ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಐದನೇ ತಲೆಮಾರಿನ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಲಿದೆ. ತನ್ಮೂಲಕ ಗಡಿಯಾಚೆ ತಗಾದೆ ಎತ್ತುತ್ತಿರುವ ಚೀನಾ ಮತ್ತು ಪಾಕಿಸ್ತಾನಗೆ ಭಾರತ ಚಾಟಿಯೇಟು ನೀಡಲಿದೆ.

By Nagaraja

ಪ್ರಸಕ್ತ ಸಾಲಿನಲ್ಲಷ್ಟೇ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಗೆ ಭಾರತ 35ನೇ ಸದಸ್ಯ ರಾಷ್ಟ್ರವಾಗಿ ಅವಿರೋಧವಾಗಿ ಆಯ್ಕೆಯಾಗಿತ್ತು. ಇದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಭಾರತದ ಹಾದಿಯು ಸುಗಮಗೊಂಡಿತ್ತು. ಎಂಟಿಸಿಆರ್ ಕ್ಷಿಪಣಿ ಕ್ಲಬ್ ನಲ್ಲಿ ಖಾಯಂ ಸದಸ್ಯತ್ವ ಗಳಿಕೆಯೊಂದಿಗೆ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸುವ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡುವ ಅವಕಾಶವನ್ನು ಭಾರತ ಪಡೆದಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯು ಅನಧಿಕೃತ ಜಾಗತಿಕ ಕ್ಷಿಪಣಿ ಪ್ರಸರಣವನ್ನು ತಡೆಯುವ ಮತ್ತು 500 ಕೆ.ಜಿಯ ಅಣ್ವಸ್ತ್ರಗಳನ್ನು ಹೊತ್ತು ಕನಿಷ್ಠ 300 ಕೀ.ಮೀ. ದೂರ ಚಿಮ್ಮುವ ಕ್ಷಿಪಣಿ ತಂತ್ರಜ್ಞಾನದ ಹಸ್ತಾಂತರದ ಗುರಿಯೊಂದಿಗೆ 1987ರಲ್ಲಿ ಜಿ7 ದೇಶಗಳಾದ ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನೆಡ, ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಒಟ್ಟು ಸೇರಿ ಸ್ಥಾಪಿಸಿತ್ತು.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಎಂಟಿಸಿಆರ್ ಸ್ಥಾಪನೆಗೊಂಡ ಬಳಿಕ ಅನೇಕ ಖಂಡಾಂತರ ಕ್ಷಿಪಣಿ ಯೋಜನೆಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಬಳಿಕವಿದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಮಾನವ ರಹಿತ ವೈಮಾನಿಕ ನೌಕೆ, ರಾಕೆಟ್ ಸಿಸ್ಟಂ ಮತ್ತು ಸಮೂಹ ನಾಶದ ಅಸ್ತ್ರಗಳಿಗೂ ಪಸರಿಸಿತ್ತು.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಎಂಟಿಸಿಆರ್ ನಿಷೇಧಿತ ವಸ್ತುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಸಾಫ್ಟ್ ವೇರ್ ಮತ್ತು ಟೆಕ್ನಾಲಜಿ ಅನೆಕ್ಸ್ ಎಂಬುದಾಗಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಎಂಟಿಸಿಆರ್ ಖಾಯಂ ಸದಸ್ಯತದೊಂದಿಗೆ ಭಾರತವೀಗ ಸದಾ ಸಮಸ್ಯೆಗಳನ್ನು ಎದುರಿಸುತ್ತಿರುವ ಚೀನಾ ಮತ್ತು ಪಾಕಿಸ್ತಾನ ವಿರುದ್ಧ ತಂತ್ರವನ್ನು ಹೂಡಲು ಸಜ್ಜಾಗುತ್ತಿದೆ. ಈ ಸಂಬಂಧ ನವದೆಹಲಿ ಮತ್ತು ಮೊಸ್ಕೋ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಭಾರತ ಮತ್ತು ರಷ್ಯಾ ಜಂಟಿಯಾಗಿ 600 ಕೀ.ಮೀ. ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬಲ್ಲ ಮುಂದಿನ ತಲೆಮಾರಿನ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಬ್ರಹ್ಮೋಸ್ ಕ್ಷಿಪಣಿಗಳು ಗುರಿಯನ್ನಿಟ್ಟು ನಿಖರ ದಾಳಿ ಮಾಡುವಲ್ಲಿ ಸಕ್ಷಮವಾಗಿರಲಿದೆ. ಇದು ಪಾಕ್ ನಂತಹ ಶತ್ರು ರಾಷ್ಟ್ರಗಳಿಂದ ಎದ್ದು ಬರುವ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿರಲಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ರಷ್ಯಾ ಜೊತೆಗೆ ಮಿಲಿಟರಿ ಮಿತ್ರತ್ವವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿರುವ ಭಾರತ ಸಣ್ಣ ಪ್ರಮಾಣದ ಕ್ಷಿಪಣಿ ಮತ್ತು ಜಲಾಂತರ್ಗಾಮಿ ಯುದ್ಧ ನೌಕೆಗಳನ್ನು ನಿರ್ಮಿಸಲಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಬ್ರಹ್ಮೋಸ್ ಈಗಿನ ವ್ಯಾಪ್ತಿ 300 ಕೀ.ಮೀ.ಗಳಾಗಿದ್ದು, ಪಾಕಿಸ್ತಾನಕ್ಕೆ ನಿಖರ ಗುರಿಯಿಡುವುದು ಕಷ್ಟ ಸಾಧ್ಯವೆನಿಸಿದೆ. ಆದರೆ ಮುಂದಿನ ತಲೆಮಾರಿನ ಬ್ರಹ್ಮೋಸ್ ಮಿಸೈಲ್ ನಿರ್ಮಾಣದೊಂದಿಗೆ ನಿಖರ ದಾಳಿಯಿಡಲಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಇದರೊಂದಿಗೆ ಗಡಿಯಲ್ಲಿ ಚೀನಾ ಅತಿಕ್ರಮಣವನ್ನು ಹತ್ತಿಕ್ಕಲು ಭಾರತಕ್ಕೆ ಸಹಾಯವಾಗಲಿದೆ. ಭಾರತವೀಗ ಅಮೆರಿಕದಿಂದ ಡ್ರೋನ್ ಯುದ್ಧ ವಿಮಾನಗಳನ್ನು ಖರೀದಿಸಬಹುದಾಗಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಪವರ್ತ ಶ್ರೇಣಿಯ ಅಡಗುತಾಣಗಳನ್ನು ಬ್ರಹ್ಮೋಸ್ ಮಿಸೈಲ್ ಗುರಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈಗ ಇದರ ವ್ಯಾಪ್ತಿ ವಿಸ್ತರಿಸುವ ಯೋಜನೆಯಲ್ಲಿ ಮಗ್ನವಾಗಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ವಿಯೆಟ್ನಾಂ ಕೂಡಾ ಬ್ರಹ್ಮೋಸ್ ಮಿಸೈಲ್ ವ್ಯವಸ್ಥೆಯನ್ನು ಆಸಕ್ತಿಯನ್ನು ತೋರಿದೆ. ಇದು ಮಿಲಿಟರಿ ತಂತ್ರಜ್ಞಾನವನ್ನು ರಫ್ತು ಮಾಡುವ ಮೂಲಕ ಬೃಹತ್ ಮಟ್ಟದ ವ್ಯಾಪಾರವನ್ನು ಕುದುರಿಸಲು ಭಾರತಕ್ಕೆ ನೆರವಾಗಲಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಬ್ರಹ್ಮೋಸ್ ಸೂಪರ್ ಸೋನಿಕ್ ಕ್ಷಿಪಣಿಗಳ ವಿಶೇಷಯೆಂದರೆ ಇದನ್ನು ಜಲಾಂತರ್ಗಾಮಿ ನೌಕೆ, ಯುದ್ಧ ಹಡಗು, ಯುದ್ಧ ವಿಮಾನ ಅಥವಾ ನೆಲದಿಂದ ಗುರಿಯಿಡಬಹುದಾಗಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಮಿಸೈಲ್ ಭಾರತೀಯ ಭೂಸೈನ್ಯ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಸೇವೆಯಲ್ಲಿದೆ.

ಚೀನಾ-ಪಾಕ್ ಮೇಲೆ 'ಬ್ರಹ್ಮಾಸ್ತ್ರ' ಪ್ರಯೋಗಿಸಲಿರುವ ಭಾರತ

ಶಬ್ದ ವೇಗ ಮ್ಯಾಕ್ 2.8 ರಿಂದ 3.0 ವೇಗದಲ್ಲಿ ಸಂಚರಿಸುವ ಬ್ರಹ್ಮೋಸ್ ಕ್ಷಿಪಣಿಯ ಮ್ಯಾಕ್ 7 ಹಾಗೂ ಮ್ಯಾಕ್ 8 ಆವೃತ್ತಿಗಳು ಅಭಿವೃದ್ಧಿ ಹಂತದಲ್ಲಿದೆ.

ಇವನ್ನೂ ಓದಿ:

ಇವನ್ನೂ ಓದಿ:

01. ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು

02. ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

03. ಭಾರತ-ಪಾಕ್ ಯುದ್ಧಕಾಲ ಪರಿಸ್ಥಿತಿ ಎದುರಾದರೆ..?

Most Read Articles

Kannada
English summary
India, Russia to develop 600-km range cruise missiles
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X