ಥೂ, ನಿಂಗೆ ಲೈಸೆನ್ಸ್ ಕೊಟ್ಟೋನು ಯಾರು? ನಿಮಗೂ ಅನುಭವವಾಗಿದೆಯೇ?

By Nagaraja

"ಲೋ ಗೂಬೆ ಹೊಟ್ಟೆಗೆ ಏನೋ ತಿಂತಿಯ ಬೆಳಗೆ ಯಾವ್ ಕಡೆ ಎದ್ದು ಬಂದಿದ್ಯ ಯಾವ ಕೋಡಂಗಿ ನಿಂಗೆ ಲೈಸೆನ್ಸ್ ಕೊಟ್ಟೋನು" ಬೆಳ್ಳಂಬೆಳ್ಳಗೆ ರಸ್ತೆಗಿಳಿದ ವೇಳೆ ಎದುರಾಗುವ ಸನ್ನಿವೇಶವಿದು. ಹೌದು ರಸ್ತೆ ಸಂಚಾರದಲ್ಲಿ ಇವೆಲ್ಲ ಸಾಮಾನ್ಯ. ಇವೆಲ್ಲವನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುವುದು ಒಳ್ಳೆಯದು.

ಈ ನಿಟ್ಟಿನಲ್ಲಿ ಸಂಚಾರ ಪೊಲೀಸರು ಎಷ್ಟೇ ನಿಗಾ ವಹಿಸಿದರೂ ಮಹಿಳೆಯರ ಮೇಲಾಗುವ ಅಶ್ಲೀಲ ಬೈಗುಳ ಹಾಗೂ ಸಭ್ಯ ಚಾಲಕರ ವಿರುದ್ಧದ ನಿಂದನಾತ್ಮಕ ಭಾಷೆ ಪ್ರಯೋಗ ಸದಾ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ರಸ್ತೆ ಸಂಚಾರದಲ್ಲೂ ಅತ್ಯುತ್ತಮ ನಡವಳಿಕೆಗೆ ಕರಗತ ಮಾಡಿಕೊಳ್ಳುವುದು ಅಷ್ಟೇ ಅಗತ್ಯ. ಇದು ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ. ಇಡೀ ದೇಶದಾದ್ಯಂತ ಇಂತಹ ನಿಂದನಾತ್ಮಕ ಭಾಷೆಗಳ ಪ್ರಯೋಗವಾಗುತ್ತದೆ. ಇನ್ನೂ ಸ್ವಲ್ಪ ನಶೆ ಏರಿದ್ದರೆ ಒಂದೇಟು ಬೀಳುವುದು ಗ್ಯಾರಂಟಿ!

ಡಬ್ಬಾ ನನ್ ಮಗಾ ಸಾರಿಗೆ ಗಾಡಿನೇ ಓಡ್ಸೋಕೆ ಬರಲ್ಲ

ಡಬ್ಬಾ ನನ್ ಮಗಾ ಸಾರಿಗೆ ಗಾಡಿನೇ ಓಡ್ಸೋಕೆ ಬರಲ್ಲ

ಹ್ಹ, ಹ್ಹ, ಇದು ನಮ್ಮ ಬೆಂಗಳೂರಿನಲ್ಲಿ ಪದೇ ಪದೇ ಕೇಳಿಸುತ್ತಿರೋ, ಮನಸ್ಸಲ್ಲಿ ಏನೋ ಒಂಥರ ನಿರಾಳತೆಯನ್ನುಂಟು ಮಾಡುವ ವಾಕ್ಯವಿದು. ಬಿಎಂಟಿಸಿ ಅಡ್ಡಾ ದಿಡ್ಡಿ ಚಾಲನೆಯಿಂದ ಆಕ್ರೋಶಭರಿತರಾದ ನಮ್ಮ ಕೋಪವನ್ನು ಅರಗಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾದಾಗ ಯಾವನೇ ಓರ್ವ ಬೈಕ್ ಸವಾರ ಇಂತಹದೊಂದು ಪ್ರಯೋಗವನ್ನು ಎದ್ದೆ ತಟ್ಟಿ ಹೇಳಿದಾಗ ನಮ್ಮಲ್ಲುಂಟಾಗುವ ಆನಂದಕ್ಕೆ ಪಾರವೇ ಇರುವುದಿಲ್ಲ ಅಲ್ಲವೇ?

ಕಣ್ಣು ಕಾಣಿಸಲ್ವೇ ಮುಂದೆ ಬರ್ತಾ ಇರೋದು....

ಕಣ್ಣು ಕಾಣಿಸಲ್ವೇ ಮುಂದೆ ಬರ್ತಾ ಇರೋದು....

ಕಣ್ಣು ಕಾಣಿಸಲ್ವೇ ಮುಂದೆ ಬರ್ತಾ ಇರೋದು, ಮಕಮುಚ್ಚಾ, ಲೋಫರ್ ನನ್ಮಗನೇ, ಮುಂಡೇ ಮಗನೆ, ಹಲ್ಕಾನನ್ಮಗೆ ಹೀಗೆ ದಿನನಿತ್ಯವಾಗುವ ನಿಂದಾತ್ಮಕ ಭಾಷೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಯಾರೋ ಅಪರಿಚಿತರನ್ನು ಈ ರೀತಿ ದೂಷಿಸುವುದರ ಬದಲು ಸ್ವಲ್ಪ ತಾಳ್ಮೆ ವಹಿಸಿದರೆ ಒಳಿತಲ್ಲವೇ?

ಹುಡ್ಗೀರ ಮುಂದೆ ಸ್ಟೈಲ್ ಹೋಡಿತಾನೇ?

ಹುಡ್ಗೀರ ಮುಂದೆ ಸ್ಟೈಲ್ ಹೋಡಿತಾನೇ?

ಇದು ಕಾಲೇಜು ಪರಿಸರದಲ್ಲಿ ಜಾಸ್ತಿಯಾಗಿ ಕಂಡುಬರುವ ಪದ. ನಿನ್ ಮಕ ಮುಚ್ಚ, ನೆಟ್ಟಗೆ ನೋಡ್ಕೊಂಡು ಬರೋದಿಕ್ಕೆ ಆಗೋಲ್ವ? ವೀಲಿಂಗ್ ಹೋಡಿತಾನೇ ಹುಡ್ಗೀರ ಮುಂದೆ?

ಅಯ್ಯೋ ಗೂಬೆ ನೋಡ್ಕೊಂಡು ಬಾರೋ

ಅಯ್ಯೋ ಗೂಬೆ ನೋಡ್ಕೊಂಡು ಬಾರೋ

ಅಯ್ಯೋ ಗೂಬೆ ನೋಡ್ಕೊಂಡು ಬಾರೋ, ಕಣ್ಣು ಕಾಣಿಸೋದಿಲ್ವಾ ಮುಂದೆ ಬರ್ತಾ ಇರೋದು? ಎಲ್ಲಿ ನೋಡ್ಕೊಂಡು ಡ್ರೈವಿಂಗ್ ಮಾಡ್ತಾ ಇದ್ಯೋ ಮನೆಗೆ ಹೇಳ್ಬಂದಿದ್ಯ ಸಾಯೋಕ್ಕೆ ನನ್ ಗಾಡಿನೇ ಸಿಕ್ತ ನಿಂಗೆ?

ಯಾವ ಕೋಡಂಗಿ ನಿಂಗೆ ಲೈಸೆನ್ಸ್ ಕೊಟ್ಟೋನು?

ಯಾವ ಕೋಡಂಗಿ ನಿಂಗೆ ಲೈಸೆನ್ಸ್ ಕೊಟ್ಟೋನು?

ಲೋ ಗೂಬೆ ಹೊಟ್ಟೆಗೆ ಏನೋ ತಿಂತಿಯ ಬೆಳಗೆ ಯಾವ್ ಕಡೆ ಎದ್ದು ಬಂದಿದ್ಯ ಯಾವ ಕೋಡಂಗಿ ನಿಂಗೆ ಲೈಸೆನ್ಸ್ ಕೊಟ್ಟೋನು?

ಹಿಂದಿ- ಅಬೇ ಸಾಲೆ, ಅಂಧಾ ಹೇ ಕ್ಯಾ?

ಹಿಂದಿ- ಅಬೇ ಸಾಲೆ, ಅಂಧಾ ಹೇ ಕ್ಯಾ?

ಇದು ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಲ್ಲ. ಅತ್ತ ರಾಷ್ಟ್ರ ರಾಜಧಾನಿಯತ್ತ ತೆರಳಿದರೆ ಅಬೇ ಸಾಲೆ, ಅಂಧಾ ಹೇ ಕ್ಯಾ? ಎಂಬ ನಿಂದನಾತ್ಮಕ ಭಾಷೆಯ ಪ್ರಯೋಗ ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯ

ತಮಿಳು - ವೀಟ್ ಲಾ ಸೊಲ್ಲಿಟ್ಟು ವಂಧುಟ್ಟಿಯಾ?

ತಮಿಳು - ವೀಟ್ ಲಾ ಸೊಲ್ಲಿಟ್ಟು ವಂಧುಟ್ಟಿಯಾ?

ವೀಟ್ ಲಾ ಸೊಲ್ಲಿಟ್ಟು ವಂಧುಟ್ಟಿಯಾ? ಭಾಷಾ ಪರಿವರ್ತನೆ ಮಾಡಿದಾಗ ಮನೆಯಲ್ಲಿ ಹೇಳ್ಬೀಟ್ಟು ಬಂದಿದ್ದೀಯಾ? ಎಂಬ ಅರ್ಥ ನೀಡುತ್ತದೆ. ರೋಚಿಗೆದ್ದ ಚಾಲಕರು ಕೊನೆಗೆ ಮಾಡುವ ಭಾಷಾ ಪ್ರಯೋಗವೇ ಇದು.

ಬಂಗಾಳಿ - ಪಾಗೊಲ್ ಚಾಗೊಲ್

ಬಂಗಾಳಿ - ಪಾಗೊಲ್ ಚಾಗೊಲ್

ದೇಶದ ಅತಿ ಪುರಾತನ ಹಾಗೂ ಸಾಂಪ್ರಾದಾಯಸ್ತ ನಗರಗಳಲ್ಲಿ ಒಂದಾಗಿರುವ ಬಂಗಾಳದಲ್ಲೂ ನಿಂದನಾತ್ಮಕ ಭಾಷಾ ಪ್ರಯೋಗ ಜಾಸ್ತಿಯಾಗಿಯೇ ಕಂಡುಬರುತ್ತದೆ. ಇಲ್ಲಿ ಪಾಗೊಲ್ ಚಾಗೊಲ್ ಎಂಬುದು ಹುಚ್ಚು ಮೇಕೆ ಅಥವಾ ಮೂರ್ಖತನದ ಪರಾವಧಿ ತಲುಪಿದಾಗ ಇಂತಹ ಪದಗಳ ಬಳಕೆ ಅನಿವಾರ್ಯವಾಗುತ್ತದೆ.

ಗುಜರಾತಿ - ಅಬೆ ಸಾಲಾ ದೆಖಾಟು ನಾಥಿ? ಅಂಧಾದೊ ಚೇ ಸು?

ಗುಜರಾತಿ - ಅಬೆ ಸಾಲಾ ದೆಖಾಟು ನಾಥಿ? ಅಂಧಾದೊ ಚೇ ಸು?

ಕುರುಡನಾಗಿದ್ಯಾ? ಕಣ್ಣು ಕಾಣಿಸ್ತಿಲ್ವಾ? ಎಂಬುದು ಇದರ ಪರಮಾರ್ಥವಾಗಿದೆ. ಇಲ್ಲಿ ಕಂಡುಬರುತ್ತಿರುವ ದೃಶ್ಯವೆಂದರೆ ಭಾಷಾವಾರು ಪ್ರದೇಶವನ್ನು ಮೀರಿದರೂ ಬೈಗುಳಗಳ ಮೂಲರ್ಥ ಒಂದೇ ಆಗಿರುತ್ತದೆ.

ಮಲಯಾಳಂ - ನಾಯಿಂಡೆ ಮೋನೆ, ಮುಖಥು ಕಣ್ಣಿಲ್ಲೆಡಾ?

ಮಲಯಾಳಂ - ನಾಯಿಂಡೆ ಮೋನೆ, ಮುಖಥು ಕಣ್ಣಿಲ್ಲೆಡಾ?

ಬೈಗುಳಗಳ ವಿಷಯಕ್ಕೆ ಬಂದಾಗ ಮಲಯಾಳಿಗರು ಹಿಂದು ಮುಂದು ನೋಡುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ನಾಯಿಂಡೆ ಮೋನೆ, ಮುಖಥು ಕಣ್ಣಿಲ್ಲಿಡಾ? (ಮುಖದಲ್ಲಿ ಕಣ್ಣಿಲ್ವೇಣೋ) ಎಂಬುದನ್ನು ನೇರವಾಗಿಯೇ ಬೈದು ಬಿಡುತ್ತಾರೆ.

ತೆಲುಗು - ಪೊ ರಾ, ಯಡವಾ

ತೆಲುಗು - ಪೊ ರಾ, ಯಡವಾ

ಅತ್ತ ಹೈದರಾಬಾದ್ ತೆರಳಿದರೂ ಅದೇ ಕಥೆ ಆದರೆ ಸನ್ನಿವೇಶ ಮಾತ್ರ ಸ್ವಲ್ಪ ವಿಭಿನ್ನವಾಗಿರುತ್ತದೆ. ಎಷ್ಟೇ ತೆಗಳಿದರೂ ಸವಾರ ಮಾತ್ರ ತಾನೇನು ಕ್ಯಾರೇ ಅನ್ನುತ್ತಿಲ್ಲ ಎಂಬ ರೀತಿಯಲ್ಲಿ ನಗು ಬೀರುತ್ತಾನೆ.

ರಸ್ತೆಯಲ್ಲಿ ನಿಂದನಾತ್ಮಕ ಭಾಷೆಯ ಪ್ರಯೋಗ

ಇವೆಲ್ಲವನ್ನು ಓದಿದಾಗ ಅಸಹ್ಯ ಭಾವನೆ ನಿಮ್ಮಲ್ಲುಂಟಾಗಬಹುದು. ಕೊನೆಗೆ ರಸ್ತೆಯಲ್ಲಿನ ಇಂತಹ ಪ್ರಸಂಗಗಳನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತಲ್ಲವೇ? ಎಲ್ಲದಕ್ಕೂ ತಾಳ್ಮೆ ಮುಖ್ಯ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
English summary
Thus, we thought it might be enlightening to see how people vent their frustration around the country so you will er, be prepared for the road there in case you visit.
Story first published: Tuesday, May 5, 2015, 11:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X