ದೇಶದ ಶ್ರೇಷ್ಠ ಚಾಲಕರು ಯಾವ ರಾಜ್ಯದವರು?

By Nagaraja

ದೇಶದ ಶ್ರೇಷ್ಠ ಯಾವ ರಾಜ್ಯಕ್ಕೆ ಸೇರಿದವರು? ಅವರನ್ನು ಗುರುತಿಸಿಕೊಳ್ಳುವುದು ಹೇಗೆ? ತಾಂತ್ರಿಕವಾಗಿ ಮುಂದುವರಿದರೆ ಪರಿಣತರಿಂದ ಹತ್ತು ಹಲವಾರು ವಿವರಣೆಗಳು ಲಭಿಸಬಹುದು. ಆದರೆ ನಾವಿಂದು ದೇಶದ ಅತಿ ಶ್ರೇಷ್ಠ ಚಾಲಕರ ಬಗ್ಗೆ ವಿವರಣೆ ಕೊಡಲು ಪ್ರಯತ್ನ ಮಾಡಲಿದ್ದೇವೆ.

ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಅತ್ಯಂತ ನಿಪುಣ ಚಾಲಕರು ಕಾಣಸಿಗುತ್ತಾರೆ ಅಂದರೆ ವಿಶ್ವಸನೀಯವೇ? ನಾವಿಲ್ಲಿ ಹಿಮಾಚಲ ಪ್ರದೇಶವನ್ನು ಸೂಚಿಸಿರುವುದಕ್ಕೆ 20 ಕಾರಣಗಳನ್ನು ಒದಗಿಸಲಿದ್ದೇವೆ. ಈ ರೋಚಕ ಸತ್ಯಗಳನ್ನು ತಿಳಿಯುವ ಕುತೂಹಲ ನಿಮ್ಮಲಿಲ್ಲವೇ?

20. ಕಣಿವೆ ರಾಜ್ಯ

20. ಕಣಿವೆ ರಾಜ್ಯ

ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಪರ್ವತ ಸುತ್ತಲೂ ಅಡ್ಡಾದಿಡ್ಡಿ ರಸ್ತೆಗಳಿರುತ್ತದೆ. ಇಲ್ಲಿನ ಚಾಲಕರು ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

19. ಕಡಿದಾದ ತಿರುವು

19. ಕಡಿದಾದ ತಿರುವು

ಚಿತ್ರದಲ್ಲೇ ನೀವು ನೋಡುತ್ತಿರುವಂತೆಯೇ ಕಡಿದಾದ ತಿರುವುಗಳು ನಿಜಕ್ಕೂ ಅಪಾಯವನ್ನು ಒಡ್ಡುತ್ತದೆ. ಆದರೆ ಬೆಟ್ಟದ ಮೇಲಿನ ಕಡಿದಾದ ಯು ಆಕಾರದ ತಿರುವನ್ನು (hairpin bend) ನೀರಾಯಾಸವಾಗಿ ಗೆದ್ದು ಬರುವಲ್ಲಿ ಇಲ್ಲಿನ ಚಾಲಕರು ಯಶಸ್ವಿಯಾಗಿದ್ದಾರೆ.

18. ರಸ್ತೆ ದರ್ಶನವಾಗುತ್ತಿದೆಯೇ?

18. ರಸ್ತೆ ದರ್ಶನವಾಗುತ್ತಿದೆಯೇ?

ನಿಮಗಿಲ್ಲಿ ರಸ್ತೆ ದರ್ಶನವಾಗುತ್ತಿದೆಯೇ? ಹೌದು, ಮುಂದುಗಡೆಯ ಹಾದಿ ಬಗ್ಗೆ ಜ್ಞಾನವಿಲ್ಲದಿದ್ದರೂ ಹಿಮಾಚಲ ಚಾಲಕರಿಗೆ ಈ ಸವಾಲುಗಳನ್ನು ನಿಭಾಯಿಸುವುದು ಸಿಂಪಲ್ ವಿಷಯ.

17. ಸಾಕು ಪ್ರಾಣಿ

17. ಸಾಕು ಪ್ರಾಣಿ

ಸಡನ್ ಆಗಿ ರಸ್ತೆಗೆ ಧುಮುಕುವ ಸಾಕು ಪ್ರಾಣಿಗಳು ಸಂಪೂರ್ಣವಾಗಿ ರಸ್ತೆಯನ್ನು ಆವರಿಸಿಬಿಡುತ್ತದೆ. ಇದನ್ನು ಸಹ ಇಲ್ಲಿನ ಸವಾರರು ಸಮಯ ಪ್ರಜ್ಞೆಯಿಂದ ಎದುರಿಸುತ್ತಾರೆ.

16. ಓವರ್ ಲೋಡ್

16. ಓವರ್ ಲೋಡ್

ಕೆಲವೊಂದು ಬಾರಿ ತುಂಬಿ ತುಳುಕುವ ಬಸ್ ನಲ್ಲೂ ಸಮತೋಲನವನ್ನು ಕಾಪಾಡಬೇಕಾಗುತ್ತದೆ.

15. ಹಿಮಪಾತ

15. ಹಿಮಪಾತ

ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ರಸ್ತೆಯೆನ್ನೆಲ್ಲ ಆವರಿಸಿಬಿಡುತ್ತದೆ.

14. ಹಿಮ ರಸ್ತೆಯ ಸುಂದರ ದೃಶ್ಯ

14. ಹಿಮ ರಸ್ತೆಯ ಸುಂದರ ದೃಶ್ಯ

ರಸ್ತೆಯಿಂದ ತೆರವುಗೊಳಿಸಿರುವ ಹಿಮಪಾತದ ನಡುವೆ ಚಾಲಕನ ಕಸರತ್ತು

13. ಜಾರುವ ರಸ್ತೆ

13. ಜಾರುವ ರಸ್ತೆ

ಇನ್ನು ಮಳೆ ಬತ್ತೆಂದರೆ ಚಾಲಕರು ಎದುರಿಸುವ ಕಷ್ಟವನ್ನು ಹೇಳುವುದೇ ಬೇಡ. ಆದರೂ ಯಾರಿಗೂ ತಮ್ಮ ಕಷ್ಟಗಳನ್ನು ಹೇಳಿಕೊಳ್ಳದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸುತ್ತಾರೆ.

12. ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ

12. ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ

ಇಲ್ಲಿ ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರ ಪ್ರಯತ್ನವನ್ನು ಮೆಚ್ಚಲೇ ಬೇಕಾಗುತ್ತದೆ. ಅಲ್ಲದೆ ಅಪಘಾತಗಳನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ.

11. ಸ್ನೇಹಿತರಂತೆ ವರ್ತನೆ

11. ಸ್ನೇಹಿತರಂತೆ ವರ್ತನೆ

ನಮ್ಮೂರಿನ ಚಾಲಕರ ಕೆಟ್ಟ ವರ್ತನೆ ಪದೇ ಪದೇ ಸುದ್ದಿಯಾಗುತ್ತಲೇ ಇದೆ. ಆದರೆ ಹಿಮಾಚಲ ಪ್ರದೇಶ ಚಾಲಕರು ನಿಮ್ಮ ಜೊತೆ ಸ್ನೇಹಿತರಂತೆ ಬೆರೆತುಕೊಳ್ಳಲಿದ್ದಾರೆ.

10. ಇತರ ವಾಹನಗಳ ಸಂಕಷ್ಟ

10. ಇತರ ವಾಹನಗಳ ಸಂಕಷ್ಟ

ಇತರ ವಾಹನಗಳು ಪ್ರವೇಶವಾದರೆ ಖಂಡಿತ ಸಮಸ್ಯೆಯನ್ನು ಎದುರಿಸಲಿದ್ದಾರೆ. ಆದರೆ ಹಿಮಾಚಲ ಪ್ರದೇಶ ಬಸ್ ಮಾತ್ರ ಸರ್ರನೆ ಮುಂದಕ್ಕೆ ಸಾಗುತ್ತದೆ.

09. ಹವಾಮಾನ ವೈಪರೀತ್ಯ

09. ಹವಾಮಾನ ವೈಪರೀತ್ಯ

ಯಾವುದೇ ರೀತಿಯ ಹವಾಮಾನ ವೈಪರೀತ್ಯ ತಟ್ಟಿದರೂ ಇಲ್ಲಿನ ಸವಾರರಿಗೆ ಇದು ಸಮಸ್ಯೆಯೇನಲ್ಲ ಬಿಡಿ. ಮಂಜು, ಮೋಡ, ಹಿಮಪಾತ, ಮಳೆ, ಗಾಳಿ ಬೀಸಿದರೂ ಸುರಕ್ಷಿತವಾಗಿ ಸಾಗುತ್ತಾರೆ.

08. ಜೀವಮಾನದ ಅನುಭವ

08. ಜೀವಮಾನದ ಅನುಭವ

ಪ್ರತಿಯೊಬ್ಬರೂ ಜಿವಮಾನದಲ್ಲಿ ಒಂದು ಬಾರಿಯಾದರೂ ಹಿಮಾಚಲ ಪ್ರದೇಶದ ಬೆಟ್ಟದಲ್ಲಿ ಹರಡಿರುವ ಕಡಿದಾದ ರಸ್ತೆಗಳಲ್ಲಿ ಸಂಚರಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಯಾಕೆಂದರೆ ಇಂತಹ ಅನುಭವ ಜೀವಮಾನದಲ್ಲಿ ಮರೆಯಲಾರದ ಕ್ಷಣವಾಗಿರಲಿದೆ.

07. ಧೈರ್ಯ ಬೇಕು

07. ಧೈರ್ಯ ಬೇಕು

ಧೈರ್ಯ ಇದ್ದರೆ ಮಾತ್ರ ನಿಮಗಿಲ್ಲಿ ಸಂಚರಿಸಲು ಸಾಧ್ಯ. ಯಾಕೆಂದರೆ ಬಂಡೆಯ ಮೇಲಿಂದ ಕೆಳಕ್ಕೆ ನೋಡಿದರೆ ಮೈ ಜುಝ್ ಅನಿಸಲಿದೆ.

06. ಸಾಹಸಮಯ ಪಯಣ

06. ಸಾಹಸಮಯ ಪಯಣ

ಆಹಾ ನಿಜಕ್ಕೂ ಇದು ಸಾಹಸಮಯ ಪ್ರಯಾಣವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

05. ಪ್ರಕೃತಿ ದರ್ಶನ

05. ಪ್ರಕೃತಿ ದರ್ಶನ

ಹಾಗೊಂದು ವೇಳೆ ಹಿಮಾಚಲ ಪ್ರದೇಶದಲ್ಲಿ ನೀವು ಸುತ್ತಾಡಲು ಬಯಸಿದರೆ ಕಣಿವೆ ರಾಜ್ಯದ ಸುಂದರ ಪ್ರಕೃತಿ ದರ್ಶನವಾಗಲಿದೆ.

04. ಪರಿಣತ ಚಾಲಕರು

04. ಪರಿಣತ ಚಾಲಕರು

ಪರಿಣತ ಚಾಲಕರಿಂದ ಮಾತ್ರ ಇಂತಹ ಸಾಹಸಮಯ ಸವಾಲುಗಳನ್ನು ಎದುರಿಸಲು ಸಾಧ್ಯ.

03. ದುಸ್ತರ ಮಾರ್ಗ

03. ದುಸ್ತರ ಮಾರ್ಗ

ನದಿ ಆಗಿರಬಹುದು, ರಸ್ತೆ ಆಗಿರಬಹುದು ಚಾಲಕರಿಗಂತೂ ಸವಾಲುಗಳು ಕಟ್ಟಿಟ್ಟ ಬುತ್ತಿ

02. ಕರ್ತವ್ಯ ನಿಷ್ಠೆ

02. ಕರ್ತವ್ಯ ನಿಷ್ಠೆ

ಇಷ್ಟೆಲ್ಲ ಕಷ್ಟಗಳನ್ನು ಎದುರಿಸುತ್ತಿದ್ದರೂ ತಮ್ಮ ಸಮಸ್ಯೆಗಳನ್ನು ಯಾರಲ್ಲೂ ಹೇಳಿಕೊಳ್ಳದೇ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿರುವ ಇಲ್ಲಿನ ಚಾಲಕರಿಗೆ ಹಾಟ್ಸಫ್ ಹೇಳಲೇಬೇಕಾಗುತ್ತದೆ.

01. ನಿಜಕ್ಕೂ ಅಲ್ಲವೇ...

01. ನಿಜಕ್ಕೂ ಅಲ್ಲವೇ...

ಈಗ ಮೇಲಿನ ಎಲ್ಲ ರೋಚಕ ಚಿತ್ರಗಳನ್ನು ವೀಕ್ಷಿಸಿದ ಬಳಿಕ ನಿಮ್ಮ ಮನದಲ್ಲಿ ಹೊಳೆಯುವ ಚಿಂತನೆಗಳನ್ನು ನಮ್ಮ ಜೊತೆಗೂ ಹಂಚಿಕೊಳ್ಳಲು ಮರೆಯದಿರಿ..



Most Read Articles

Kannada
English summary
A driver's life is boring, difficult... However, here are a few drivers who are living life on the edge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X