ಬಾಹ್ಯಾಕಾಶದಲ್ಲಿರುವ ಅಪ್ಪನಿಗೆ ಮಗಳ ಗಿನ್ನೆಸ್ ದಾಖಲೆಯ ಸಂದೇಶ

By Nagaraja

ಇದು ಅಪ್ಪ-ಮಗಳ ಸುಂದರ ಕಥೆ. ಇದರ ಆರಂಭ ಅಲ್ಲಿ ದೂರದ ಅಮೆರಿಕದಲ್ಲಿ ಒಂದು ಸುಂದರ ಸನ್ನಿವೇಶದಲ್ಲಿ. ಅಪ್ಪನನ್ನು ಅತಿಯಾಗಿ ಪ್ರೀತಿಸುವ ಮಗಳು. ಆದರೆ ಅಂತರಿಕ್ಷದಲ್ಲಿ ಅಧ್ಯಯನದಲ್ಲಿ ತೊಡಗಿರುವ ತಂದೆಯನ್ನು ಭೇಟಿಯಾಗುವುದು ಹೋಗಿ ಸಂದೇಶ ರವಾನಿಸಲಾಗಂತಹ ದು:ಖಕರ ಪರಿಸ್ಥಿತಿ.

ಹಾಗಿರುವಾಗ 12ರ ಹರೆಯದ ಈ ಟೆಕ್ಸಾಸ್‌ನ ಹೌಂಸ್ಟನ್ ಬಾಲಕಿ ಸ್ಟೆಫನಿಗೆ ಹ್ಯುಂಡೈ ಮೋಟಾರು ಸಂಸ್ಥೆ ನೆರವಾಗುತ್ತದೆ. ಅಲ್ಲದೆ ಈ ಬೃಹತ್ ಸವಾಲನ್ನು ಸ್ವೀಕರಿಸಲು ಹ್ಯುಂಡೈ ನಿರ್ಧರಿಸಿಯೇ ಬಿಡುತ್ತದೆ. ಕೊನೆಗೂ ಗಗನದಲ್ಲಿರುವ ಅಪ್ಪನ ಕಣ್ಣಿಗೆ ಕಾಣುವಂತಹ ರೀತಿಯಲ್ಲಿ ಮಗಳ ಸಂದೇಶ ರವಾನೆಯಾಗುತ್ತದೆ. ಇವೆಲ್ಲ ಹೇಗೆ ಸಾಧ್ಯವಾಯಿತು ? ರೋಚಕ ಕಥೆ ಮುಂದುವರಿಯುವುದು ಫೋಟೊ ಸ್ಲೈಡ್ ನಲ್ಲಿ...

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಈ ಮಹತ್ವಾಂಕಾಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿರುವ ಹ್ಯುಂಡೈ ತಂಡವು ವಿಸ್ತಾರವಾಗಿ ಹರಡಿರುವ ನೆವೆಡಾ ಮರುಭೂಮಿಯಲ್ಲಿ 5.55 ಕೀ.ಮೀ. ಸುತ್ತಳತೆಯಲ್ಲಿ (5,556,411.86 m² (59,808,480.26 ft²)) ಮಗಳ ಸಂದೇಶವನ್ನು ಚಿತ್ರ ರೂಪದಲ್ಲಿ ರಚಿಸುತ್ತದೆ.

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಈ ಬೃಹತ್ ಯೋಜನೆಗೆ 11 ಹ್ಯಂಡೈ ಜೆನಿಸಿಸ್ ಕಾರುಗಳನ್ನು ಬಳಕೆ ಮಾಡಲಾಗಿದೆ. ಅಲ್ಲದೆ ಮಗಳ ಸಂದೇಶವನ್ನು ಬಾಹ್ಯಾಕಾಶದಲ್ಲೇ ಇದ್ದುಕೊಂಡು ಅಪ್ಪ ಓದುತ್ತಾರೆ. ಅದು ಈ ರೀತಿಯಲ್ಲಿತ್ತು "ಸ್ಟೆಫ್ ಲವ್ಸ್ ಯು" ('Steph ♥'s You').

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಹೌದು, ಎಂತಹ ಕಲ್ಲು ಹೃದಯವನ್ನೊಮ್ಮೆ ಮಿಡಿಯುವಂತೆ ಮಾಡುತ್ತಿದೆ ಈ ಅಪ್ಪ-ಮಗಳ ಪ್ರೀತಿ. ಅಲ್ಲದೆ 300 ಕೀ.ಮೀ. ದೂರದಲ್ಲಿನ ಅಂತರಾಷ್ಟ್ರೀಯ ಬಾಹ್ಯಾಕಾಶ ಕಕ್ಷೆಯಿಂದ ಈ ಸಂದೇಶವನ್ನು ಸ್ಪಷ್ಟವಾಗಿ ಕಾಣಬಹುದಾಗಿತ್ತು.

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಹ್ಯುಂಡೈನ ಈ ಬೃಹತ್ ಯೋಜನೆಗಾಗಿ ಕೊರಿಯಾ, ಯುರೋಪ್ ಹಾಗೂ ಅಮೆರಿಕದ ತಜ್ಞರು ಕೈಜೋಡಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ರಚಿಸಿರುವ ಚಿತ್ರ ಸಂದೇಶವು ನ್ಯೂಯಾರ್ಕ್ ಸಿಟಿಯ ಸೆಂಟ್ರಾಲ್ ಪಾರ್ಕ್ ಗೆ ಸಮಾನವಾಗಿದೆ ಅಂದರೆ ನಂಬಬಹುದೇ ?

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

'ಮೆಸೇಜ್ ಟು ಸ್ಪೇಸ್' ಎಂಬ ಥೀಮ್ ನಲ್ಲಿ ರಚನೆಯಾದ ಈ 5.5 ಕೀ.ಮೀ. ವಿಸ್ತಾರದ ಟೈರ್ ಟ್ರ್ಯಾಕ್ ಚಿತ್ರವು ಪ್ರಸ್ತುತ ಗಿನ್ನೆಸ್ ದಾಖಲೆಯನ್ನು ಬರೆದಿದೆ.

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಪ್ರಸ್ತುತ ಚಿತ್ರ ಸಂದೇಶವನ್ನು ರಚಿಸಲು ಹ್ಯುಂಡೈಗೆ ಎದುರಾದ ಸವಾಲು ಅಷ್ಟಿಷ್ಟಲ್ಲ. ಆದರೆ ನಿಖರ ಯೋಜನೆ ಹಾಗೂ ಅವಿರತ ಪ್ರಯತ್ನದಿಂದಾಗಿ 12ರ ಬಾಲಕಿಯ ಕನಸು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಬಳಿಕ ಅತೀವ ಸಂಭ್ರಮ ವ್ಯಕ್ತಪಡಿಸಿದ ಬಾಲಕಿ ಸ್ಟೆಫಿನಿ, ಅಪ್ಪ ಬಾಹ್ಯಾಕಾಶದಲ್ಲಿ ಅನೇಕ ರೋಚಕ ಚಿತ್ರಗಳನ್ನು ಸೆರೆ ಹಿಡಿದಿರುತ್ತಾರೆ. ಆದರೆ ತಾವು ಕಳುಹಿಸಿರುವ ಸಂದೇಶವು ಅತ್ಯಂತ ವಿಶೇಷವಾಗಿರುತ್ತದೆ ಎಂದಿದ್ದಾರೆ.

ಅಪ್ಪನಿಗೆ ಭೂಮಂಡಲದಿಂದ ಅಂತರಿಕ್ಷಕ್ಕೆ ಸಂದೇಶ ರವಾನಿಸಿದ ಪುತ್ರಿ

ಇಷ್ಟೆಲ್ಲ ಆದ ಬಳಿಕ ಕಾರುಗಳಿಂದ ಬಾಹ್ಯಾಕಾಶಕ್ಕೆ ಸಂದೇಶ ರವಾನಿಸಲು ಸಾಧ್ಯವೇ ? ಎಂಬ ಪ್ರಶ್ನೆಗೂ ಉತ್ತರ ದೊರಕಿದಂತಾಗಿದೆ. ಕೊನೆಗೆ ನಮ್ಮಲ್ಲಿ ಮೂಡುವ ಭಾವನೆ ಈ ಪ್ರಪಂಚದಲ್ಲಿ ಅಸಾಧ್ಯವಾಗಿರುವುದು ಏನೂ ಇಲ್ಲ ಅಲ್ಲವೇ? ಈಗ ಈ ರೋಚಕ ವಿಡಿಯೋಗಾಗಿ ಮುಂದೆ ಕ್ಲಿಕ್ಕಿಸಿ...

ಬಾಹ್ಯಾಕಾಶದಲ್ಲಿರುವ ಅಪ್ಪನಿಗೆ ಮಗಳ ಸಂದೇಶ - ನೋಡಿ ರೋಚಕ ವಿಡಿಯೋ

ತೆರೆಯ ಹಿಂದೆ ನಡೆದಿದ್ದೇನು? ವೀಕ್ಷಿಸಿ ರೋಚಕ ವಿಡಿಯೋ

Most Read Articles

Kannada
English summary
Hyundai's spectacular tire track image record sends daughter's message to father in space
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X