ಭಾರತೀಯ ವಾಯು ಸೇನೆಯಿಂದ 'ಗಾರ್ಡಿಯನ್ ಆಫ್ ದಿ ಸ್ಕೈಸ್' ಬಿಡುಗಡೆ

By Nagaraja

ಯುವ ಜನಾಂಗವನ್ನು ವಾಯು ಪಡೆಗೆ ಹೆಚ್ಚೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಭಾರತೀಯ ವಾಯು ಸೇನೆಯು ಹೊಸತಾದ 'ಗಾರ್ಡಿಯನ್ ಆಫ್ ದಿ ಸ್ಕೈಸ್' ಎಂಬ ತ್ರಿಡಿ ಮೊಬೈಲ್ ಫೋನ್‌ ಗೇಮ್ ಬಿಡುಗಡೆಗೊಳಿಸಿದೆ.

ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಲು ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಾರ್ಡಿಯನ್ ಆಫ್ ದಿ ಸ್ಕೈಸ್ ತ್ರಿಡಿ ಗೇಮ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಸೇನೆ ಅಭಿಪ್ರಾಯಪಟ್ಟಿದೆ.

 Indian Air Force

ಯುವ ಜನಾಂಗದಲ್ಲಿ ದೇಶ ಪ್ರೇಮ ಬೆಳೆಸುವುದು ಅತಿ ಅಗತ್ಯ. ಈ ಮೂಲಕ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಲಿದ್ದಾರೆ ಎಂದು ಏರ್ ಮಾರ್ಷಲ್ ಎಸ್ ಸುಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಗಾರ್ಡಿಯನ್ ಆಫ್ ದಿ ಸ್ಕೈಸ್ ತ್ರಿಡಿ ಮೊಬೈಲ್ ಗೇಮ್‌ನ ಮೊದಲ ಅವತರಣಿಕೆಯು ಇದೀಗ ಲಾಂಚ್ ಆಗಿದ್ದು, ಎರಡನೇ ಶ್ರೇಣಿಯು ಆಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಸ್ತುತ ಗೇಮ್‌ನಲ್ಲಿ Zaruzia ಎಂದು ಕರೆಯಲ್ಪಡುವ ಕೃತಕ ವಿರೋಧಿ ರಾಷ್ಟ್ರ ಸೃಷ್ಟಿಮಾಡಲಾಗಿದ್ದು, ಇದರ ವಿರುದ್ಧ ವಾಯುಸೇನೆಯ ಹೋರಾಟ ನಡೆಯಲಿದೆ.

Most Read Articles

Kannada
English summary
The Indian Air Force launched a 3D game for mobile phones in an effort to woo current-generation youth into joining the Air Force. The launch of game, called "Guardian Of The Skies" was seen as a ‘significant milestone' in the efforts of encouraging youth to join the IAF.
Story first published: Saturday, July 5, 2014, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X