ಈ 'ಜೀಬ್ರಾ ಕ್ರಾಸಿಂಗ್' ವಿಡಿಯೋ ನೋಡಿ ನಗ್ತೀರಾ, ಆದ್ರೆ ನಾನು ಹಿಂಗೇ ಅಲ್ವಾ ಅಂತ ಬೇಸ್ರ ಮಾಡ್ಕೋತೀರಾ..

Written By:

ಹೌದು, ಕೆಲವು ಮಂದಿ ಎಷ್ಟರ ಮಟ್ಟಿಗೆ ಪ್ರಜ್ಞೆ ಇಲ್ಲದೆ ವರ್ತಿಸುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಯೊಂದನ್ನು ನೀವು ಈ ವಿಡಿಯೋ ನೋಡಿ ತಿಳಿದುಕೊಳ್ಳಬಹುದು.

ಜೀಬ್ರಾ ಕ್ರಾಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಎಲ್ರುಗೂ ಸಾಮಾನ್ಯವಾಗಿ ರಸ್ತೆಯ ಮೇಲಿರುವ ಈ ಬಿಳಿ ಪಟ್ಟೆಯ ಬಗ್ಗೆ ಅರಿವಿರುತ್ತದೆ ಅಂತ ನೀವ್ ತಿಳ್ಕೊಂಡ್ ಇದ್ರೆ ಈ ವಿಡಿಯೋ ನೋಡಿದ ಮೇಲೆ ಖಂಡಿತ ನೀವು ತಿಳಿದಿರುವುದು ತಪ್ಪು ಎನ್ನಿಸದೇ ಇರಲಾರದು.

ಅತಿ ಹೆಚ್ಚಿನ ಜನಸಂದಣಿ ಇರುವ ಭಾರತದ ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಕೋಲ್ಕತ್ತಾ ನಗರದಲ್ಲಿ ಈ ವಿಡಿಯೋ ಮಾಡಲಾಗಿದೆ.

ಜೀಬ್ರಾ ಕ್ರಾಸಿಂಗ್ ಬಗ್ಗೆ ವಾಹನ ಚಾಲಕರು ಹೊಂದಿರವ ನಿರ್ಲಕ್ಷ ಎತ್ತಿ ತೋರಿಸುವ ವಿಡಿಯೋ ಒಂದನ್ನು ರೇಡಿಯೋ ಒನ್ ಸಂಸ್ಥೆ ಬಿಡುಗಡೆಗೊಳಿಸಿದೆ.

ವಿದ್ಯಾವಂತರಾದ ನಾವೇ ಈ ರೀತಿಯ ನಿಯಮಗಳನ್ನು ಗಾಳಿಗೆ ತೋರಿ ನಮಗಿಷ್ಟ ಬಂದಂತೆ ನೆಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಈ ವಿಡಿಯೋ ನೋಡುವಾಗ ನಿಮಗೆ ನಗೆಗಡಲಿನಲ್ಲಿ ತೇಲಿಸುವುದುಂಟು, ಆದರೆ ನೀವು ಮಾಡುವ ತಪ್ಪಿನಿಂದ ಪಾದಾಚಾರಿಗಳಿಗೆ ಅದರಲ್ಲಿಯೂ ಹಿರಿಯ ಜೀವಗಳಿಗೆ ಎಷ್ಟರ ಮಟ್ಟಿಗೆ ತೊಂದರೆ ಆಗುತ್ತಿದೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ.

ಆದ್ರೆ, ಈ ವಿಡಿಯೋ ನೋಡಿದ ನಿಮಗೆ ಅರ್ಥವಾಗುವ ಅಂಶವೇನೆಂದರೆ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಜಗಳವಾಡದೆ ತಮ್ಮ ತಪ್ಪು ತಿಳಿದುಕೊಂಡು ಹಿಂದೆ ಸರಿದಿದ್ದಾರೆ.

ಪ್ರತಿಯೊಂದು ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಿ, ಇನ್ನಾದರೂ ನಮ್ಮ ಜವಾಬ್ದಾರಿಗಳನ್ನು ತಿಳಿದುಕೊಂಡು ಮುನ್ನೆಡೆಯೋಣ.

Click to compare, buy, and renew Car Insurance online

Buy InsuranceBuy Now

English summary
A RJ's brilliant pranks ensures taht people start respecting the Zebra Crossing at intersections.
Please Wait while comments are loading...

Latest Photos