ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

By Nagaraja

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ 1945ನೇ ಇಸವಿಯಲ್ಲಿ ನಡೆದ ಎರಡನೇ ಮಹಾಯುದ್ಧದ ಬಳಿಕ ಜಪಾನ್ ದೇಶದ ಮೇಲೆ ನಿರ್ಬಂಧ ಹೇರಲಾಗಿತ್ತು. ಇದರಂತೆ ಯಾವುದೇ ವಿದೇಶಿ ರಾಷ್ಟ್ರಗಳು ಜಪಾನ್‌ನೊಂದಿಗೆ ಮಿಲಿಟರಿ ಒಪ್ಪಂದ ಮಾಡುವುದಾಗಲಿ ಅಲ್ಲಿನ ಶಸ್ತ್ರಾಸ್ತ್ರಗಳನ್ನು ಖರೀದಿಸುವುದನ್ನು ತಡೆ ಹಿಡಿಯಲಾಗಿತ್ತು.

ಇವನ್ನೂ ಓದಿ: ವಿಶ್ವದ ಟಾಪ್ 10 ಯುದ್ಧ ವಾಯುಪಡೆಗಳು

ಆದರೆ ಇದೀಗ ಎರಡನೇ ಮಹಾಯುದ್ಧ ಕಳೆದ 69 ವರ್ಷಗಳ ಬಳಿಕ ಜಪಾನ್ ದೇಶದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ಮುಂದಾಗುತ್ತಿರುವ ಭಾರತ 15 ಯುದ್ಧ ವಿಮಾನಗಳನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಎರಡನೇ ಮಹಾಯುದ್ಧದ ಬಳಿಕ ಜಪಾನ್ ರಾಷ್ಟ್ರದಿಂದ ಮಿಲಿಟರಿ ಯುದ್ಧ ವಿಮಾನ ಖರೀದಿಸಲು ಧೈರ್ಯ ತೋರಿರುವ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಪಾತ್ರವಾಗಲಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಇತ್ತೀಚೆಗಷ್ಟೇ ಜಪಾನ್ ಭೇಟಿ ಮಾಡಿರುವ ನರೇಂದ್ರ ಮೋದಿ ಈ ಸಂಬಂಧ ಮಾತುಕತೆಗೆ ಚುರುಕು ಮುಟ್ಟಿಸಿದ್ದಾರೆ ಎನ್ನಲಾಗಿದೆ. ಅಂದ ಹಾಗೆ ಭಾರತ 1.65 ಬಿಲಿಯನ್ ಅಮೆರಿಯನ್ ಡಾಲರ್ ವೆಚ್ಚದಲ್ಲಿ ಉಭಯಚರ (ಗಾಳಿ ಹಾಗೂ ನೀರಲ್ಲಿ ತೇಲಾಡುವ) ಯುದ್ಧ ವಿಮಾನ ಶಿನ್‌ಮೆಯ್ವಾ ಯುಎಸ್-2 (Shinmaywa US2 Amphibious Aircraft) ಖರೀದಿಸುವ ಯೋಜನೆ ಹೊಂದಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಜಪಾನ್ ಸೇನೆಯಿಂದ ಬಳಕೆಯಲ್ಲಿರುವ ಪ್ರಸ್ತುತ ಯುದ್ಧ ವಿಮಾನವನ್ನು ಭಾರತದಲ್ಲೇ ಜೋಡಣೆ ಮಾಡುವ ಯೋಜನೆ ಹೊಂದಲಾಗಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಪ್ರಮುಖವಾಗಿಯೂ ರಕ್ಷಣಾ ಕಾರ್ಯಾಚರಣೆ ಮತ್ತು ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಶಿನ್‌ಮಯ್ವಾ ನೆರವಿಗೆ ಬರಲಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಇನ್ನು ಭಾರತೀಯ ಸೇನೆಯು ಶಿನ್‌ಮಯ್ವಾ ಯುದ್ಧ ವಿಮಾನಗವನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ನೆಲೆಯಲ್ಲಿ ಸ್ಥಾಪಿಸುವ ಇರಾದೆ ಹೊಂದಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಸದ್ಯ ಜಪಾನ್ ಸೇನೆಯಲ್ಲಿ ಮಾತ್ರ ಇರುವ ಶಿನ್‌ಮಯ್ವಾ ಯುಎಸ್ 2 ಏರ್-ಸೀ ಏರ್‌ಕ್ರಾಫ್ಟ್‌, 9.8 ಮೀಟರ್ ಎತ್ತರ, 33.46 ಮೀಟರ್ ಉದ್ದ ಮತ್ತು 43,000 ಕೆ.ಜಿ ತೂಕವನ್ನು ಹೊಂದಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಇದು ಗಂಟೆಗೆ 560 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂತೆಯೇ 4,700 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಜಾಗತಿಕ ಮಟ್ಟದಲ್ಲಿ ಚೀನಾ ಸೂಪರ್ ನ್ಯಾಚುರಲ್ ಶಕ್ತಿಯಾಗಿ ಬೆಳೆದು ಬರುತ್ತಿರುವ ಈ ಸಂದರ್ಭದಲ್ಲಿ ಭಾರತ-ಜಪಾನ್ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದು ಗಮನಾರ್ಹವೆನಿಸಲಿದೆ. ಅಲ್ಲದೆ ಹಿಂದೂ ಮಹಾ ಸಾಗರದಲ್ಲಿ ಭಾರತ ತನ್ನ ಸಾನಿಧ್ಯವನ್ನು ಇನ್ನಷ್ಟು ಗಟ್ಟಿಪಡಿಸಲಿದೆ.

ಜಪಾನ್‌ನಿಂದ 15 ಯುದ್ಧ ವಿಮಾನ ಖರೀದಿಸಲಿರುವ ಭಾರತ

ಜಪಾನ್‌ನಿಂದ ಒಟ್ಟು 15 ಯುದ್ಧ ವಿಮಾನಗಳನ್ನು ಭಾರತ ಖರೀದಿಸುವ ಸಾಧ್ಯತೆಯಿದೆ. ಈ ಮೂಲಕ ಜಪಾನ್‌ನ ಅತಿದೊಡ್ಡ ಏರ್-ಸೀ ಯುದ್ಧ ವಿಮಾನ ಭಾರತ ಪ್ರವೇಶ ಪಡೆಯಲಿದೆ.

Most Read Articles

Kannada
English summary
India and Japan are in broad agreement on a deal for the ShinMaywa Industries (7224.T) amphibious aircraft, which could amount to as much as $1.65 billion, Indian officials said..
Story first published: Wednesday, September 10, 2014, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X