ಐಎನ್‌ಎಸ್ ಕೊಚ್ಚಿ: ಸ್ವದೇಶಿ ನಿರ್ಮಿತ ಬೃಹತ್ ಯುದ್ಧ ನೌಕೆ

By Nagaraja

ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿರುವ ಐಎನ್‌ಎಸ್ ಕೊಚ್ಚಿ ಬೃಹತ್ ಯುದ್ಧ ನೌಕೆಯನ್ನು ಲೋಕಾರ್ಪಣೆ ಮಾಡಲಾಗಿದೆ. ರಹಸ್ಯ ನಿರ್ದೇಶಿತ ಕ್ಷಿಪಣಿ ನಾಶಕ ತಂತ್ರಜ್ಞಾನವನ್ನು ಒಳಗೊಂಡಿರುವ ಐಎನ್‌ಎಸ್ ಕೊಚ್ಚಿ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠಗೊಂಡಿದೆ.

ಮುಂಬೈ ನೌಕಾಂಗಣದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಐಎನ್‌ಎಸ್ ಕೊಚ್ಚಿಗೆ ಚಾಲನೆ ನೀಡಿದರು. ಪ್ರಸ್ತುತ ಲೇಖನದಲ್ಲಿ ಐಎನ್‌ಎಸ್ ಕೊಚ್ಚಿ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಿಕೊಡಲಾಗುವುದು.

ಸ್ವದೇಶಿ ಯುದ್ಧ ನೌಕೆ

ಸ್ವದೇಶಿ ಯುದ್ಧ ನೌಕೆ

ಐಎನ್‌ಎಸ್ ಕೊಚ್ಚಿ ಭಾರತದಲ್ಲಿ ನಿರ್ಮಾಣವಾಗಿರುವ ಅತಿ ದೊಡ್ಡ ಯುದ್ಧ ನೌಕೆಯಾಗಿದೆ.

ವಿನ್ಯಾಸ

ವಿನ್ಯಾಸ

ಪ್ರಸ್ತುತ ಯುದ್ಧ ಹಡಗನ್ನು ನೌಕಾ ವಿನ್ಯಾಸದ ನಿರ್ದೇಶನಾಲಯದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮುಂಬೈನ ಮೆಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ನಿರ್ಮಿಸಿದೆ.

ಭಾರ, ಉದ್ದಗಲ

ಭಾರ, ಉದ್ದಗಲ

ಐಎನ್‌ಎಸ್ ಕೊಚ್ಚಿ 7500 ಟನ್ ತೂಕವಿದ್ದು, 164 ಮೀಟರ್ ಉದ್ದ ಹಾಗೂ 17 ಮೀಟರ್ ಅಗಲವಿದೆ.

ವೇಗ

ವೇಗ

ನಾಲ್ಕು ಗ್ಯಾಸ್ ಟರ್ಬೈನ್ ಗಳಿಂದ ನಿಯಂತ್ರಿಸಲ್ಪಡುವ ಐಎನ್‌ಎಸ್ ಕೊಚ್ಚಿ, 30 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಾಮರ್ಥ್ಯ

ಸಾಮರ್ಥ್ಯ

ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆ ಹಾಗೂ ಪ್ರತಿದಾಳಿಗೆ ನೆರವಾಗಬಲ್ಲ ಐಎನ್‌ಎಸ್ ಕೊಚ್ಚಿ ಯುದ್ದ ನೌಕೆಯಲ್ಲಿ 40 ಅಧಿಕಾರಿಗಳು ಮತ್ತು 350 ಸೈನಿಕರಿಗೆ ಪ್ರಯಾಣಿಸಲು ಅವಕಾಶವಿರುತ್ತದೆ.

ಧ್ಯೇಯೋಕ್ತಿ

ಧ್ಯೇಯೋಕ್ತಿ

"ಶತ್ರುಗಳ ಆಕ್ರಮಣಕ್ಕಾಗಿ ಶಸ್ತ್ರಾಸ್ತ್ರ" (Armed to conquer the enemy) ಎಂಬ ಧ್ಯೇಯವಾಕ್ಯವನ್ನು ಇದು ಹೊಂದಿರುತ್ತದೆ.

ಶಸ್ತ್ರಾಸ್ತ್ರ

ಶಸ್ತ್ರಾಸ್ತ್ರ

ಸಂಪೂರ್ಣ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಈ ಯುದ್ಧ ಹಡಗಿನಲ್ಲಿ ಬ್ರಹ್ಮೋಸ್, ಸೂಪರ್ ರಾಪಿಡ್, ಎ.ಕೆ 630 ಮತ್ತತ್ತಿರ ಶಸ್ತ್ರಾಸ್ತ್ರಗಳಿರಲಿದೆ.

ಐಎನ್ಎಸ್ ಕೋಲ್ಕತ್ತಾ

ಐಎನ್ಎಸ್ ಕೋಲ್ಕತ್ತಾ

ನಿಮ್ಮ ಮಾಹಿತಿಗಾಗಿ ಐಎನ್‌ಎಸ್ ಕೊಚ್ಚಿ, ಕೋಲ್ಕತ್ತಾ ಕ್ಲಾಸ್ ವಿಧ್ವಂಸಕಗಳಲ್ಲಿ (ಪ್ರೊಜೆಕ್ಟ್ 15ಎ) ನಿರ್ಮಾಣವಾಗಿರುವ ಎರಡನೇ ಹಾಗೂ ಒಟ್ಟಾರೆಯಾಗಿ ದೇಶದ 10ನೇ ಯುದ್ಧ ನೌಕೆ ಇದಾಗಿದ್ದು, ಸರಿ ಸುಮಾರು 4,000 ಕೋಟಿ ರು.ಗಳ ವೆಚ್ಚದಲ್ಲಿ ಮುಂಬೈನ ಮೆಝಗಾಂಗ್ ಡಾಕ್ ನಲ್ಲಿ ನಿರ್ಮಾಣವಾಗಿದೆ. ಕಳೆದ ವರ್ಷದಲ್ಲೇ ಐಎನ್‌ಎಸ್ ಕೋಲ್ಕತ್ತಾ ಭಾರತೀಯ ನೌಕಾಪಡೆಯನ್ನು ಸೇರ್ಪಡೆಗೊಂಡಿತ್ತು. ಇದನ್ನೀಗ ಮುಂದಿನ ವರ್ಷ ಐಎನ್‌ಎಸ್ ಚೆನ್ನೈ ಹಿಂಬಾಲಿಸಲಿದೆ.

Most Read Articles

Kannada
English summary
INSKochi, India's largest-ever warship commissioned at Naval Dockyard in Mumbai.
Story first published: Thursday, October 1, 2015, 11:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X