ಐಪಿಎಲ್ ಸ್ಟಾರ್‌ಗಳಿಗಿಂತ ನಾವೇನ್ ಕಮ್ಮಿ ಇಲ್ಲ !! ಎನ್ನುತ್ತಿದ್ದಾರೆ ಐಪಿಎಲ್ ತಂಡದ ಮಾಲೀಕರು

Written By:

'ಐಪಿಎಲ್' ಬಗ್ಗೆ ಒಂದು ಗುಂಪು ಚರ್ಚೆಗೆ ಶುರುವಿಟ್ಟುಕೊಂಡರೆ ಖಂಡಿತವಾಗಿಯೂ 'ಐಪಿಎಲ್' ಸ್ಟಾರ್‌ಗಳ ಕಾರುಗಳ ಬಗ್ಗೆ ಚರ್ಚಿಸದೆ ಕೊನೆಗೊಳ್ಳುವುದಿಲ್ಲ ಎಂಬುದು ಸತ್ಯ ಸಂಗತಿ. ಐಪಿಎಲ್ ಆಟಗಾರರಂತೆ ಐಪಿಎಲ್ ತಂಡ ಹೊಂದಿರುವ ಮಾಲೀಕರೂ ಕೂಡ ಹೆಚ್ಚಿನ ಒಲವು ಹೊಂದಿದ್ದಾರೆ.

ಹೌದು, ಪ್ರತಿಯೊಂದು ಐಪಿಎಲ್ ತಂಡದ ಒಡೆಯರೂ ಕೂಡ ಐಷಾರಾಮಿ ಕಾರುಗಳನ್ನು ಹೊಂದಿದ್ದು, 'ಐಪಿಎಲ್' ಸ್ಟಾರ್‌‌ಗಳಿಗಿಂತ ತಾವೇನೂ ಕಮ್ಮಿ ಇಲ್ಲ ಎಂಬುದನ್ನು ಈ ಮೂಲಕ ಸಾರಿ ಹೇಳಿದ್ದು, 'ಐಪಿಎಲ್' ತಂಡದ ಒಡೆಯರ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರಾಯಲ್ ಚಾಲೆಂಜರ್s ಬೆಂಗಳೂರು

ಯುನೈಟೆಡ್ ಸ್ಪಿರಿಟ್ಸ್ ಒಡೆತನದ ಈ ತಂಡ 111.6 ಮಿಲಿಯನ್ ಡಾಲರು ಬೆಲೆ ಹೊಂದಿದ್ದು, ಎರಡನೇ ಅತ್ಯಂತ ದುಬಾರಿ ಐಪಿಎಲ್ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಆರ್‌ಸಿಬಿ ಬಗ್ಗೆ ಮಾತನಾಡುವಾಗ ಖಂಡಿತ ನಮ್ಮ ಮನಸ್ಸಿನಲ್ಲಿ ಬರುವ ಗಮನಾರ್ಹ ವ್ಯಕ್ತಿ ವಿಜಯ್ ಮಲ್ಯ.

 

ವಿಜಯ ಮಲ್ಯ ಅವರು ಕ್ಲಾಸಿಕ್ ಕಾರುಗಳಿಂದ ಹಿಡಿದು ರೇಸ್ ಕಾರುಗಳ ತನಕ ಹಲವಾರು ಕಾರುಗಳನ್ನು ಹೊಂದಿದ್ದು, ಅವುಗಳಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವ ಮತ್ತು ಆಕರ್ಷಕ ಕಾರು ಎಂದರೆ ಫೆರಾರಿ 275 ಜಿಟಿಬಿ.

ಟ್ರಾನ್ಸ್ಆಕ್ಸ್‌ಸಲ್ ಹೊಂದಿರವ ಮೊಟ್ಟ ಮೊದಲ ಕಾರು ಎಂಬ ಹೆಗ್ಗಳಿಕೆಯನ್ನು ಈ ಕಾರು ಹೊಂದಿದ್ದು, ಎಲ್ಲಾ ಫೆರಾರಿ ಕಂಪನಿಯ ಹಿತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಪ್ರಖ್ಯಾತಿ ಪಡೆದ ಕಾರು ಎನ್ನಿಸಿಕೊಡಿದೆ. ಈ ಕಾರು 3.3-ಲೀಟರ್ ವಿ12 ಎಂಜಿನ್ ಹೊಂದಿದ್ದು, 280 ಅಶ್ವಶಕ್ತಿ ಉತ್ಪಾದಿಸಲಿದೆ.

ಸನ್‌ರೈಸರ್s ಹೈದರಾಬಾದ್

ಪ್ರಸಿದ್ಧ ಮಾಧ್ಯಮ ದೈತ್ಯ ಸನ್ ನೆಟ್‌ವರ್ಕ್‌ನ ಅಧ್ಯಕ್ಷರಾಗಿರುವ ಕಲಾನಿಧಿ ಮಾರನ್ ಅವರು ಸನ್‌ರೈಸರ್s ಹೈದರಾಬಾದ್ ತಂಡದ ಒಡೆತನ ಹೊಂದಿದ್ದಾರೆ.

 

ಕಲಾನಿಧಿ ಮಾರನ್ ಅವರ ಒಡೆತನದ ಹಲವಾರು ದೂರದರ್ಶನ ಚಾನೆಲ್‌ಗಳು, ಪತ್ರಿಕೆಗಳು, ವಾರ ಪತ್ರಿಕೆಗಳು, ರೇಡಿಯೊ ಕೇಂದ್ರಗಳು, ಡಿಟಿಎಚ್ ಸೇವೆಗಳು, ಮತ್ತು ಇತರ ಚಿತ್ರಗಳ ನಿರ್ಮಾಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಕಲಾನಿಧಿ ಮಾರನ್ ಅವರ ಕ್ಲಾಸಿಕ್ ಕಾರುಗಳ ಸಂಗ್ರಹಣೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರ ಮಾಲೀಕತ್ವದ ವಾಹನಗಳಲ್ಲಿ ಒಂದಾದ ಲಂಬೊರ್ಗಿನಿ ಮುರ್ಸಿಲಾಗೊ ಹಳದಿ ಬಣ್ಣ ಹೊಂದಿದೆ. ಮುರ್ಸಿಲಾಗೊ 2001 ರಿಂದ 2010 ರವರೆಗೂ ಉತ್ಪಾದನೆಯ ಮಾಡಲಾಗಿರುವ ಕಾರಿನ ಮಾದರಿ ಇದಾಗಿದೆ.

ರೈಸಿಂಗ್ ಪುಣೆ ಸೂಪರ್‌‌ಜೈಂಟ್

ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾದ ತಂಡಗಳಲ್ಲಿ ರೈಸಿಂಗ್ ಪುಣೆ ಸೂಪರ್‌‌ಜೈಂಟ್ ಕೂಡ ಒಂದಾಗಿದೆ. ಈ ತಂಡ ಸಂಜೀವ್ ಗೋಯೆಂಕಾ ಅವರ ಅಧ್ಯಕ್ಷತೆ ಹೊಂದಿರುವ ಸಂಜೀವ್ ಗೋಯೆಂಕಾ ಗ್ರೂಪ್‌ನ ಒಡೆತನದಲ್ಲಿದೆ.

 

ಸಂಜೀವ್ ಗೋಯೆಂಕಾ ಅವರಿಗೆ ಕಾರಿಗಿಂತಲೂ ಹೆಚ್ಚು ಕ್ರೀಡಾಸಕ್ತಿ ಇದ್ದು, ಕಾರಿನ ಬಗ್ಗೆ ಕಡಿಮೆ ಒಲವು ಹೊಂದಿರುವ ಇವರು ಬಿಎಂಡಬ್ಲ್ಯೂ, ಎಕ್ಸ್1 ಕಾರನ್ನು ಹೊಂದಿದ್ದಾರೆ.

ಐಪಿಎಲ್ ತಂಡದ ಜೊತೆ ಅಟ್ಲೆಟಿಕೊ-ಡೆ-ಕೋಲ್ಕತ್ತಾ ಫ್ರಾಂಚೈಸ್ ಮತ್ತು ಕೊಲ್ಕತ್ತಾದ ಐಷಾರಾಮಿ ಮಾಲ್ ಹೊಂದಿದ್ದಾರೆ. 2016ರಲ್ಲಿ ಮೊದಲ ಪಂದ್ಯವಾಡಿದ ಪುಣೆ ಮೂಲದ ಈ ತಂಡಕ್ಕೆ ಸ್ಟೀವ್ ಸ್ಮಿಥ್ ನಾಯಕ.

ಗುಜರಾತ್ ಲಯನ್ಸ್

2016 ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡ ಈ ಗುಜರಾತ್ ಲಯನ್ಸ್ ತಂಡದ ಮಾಲೀಕನ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತ ಆಶ್ಚರ್ಯ ಪಡ್ತೀರಾ. ಹೌದು, ಅತ್ಯಂತ ಕಡಿಮೆ ವಯಸ್ಸಿನಲ್ಲೇ ಐಪಿಎಲ್ ತಂಡದ ಮಾಲೀಕ ಎಂಬ ಪಟ್ಟ ಪಡೆದುಕೊಡಿರುವ ವ್ಯಕ್ತಿಯ ಹೆಸರು ಕೇಶವ್ ಬನ್ಸಲ್.

ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ಐಪಿಎಲ್ ತಂಡದ ಮಾಲೀಕ ಎನ್ನಿಸಿಕೊಂಡಿರುವ ಕೇಶವ್ ಬನ್ಸಲ್ ಕೂಡ ಅತಿ ಹೆಚ್ಚು ಕಾರುಗಳನ್ನು ಪ್ರೀತಿಸುತ್ತಾರೆ. ಇವರ ಬಳಿ ಐಷಾರಾಮಿ ಒಂದಕ್ಕಿಂತ ಹೆಚ್ಚು ಫೆರಾರಿ, ಷೋರ್ಷೆ, ಮತ್ತು ಬುಗಾಟಿ ಕಾರುಗಳಿವೆ.

ಹಲವು ಐಷಾರಾಮಿ ಕಾರುಗಳ ಒಡೆಯರಾಗಿರುವ ಕೇಶವ್ ಬನ್ಸಲ್ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಚಾಪು ಮೂಡಿಸಿರುವ ಇಂಟೆಕ್ಸ್ ಮೊಬೈಲ್ ಕಂಪನಿಯ ಡೈರೆಕ್ಟರ್ ಕೂಡ.

ದೆಹಲಿ ಡೇರ್‌ಡೆವಿಲ್ಸ್

2008ರಲ್ಲಿ ಐಪಿಎಲ್ ತಂಡವಾಗಿ ಅಸ್ತಿತ್ವಕ್ಕೆ ಬಂದ ದೆಹಲಿ ಡೇರ್‌ಡೆವಿಲ್ಸ್ ತಂಡದ ಮಾಲೀಕತ್ವವನ್ನು ಜಿಎಂಆರ್ ಗ್ರೂಪ್‌ನ ಸಂಸ್ಥಾಪಕ ಜಿ.ಎಂ ರಾವ್ ಹೊಂದಿದ್ದಾರೆ. 66 ವರ್ಷದ ಜಿ.ಎಂ ರಾವ್ ಅವರು ಯಶಸ್ವಿ ಕೈಗಾರಿಕೋದ್ಯಮಿ ಎನ್ನಿಸಿಕೊಂಡಿದ್ದಾರೆ.

ಕೋಟ್ಯಂತರ ಅಸ್ತಿ ಹೊಂದಿರುವ ಜಿ.ಎಂ ರಾವ್ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಹೆಚ್ಚು ಒಲವು ಹೊಂದಿದ್ದು, ಈ ತಂಡವನ್ನು 84 ಮಿಲಿಯನ್ ಡಾಲರು ಹಣ ನೀಡಿ ಖರೀದಿಸಿದ್ದಾರೆ.

ಇಷ್ಟೆಲ್ಲಾ ಉನ್ನತ ಸ್ಥಾನಮಾನದ ಹೊರತಾಗಿಯೂ ಜಿ.ಎಂ ರಾವ್ ಅವರು ಕಡಿಮೆ ಬೆಲೆ ಬಾಳುವ ಟೊಯೊಟಾ ಕ್ಯಾಮ್ರಿ ಕಾರನ್ನು ಡ್ರೈವ್ ಮಾಡುತ್ತಾರೆ ಎಂದರೆ ನೀವು ನಂಬಲೇ ಬೇಕು. ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು 2.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 213 ಏನ್ಎಂ ತಿರುಗುಬಲದಲ್ಲಿ 202 ಅಶ್ವಶಕ್ತಿ ಉತ್ಪಾದಿಸಲಿದೆ.

ಕಿಂಗ್ಸ್ XI ಪಂಜಾಬ್

ಕಿಂಗ್ಸ್ XI ಪಂಜಾಬ್ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಬಾಲಿವುಡ್‌ನ ಚೆಲುವೆ ಪ್ರೀತಿ ಝಿಂಟಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಲಿವುಡ್ ನಟ ಪ್ರೀತಿ ಝಿಂಟಾ ಜಂಟಿ ಒಡೆತನದಲ್ಲಿರುವ ಕಿಂಗ್ಸ್ XI ಪಂಜಾಬ್ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ.

ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿ ಹೆಚ್ಚಿನ ಅಭಿಮಾನಿಗಳ ಬಳಗ ಹೊಂದಿರವ ಪ್ರೀತಿ ಝಿಂಟಾ ಲೆಕ್ಸಸ್ ಎಲ್ಎಕ್ಸ್470 ಕಾರನ್ನು ಹೊಂದಿದ್ದು, ಬಹಳಷ್ಟು ಸಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಎಲ್ಎಕ್ಸ್ 470 ಕಾರು 1995ರಿಂದಲೂ ಉತ್ಪಾದನೆಯಲ್ಲಿದ್ದು, ವಿಶ್ವದ ಕೆಲವು ಭಾಗಗಳಲ್ಲಿ ಟೊಯೋಟಾ ಲ್ಯಾಂಡ್ ಕ್ರೂಸರ್ ಆಗಿ ಸಹ ಮಾರಾಟವಾಗುತ್ತದೆ. 'ಎಲ್ಎಕ್ಸ್' ಎಂಬ ಹೆಸರು ಹೊಂದಿರುವ 'ಐಷಾರಾಮಿ ಕ್ರಾಸ್ಒವರ್' ಕಾರು ಇದಾಗಿದ್ದು,ಪರಿಪೂರ್ಣ ಎಸ್‌ಯುವಿ ಎನ್ನಿಸಿಕೊಂಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತಾ ರಾಜ್ಯವನ್ನು ಪ್ರತಿನಿಧಿಸಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ-ಮಾಲೀಕತ್ವವನ್ನು ಶಾರುಖ್ ಖಾನ್ ಹೊಂದಿದ್ದು, 75.09 ಮಿಲಿಯನ್ ಡಾಲರ್ ಬೆಲೆ ಬಾಳುವ ಈ ತಂಡವನ್ನು 2008ರಲ್ಲಿ ಸ್ಥಾಪಿಸಲಾಯಿತು.

'ಕಿಂಗ್ ಖಾನ್' ಎಂದೇ ಪ್ರಸಿದ್ದವಾಗಿರುವ ಶಾರುಖ್ ಖಾನ್ ಕಾರುಗಳ ಬಗ್ಗೆ ಮೃದು ದೋರಣೆ ಹೊಂದಿದ್ದು, ಇವರು ಅತ್ಯಂತ ಬೆಲೆ ಬಾಳುವ ಬುಗಾಟಿ ವೆರೊನ್ ಕಾರು ಹೊಂದಿದ್ದಾರೆ. ಈ ಕಾರಿಗಿಂತಲೂ ಹೆಚ್ಚಿನ ಬೆಲೆಬಾಳುವ ಕಾರು ತಮ್ಮ ಬಳಿ ಇರಿಸಿಕೊಂಡಿಲ್ಲ.

ಬುಗಾಟಿ ವೆರೊನ್ 8.0-ಲೀಟರ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು, ಬಲಿಷ್ಠ 1000ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ.

ಮುಂಬೈ ಇಂಡಿಯನ್ಸ್

ಸಚಿನ್ ತಂಡದ ಸದಸ್ಯ ಮತ್ತು ಅಂಬಾನಿ ತಂಡದ ಮಾಲೀಕ ಎಂಬ ಎರಡು ಕಾರಣಗಳಿಂದ ಹೆಚ್ಚು ಪ್ರಸಿದ್ದಿ ಪಡೆದಿರುವ ಈ ಮುಂಬೈ ತಂಡವನ್ನು 111.9 ಮಿಲಿಯನ್ ಡಾಲರ್ ನೀಡಿ ರಿಲಯನ್ಸ್ ಗ್ರೂಪ್ ಖರೀದಿಸಿತು.

ಈ ತಂಡ ಅತ್ಯಂತ ದುಬಾರಿ ಐಪಿಎಲ್ ತಂಡ ಎಂಬ ಖ್ಯಾತಿ ಕೂಡ ತನ್ನದಾಗಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಮುಕೇಶ್ ಅವರು ರೋಲ್ಸ್ ರಾಯ್ಸ್ ಫ್ಯಾಂಟಮ್, ಬೆಂಜ್ ಎಸ್ ಕ್ಲಾಸ್, ಬೆಂಟ್ಲಿ ಫ್ಲೈಯಿಂಗ್ ಸ್ಪುರ್, ಮೇಬ್ಯಾಚ್ 62 ಹಾಗು ಮುಂತಾದ ಕಾರುಗಳನ್ನು ಹೊಂದಿದ್ದಾರೆ.

ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಇರಬೇಕು ಎಂಬ ಆಶಾಭಾವನೆಯೊಂದಿಗೆ ಐಪಿಎಲ್ ತಂಡ ಖರೀದಿಸಿದ ಮುಕೇಶ್ ಅಂಬಾನಿ, ತಂಡದ ಹೊಣೆಯನ್ನು ತನ್ನ ಪತ್ನಿಗೆ ವಹಿಸಿದ್ದಾರೆ.

Story first published: Friday, April 21, 2017, 12:21 [IST]
English summary
Read in Kannada about IPL team owners and their luxury cars. Get more details about IPL team owner's profession, luxury cars and more.
Please Wait while comments are loading...

Latest Photos