ಭಾರತೀಯ ವಾಯುಸೇನೆಯ ಸಕ್ರಿಯ ಯುದ್ಧ ವಿಮಾನಗಳು

By Nagaraja

ಪ್ರಪಂಚದಲ್ಲಿ ಅತಿ ದೊಡ್ಡ ವಾಯುಸೇನೆಗಳಲ್ಲಿ ಒಂದಾಗಿರುವ ಭಾರತೀಯ ವಾಯುಸೇನೆ 1932 ಅಕ್ಟೋಬರ್ 8ರಂದು ಸ್ಥಾಪಿತವಾಗಿತ್ತು. ಭಾರತೀಯ ವಾಯುಮಂಡಲದ ರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದ್ದು, "ನಭ ಸ್ಪರ್ಶಮ್ ದೀಪ್ತಮ್" (Touch the Sky with Glory) ಇದರ ಧ್ಯೇಯ ವಾಕ್ಯವಾಗಿದೆ.

ಇಂದಿನ ಈ ಲೇಖನದಲ್ಲಿ ಭಾರತೀಯ ವಾಯುಸೇನೆಯ ಕೆಲವು ಸಕ್ರಿಯ ಯುದ್ಧ ವಿಮಾನಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ನಂಬಿಕೆ ನಮ್ಮದ್ದು.

ಸುಖೋಯ್ ಸು-30ಎಕೆಐ

ಸುಖೋಯ್ ಸು-30ಎಕೆಐ

ಮೂಲ: ರಷ್ಯಾ/ಭಾರತ

ಪಾತ್ರ: ಬಹು ಪಾತ್ರಧಾರಿ ಯುದ್ಧ ವಿಮಾನ

ಸುಖೋಯ್ ಸು-30ಎಕೆಐ ಯುದ್ಧ ವಿಮಾನಗಳನ್ನು ರಷ್ಯಾದಿಂದ ಭಾರತ ಪಡೆದಿತ್ತು. 2002ರಲ್ಲಿ ಮೊದಲ ಸುಖೋಯ್ ವಿಮಾನವನ್ನು ರಷ್ಯಾದಿಂದ ಪಡೆಯಲಾಗಿತ್ತು. ಬಳಿಕ 2004 ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡಲಾಗಿತ್ತು. ಒಟ್ಟಾರೆಯಾಗಿ ಸುಖೋಯ್ ಯುದ್ಧ ವಿಮಾನಗಳು ಭಾರತೀಯ ವಾಯು ರಕ್ಷಣಾ ವಿಭಾಗದ ಬೆನ್ನಲುಬು ಎನಿಸಿಕೊಂಡಿದೆ.

ಎಚ್ ಎಎಲ್ ತೇಜಸ್

ಎಚ್ ಎಎಲ್ ತೇಜಸ್

ಮೂಲ: ಭಾರತ

ಪಾತ್ರ: ಬಹು ಪಾತ್ರಧಾರಿ ಯುದ್ಧ ವಿಮಾನ

ಎಚ್ ಎಎಲ್ ತೇಜಸ್ ಒಂದು ಸಿಂಗಲ್ ಸೀಟ್, ಸಿಂಗಲ್ ಜೆಟ್ ಎಂಜಿನ್, ಬಹು ಪಾತ್ರಧಾರಿ ಹಗುರ ಯುದ್ಧ ವಿಮಾನವಾಗಿದೆ. ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಗೊಳಿಸಿದೆ.

ಮಿಕೋಯಾನ್ ಮಿಗ್-29

ಮಿಕೋಯಾನ್ ಮಿಗ್-29

ಮೂಲ: ಸೋವಿಯತ್ ಒಕ್ಕೂಟ

ಪಾತ್ರ: ಯುದ್ಧ ವಿಮಾನ

ಮೂಲತ: ರಷ್ಯಾದಿಂದ ಆಮದು ಮಾಡಲಿರುವ ಮಿಕೋಯಾನ್ ಮಿಗ್-29 ಟ್ವಿನ್ ಎಂಜಿನ್ ಯುದ್ಧ ವಿಮಾನವಾಗಿದೆ. ಇದನ್ನು ಆರಂಭಿಕ ಘಟ್ಟದಲ್ಲಿ ಮಿಕೋಯಾನ್ ಡಿಸೈನ್ ಬ್ಯುರೋ ವಿನ್ಯಾಸಗೊಳಿಸಿತ್ತು. ನಿಮ್ಮ ಮಾಹಿತಿಗಾಗಿ, ಭಾರತ ಮಿಗ್-29 ಖರೀದಿಸಿದ ಮೊದಲ ಅಂತರಾಷ್ಟ್ರೀಯ ರಾಷ್ಟ್ರವೆನಿಸಿಕೊಂಡಿತ್ತು.

ದಸ್ಸಾಲ್ಟ್ ಮೀರಾಜ್ 2000

ದಸ್ಸಾಲ್ಟ್ ಮೀರಾಜ್ 2000

ಮೂಲ: ಫ್ರಾನ್ಸ್

ಪಾತ್ರ: ಬಹು ಪಾತ್ರಧಾರಿ ಯುದ್ಧ ವಿಮಾನ

ದಸ್ಸಾಲ್ಟ್ ಮೀರಾಜ್ 2000 ಫ್ರಾನ್ಸ್ ನ ನಾಲ್ಕನೇ ತಲೆಮಾರಿನ ಬಹು ಪಾತ್ರಧಾರಿ ಸಿಂಗಲ್ ಎಂಜಿನ್ ಜೆಟ್ ಫೈಟರ್ ಆಗಿದೆ. ಇದನ್ನು ಫ್ರಾನ್ಸ್ ರಕ್ಷಣಾ ವಿಭಾಗಕ್ಕಾಗಿ ದಸ್ಸಾಲ್ಟ್ ಎವಿಯೇಷನ್ ನಿರ್ಮಿಸಿತ್ತು. 2000ನೇ ದಶಕದಲ್ಲಿ ದಸ್ಸಾಲ್ಟ್ ಮೀರಾಜ್ ಖರೀದಿಗಾಗಿ ಭಾರತೀಯ ವಾಯು ಸೇನೆ ಆದೇಶ ಹೊರಡಿಸಿತ್ತು.

ಮಿಕೋಯಾನ್ ಗುರೆವಿಚ್ ಮಿಗ್-21

ಮಿಕೋಯಾನ್ ಗುರೆವಿಚ್ ಮಿಗ್-21

ಮೂಲ: ಸೋವಿಯತ್ ಒಕ್ಕೂಟ

ಪಾತ್ರ: ಯುದ್ಧ ವಿಮಾನ

ಮಿಕೋಯಾನ್ ಗುರೆವಿಚ್ ಮಿಗ್-21 ಸೂಪರ್ ಸೋನಿಕ್ ಜೆಟ್ ಯುದ್ಧ ವಿಮಾನವನ್ನು ವಿಕೋಯಾನ್ ಗುರೆವಿಚ್ ಡಿಸೈನ್ ವಿಭಾಗವು ಅಭಿವೃದ್ಧಪಡಿಸಿತ್ತು. ಪ್ರಸ್ತುತ ಯುದ್ಧ ವಿಮಾನ ಭಾರತ-ಪಾಕಿಸ್ತಾನ ಹಾಗೂ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.

ಸೆಪ್ ಕ್ಯಾಟ್ ಜಾಗ್ವಾರ್

ಸೆಪ್ ಕ್ಯಾಟ್ ಜಾಗ್ವಾರ್

ಮೂಲ: ಬ್ರಿಟನ್/ಭಾರತ

ಪಾತ್ರ: ನೆಲ ದಾಳಿ ನಡೆಸುವ ವಿಮಾನ

ಮೂಲತ: ಸೆಪ್ ಕ್ಯಾಟ್ ಜಾಗ್ವಾರ್ ನೆಲ ದಾಳಿ ನಡೆಸುವ ಆಂಗ್ಲೋ-ಫ್ರಾನ್ಸ್ ಜೆಟ್ ಯುದ್ಧ ವಿಮಾನವಾಗಿದೆ. ಇದನ್ನು ಪ್ರಮುಖವಾಗಿಯೂ ಬ್ರಿಟನ್‌ನ ರಾಯಲ್ ಏರ್ ಫೋರ್ಸ್ ಬಳಕೆ ಮಾಡುತ್ತಿತ್ತು. ಭಾರತೀಯ ವಾಯುಪಡೆಯಲ್ಲಿ ಈಗಲೂ ಸೇವೆಯಲ್ಲಿರುವ ಸೆಪ್ ಕ್ಯಾಟ್ ಜಾಗ್ವಾರ್ ಶಕ್ತಿಶಾಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಮಿಗ್-27 ಬಹದ್ದೂರ್

ಮಿಗ್-27 ಬಹದ್ದೂರ್

ಮೂಲ: ಸೋವಿಯತ್ ಒಕ್ಕೂಟ

ಪಾತ್ರ: ನೆಲ ದಾಳಿ ನಡೆಸುವ ವಿಮಾನ

ಮಿಕೋಯಾನ್ ಮಿಗ್ 27 ಅಥವಾ ಮಿಗ್-27 ಬಹದ್ದೂರ್ ಆರಂಭದಲ್ಲಿ ಸೋವಿಯತ್ ಒಕ್ಕೂಟಕ್ಕಾಗಿ ನಿರ್ಮಿಸಲಾಗಿತ್ತು. ಬಳಿಕ ಇದರ ನಿರ್ಮಾಣ ಪರವಾನಗಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗಿಟ್ಟಿಸಿಕೊಂಡಿತ್ತು. ಆದರೆ ಭಾರತದಲ್ಲಿ ಸಂಭವಿಸಿದ ಕೆಲವು ಅಪಘಾತ ಪ್ರಕರಣಗಳು ಮಿಗ್-27 ಹಿನ್ನೆಡೆಗೆ ಕಾರಣವಾಗಿತ್ತು.

ಭಾರತೀಯ ವಾಯುಸೇನೆಯ ಸಕ್ರಿಯ ಯುದ್ಧ ವಿಮಾನಗಳು

ಒಟ್ಟಿನಲ್ಲಿ ಭಾರತೀಯ ರಕ್ಷಣಾ ವಿಭಾಗದಲ್ಲಿ ವಾಯುಪಡೆಯ ಪಾತ್ರ ಮಹತ್ತರವಾಗಿದೆ.

Most Read Articles

Kannada
Read more on ವಿಮಾನ plane
English summary
Everyone is crazy about fighter planes. Do you know, which kind of fighter planes are using by Indian Air force? Here is a list of Indian Air Force fighter planes, check out through pictures.
Story first published: Tuesday, May 26, 2015, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X