ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

By Nagaraja

ಕ್ರಾಂತಿಕಾರಿ ರೈಲ್ವೆ ವ್ಯವಸ್ಥೆಯೊಂದನ್ನು ರೂಪಿಸಿರುವ ಭಾರತೀಯ ಮೂಲದ 43 ಹರೆಯದ ಪಿಎಚ್ ಡಿ ಎಂಜಿನಿಯರ್ ಅಶ್ವನಿ ಕುಮಾರ್ ಉಪಾಧ್ಯಾಯ ಎಂಬವರು ಜಾಗತಿಕ ರೈಲ್ವೆ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಐಟಿ) ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಸತಿ ಪ್ರದೇಶಗಳಲ್ಲಿ ನಾವೀನ್ಯ ತಂತ್ರಗಾರಿಕೆಯ ರೈಲ್ವೆ ವ್ಯವಸ್ಥೆಯನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಸಂಬಂಧಪಟ್ಟಂತೆ ಅಶ್ವನಿ ನೀಲಿ ನಕ್ಷೆಯನ್ನು ರೂಪಿಸಿದ್ದರು. ಇದಕ್ಕಾಗಿ ಜಾಗತಿಕ ಮನ್ನಣೆ ದೊರಕಿರುವುದು ಇಡೀ ದೇಶಕ್ಕೆ ಹೆಮ್ಮೆ ತರುವಂತಾಗಿದೆ.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

1997ರ ಭಾರತೀಯ ರೈಲ್ವೆ ಟ್ರಾಫಿಕ್ ಸರ್ವಿಸ್ ಬ್ಯಾಚ್ ಆಫಿಸರ್ ಆಗಿರುವ ಅಶ್ವನಿ 'ಕ್ಯಾಟ್ ಪಿಲ್ಲರ್ ಟ್ರೈನ್' ಅಥವಾ 'ಸಿ ರೈಲು' ಎಂಬ ವಿನೂತನ ಹಗುರ ಭಾರದ ನಗರ ಜಾಲ ವ್ಯವಸ್ಥೆಯನ್ನು ಪ್ರದರ್ಶಿಸಿದ್ದರು.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ಬಾಗಿದ ಕಮಾನುಗಳಿಂದ ಬೆಂಬಲಿತ ಸಿ ರೈಲುಗಳು ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ಸ್ಪರ್ಧೆಯಲ್ಲಿ ಒಟ್ಟು 500ರಷ್ಟು ಎಂಟ್ರಿಗಳು ಬಂದಿದೆಯಾದರೂ ಎಲ್ಲರನ್ನು ತನ್ನ ನೂತನ ತಂತ್ರಗಾರಿಕೆಯೊಂದಿಗೆ ಸ್ಪರ್ಧಿಗಳನ್ನು ಮೀರಿಸುವಲ್ಲಿ ಭಾರತೀಯ ಮೂಲದ ಎಂಜಿನಿಯರ್ ಯಶಸ್ವಿಯಾಗಿದ್ದರು.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ದೊಡ್ಡದಾದ ರೈಲು ವ್ಯವಸ್ಥೆಯ ಬದಲಾಗಿ 20ರಷ್ಟು ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದಾದ ಸಣ್ಣ ಕೋಚ್ ಗಳನ್ನು ಅಶ್ವನಿ ನಿರ್ಮಿಸಿದ್ದರು.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ರೈಲ್ವೆ ಬೋಗಿಯ ಮೇಲೆ ಹಾಗೂ ಕೆಳಗಡೆಯೂ ಚಕ್ರಗಳಿರುವುದು ವಿಶೇಷತೆಯೆನಿಸಿಕೊಂಡಿದೆ. ಇದು ಸಾಂಪ್ರದಾಯಿಕ ಮೆಟ್ರೋ ಯೋಜನೆಗಿಂತಲೂ ವಿಭಿನ್ನತೆ ಕಾಪಾಡಿಕೊಂಡಿದೆ.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ರೈಲ್ವೆ ಟ್ರ್ಯಾಕ್ ನ ಇತ್ತ ಕಡೆಗಳಿಂದಲೂ (ಮೇಲೆ ಹಾಗೂ ಕೆಳಗೆ) ಚಲಿಸಲು ಯೋಗ್ಯವೆನಿಸುತ್ತದೆ. ಈ ಎಲ್ಲ ವ್ಯವಸ್ಥೆಯು ವಿದ್ಯುತ್ ನಿಂದ ನಿಯಂತ್ರಿಸಲ್ಪಡುತ್ತದೆ.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ಅಲ್ಲದೆ ತುರ್ತು ಪರಿಸ್ಥಿತಿಯ ವೇಳೆ ನಿರ್ವಹಿಸಲು ಎಲ್ಲ ಕೋಚ್ ಗಳಲ್ಲೂ ಬ್ಯಾಟರಿ ಆಳವಡಿಸಲಾಗಿದೆ.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ರೈಲು ಹಗುರ ಭಾರ ಆಗಿರುವುದರಿಂದ ಕೆಳಗಡೆ ಆಧಾರವಾಗಿ ನಿಂತಿರುವ ಕಾಂಕ್ರೀಟ್ ಕಂಬಗಳ ನಿರ್ಮಾಣಕ್ಕೆ ಅತ್ಯಲ್ಪ ಜಾಗ ಸಾಕಾಗುವುದು. ಅಂತೆಯೇ ಪ್ರಯಾಣಿಕರಿಗೆ ತಮ್ಮ ಗಮ್ಯಸ್ಥಾನ ತಲುಪುವುದು ಅತ್ಯಂತ ಸುಲಭವಾಗಿರಲಿದೆ ಎಂದ ಉಪಾಧ್ಯಾಯ ವಿವರಿಸುತ್ತಾರೆ.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ಇಲ್ಲಿ ಲಿಫ್ಟುಗಳಿಂದ ಪ್ರಯಾಣಿಕರನ್ನು ಮೇಲೆಕ್ಕೆತ್ತುವ ಸರಳ ಫ್ಲ್ಯಾಟ್ ಫಾರ್ಮ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ರೈಲ್ವೆ ಕೋಚ್ ಗಳು ಮೇಲ್ಗಡೆಯಿರುವುದರಿಂದ ಕೆಳಗಡೆ ಕಡಿಮೆ ಜಾಗ ಸಾಕಾಗುವುದು.

ಭಾರತೀಯ ಎಂಜಿನಿಯರ್ ಗೆ ಜಾಗತಿಕ ರೈಲ್ವೆ ಪ್ರಶಸ್ತಿ

ಹಾಗಿದ್ದರೂ ಇನ್ನು ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಬೇಕಾಗಿದೆ ಎಂದು ಸ್ವತ: ಉಪಧ್ಯಾಯ ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ ಕಡಿಮೆ ಬಜೆಟ್ ನ ಯೋಜನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Most Read Articles

Kannada
Read more on ಭಾರತ india
English summary
Indian Railways Engineer Wins MIT Award for His Caterpillar Train System
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X