ದೇಶದ ಅತಿ ಉದ್ದದ ಸೇತುವೆ ಮೇಲೆ ಮೊದಲ ಅಪಘಾತ ಪ್ರಕರಣ..!!

Written By:

ಅಸ್ಸಾಂನಲ್ಲಿ ಮೊನ್ನೆಯಷ್ಟೇ ಸೇವೆಗೆ ಲಭ್ಯವಾಗಿರುವ ದೇಶದ ಅತಿ ಉದ್ದದ ಸೇತುವೆ ಮೇಲೆ ಮೊದಲ ಬಾರಿಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಘಟನೆಯ ಸಂಪೂರ್ಣ ವಿವರಣೆ ಇಲ್ಲಿದೆ.

ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ 9.5 ಕಿ.ಮಿ ಉದ್ದದ ಸೇತುವೆಯ ಮೇಲೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಕಳೆದು ತಿಂಗಳು 27ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು, ಆದ್ರೆ 950 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಬ್ರಿಡ್ಜ್‌ನಲ್ಲಿ ಕೆಲವು ಅಗತ್ಯ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ.

ಈ ಭಾಗದಲ್ಲಿ ಮಿಲಟರಿ ವಾಹನಗಳ ಸಂಚಾರಕ್ಕೆ ಹಾಗೂ ಪ್ರವಾಸದ್ಯೋಮ ಉತ್ತೇಜನಕ್ಕಾಗಿ ಈ ಬ್ರಿಡ್ಜ್ ನಿರ್ಮಾಣವಾಗಿದ್ದರು, ಅತಿ ಉದ್ದದ ಸೇತುವೆಯಲ್ಲಿ ಸುರಕ್ಷಾ ವಿಧಾನಗಳಿಲ್ಲದ ಹಿನ್ನೆಲೆ ಅಪಘಾತ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ನಿನ್ನೇಯಷ್ಟೇ ನಡೆದ ಅಪಘಾತದಲ್ಲಿ ಓರ್ವ ಬೈಕ್ ಸವಾರ ಕೈ ಕಳೆದುಕೊಂಡಿದ್ದು, ಮತ್ತೊಂದು ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾನೆ.

ಅನೂಪ್(27) ಮತ್ತು ಜ್ಯೋತಿ (18) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅತಿ ಉದ್ದದ ಸೇತುವೆಯ ಮಧ್ಯೆ ಯಾವುದೇ ತುರ್ತು ಸೇವಾ ಕ್ಯಾಂಪ್ ಇಲ್ಲದ ಹಿನ್ನೆಲೆ ಚಿಕಿತ್ಸೆಗಾಗಿ ಪರದಾಟುವಾಗುವ ಪರಿಸ್ಥಿತಿ ಎದುರಾಗಿದೆ.

ಇನ್ನು ಭಾರತದಲ್ಲಿ ಅಷ್ಟೇ ಅಲ್ಲದೇ ಏಷ್ಯಾ ಖಂಡದಲ್ಲೇ ಇದು ಅತಿಉದ್ದದ ಸೇತುವೆಯಾಗಿದ್ದು, ಬೃಹತ್ ಯೋಜನೆಗಾಗಿ ರೂ.950 ಕೋಟಿ ಖರ್ಚು ಮಾಡಲಾಗಿದೆ.

ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿ ಸೇತುವೆ ನಿರ್ಮಾಣ ಮಾಡಲಾಗಿದ್ದರು, ಸೇತುವೆ ಮಧ್ಯ ಭಾಗದಲ್ಲಿ ತುರ್ತು ಸೇವಾ ಕ್ಯಾಂಪ್‌ಗಳನ್ನು ತೆರೆಯುವಂತೆ ಸ್ಥಳೀಯ ಆಗ್ರಹಿಸಿದ್ದಾರೆ.

ಅಸ್ಸಾಂನ ಧೋಲಾ ಮತ್ತು ಸಾಡಿಯಾವನ್ನು ಬ್ರಹ್ಮಪುತ್ರ ನದಿ ಪ್ರತ್ಯೇಕಿಸಿದ್ದ ಪರಿಣಾಮ ಸಂಚಾರಕ್ಕಾಗಿ ರಸ್ತೆ ಮಾರ್ಗವನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಇತ್ತು. ಆದ್ರೆ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆ ಎಲ್ಲದಕ್ಕೂ ಪರಿಹಾರ ಒದಗಿಸಿದೆ.

Read more on ಅಪಘಾತ accident
English summary
Read in Kannada about india's longest bridge sees its first accident
Please Wait while comments are loading...

Latest Photos