ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ತುರ್ತು ಲ್ಯಾಂಡಿಂಗ್

By Nagaraja

ಶೀರ್ಷಿಕೆ ಓದಿ ಗಾಬರಿಯಾಗಬೇಡಿರಿ! ವಿಷಯ ಏನೆಂದರೆ ದೇಶದ ಹೆಸರಾಂತ ಯಮುನಾ ಎಕ್ಸ್‌ಪ್ರೆಸ್‌ವೇ (Yamuna Expressway) ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಮೀರಾಜ್ 2000 (IAF's Mirage 2000) ಯುದ್ಧ ವಿಮಾನವು ಯಶಸ್ವಿ ಭೂಸ್ಪರ್ಶವನ್ನು ಮಾಡಿದೆ.

ಸಾಮಾನ್ಯವಾಗಿ ವಿಮಾನಗಳಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಲಾದ ರನ್ವೇ ಟ್ರ್ಯಾಕ್ ನಲ್ಲಿ ಲ್ಯಾಂಡಿಂಗ್‌ಗೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಇವೆಲ್ಲದಕ್ಕಿಂತಲೂ ವಿಭಿನ್ನವಾಗಿ ತುರ್ತು ಪರಿಸ್ಥಿತಿ ವೇಳೆ ಲ್ಯಾಂಡಿಂಗ್‌ಗಾಗಿ ಇಂತಹದೊಂದು ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಅಪತ್ಕಾಲ ಪರಿಸ್ಥಿತಿಯಲ್ಲಿ ತುರ್ತು ಲ್ಯಾಂಡಿಂಗ್‌ಗಾಗಿ ಯಮುನಾ ಎಕ್ಸ್ ಪ್ರೆಸ್ ವೇ ಹೆದ್ದಾರಿಗಳನ್ನು ಬಳಕೆ ಮಾಡಲಾಗುವುದು. ಇದರಂತೆ ಅಧಿಕಾರಿಗಳ ಸನ್ಮುಖದಲ್ಲಿ ಭಾರತ ವಾಯುಪಡೆಯ ವಿಮಾನವು ತುರ್ತು ಭೂಸ್ಪರ್ಶವನ್ನು ಕಂಡಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ದೆಹಲಿ ಹೊರವಲಯದಲ್ಲಿರುವ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಪರೀಕ್ಷೆ ಮಾಡಲಾಗಿತ್ತು. ಇದಕ್ಕಾಗಿ ಭಾರತ ವಾಯುಸೇನೆಯ ಮೀರಾಜ್ 2000 ಯುದ್ಧ ವಿಮಾನವನ್ನು ಆಯ್ಕೆ ಮಾಡಲಾಗಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಈಗ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೂಲಕ ದೇಶದ ರಕ್ಷಣಾ ಪಡೆ ಇನ್ನಷ್ಟು ಬಲಿಷ್ಠಗೊಂಡಿದೆ. ಈ ಸಂಬಂಧ ವಾಯುಪಡೆ ಅಧಿಕಾರಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಯುದ್ಧ ಕಾಲ ಪರಿಸ್ಥಿತಿಯಲ್ಲಿ ಶತ್ರು ರಾಷ್ಟ್ರಗಳು ವಿಮಾನ ನಿಲ್ದಾಣಗಳನ್ನು ಗುರಿ ಮಾಡುವ ಸಾಧ್ಯತೆಯಿದೆ ಅಥವಾ ವಿಮಾನ ನಿಲ್ದಾಣಗಳ ಸೇವೆಯನ್ನು ಮುಚ್ಚುಗಡೆಗೊಳಿಸಬೇಕಾಗುತ್ತದೆ. ಇಂತಹ ಅಪತ್ಕಾಲ ಪರಿಸ್ಥಿತಿ ತಲೆದೋರಿದ್ದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಹೆದ್ದಾರಿಗಳಲ್ಲೇ ಲ್ಯಾಂಡಿಂಗ್ ಪ್ರಕ್ರಿಯೆಗೆ ಅನುವು ಮಾಡಿಕೊಡಲಾಗುವುದು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಎಎಫ್ ಹಿರಿಯ ಅಧಿಕಾರಿಯೊಬ್ಬರು, "1971 ಭಾರತ-ಪಾಕಿಸ್ತಾನ ಯುದ್ಧ ವೇಳೆಯಲ್ಲಿ ಪಾಕ್ ಜೆಟ್ ವಿಮಾನವೊಂದು ಆಗ್ರಾ ವರೆಗೆ ಬಂದು ತಲುಪಿತ್ತು. ಈಗ ಆಗ್ರಾ-ಲೋಕ್ನೋ ಎಕ್ಸ್ ಪ್ರೇ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ತೆರೆದುಕೊಳ್ಳುವ ಮೂಲಕ ದೇಶದ ವಾಯು ಕಾರ್ಯಾಚರಣೆಯು ಇನ್ನಷ್ಟು ಬಲಗೊಂಡಿರುವುದಾಗಿ" ತಿಳಿಸಿದ್ದಾರೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಇನ್ನು ಮೀರಾಜ್ 2000 ಯುದ್ಧ ವಿಮಾನದ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ಮೂಲತ: ಫ್ರಾನ್ಸ್‌ನ ದಸ್ಸಾಲ್ಟ್ ಮೀರಾಜ್ 2000 ಆಗಿದೆ. ಬಹು ಕಾರ್ಯಾಚರಣೆಯ ಸಿಂಗಲ್ ಎಂಜಿನ್ ನಾಲ್ಕನೇ ಜನರೇಷನ್ ಜೆಟ್ ಯುದ್ಧ ವಿಮಾನ ಇದಾಗಿದ್ದು, ದಸ್ಸಾಲ್ಟ್ ಎವಿವೇಷನ್ ಉತ್ಪಾದಿಸುತ್ತದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

1980ರಲ್ಲಿ ಭಾರತೀಯ ವಾಯುಪಡೆಯು ಫ್ರಾನ್ಸ್ ನಿಂದ 49ರಷ್ಟು ಮೀರಾಜ್ 2000 ಜೆಟ್ ಗಳನ್ನು ಖರೀದಿಸಿತ್ತು. ಈ ಪೈಕಿ 42 ಸಿಂಗಲ್ ಸೀಟರ್ ಹಾಗೂ ಏಳು ಟು ಸೀಟರ್ ವಿಮಾನಗಳು ಒಳಗೊಂಡಿದ್ದವು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಇನ್ನು 1999ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಮೀರಾಜ್ 2000 ನಿರ್ಣಾಯಕ ಪಾತ್ರ ವಹಿಸಿತ್ತು. ಅಲ್ಲದೆ ಅತ್ಯಂತ ಎತ್ತರದ ಹಿಮಾಲಯ ಪರ್ವತ ಶಿಖರಗಳ ನಡುವೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿತ್ತು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಇನ್ನು 2006ರಲ್ಲಿ ಪರಿಷ್ಕೃತ ಮೀರಾಜ್ 2000 ಜೆಟ್ ವಿಮಾನ ಖರೀದಿಗೆ ಭಾರತೀಯ ವಾಯುಪಡೆ ಒಲವು ತೋರಿತ್ತು. ಇದರಂತೆ ನಡೆದ ಬಹುಕೋಟಿ ಒಪ್ಪಂದದಂತೆ 2015ರಲ್ಲಿ ಮತ್ತೆರಡು ಮೀರಾಜ್ 2000 ಭಾರತೀಯ ವಾಯುಸೇನೆಗೆ ಬಂದು ಸೇರಿತ್ತು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧ ವಿಮಾನ ಲ್ಯಾಂಡಿಂಗ್ ಯಶಸ್ವಿ ಪರೀಕ್ಷೆ

ಒಟ್ಟಿನಲ್ಲಿ ವಾಯು ಶಕ್ತಿಯಲ್ಲಿ ಭಾರತ ಇನ್ನಷ್ಟು ಪ್ರಬಲಗೊಂಡಿದೆಯೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.

ರೋಚಕ ವೀಡಿಯೋ ವೀಕ್ಷಿಸಿ

Most Read Articles

Kannada
Read more on ವಿಮಾನ plane
English summary
IAF’s Mirage 2000 successfully lands on Yamuna Expressway near Mathura as part of trial to use National Highways for emergency landing.
Story first published: Thursday, May 21, 2015, 14:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X