ಭಾರತದಲ್ಲಿ ನಿರ್ಮಾಣವಾದ ಮೊದಲ ಕಾರು ಯಾವುದು?

By Nagaraja

1897ನೇ ಇಸವಿಯಲ್ಲಿ ಭಾರತೀಯ ರಸ್ತೆಯಲ್ಲಿ ಮೊದಲ ಬಾರಿಗೆ ಕಾರು ಓಡಾಟ ಆರಂಭಿಸಿತ್ತು. ಅಲ್ಲದೆ 1930ರ ವರೆಗೂ ವಿದೇಶಗಳಿಂದ ದೇಶಕ್ಕೆ ಕಾರುಗಳನ್ನು ಆಮದು ಮಾಡಲಾಗುತ್ತಿತ್ತು. ಅಂದರೆ ಭಾರತೀಯ ವಾಹನೋದ್ಯಮ ನಿಜಕ್ಕೂ 1940ರ ದಶಕದಲ್ಲಿ ಆರಂಭವಾಗಿತ್ತು.

ನೀವು ತಿಳಿದುಕೊಳ್ಳಬೇಕಾದ ವಾಹನ ಸತ್ಯಗಳಿಗಾಗಿ ಭೇಟಿ ಕೊಡಿರಿ

ತದಾ ಬಳಿಕ ಕಳೆದ ಏಳು ದಶಕಗಳಿಂದಲೂ ಕಾರುಗಳು ಭಾರತೀಯ ಜೀವನ ಶೈಲಿಯ ಅವಿಭಾಜ್ಯ ಘಟಕವಾಗಿ ಬೆಳೆದು ಬಂದಿದೆ. ಅಷ್ಟಕ್ಕೂ ಭಾರತದಲ್ಲಿ ನಿರ್ಮಾಣವಾದ ಮೊದಲ ಯಾರು ಯಾವುದು ಗೊತ್ತೇ?

ಭಾರತದಲ್ಲಿ ನಿರ್ಮಾಣವಾದ ಮೊದಲು ಕಾರು ಯಾವುದು?

ಇದು ಯಾವುದೇ ಪ್ರೀಮಿಯರ್ ಪದ್ಮನಿ ಅಥವಾ ಇನ್ಯಾವುದೇ ಕಾರು ಅಲ್ಲ. ಭಾರತದಲ್ಲಿ ನಿರ್ಮಾಣವಾದ ಮೊದಲ ಕಾರಿನ ಶ್ರೇಯಸ್ಸು 'ಹಿಂದೂಸ್ತಾನ್ 10'ಗೆ ಸೇರುತ್ತದೆ. ಇದು ಬ್ರಿಟನ್ ನ ಮೋರಿಸ್ 10 ಸಿರೀಸ್ ಎಂ ಕಾರಿನ ಮರು ಲಾಂಛನ (ರಿ ಬ್ಯಾಡ್ಜ್) ಕಾರಾಗಿದೆ.

ಭಾರತದಲ್ಲಿ ನಿರ್ಮಾಣವಾದ ಮೊದಲು ಕಾರು ಯಾವುದು?

1940ರ ದಶಕದಲ್ಲಿ ಹಿಂದೂಸ್ತಾನ್ ಮೋಟಾರು ಸಂಸ್ಥೆಯು ಗುಜರಾತ್ ನ ಸಣ್ಣದಾದ ಪೋರ್ಟ್ ಓಕಾ ಘಟಕದಲ್ಲಿ ದೇಶದ ಮೊದಲ ಕಾರಾಗಿರುವ ಹಿಂದೂಸ್ತಾನ್ 10 ಕಾರನ್ನು ನಿರ್ಮಿಸಿತ್ತು.

ಭಾರತದಲ್ಲಿ ನಿರ್ಮಾಣವಾದ ಮೊದಲು ಕಾರು ಯಾವುದು?

ಹಿಂದೂಸ್ತಾನ್ 10 ಕಾರು 1.3 ಲೀಟರ್ ಎಂಜಿನ್ ಪಡೆದುಕೊಂಡಿತ್ತು. ಇದು 37 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿತ್ತು.

ಭಾರತದಲ್ಲಿ ನಿರ್ಮಾಣವಾದ ಮೊದಲು ಕಾರು ಯಾವುದು?

ದೇಶದ ಮೊದಲ ಕಾರು ಗಂಟೆಗೆ 100 ಕೀ.ಮೀ. ಗಳಷ್ಟು ವೇಗದಲ್ಲಿ ಸಾಮರ್ಥ್ಯವನ್ನು ಹೊಂದಿರುವುದು ಅಂದಿನ ಕಾಲದ ವಿಶೇಷ.

ಭಾರತದಲ್ಲಿ ನಿರ್ಮಾಣವಾದ ಮೊದಲು ಕಾರು ಯಾವುದು?

ಈಗ ವಿಂಟೇಜ್ ಕಾರುಗಳ ಸಾಲಿಗೆ ಸೇರಿಕೊಂಡಿರುವ ಹಿಂದೂಸ್ತಾನ್ 10, ದಷ್ಟಪುಷ್ಟವಾದ ದೇಹಾಕೃತಿಯನ್ನು ಪಡೆದುಕೊಂಡಿದ್ದು ಒಟ್ಟಾರೆ 934 ಕೆ.ಜಿ ತೂಕವನ್ನು ಪಡೆದಿತ್ತು.

ನಿಮ್ಮ ಮಾಹಿತಿಗಾಗಿ...

ನಿಮ್ಮ ಮಾಹಿತಿಗಾಗಿ...

'ಭಾರತೀಯ ಕೈಗಾರಿಕೋದ್ಯಮದ ಜನಕ' ಹಾಗೂ ಟಾಟಾ ಸಂಸ್ಥೆಯ ಸಂಸ್ಥಾಪಕ ಜಮ್ಷೇಟ್ಜಿ ನಸ್ಸೆರ್‌ವಾಂಜಿ ಟಾಟಾ (1839-1904) ಅವರು ದೇಶದ ಪ್ರಪ್ರಥಮ ಕಾರು ಮಾಲಿಕರಾಗಿದ್ದಾರೆ.

Most Read Articles

Kannada
English summary
Do you know Which Was the India’s First Production Car?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X