವಿರಲಿದೆ.

ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

ಸದ್ಯ ಹೋಂಡಾ ಏರ್‌ಕ್ರಾಫ್ಟ್ ಸಂಸ್ಥೆಯು ವಿಶ್ವದ್ಯಾಂತ ಸಂಪರ್ಕ ಜಾಲ, ಡೀಲರ್ ಹಾಗೂ ವಿತರಕರನ್ನು ಅಭಿವೃದ್ಧಿಪಡಿಸುವುದರಲ್ಲಿ ಕಾರ್ಯ ಮಗ್ನರಾಗಿದ್ದು, ಚೊಚ್ಚಲ ಜೆಟ್ ವಿಮಾನ ಹಾರಾಟಕ್ಕೂ ಮೊದಲು ಗ್ರಾಹಕರಿಗೆ ಎಲ್ಲ ಸೌಲಭ್ಯಗಳನ್ನು ಸಿದ್ಧಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಸಿಇಒ ಮಿಚಿಮಸ ಫ್ಯುಜಿನೊ ಅಭಿಪ್ರಾಯಪಟ್ಟಿದ್ದಾರೆ.

Most Read Articles

Kannada
English summary
Honda, the manufacturer of affordable and fuel efficient passenger cars, motorcycles, ATVs, lawn mowers, engines and humanoid robots, will soon also be called the manufacturer of jet aircrafts.
Story first published: Friday, May 23, 2014, 18:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X