ವಿಶ್ವದ ವೇಗದ ಕಾರು ನಿರ್ಮಿಸಲು ಭಾರತೀಯ ಸಂಜಾತೆಯ ನೆರವು

By Nagaraja

ದೇಶದ ವಾಹನ ಪ್ರಿಯರಿಗೆ ಹೆಮ್ಮೆಯ ವಿಷಯವೆಂಬಂತೆ, ವಿಶ್ವದ ಅತಿ ವೇಗದ ಕಾರು ನಿರ್ಮಿಸಲು ಭಾರತೀಯ ಸಂಜಾತೆಯೊಬ್ಬಾಕೆ ನೆರವಿಗೆ ಬರಲಿದ್ದಾರೆ. ಮೂಲತ: ಭಾರತೀಯ ಮೂಲದವರಾಗಿರುವ 29ರ ಹರೆಯದ ದಕ್ಷಿಣ ಆಫ್ರಿಕಾದ ಬೆವರ್ಲಿ ಸಿಂಗ್ (Beverly Singh) ಎಂಬಾಕೆಯೇ ಇಂತಹದೊಂದು ಮಹತ್ ಸಾಧನೆಗೆ ಹೆಸರು ಗಿಟ್ಟಿಸಿಕೊಳ್ಳಲಿದ್ದಾರೆ.

ಪೋರ್ಟ್ ಎಲಿಜಬೆತ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಬೆವರ್ಲಿ ಸಿಂಗ್ ಸೂಪರ್ ಸೋನಿಕ್ ಕಾರಿನ ವಿನ್ಯಾಸ ರೂಪಿಸಲು ನೆರವಾಗಲಿದ್ದಾರೆ. ಒಟ್ಟು 30 ಎಂಜಿನಿಯರ್‌ಗಳನ್ನು ಒಳಗೊಂಡಿರುವ ಬ್ಲಡ್‌ಹೌಂಡ್ (Bloodhound) ತಂಡವು ಜಗತ್ತಿನ ಅತಿ ವೇಗದ ಕಾರು ರೂಪಿಸುವುದರಲ್ಲಿ ಕಾರ್ಯ ಮಗ್ನವಾಗಿದೆ.

ರಾಕೆಟ್ ನಿಯಂತ್ರಿತ ಕಾರು

ರಾಕೆಟ್ ನಿಯಂತ್ರಿತ ಕಾರು

ರಾಕೆಟ್ ನಿಯಂತ್ರಿತ ಈ ಸೂಪರ್ ಸೋನಿಕ್ ಕಾರು 2015ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಗ್ಗೆಯಿಡಲಿದ್ದು, ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ.

ಮಿಂಚಿನ ವೇಗ

ಮಿಂಚಿನ ವೇಗ

ಪ್ರತಿ ಗಂಟೆಗೆ 1228 ಕೀ.ಮೀ. ವೇಗದಲ್ಲಿ ಚಲಿಸಿರುವುದು ಇದುವರೆಗಿನ ದಾಖಲೆಯಾಗಿದೆ. ಈ ದಾಖಲೆಯನ್ನು ಮುರಿಯಲು ಸನ್ನದ್ಧವಾಗಿರುವ ಸೂಪರ್ ಸೋನಿಕ್ ಕಾರು 2016ರ ವೇಳೆಗೆ ಗಂಟೆಗೆ 1609 ಕೀ.ಮೀ. ವೇಗದಲ್ಲಿ ಸಂಚರಿಸುವ ಗುರಿ ಹೊಂದಿದೆ.

ಬೋಯಿಂಗ್, ರೋಲ್ಸ್ ರಾಯ್ಸ್

ಬೋಯಿಂಗ್, ರೋಲ್ಸ್ ರಾಯ್ಸ್

ಯುನಿವರ್ಸಿಟಿ ಆಫ್ ವೆಸ್ಟ್ ಆಫ್ ಇಂಗ್ಲೆಂಡ್‌ನಿಂದ ಬ್ಲಡ್‌ಹೌಂಡ್ ಚೆವೆನಿಂಗ್ ಸ್ಕಾಲರ್‌ಶಿಪ್ ಪಡೆದುಕೊಂಡಿರುವ ಬೆವರ್ಲಿ ಸಿಂಗ್ ಮುಂದಿನ ತಿಂಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆ ಬಳಿಕ ಬೋಯಿಂಗ್ ಹಾಗೂ ರೋಲ್ಸ್ ರಾಯ್ಸ್‌ಗಳಂತಹ ವಿಶ್ವ ವಿಖ್ಯಾತ ವಾಹನ ಕಂಪನಿಗಳ ಜತೆ ಕೈಜೋಡಿಸಲಿದ್ದಾರೆ.

ಸಂಶೋಧನೆ

ಸಂಶೋಧನೆ

ಸದ್ಯ ಎಂಜಿನಿಯರ್‌ಗಳೆಲ್ಲರು ಕಾರ್ಯಮಗ್ನರಾಗಿದ್ದು, ಪ್ರತಿ ಸಲವೂ ಇಂತಹ ನೂತನ ವಿಚಾರಗಳನ್ನು ಸಾಧಿಸುವುದು ನಮ್ಮ ಬಯಕೆಯಾಗಿದೆ ಎಂದು ಭಾರತೀಯ ಸಂಜಾತೆ ಸಿಂಗ್ ವಿವರಿಸಿದ್ದಾರೆ.

ಉದ್ಯೋಗ ನಷ್ಟ

ಉದ್ಯೋಗ ನಷ್ಟ

ಸದ್ಯ ಬ್ರಿಸ್ಟಾಲ್‌ಗೆ ಪಯಣ ಬೆಳೆಸಿರುವ ಸಿಂಗ್, ಇದಕ್ಕಾಗಿ ತಮ್ಮ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ.

ಸೂಪರ್ ಸೋನಿಕ್ ಕಾರು

ಸೂಪರ್ ಸೋನಿಕ್ ಕಾರು

ತಾವೀಗ ತಮ್ಮೆಲ್ಲ ಸಮಯವನ್ನು ಪದವಿ ವ್ಯಾಸಂಗದಲ್ಲಿ ಕಳೆಯುವುದಾಗಿ ತಿಳಿಸಿರುವ ಸಿಂಗ್, ಜಗತ್ತಿನ ಅತಿ ವೇಗದ ಕಾರು ನಿರ್ಮಾಣ ಮಾಡುವದರಲ್ಲಿ ನೆರವು ಮಾಡುವುದಾಗಿ ತಿಳಿಸಿದ್ದಾರೆ.

ಜೀವಮಾನದ ಸಾಧನೆ

ಜೀವಮಾನದ ಸಾಧನೆ

ನಾನು ತುಂಬಾನೇ ಉತ್ಸಾಹಿತಗೊಂಡಿದ್ದೇನೆ. ಇದು ಜೀವಮಾನದಲ್ಲಿ ಒಂದೇ ಸಲ ಬರುವ ಸುವರ್ಣಾವಕಾಶ ಎಂದು ಬಣ್ಣಿಸಿದ್ದಾರೆ.

ಬ್ಲಡ್‌ಹೌಂಡ್ ಯೋಜನೆ

ಬ್ಲಡ್‌ಹೌಂಡ್ ಯೋಜನೆ

ಬ್ಲಡ್‌ಹೌಂಡ್ ಯೋಜನೆಯಲ್ಲಿ ತನ್ನ ಪಾತ್ರವೇನು ಎಂಬುದಕ್ಕೆ ಸಿಂಗ್ ಬಳಿಯಲ್ಲಿ ಸ್ಪಷ್ಟ ಉತ್ತರವಿಲ್ಲ. ಹಾಗಿದ್ದರೂ ಕಾರು ಟೆಸ್ಟಿಂಗ್‌ಗಾಗಿ ದಕ್ಷಿಣ ಆಫ್ರಿಕಾಕ್ಕೆ ರವಾನೆಯಾದಾಗ ತಂಡಕ್ಕೆ ಸೇರ್ಪಡೆಯಾಗುವ ಭರವಸೆ ಇಟ್ಟುಕೊಂಡಿದ್ದಾರೆ.

Most Read Articles

Kannada
English summary
A 29-year-old Indian-origin woman from South Africa is set to join the team of specialist engineers building the world's fastest car in the UK. Beverly Singh, a mechanical engineer from Port Elizabeth, will help design the Bloodhound supersonic car, currently being built by a team of about 30 engineers in a high-tech centre near Bristol.
Story first published: Tuesday, August 27, 2013, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X