ಭಾರತದ ಐತಿಹಾಸಿಕ 'ಮಂಗಳಯಾನ'

ಸೌರಮಂಡಲದ ಮಂಗಳಗ್ರಹದಲ್ಲಿ ಜೀವಾಧಾರವಾದ 'ಮಿಥೇನ್' ಅನಿಲದ ಕುರುಹು ಪತ್ತೆ ಹಚ್ಚುವ ಪ್ರಯತ್ನದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಮಂಗಳ ನೌಕೆಯನ್ನು ಪಿಎಸ್‌ಎಲ್‌ವಿ-ಸಿ 25 ಉಡಾವಣಾ ವಾಹನದ ಮೂಲಕ ಬಾಹ್ಯಾಕಾಶ್ಯಕ್ಕೆ ಯಶಸ್ವಿಯಾಗಿ ಹಾರಿಬಿಡಲಾಗಿದೆ.

ಈ ಐತಿಹಾಸಿಕ ಕ್ಷಣಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀತ್ ಧವನ್ ಬಾಹ್ಯಾಕಾಶ ಕೇಂದ್ರ ಸಾಕ್ಷಿಯಾಗಿತ್ತು. ಭಾರತ ತನ್ನ ಈ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಲ್ಲಿ ಇಂತಹ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶವೆಂಬ ಹಿರಿಮೆಗೆ ಪಾತ್ರವಾಗಲಿದೆ.

450 ಕೋಟಿ ರು. ವೆಚ್ಚದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಇಸ್ರೊ ಕೈಗೊಳ್ಳುತ್ತಿರುವ 'ಮಂಗಳಯಾನ' ಜಾಗತಿಕ ಮಟ್ಟದಲ್ಲೂ ಅತ್ಯಂತ ಕುತೂಹಲ ಕೆರಳಿಸಿದೆ. ಯಾಕೆಂದರೆ ಅಮೆರಿಕ, ರಷ್ಯಾದಂತಹ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳು ಮಂಗಳ ಗ್ರಹಕ್ಕೆ ನೌಕೆಗಳನ್ನು ಕಳುಹಿಸಿಕೊಟ್ಟಿದ್ದರೂ ಮಿಥೇನ್ ಅಂಶವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಠ

ಭಾರತದ ಐತಿಹಾಸಿಕ 'ಮಂಗಳಯಾನ'

ಇಸ್ರೊ ಪಿಎಸ್‌ಎಲ್‌ವಿ-ಸಿ25 ಉಡಾವಣೆಗೊಂಡ 44 ನಿಮಿಷಗಳಲ್ಲಿ ಕಕ್ಷೆಗೆ ತಲುಪಲಿದೆ. ಆ ಬಳಿಕ 25ರಿಂದ 25 ದಿನಗಳ ಕಾಲ ಭೂಕಕ್ಷೆಯಲ್ಲಿ ಸುತ್ತಾಡುವ ನೌಕೆ, ಡಿಸೆಂಬರ್‌ನಲ್ಲಿ ಮಂಗಳಯಾನ ಆರಂಭಿಸಲಿದ್ದು, 2014 ಸೆಪ್ಟೆಂಬರ್ 24ರಂದು ಮಂಗಳ ಗ್ರಹಕ್ಕೆ ತಲುಪುವ ನಿರೀಕ್ಷೆಯಿದೆ.

ಭಾರತದ ಐತಿಹಾಸಿಕ 'ಮಂಗಳಯಾನ'

ಮಂಗಳಯಾನದ ಉಪಗ್ರಹದ ಒಟ್ಟು ತೂಕ 1350 ಕೆ.ಜಿ. ಆಗಿದೆ. ಈ ಪೈಕಿ ಪಿಎಸ್‌ಎಲ್‌ವಿ-ಸಿ25 ರಾಕೆಟ್ ತೂಕ 500 ಕೆ.ಜಿ ಆಗಿದೆ.

ಭಾರತದ ಐತಿಹಾಸಿಕ 'ಮಂಗಳಯಾನ'

ನಿಮ್ಮ ಮಾಹಿತಿಗಾಗಿ ಜಾಗತಿಕವಾಗಿ ಇದುವರೆಗೆ ಕೈಗೊಂಡಿರುವ 51 ಯೋಜನೆಗಳಲ್ಲಿ 21 ವಿಫಲವಾಗಿದೆ. ಹಾಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಕ್ಕೆ ಕಳುಹಿಸುವ ಈ ಉಪಗ್ರಹ ಯಶಸ್ವಿ ಕಾಣಲಿದೆಯೇ ಎಂಬುದು ಕುತೂಹಲವೆನಿಸಿದೆ.

ಭಾರತದ ಐತಿಹಾಸಿಕ 'ಮಂಗಳಯಾನ'

ಈ 44.4 ಮೀಟರ್ ಎತ್ತರದ ಮಂಗಳಯಾನ ಗಗನ ನೌಕೆ ಒಟ್ಟು 400 ಮಿಲಿಯನ್ ದೂರ ಕ್ರಮಿಸಲಿದೆ. ಇದು ಮಂಗಳ ಗ್ರಹದ ಮೇಲ್ಮೈ ಲಕ್ಷಣ ಸೇರಿದಂತೆಯೇ ಪ್ರಮುಖವಾಗಿ ಮಿಥೇನ್ ಅನಿಲ ಸಾಧ್ಯತೆಯನ್ನು ಪರೀಕ್ಷಿಸಲಿದೆ.

ಭಾರತದ ಐತಿಹಾಸಿಕ 'ಮಂಗಳಯಾನ'

ಇದು ಮಂಗಳ ಗ್ರಹದ ಮೇಲೆ ಭಾರತದ ಪ್ರಪ್ರಥಮ ಉಪಗ್ರಹ ಉಡಾವಣೆಯಾಗಿರಲಿದೆ. ಅಲ್ಲದೆ 'ತಾಂತ್ರಿಕ ಪ್ರದರ್ಶಕ' ಎಂಬ ಯೋಜನೆಯಿಂದ ಅರಿಲ್ಪಡುತ್ತದೆ.

ಭಾರತದ ಐತಿಹಾಸಿಕ 'ಮಂಗಳಯಾನ'

ಸೋಲರ್ ಸೆಲ್‌ಗಳಿಂದ ನಿಯಂತ್ರಿಸಲ್ಪಡುವ ಮಂಗಳಯಾನ ಮಿಷನ್ ಕಾಲಾವಧಿ 300 ದಿನಗಳಾಗಿದೆ.

ಭಾರತದ ಐತಿಹಾಸಿಕ 'ಮಂಗಳಯಾನ'

ಅಂದ ಹಾಗೆ ಉಪಗ್ರಹದ ಮೇಲೆ ಬೆಂಗಳೂರು, ಅಂಡಮಾನ್ ನಿಕೋಬಾರ್ ಹಾಗೂ ಮಲೇಷ್ಯಾದಲ್ಲಿ ಇಸ್ರೋ ಕೇಂದ್ರಗಳು ನಿಗಾವಹಿಸಲಿದೆ. ಅಷ್ಟೇ ಅಲ್ಲದೆ ಇದರ ವೀಕ್ಷಣೆಗಾಗಿ ಸಮದ್ರದಲ್ಲಿ ಎರಡು ಹಡಗುಗಳನ್ನು ನಿಲ್ಲಿಸಲಾಗಿದೆ.


Most Read Articles

Kannada
English summary
Isro is just a few hours away from its historic mission to Mars, its first-ever launch outside the Earth's sphere of influence in its 44-year-long history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X