ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

By Nagaraja

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಭಾರತದ ಕ್ಯಾಟೋಸ್ಯಾಟ್-2ನೇ ಸರಣಿ ಮತ್ತು 19 ಇತರೆ ಉಪಗ್ರಹಗಳನ್ನು ಒಂದೇ ಬಾರಿಗೆ ಅಂತರಿಕ್ಷಕ್ಕೆ ಹಾರಿ ಬಿಡುವ ಮೂಲಕ ನೂತನ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9.25ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ - ಸಿ34 ಎಲ್ಲ 20 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.

ಭಾರತ, ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷ್ಯಾಗೆ ಸೇರಿದಂತೆ ಒಟ್ಟು 1288 ಕೆ.ಜಿ ಭಾರದ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಉಡಾವಣೆ ಮಾಡಿದೆ. ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಪಿಎಸ್‌ಎಲ್‌ವಿ 20 ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿರುವ 1.5 ಕೆ.ಜಿ ತೂಕದ 'ಸತ್ಯಭಾಮಾಸ್ಯಾಟ್' ಉಪಗ್ರಹವು ನೀರಿನ ಆವಿ, ಕಾರ್ಬನ್ ಮಾನೊಕ್ಸೈಡ್, ಕಾರ್ಬನ್ ಡೈಓಕ್ಸೈಡ್, ಮೆಥೇನ್ ಮತ್ತು ಹೈಡ್ರೋಜನ್ ಫ್ಲೋರೈಡ್ ಸೇರಿದ ಹಸಿರು ಮನೆ ಅನಿಲಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಪುಣೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿರುವ 1 ಕೆ.ಜಿ ಭಾರದ 'ಸ್ವಯಂ' ಉಪಗ್ರಹ ಸಹ ಸೇರಿದ್ದು, ಇದು ಎಚ್‌ಎಎಂಗೆ ಪಾಯಿಂಟ್ ಟು ಪಾಯಿಂತ್ ಸಂದೇಶ ಸೇವೆಯನ್ನು ಒದಗಿಸಲಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಇನ್ನುಳಿದಂತೆ ಇಂಡೋನೇಷ್ಯಾದ ಲಾಪಾನ್-ಎ3, ಜರ್ಮನಿಯ ಬೈರೊಸ್, ಕೆನಡಾದ ಎಂ3ಎಂಸ್ಯಾಟ್ ಹಾಗೂ ಜಿಎಚ್‌ಜಿಸ್ಯಾಟ್-ಡಿ ಮತ್ತು ಅಮೆರಿಕದ ಗೂಗಲ್ ಸಂಸ್ಥೆಯ ಟೆರ್ರಾ ಬೆಲ್ಲಾ ಸ್ಕೈಸ್ಯಾಟ್ ಜೆನ್2-1 ಶ್ರೇಣಿಯ ಉಗ್ರಹಗಳು ಸೇರಿವೆ.

ಪಿಎಸ್‌ಎಲ್‌ವಿ ಬಗ್ಗೆ ಒಂದಿಷ್ಟು...

ಪಿಎಸ್‌ಎಲ್‌ವಿ ಬಗ್ಗೆ ಒಂದಿಷ್ಟು...

ದೇಶಿಯವಾಗಿ ನಿರ್ಮಿಸಿರುವ ಪಿಎಸ್‌ಎಲ್‌ವಿ ಉಪಗ್ರಹ ಸರಾಸರಿ 44 ಮೀಟರ್ ಉದ್ದವನ್ನು ಹಾಗೂ 295 ಟನ್ ಭಾರವನ್ನು ಹೊಂದಿರುತ್ತದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಪ್ರತಿಯೊಂದು ಪಿಎಸ್‌ಎಲ್‌ವಿ ಉಡಾವಣಾ ರಾಕೆಟ್ ಗಳ ಆರು ಬೂಸ್ಟರ್ ಗಳನ್ನು ಜೋಡಣೆ ಮಾಡಲಾಗಿರುತ್ತದೆ. ಇವುಗಳ ಪೈಕಿ ನಾಲ್ಕು ಭೂಮಿಯ ಮೇಲ್ಮೆಯಿಂದ ಮೇಲಕ್ಕೆತ್ತಲು ಸಹಕಾರಿಯಾಗಲಿದೆ. ಇನ್ನುಳಿದ ಎರಡು ಬೂಸ್ಟರ್ ಗಳು ಉಡವಣೆಯಾದ 25 ಸೆಕೆಂಡುಗಳ ಬಳಿಕ ಉರಿಯಲಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಪ್ರತಿಯೊಂದು ಬೂಸ್ಟರ್ ಗಳು 720 ಕೆಎನ್ ಗಳಷ್ಟು ನೂಕುಬಲವನ್ನುಂಟು ಮಾಡುತ್ತದೆ. ಇದು ತೇಜಸ್ ಟರ್ಬೊಫ್ಯಾನ್ ಎಂಜಿನ್ ಗಿಂತಲೂ ಒಂಬತ್ತು ಪಟ್ಟು ಹೆಚ್ಚಾಗಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

1993ರಲ್ಲಿ ಪಿಎಸ್‌ಎಲ್ ವಿ ತನ್ನ ಮೊದಲ ಪ್ರಯತ್ನದಲ್ಲೇ ವಿಫಲತೆಯನ್ನು ಕಂಡಿತ್ತು. ತದಾ ನಂತರ ವಿಜ್ಞಾನಿಗಳ ಅವಿರತ ಪ್ರಯತ್ನದಿಂದಾಗಿ ಇಡೀ ದೇಶಕ್ಕೆ ಹೆಮ್ಮೆಯನ್ನುಂಟು ಮಾಡಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಜಾಗತಿಕ ಮಟ್ಟದಲ್ಲಿ ಪಿಎಸ್‌ಎಲ್ ವಿ ರಾಕೆಟ್ ಉಡಾವಣ ವಾಹನಗಳನ್ನು ಅತ್ಯಂತ ಅಗ್ಗ ಮತ್ತು ಹೆಚ್ಚು ವಿಶ್ವಸಾರ್ಹವೆಂದು ಪರಿಗಣಿಸಲ್ಪಟ್ಟಿದೆ. ಇದುವರೆಗೆ ಹೆಚ್ಚು ವಿದೇಶಿ ಉಪಗ್ರಹಗಳನ್ನು ಹಾರಾಟ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಅಮೆರಿಕ ಸೇರಿದಂತೆ ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ, ಯುರೋಪ್ ಒಕ್ಕೂಟ, ಇಂಡೋನೇಷ್ಯಾ, ಅರ್ಜೇಂಟೀನಾ, ಬ್ರಿಟನ್, ಇಟಲಿ, ಇಸ್ರೇಲ್, ಕೆನಡಾ, ಜಪಾನ್, ಹಾಲೆಂಡ್, ಡೆನ್ಮಾರ್ಕ್, ಸ್ವಿಜರ್ಲೆಂಡ್, ಟರ್ಕಿ, ಅಲ್ಜೀರಿಯಾ, ನಾರ್ವೆ, ಆಸ್ಟ್ರೀಯಾ, ಸಿಂಗಾಪುರ, ರಷ್ಯಾದಂತಹ ಘಟಾನುಘಟಿ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿರುವ ಕೀರ್ತಿಯೂ ಇಸ್ರೋಗೆ ಸಲ್ಲುತ್ತದೆ.

ಇಸ್ರೋ ದಾಖಲೆ; 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ

ಈ ಹಿಂದೆ 2008ರಲ್ಲಿ ಇಸ್ರೋ ಸಂಸ್ಥೆಯು 10 ಸ್ಯಾಟ್‌ಲೈಟ್ ಗಳನ್ನು ಏಕಕಾಲಕ್ಕೆ ಉಡಾವಣೆಗೊಳಿಸಿರುವುದು ಇದುವರೆಗಿನ ದಾಖಲೆಯಾಗಿದೆ.

Most Read Articles

Kannada
Read more on ಇಸ್ರೊ isro
English summary
ISRO sets record with 20 satellite launch in PSLVC34 mission
Story first published: Wednesday, June 22, 2016, 11:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X