ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಶಸ್ತ್ರಸಜ್ಜಿತ ರೈಲುಗಳ ಬಗೆಗಿನ ಕೆಲವು ಕುತೂಹಲದಾಯಕ ಅಂಶ ಮತ್ತು ಇತಿಹಾಸದ ಜೊತೆಗಿನ ನಂಟಿನ ಬಗ್ಗೆ ಇಲ್ಲಿ ವಿವರಿಸಲಿದ್ದೇವೆ.

By Nagaraja

ಆಧುನಿಕ ಕಾಲಘಟ್ಟದಲ್ಲಿ ಯುದ್ಧ ಎದುರಾದಾಗ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ, ಯುದ್ಧ ಹಡಗು, ಯುದ್ಧ ಟ್ಯಾಂಕರ್ ಇತ್ಯಾದಿ ವಾಹನಗಳನ್ನು ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ. ಆದರೆ ಇದಕ್ಕೂ ಮೊದಲು ಯುದ್ಧ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದೇ? ಪ್ರಾಚೀನ ರಾಜರ ಕಾಲಘಟ್ಟದಲ್ಲಿ ಯುದ್ಧ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಆನೆಗಳನ್ನು ಬಳಕೆ ಮಾಡಲಾಗುತ್ತಿದ್ದವು. ಅಲ್ಲಿಂದ ಬಳಿಕ ಕ್ರಮೇಣ ಪರಿಸ್ಥಿತಿ ಬದಲಾಗತೊಡಗಿತ್ತು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

19ನೇ ಶತಮಾನದಲ್ಲಿ ರೈಲುಗಳ ಅವಿಷ್ಕರದ ಬಳಿಕ ಯುದ್ಧ ಪರಿಸ್ಥಿತಿ ಬದಲಾಗ ತೊಡಗಿತ್ತು. ಸಾಮ್ರಾಜ್ಯ ಶಾಹಿ ರಾಷ್ಟ್ರಗಳು ತಮ್ಮ ವಸಾಹತು ನೀತಿಯೊಂದಿಗೆ ಯುದ್ಧ ತಂತ್ರಗಾರಿಕೆಯಲ್ಲೂ ಗಣನೀಯವಾದ ಬದಲಾವಣೆಗಳನ್ನು ತಂದಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಅಮೆರಿಕ ನಾಗರಿಕ ಯುದ್ಧ ಸೇರಿದಂತೆ ಒಂದನೇ ಮತ್ತು ಎರಡನೇ ಮಹಾಯುದ್ಧ ಕಾಲಘಟ್ಟದಲ್ಲಿ ಇಂತಹ ಆರ್ಮರ್ಡ್ ರೈಲುಗಳು ಅಥವಾ ಶಸ್ತ್ರಸಜ್ಜಿತ ರೈಲುಗಳು ಯುದ್ಧಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಇತಿಹಾಸ ತಜ್ಞರ ಪ್ರಕಾರ 19ನೇ ಹಾಗೂ 20ನೇ ಶತಮಾನದಲ್ಲಿ ಶಸ್ತ್ರಾಸ್ತ್ರ ಸಜ್ಜಿತ ರೈಲುಗಳನ್ನು ಅತಿ ಹೆಚ್ಚು ಬಳಕೆ ಮಾಡಲಾಗಿತ್ತು. ಇದನ್ನು ವಿಶೇಷವಾಗಿ ಸಜ್ಜೀಕರಿಸಲಾದ ರೈಲುಗಳಿಂದ ಸಾಗಿಸಲಾಗುತ್ತಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಸಂಪೂರ್ಣವಾಗಿ ಭದ್ರವಾಗಿರುವ ಇಂತಹ ರೈಲುಗಳು ಶಸ್ತ್ರಾಸ್ತ್ರಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ನೆರವಾಗುತ್ತಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಬಳಿಕ ರಸ್ತೆ ಮೂಲಸೌಲಭ್ಯವು ವೃದ್ಧಿಯಾಗ ತೊಡಗಿದ ಬಳಿಕ ಹೆಚ್ಚೆಚ್ಚು ಆಧುನಿಕ ಯುದ್ಧ ವಾಹನಗಳ ಪ್ರವೇಶವಾಗತೊಡಗಿದ್ದವು. ಇದರೊಂದಿಗೆ ಆರ್ಮರ್ಡ್ ರೈಲುಗಳ ಬೇಡಿಕೆ ಕ್ರಮೇಣ ನಿಂತು ಹೋಗಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ರಸ್ತೆ ಮಾರ್ಗಕ್ಕೆ ಹೋಲಿಸಿದಾಗ ನಿಶ್ಚಿತ ರೈಲು ಮಾರ್ಗದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸುವುದು ಸುರಕ್ಷತೆಯ ದೃಷ್ಟಿಕೋನದಲ್ಲಿ ಹಿತಕರವಾಗಿರಲಿಲ್ಲ. ಹಾಗಾಗಿ ನಿಧಾನವಾಗಿ ಶಸ್ತ್ರಾಸ್ತ್ರ ರೈಲುಗಳು ಹಿನ್ನಡೆ ಅನುಭವಿಸಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

1861ರಿಂದ 1865ರ ವರೆಗೆ ನಡೆದ ಅಮೆರಿಕ ನಾಗರಿಕ ಯುದ್ಧದಲ್ಲಿ ಆರ್ಮರ್ಡ್ ರೈಲುಗಳ ಉಗಮವಾಗಿತ್ತು. ಅಲ್ಲಿಂದ ಬಳಿಕ ಫ್ರಾಂಕೊ-ಪ್ರುಸ್ಸಿಯನ್ ಯುದ್ಧ (1870-1871), ಮೊದಲನೇ ಮತ್ತು ಎರಡನೇ ಬೋರ್ ಯುದ್ಧಗಳಲ್ಲೂ (1880-1881 ಮತ್ತು 1899-1902) ಶಸ್ತ್ರಾಸ್ತ್ರ ರೈಲುಗಳ ಸಾನಿಧ್ಯ ಕಂಡುಬಂದಿತ್ತು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

20ನೇ ಶತಮಾನದ ಆರಂಭದಲ್ಲಿ ನಡೆದ ರುಸ್ಸೋ-ಜಪಾನೀಸ್ ಯುದ್ಧದಲ್ಲಿ ಆರ್ಮರ್ಡ್ ರೈಲುಗಳನ್ನು ರಷ್ಯಾ ಹೆಚ್ಚೆಚ್ಚು ಬಳಕೆ ಮಾಡಿದ್ದವು. ತದಾ ಬಳಿಕ ಮೆಕ್ಸಿಕನ್ ಕ್ರಾಂತಿ (1910-1920), ಮೊದಲನೇ ಲೋಕ ಮಹಾಯುದ್ಧ (1914-1918) ಗಳಲ್ಲೂ ಇದರ ಬಳಕೆಯಾಗಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಶಸ್ತ್ರಸಜ್ಜಿತ ರೈಲುಗಳ ಅತ್ಯಂತ ತೀವ್ರವಾದ ಬಳಕೆಯು ರಷ್ಯನ್ ನಾಗರಿಕ ಯುದ್ಧದಲ್ಲಿ (1918-1920) ಕಂಡುಬಂದಿತ್ತು. ಸ್ಪಾನಿಶ್ ನಾಗರಿಕ ಯುದ್ಧದಲ್ಲೂ ಇದರ ಸಾನಿಧ್ಯವಿತ್ತು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಎರಡನೇ ಲೋಕ ಮಹಾಯುದ್ಧ ಕಾಲಘಟ್ಟದಲ್ಲೂ (1939-1945) ಆರ್ಮರ್ಡ್ ರೈಲುಗಳ ಬಳಕೆ ಜೋರಾಗಿ ಕಂಡುಬಂದಿದ್ದವು. ಮೊದಲನೇ ಇಂಡೋ-ಚೀನಾ ಯುದ್ಧದಲ್ಲೂ ಫ್ರಾನ್ಸ್ ಅತೀವವಾಗಿ ಶಸ್ತ್ರಸಜ್ಜಿತ ರೈಲುಗಳನ್ನು ಆಶ್ರಯಿಸಿಕೊಂಡಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಎರಡನೇ ವಿಶ್ವ ಮಹಾಯುದ್ಧ ಬಳಿಕ ನಡೆದ ಶೀತಲ ಸಮರ ಕಾಲಘಟ್ಟದಲ್ಲಿ ಬಹುತೇಕ ರಾಷ್ಟ್ರಗಳು ಶಸ್ತ್ರಸಜ್ಜಿತ ರೈಲುಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದವು. ಅಂತಿಮವಾಗಿ 1990ರ ಯುಗೋಸ್ಲಾವ್ ಯುದ್ಧದಲ್ಲಿ ಕೊನೆಯದಾಗಿ ಆರ್ಮರ್ಡ್ ರೈಲುಗಳು ಪಾತ್ರ ವಹಿಸಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಯುದ್ಧ ಶಸ್ತ್ರಾಸ್ತ್ರಗಳನ್ನು ಸಾಗಿಸುವುದು ಮಾತ್ರವಲ್ಲದೆ ಯುದ್ಧಕ್ಕೆ ಬೇಕಾದ ಅಗತ್ಯ ಸೈನಿಕರನ್ನು ಇಂತಹ ರೈಲುಗಳ ಮೂಲಕ ರವಾನಿಸಲು ಸಾಧ್ಯವಾಗುತ್ತಿದ್ದವು. ತೀರ ಪ್ರದೇಶ ರಕ್ಷಣೆಯಲ್ಲೂ ನಿರ್ಣಾಯಕ ಪಾತ್ರ ವಹಿಸಿತ್ತು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಯುದ್ಧ ನೀತಿಯಲ್ಲಿ ಬಂದ ಬದಲಾವಣೆಯು ಕ್ರಮೇಣ ಶಸ್ತ್ರಾಸ್ತ್ರ ಸಜ್ಜಿತ ರೈಲುಗಳ ಬೇಡಿಕೆ ಕುಂದಲು ಕಾರಣವಾಗಿತ್ತು. ಕ್ಲಿಷ್ಟಕರ ಭೂ ಪ್ರದೇಶದಲ್ಲಿ ಮುನ್ನುಗ್ಗಬಲ್ಲ ಯುದ್ಧ ಟ್ಯಾಂಕರ್ ಗಳು ಮತ್ತು ಆಕಾಶದಲ್ಲಿ ಯುದ್ಧ ವಿಮಾನಗಳ ಹಾರಾಟದೊಂದಿಗೆ ಆರ್ಮರ್ಡ್ ರೈಲುಗಳು ಅಪ್ರತ್ಯಕ್ಷವಾಗಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಮೊದಲೇ ನಿರ್ಮಿಸಿರುವ ರೈಲು ಹಳಿಯಲ್ಲಿ ಮಾತ್ರ ಸಾಗಲು ಸಾಧ್ಯ ಎಂಬುದು ಶಸ್ತ್ರಾಸ್ತ್ರ ಸಜ್ಜಿತ ರೈಲಿಗೆ ಭಾರಿ ಹಿನ್ನಡೆಯನ್ನುಂಟು ಮಾಡಿದ್ದವು. ಇದರಿಂದ ಶತ್ರು ರಾಷ್ಟ್ರಗಳಿಗೆ ಬೇಕಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಬೇಕಾದಷ್ಟು ಸಮಯ ದೊರಕುತ್ತಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಅಂದ ಹಾಗೆ ಹಲವು ವಿಧದ ಶಸ್ತ್ರಸಜ್ಜಿತ ರೈಲುಗಳು ಮತ್ತು ಅವುಗಳ ಪಾತ್ರಗಳನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗುವುದು.

ಫಿರಂಗಿ

ಫಿರಂಗಿ

ಇವುಗಳು ಗನ್, ಮೆಷಿನ್ ಗನ್ ಮತ್ತು ರಾಕೆಟ್ ಲಾಂಚರ್ ಗಳನ್ನು ಒಳಗೊಂಡಿದ್ದವು.

ಕಾಲಾಳು ಪಡೆ

ಕಾಲಾಳು ಪಡೆ

ಮೆಷಿನ್ ಗನ್ ಜೊತೆಗೆ ಸೈನಿಕ ಪಡೆಯನ್ನು ಸಾಗಿಸಲು ಬಳಕೆ ಮಾಡುತ್ತಿದ್ದವು.

ಮೆಷಿನ್ ಗನ್

ಮೆಷಿನ್ ಗನ್

ಮೆಷಿನ್ ಗನ್ ಗೆ ಮಾತ್ರ ಮೀಸಲಿಟ್ಟ ರೈಲು

ವಿಮಾನ ನಿರೋಧಕ

ವಿಮಾನ ನಿರೋಧಕ

ಇಂತಹ ರೈಲುಗಳು ವಿಮಾನ ನಿರೋಧಕ ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡಿದ್ದವು.

ಕಮಾಂಡ್

ಕಮಾಂಡ್

ಕಾಲಾಳು ಪಡೆಗೆ ಸಮಾನವಾದ ಈ ಶಸ್ತ್ರಾಸ್ತ್ರ ರೈಲು ಕಮಾಂಡ್ ಕೇಂದ್ರವನ್ನು ಹೊಂದಿತ್ತು.

ಟ್ಯಾಂಕ್ ನಿರೋಧಕ

ಟ್ಯಾಂಕ್ ನಿರೋಧಕ

ಟ್ಯಾಂಕ್ ನಿರೋಧಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದ್ದವು.

ಫ್ಲ್ಯಾರ್ಟ್ ಫಾರ್ಮ್

ಫ್ಲ್ಯಾರ್ಟ್ ಫಾರ್ಮ್

ಯುದ್ಧ ಸಾಮಾಗ್ರಿ ಅಥವಾ ವಾಹನಗಳನ್ನು ಸಾಗಿಸಲು ಬಳಕೆ ಮಾಡಲಾಗಿತ್ತು. ಇವುಗಳು ಹಳಿ ರಿಪೇರಿ, ಹಳಿ ಭದ್ರತೆ, ತಪ್ಪಿದ ಹಳಿಯನ್ನು ಸರಿಪಡಿಸುವ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದವು.

ಇಡೀ ಲೋಕವನ್ನೇ ನಡುಗಿಸಿದ ಶಸ್ತ್ರಸಜ್ಜಿತ ರೈಲು

ಏತನ್ಯಧ್ಯೆ 1999ರಿಂದ 2009ರ ವರೆಗೆ ನಡೆದ ರಷ್ಯನ್ ಎರಡನೇ ಚೆಚೆನ್ ಯುದ್ಧದಲ್ಲೂ ರಷ್ಯನ್ ಫೆಡರೇಷನ್ ನವೀಕೃತ ಶಸ್ತ್ರಸಜ್ಜಿತ ರೈಲುಗಳನ್ನು ಬಳಕೆ ಮಾಡಿದ್ದವು.

Most Read Articles

Kannada
English summary
Interesting Facts About Armoured Trains
Story first published: Tuesday, November 29, 2016, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X