950 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡ ಈ ಸೇತುವೆಯ ವಿಶೇಷತೆ ಏನ್ ಗೊತ್ತಾ?

Written By:

ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಅತಿಉದ್ದದ ಸೇತುವೆಯೊಂದು ಭಾರತದಲ್ಲಿ ನಿರ್ಮಾಣವಾಗಿದ್ದು, ಬರೋಬ್ಬರಿ ರೂ.950 ಕೋಟಿ ವೆಚ್ಚ ಮಾಡಲಾಗಿದೆ. ಇದರಿಂದ ಅಸ್ಸಾಂ ಮತ್ತು ಅರುಣಾಚಲಪ್ರದೇಶ ನಡುವೆ ಸುಲಭ ಸಂಪರ್ಕ ಸಾಧ್ಯವಾಗಲಿದ್ದು, ಇದೇ ಮೇ ಅಂತ್ಯಕ್ಕೆ ಅಧಿಕೃತವಾಗಿ ಸೇವೆಗೆ ಲಭ್ಯವಾಗಲಿದೆ.

ಸೇತುವೆಯ ಉದ್ದ
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆಯ ಉದ್ದ ಕೇಳಿದ್ರೆ ನಿಮಗೆ ಅಚ್ಚರಿಯಾಗದೆ ಇರಲಾರದು. ಸುಮಾರು 9.5 ಕಿಲೋ ಮೀಟರ್ ಉದ್ದ ಹೊಂದಿರುವ ಈ ಸೇತುವೆ ಸದ್ಯದಲ್ಲೇ ಸೇವೆಗೆ ಲಭ್ಯವಾಗಲಿದೆ.

ಸೇತುವೆ ನಿರ್ಮಾಣಕ್ಕೆ 950 ಕೋಟಿ ವೆಚ್ಚ
ಹೌದು, ಇದು ಭಾರತದಲ್ಲಿ ಅಷ್ಟೇ ಅಲ್ಲದೇ ಏಷ್ಯಾ ಖಂಡದಲ್ಲೇ ಅತಿಉದ್ದದ ಸೇತುವೆಯಾಗಿದ್ದು, ಬೃಹತ್ ಯೋಜನೆಗಾಗಿ ರೂ.950 ಕೋಟಿ ಖರ್ಚು ಮಾಡಲಾಗಿದೆ.

ಯಾವ ಯಾವ ನಗರಗಳಿಗೆ ಸಂಪರ್ಕ?
ಅಸ್ಸಾಂನ ಧೋಲಾ ಮತ್ತು ಸಾಡಿಯಾವನ್ನು ಸಂಪರ್ಕಿಸಲಿರುವ ಇದು, ದೇಶದ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಭಾರತೀಯ ಸೇನೆಗೂ ಇದು ಬಳಕೆಯಾಗುವಂತೆ ನಿರ್ಮಾಣ ಮಾಡಲಾಗಿದೆ.

ಅಧಿಕ ವೆಚ್ಚದ ಸೇತುವೆ ಏಕೆ?
ಅಸ್ಸಾಂನ ಧೋಲಾ ಮತ್ತು ಸಾಡಿಯಾವನ್ನು ಬ್ರಹ್ಮಪುತ್ರ ನದಿ ಪ್ರತ್ಯೇಕಿಸಿದ್ದ ಪರಿಣಾಮ ಸಂಚಾರಕ್ಕಾಗಿ ರಸ್ತೆ ಮಾರ್ಗವನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಸೇತುವೆ ನಿರ್ಮಾಣ ಸಾಕಷ್ಟು ಸಹಕಾರಿಯಾಗಲಿದ್ದು, ಈ ಭಾಗದ ದೋಣಿ ದುರಂತಗಳನ್ನು ತಪ್ಪಿಸಬಹುದಾಗಿದೆ.

ಸೇತುವೆ ನಿರ್ಮಾಣದಿಂದ ಲಾಭವೇನು?
ಸದ್ಯ ಅರುಣಾಚಲವನ್ನು ತಲುಪಬೇಕೇಂದ್ರೆ ಅಸ್ಸಾಂನ ಗುವಾಹಟಿಯಿಂದ 186 ಕಿ.ಮೀ. ದೂರದ‌ ತೇಜ್‌ಪುರ ಮೂಲಕ ಹಾದು ಹೋಗಬೇಕಾಗಿದೆ. ತೇಜ್‌ಪುರದಿಂದ ಅರುಣಾಚಲ ಗಡಿ ತಲುಪಲು 2 ದಿನ ತೆಗೆದುಕೊಳ್ಳುತ್ತಿದೆ. ಆದ್ರೆ ಹೊಸ ಸೇತುವೆಯಿಂದ ಈ ಎಲ್ಲಾ ಕಿರಿಕಿರಿ ತಪ್ಪಲಿದೆ.

ಭಾರತೀಯ ಸೇನೆಗೆ ಸಹಾಯ
ಹೌದು, ಹೊಸ ಸೇತುವೆಯಿಂದ ಭಾರತೀಯ ಸೇನೆಗೆ ಅತಿಹೆಚ್ಚು ಉಪಯೋಗವಾಗಲಿದೆ. ತುರ್ತು ಸಂದರ್ಭಗಳಲ್ಲಿ ಭೂ ಮಾರ್ಗದ ಮೂಲಕ ಅರುಣಾಚಲಪ್ರದೇಶ ತಲುಪಬಹುದಾಗಿದ್ದು, ಸೇನೆಪಡೆ ರವಾನಿಸಲು ಅನುಕೂಲಕರವಾಗಲಿದೆ.

ಮೇ ಅಂತ್ಯಕ್ಕೆ ಲೋಕಾರ್ಪಣೆ
ಇನ್ನು 950 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವರುವ ಸಾಡಿಯಾ ಸೇತುವೆಯ ಅಂತಿಮ ಹಂತದ ಕಾಮಗಾರಿಗಳು ಮುಗಿದಿದ್ದು, ಮೇ ಹೊತ್ತಿಗೆ ಸಂಚಾರಕ್ಕೆ ಮುಕ್ತವಾಗಲಿದೆ.

ಉದ್ಘಾಟನೆಗೆ ಬರಲಿದ್ದಾರೆ ಪ್ರಧಾನಿ ಮೋದಿ
ಸೇತುವೆ ಉದ್ಘಾಟನೆ ಕಾರ್ಯಕ್ರಮ ಕುರಿತಂತೆ ಮಾಹಿತಿ ನೀಡಿರುವ ಅಸ್ಸಾಂ ಸಿಎಂ ಸರ್ಬಾನಂದ ಸೋನವಾಲ್, ಲೋಕಾರ್ಪಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಬಗ್ಗೆ ಹರ್ಷವ್ಯಕ್ತಪಡಿಸಿದ್ದಾರೆ.

ಚೀನಾ ಕ್ಯಾತೆಗೆ ಟಾಂಗ್
ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಚೀನಾ ಜತೆ ಅರುಣಾಚಲಪ್ರದೇಶ ಗಡಿ ಹಂಚಿಕೊಂಡಿದ್ದರೂ ಆ ರಾಜ್ಯದಲ್ಲಿ ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲ. ಹೀಗಾಗಿ ಸಾಡಿಯಾ ಸೇತುವೆ ಮೂಲಕ ಸೇನಾಪಡೆ ರವಾನಿಸಲು ಸಾಕಷ್ಟು ಅನುಕೂಲತೆ ಕಲ್ಪಿಸಲಿದೆ.

ದೋಣಿ ದುರಂತಗಳಿಗೆ ಬ್ರೇಕ್
ಸೇತುವೆ ಇಲ್ಲದ ಕಾರಣ ಈ ಭಾಗದಲ್ಲಿ ದೋಣಿ ಸಂಚಾರವನ್ನೇ ಬಹುತೇಕ ಜನ ನೆಚ್ಚಿಕೊಂಡಿದ್ದು, ಪ್ರವಾಹದ ಸಂದರ್ಭಗಳಲ್ಲಿ ಆಗಾಗ ದೋಣಿ ದುರಂತ ನಡೆಯುತ್ತಲೇ ಇರುತ್ತವೆ. ಹೀಗಾಗಿ ಹೊಸ ಯೋಜನೆಯಿಂದ ಈ ಭಾಗದ ಜನತೆಗೆ ಹೆಚ್ಚು ಅನುಕೂಲವಾಗುತ್ತೆ.

ಕೇವಲ ಸಾಡಿಯಾ ಸೇತುವೆ ಅಷ್ಟೇ ಅಲ್ಲದೇ ಏಷ್ಯಾದಲ್ಲೇ ಅತಿ ದೊಡ್ಡದ ಡಬಲ್ ಡೆಕ್ಕರ್ ರೈಲ್ವೆ-ರಸ್ತೆ ಸೇತುವೆ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಪೂರ್ವ ಭಾರತದ ಬ್ರಹ್ಮಪುತ್ರ ನದಿಯಲ್ಲಿ ತಲೆಯೆತ್ತಲಿರುವ 'ಬೋಗಿಬೀಲ್' ರೈಲು ಹಾಗೂ ರಸ್ತೆ ಸೇತುವೆಯು 2018ರ ವೇಳೆಗೆ ಲೋಕರ್ಪಣೆಯಾಗಲಿದೆ. 

ಅಸ್ಸಾಂನ ದಿಬ್ರುಘರ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ರೈಲ್ವೆ ಹಾಗೂ ರಸ್ತೆ ಸೇತುವೆಯು ಬ್ರಹ್ಮಪುತ್ರ ನದಿಯಲ್ಲಿ ಉತ್ತರ ಹಾಗೂ ದಕ್ಷಿಣ ಭಾಗಗಳನ್ನು ಸಂಪರ್ಕಿಸಲಿದೆ.

ಈ ಡಕ್ಕರ್ ಡೆಕ್ಕರ್ ರೈಲ್ವೆ-ರೆಸ್ತೆ ಸೇತುವೆಯ ವಿಶೇಷತೆ ಏನೆಂದರೆ ಕಳಗಡೆಯಿಂದ ಎರಡು ಹಾದಿಯ ರೈಲ್ವೆ ಟ್ರ್ಯಾಕ್ ಹಾಗೂ ಮೇಲ್ಪಾಗದಲ್ಲಿ ಮೂರು ಹಾದಿಗಳ ರಸ್ತೆ ಮಾರ್ಗವು ಜೋಡಣೆಯಾಗಲಿದೆ.

ಸೇತುವೆ ನಿರ್ಮಾಣಕ್ಕಾಗಿ ಬ್ರಹ್ಮಪುತ್ರ ನದಿಯ ಅಗಲವನ್ನು 10 ಕೀ.ಮೀ. ಗಳಿಂದ 5 ಕೀ.ಮೀ. ಗಳಷ್ಟು ಕಿರಿದು ಮಾಡಬೇಕಾಗುತ್ತದೆ. ಅಲ್ಲದೆ ಸವೆತವನ್ನು ತಡೆಯಬಲ್ಲ ಬಹಳ ಗಟ್ಟಿಮುಟ್ಟಾದ 'ಗೈಡ್ ಬಂಡ್ಸ್' ಆಧಾರ ಸ್ತಂಭಗಳನ್ನು ನಿರ್ಮಿಸಲಾಗುತ್ತದೆ. 

ವಿಶಿಷ್ಟತೆ ಕಾಪಾಡಿಕೊಂಡಿರುವ ಈ ರೈಲ್ವೆ ಹಾಗೂ ರಸ್ತೆ ಸೇತುವೆಯು 4.9 ಕೀ.ಮೀ.ಗಳಷ್ಟು (4940 ಮೀಟರ್) ಉದ್ದವನ್ನು ಹೊಂದಿರಲಿದೆ.

ಇಲ್ಲಿ ಬ್ರಹ್ಮ ಪುತ್ರ ನದಿಯ ಉತ್ತರದಿಂದ ದಕ್ಷಿಣ ಭಾಗಕ್ಕೆ ಸಂಪರ್ಕ ಸೇರಿದಂತೆ 74 ಕೀ.ಮೀ. ಗಳಷ್ಟು ಉದ್ದದ ರೈಲ್ವೆ ಮಾರ್ಗವು ನಿರ್ಮಾಣವಾಗಲಿದೆ.

ಸಂಪೂರ್ಣ ಬೋಗಿ ಬೀಲ್ ಸೇತುವೆ ಯೋಜನೆಗೆ ಬರೋಬ್ಬರಿ 4,857 ಕೋಟಿ ರುಪಾಯಿಗಳನ್ನು ಅಂದಾಜಿಸಲಾಗಿದ್ದು, ಸೇತುವೆ ನಿರ್ಮಾಣಕ್ಕಾಗಿ ಸ್ವಿಡನ್ ಹಾಗೂ ಡೆನ್ಮಾರ್ಕ್ ತಂತ್ರಗಾರಿಕೆಗಳನ್ನು ಬಳಕೆ ಮಾಡಲಾಗುತ್ತದೆ.

ಈ ಎರಡು ಮಹತ್ತರ ಸೇತುವೆಗಳ ಕಾಮಗಾರಿ ಪೂರ್ಣಗೊಂಡಲ್ಲಿ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಂತಹ ಕಡಿಮೆ ಅಭಿವೃದ್ಧಿ ಹೊಂದಿರುವ ರಾಜ್ಯಗಳಿಗೆ ನೆರವಾಗಲಿದೆ.

Read more on ಭಾರತ india
Story first published: Tuesday, April 18, 2017, 15:43 [IST]
English summary
Rean in Kannada About India's Longest Bridge open Shortly in Assam.
Please Wait while comments are loading...

Latest Photos