ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿಯನ್ನು ವರ್ಷಾಂತ್ಯದಲ್ಲಿ ಅಥವಾ ಮುಂಬರುವ ವರ್ಷಾರಂಭದಲ್ಲಿ ಪರೀಕ್ಷೆ ನೆಡಸಲಾಗುವುದು.

By Nagaraja

ನೆರೆಯ ಚೀನಾ ಹಾಗೂ ಪಾಕಿಸ್ತಾನದಿಂದ ಪದೇ ಪದೇ ಎದ್ದು ಬರುತ್ತಿರುವ ಭೀತಿಗೆ ತಕ್ಕ ಉತ್ತರವನ್ನೇ ನೀಡಲು ಭಾರತದ ಅಕ್ಷರಶ: ಸಿದ್ಧತೆ ನಡೆಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯದ ಅತ್ಯಾಧುನಿಕ ದೂರಗಾಮಿ ಅಗ್ನಿ 5 ಖಂಡಾಂತರ ಕ್ಷಿಪಣಿ ಪ್ರಜ್ವಲಿಸಲಿದ್ದು, ಕ್ಷಣ ಮಾತ್ರದಲ್ಲಿ ಚೀನಾವನ್ನು ನೆಲಸಮಗೊಳಿಸುವ ತಾಕತ್ತು ಭಾರತಕ್ಕೆ ಸಿಗಲಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಒಡಿಸ್ಸಾದ ವೀಲ್ಹರ್ ದ್ವೀಪದಲ್ಲಿ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಲು ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿ ಮಾಡಿರುವ ಅಗ್ನಿ 5 ನ್ಯೂಕ್ಲಿಯರ್ ಮಿಸೈಲ್ ಪ್ರಯೋಗಿಕ ಪರೀಕ್ಷೆಯನ್ನು ಡಿಸೆಂಬರ್ ಅಂತ್ಯದಲ್ಲಿ ಅಥವಾ 2017 ಜನವರಿ ತಿಂಗಳಲ್ಲಿ ನಡೆಸಲಾಗುವುದು.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಹೆಗ್ಗಳಿಕೆಯ ಅಗ್ನಿ 5 ಮಿಸೈಲ್, ಸರಿ ಸುಮಾರು 5,000ದಿಂದ 5,500 ಕೀ.ಮೀ. ಗಳಷ್ಟು ದೂರದ ವರೆಗೂ ಗುರಿಯಿಡುವಷ್ಟು ಬಲಶಾಲಿಯಾಗಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಅಗ್ನಿ 5 ಖಂಡಾಂತರ ಅಣ್ವಸ್ತ್ರ ಕ್ಷಿಪಣಿಯು ಸಂಪೂರ್ಣ ಪಾಕಿಸ್ತಾನ ಸೇರಿದಂತೆ ಉತ್ತರ ಚೀನಾದ ಭಾಗವನ್ನು ಕ್ರಮಿಸಲಿದೆ. ಅತ್ತ ಯುರೋಪ್ ಅಂಚಿನ ವರೆಗೂ ತಲುಪಲಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಪ್ರಸಕ್ತ ಸಾಲಿನಲ್ಲಷ್ಟೇ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಗೆ 35ನೇ ಸದಸ್ಯ ರಾಷ್ಟ್ರವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಭಾರತಕ್ಕೀಗ ಅತ್ಯಾಧುನಿಕ ತಂತ್ರಗಾರಿಕೆಯ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಹಾದಿ ಸುಗಮಗೊಂಡಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಎಂಟಿಸಿಆರ್ ಕ್ಷಿಪಣಿ ಕ್ಲಬ್ ನಲ್ಲಿ ಖಾಯಂ ಸದಸ್ಯತ್ವ ಗಳಿಕೆಯೊಂದಿಗೆ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸುವ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡುವ ಅವಕಾಶವನ್ನು ಭಾರತ ಪಡೆದಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಇದಕ್ಕೂ ಮೊದಲು 48 ರಾಷ್ಟ್ರಗಳ ಪರಮಾಣು ಸರಬರಾಜುದಾ ರಾಷ್ಟ್ರಗಳ ಸದಸ್ಯತ್ವ (ಎನ್ಎಸ್‌ಜಿ) ಪಡೆಯುವ ಭಾರತದ ಯತ್ನಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ನಾಗರಿಕ ಪರಮಾಣು ಸಹಕಾರಕ್ಕೆ ಜಪಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಇದೀಗ ಕೊನೆಯ ಹಂತದ ಟೆಸ್ಟಿಂಗ್ ಹಮ್ಮಿಕೊಳ್ಳಲಿರುವ ಅಗ್ನಿ 5 ಸೇವೆಯನ್ನು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ ಎಫ್ ಸಿ) ಟೆಸ್ಟಿಂಗ್ ನಡೆಸಲಿದೆ. ಈ ವಿಭಾಗವು ಭಾರತದ ಅಣ್ವಸ್ತ್ರ ಆಯುಧ ಶಾಲೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಇದಕ್ಕೂ ಮೊದಲು 2012 ಎಪ್ರಿ ಮತ್ತು 2013 ಸೆಪ್ಟೆಂಬರ್ ತಿಂಗಳಲ್ಲಿ ಅನುಕ್ರಮವಾಗಿ ಮೊದಲೆರಡು ಹಂತದ ಟೆಸ್ಟಿಂಗ್ ಪ್ರಕ್ರಿಯೆಯನ್ನು ಅಗ್ನಿ 5 ಮಿಸೈಲ್ ದಾಟಿ ಬಂದಿತ್ತು. ತದಾ ಬಳಿಕ 2015 ಜನವರಿಯಲ್ಲಿ ಮೂರನೇ ಹಂತದ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಇದು 50 ಟನ್ ಮಿಸೈಲ್ ದಾಳಿಯನ್ನಿಡುವ ಸಾಮರ್ಥ್ಯವನ್ನು ಹೊಂದಿರಲಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಇದರೊಂದಿಗೆ ಭಾರತ 5,000ದಿಂದ 5,500 ಕೀಮೀ. ದೂರದ ವರೆಗೆ ಅಣ್ವಸ್ತ್ರ ದಾಳಿ ನಡೆಸಬಹುದಾದ ವಿಶ್ವದ ಕೆಲವೇ ಕೆಲವು ಸೂಪರ್ ಪವರ್ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಪ್ರಸ್ತುತ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಮಾತ್ರ ಈ ಶಕ್ತಿಯನ್ನು ಹೊಂದಿದೆ.

ಪ್ರಜ್ವಲಿಸಲಿರುವ ಅಗ್ನಿ 5 ಜ್ವಾಲೆ; ಕ್ಷಣ ಮಾತ್ರದಲ್ಲಿ ಚೀನಾ ನೆಲಸಮ!

ಪೃಥ್ವಿ ಹಾಗೂ ಧನುಶ್ ಜೊತೆಗೆ ಅಗ್ನಿ 1, ಅಗ್ನಿ 2 ಮತ್ತು ಅಗ್ನಿ 3 ಕ್ಷಿಪಣಿಗಳು ಪಾಕಿಸ್ತಾನವನ್ನು ಗುರಿ ಮಾಡಿದ್ದಲ್ಲಿ ಅಗ್ನಿ 4 ಮತ್ತು ಅಗ್ನಿ 5 ಕ್ಷಿಪಣಿಗಳು ವಿಶೇಷವಾಗಿಯೂ ಚೀನಾ ಭೀತಿಗೆ ತಕ್ಕ ಉತ್ತರವನ್ನೇ ನೀಡಲಿದೆ.

Most Read Articles

Kannada
English summary
India is getting ready to test its Agni-V intercontinental ballistic missile
Story first published: Wednesday, December 14, 2016, 12:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X