ವಿಮಾನ ಕಂಡುಹಿಡಿದವರು 'ರೈಟ್ ಬ್ರದರ್ಸ್' ಎನ್ನುವವರು ಈ ಲೇಖನ ಓದಲೇಬೇಕು

Written By:

ಓದಿ ತಿಳಿದುಕೊಂಡ ಜನಕ್ಕೆ ಅತ್ವ ವಿಮಾನದಲ್ಲಿ ಪ್ರಯಾಣಿಸಿದ ಅನೇಕರಿಗೆ, ವಿಮಾನ ಕಂಡು ಹಿಡಿದದ್ದು ಯಾರು ಎನ್ನುವ ಪ್ರಶ್ನೆ ಕೇಳಿ ನೋಡಿ, ಅವರು ಕೊಡುವ ಉತ್ತರ ರೈಟ್ ಬ್ರದರ್ಸ್ ಎಂದೇ ಆಗಿರುತ್ತದೆ.

ಆದರೆ ರೈಟ್ ಬ್ರದರ್ಸ್ ಕಂಡುಹಿಡಿದರು ಎನ್ನಲಾಗುವ ವಿಮಾನವನ್ನು ಅವರಿಗಿಂತ ಎಷ್ಟೋ ದಶಕಗಳ ಹಿಂದೆ ಇವರು ಕಂಡುಹಿಡಿದ್ದಿದ್ದರು ಎನ್ನುವ ವಿಚಾರ ನಿಮಗೆ ಅಚ್ಚರಿ ಮೂಡಿಸುತ್ತೆ. ಹೌದು, ದೇಶವೇ ಹೆಮ್ಮೆ ಪಡುವಂತ ವಿಚಾರದ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ, ಮುಂದೆ ಓದಿ.

ಹಾರುವ ಹಕ್ಕಿಯ ಜಾಡು ಹಿಡಿದು ಹೊರಟ ವಿಶೇಷ ವ್ಯಕ್ತಿ ಬೇರಾರು ಅಲ್ಲ, ನಮ್ಮ ಭಾರತದ ದೇಶದ ಹೆಮ್ಮೆಯ ಪುತ್ರ ಶಿವಕರ್ ಬಾಪೂಜಿ ತಲ್ಪಡೆ ಎನ್ನುವ ವಿಚಾರ ಎಷ್ಟೋ ಜನಕ್ಕೆ ತಿಳಿದೇ ಇಲ್ಲ ಎನ್ನಬಹುದು.

ಕಳೆದ ಜನವರಿ ತಿಂಗಳಲ್ಲಿ ಮುಂಬೈ ನಗರದಲ್ಲಿ ನೆಡೆದ 102ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬಂದಿದೆ ಹಾಗು ಕಾಗದದ ಅಮೂರ್ತತೆಯನ್ನು ಪ್ರಸ್ತುತಪಡಿಸಲಾಗಿದೆ.

ಕ್ಯಾಪ್ಟನ್ ಆನಂದ್ ಬೋದಾಸ್ ಮತ್ತು ಅಮೇಯ ಜಾಧವ್ ಅವರಿಂದ ಸಲ್ಲಿಸಲ್ಪಟ್ಟ ಈ ಪ್ರಾಚೀನ ವಾಯುಯಾನದ ಕಾಗದದ ಅಮೂರ್ತತೆ ಹೆಚ್ಚು ಸದ್ದು ಮಾಡುತ್ತಿದೆ ಎನ್ನಬಹುದು. ಈ ಅಮೂರ್ತತೆಯಲ್ಲಿ ರೈಟ್ ಬ್ರದರ್ಸ್‌ಗೂ 8 ವರ್ಷಗಳ ಮೊದಲೇ ಶಿವಕರ್ ಬಾಪೂಜಿ ತಲ್ಪಡೆ ವಿಮಾನ ತಯಾರಿಸಿದ್ದರು ಎನ್ನುವ ಉಲ್ಲೇಖವಿದೆ.

ಮುಂಬೈ ವಿಶ್ವವಿದ್ಯಾನಿಲಯದ ಸಂಸ್ಕೃತ ಇಲಾಖೆಯ ವೆಬ್ ಸೈಟಿನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದ ಪತ್ರಿಕೆಗಳ ಸಾರಾಂಶಗಳು ಪ್ರಕಟಿಸಲಿದ್ದು, ಇದರ ಹೊಣೆಯನ್ನು ಸಂಘಟನೆಯ ನಿರ್ದೇಶಕ ಗೌರಿ ಮಹುಲಿಕರ್ ಹೊತ್ತುಕೊಂಡಿದ್ದಾರೆ.

ರಾಮಾಯಣ ಕಾಲದಿಂದಲೇ ಪುಷ್ಪಕ ವಿಮಾನದ ಅರಿವು ಭಾರತೀಯರಿಗೆ ತಿಳಿದ ವಿಚಾರವೇ ಆಗಿದೆ. ವೇದ ಭೂಮಿಯಾಗಿದ್ದ ಭಾರತಕ್ಕೆ ವೈಮಾನಿಕ ಶಾಸ್ತ್ರವೇನೂ ಹೊಸದೇನಲ್ಲ.

1895ರಲ್ಲಿ ಚೌಪತಿ ಸಮೀಪ ಶಿವಕರ್ ಬಾಪೂಜಿ ತಲ್ಪಡೆಯವರು ರೈಟ್ ಬ್ರದರ್ಸ್‌ಗೂ ಮೊದಲೇ ವಿಮಾನ ಹಾರಿಸಿದ್ದರು ಎನ್ನುವ ಸತ್ಯವನ್ನು "ಕೇಸರಿ" ಪತ್ರಿಕೆ ವರದಿ ಮಾಡಿದ ವಿಶಯಗಳು ಅಂತರ್ಜಾಲದಲ್ಲಿ ಲಭ್ಯ ಇವೆ.

ಆದರೆ ಭಾರತದ ಬಡ ಪರಿಸ್ಥಿತಿ, ಬ್ರಿಟಿಷ್ ದಬ್ಬಾಳಿಕೆ ಮತ್ತಿತರ ಕಾರಣಗಳಿಂದಾಗಿ ಈ ವಿಚಾರ ಹೆಚ್ಚು ಪ್ರಚಾರಗಿಟ್ಟಿಸಲಿಲ್ಲ ಮತ್ತು ವಿಶ್ವ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ ಎನ್ನಬಹುದು.

ಅಗಸ್ತ್ಯ ಮತ್ತು ಭರದ್ವಾಜ ಎಂಬ ವಿಜ್ಞಾನಿಕ ಋಷಿಗಳು, ವಿಮಾನ ನಿರ್ಮಾಣದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದರು ಎಂದು ಅನೇಕ ದಾಖಲೆಗಳಿಂದ ತಿಳಿದುಬಂದಿದೆ. ಈ ವಿಚಾರ ಎಷ್ಟೋ ಜನಕ್ಕೆ ತಲುಪಿಲ್ಲ ಎಂಬುದು ದುಃಖಕರ ವಿಚಾರ.

Read more on ವಿಮಾನ
Story first published: Thursday, June 8, 2017, 14:01 [IST]
English summary
Move over Wright brothers -- it was Shivkar Bapuji Talpade who first flew a flying machine over Chowpatty in 1895, eight years before the American siblings.
Please Wait while comments are loading...

Latest Photos